#ಭಾಗ_1_ಉತ್ತರ_ಭಾರತದ_ನಾಥ_ಪಂಥದವರ_ಜೊತೆ_ನನ್ನ_ಸತ್ಸಂಗಗಳು.
#ಹಿಂದಿನ_ಬಾರಾಪಂತ್_ಯಾತ್ರೆ_ನೇತೃತ್ವವಹಿಸಿದ್ದ
#ಮಹಾಂತರಾದ_ಶ್ರೀಯೋಗಿ_ನಿರ್ಮಲಾನಂದ್_ಜೀ
#ಯಾರಿಗೂ_ಸಂದರ್ಶನ_ನೀಡದವರು_ನನಗೆ_ನೀಡಿದ್ದರು.
#ಇದು_ನನ್ನ_ಜೀವನದ_ಒಂದು_ಪವಾಡ_ಎಂದು_ಭಾವಿಸಿದ್ದೇನೆ.
#ಕಾಲಬೈರವನ_ಅನುಗ್ರಹ_ಎಂದು_ಕೊಂಡಿದ್ದೇನೆ
#ಉತ್ತರ_ಭಾರತದ_ನಾಥ_ಪಂಥದ_ಜೊತೆ_ವಿಚಿತ್ರ_ವಿಚಿತ್ರ_ಮತ್ತು_ವಿಶೇಷ_ಸತ್ಸಂಗದ_ಈ_ಲೇಖನ_ಸರಣಿ
#ಇವತ್ತಿನಿಂದ...
#Nathapantha #Gorakpura #Mahantharu
#YogiAditynathjogi #YogiNirmalanandaji
#Peeryogisomanathji #Barapanth #Jondi
#Myexperience #withNathapanth #Nasilk #Trayambakesh #Kumbamela #Mangalore
#Kadribetta #Halawarimutt #Jogi #Balegar #Kunubi
ಪ್ರತಿ 12 ವರ್ಷಕ್ಕೆ ನಾಸಿಕ್ ತ್ರಯಂಬಕೇಶ್ವರದ ಕುಂಭ ಮೇಳದ ಮರುದಿನ ಪಶ್ಚಿಮ ಘಟ್ಟದ ಮಧ್ಯದಲ್ಲಿ ಬರಿಗಾಲಿನಲ್ಲಿ ನಡೆದು ಮಂಗಳೂರಿನ ಕದ್ರಿ ಬೆಟ್ಟ ತಲುಪುವ
ಭಾರಾ ಪಂತ್ ಯಾತ್ರೆ.
ಸಾಗರದ ಗಣಪತಿ ದೇವಸ್ಥಾನದಿಂದ ಹೊರಟು ಹೊಸನಗರ ತಾಲೂಕಿನ ಆಲಗೇರಿಮಂಡ್ರಿ ಎಂಬ ಹಳ್ಳಿಗೆ ತಲುಪುವ ಮೊದಲು ಹೆಬ್ಬೈಲು ಎಂಬಲ್ಲಿ ಚಿಕ್ಕ ಗುಡಿಯಲ್ಲಿ ಪಾತ್ರ ದೇವತೆ, ತಮ್ಮ ಅನುಯಾಯಿ ಶ್ವಾನಗಳು ಮತ್ತು ಆರು ನೂರಕ್ಕೂ ಹೆಚ್ಚಿನ ಸಾದು ಸಂತರ ಈ ಯಾತ್ರೆಯ ಸರ್ವಾಧ್ಯಕ್ಷರಾದ ಮಹಾಂತರಾದ ಶ್ರೀ ಯೋಗಿ ನಿರ್ಮಲಾನಂದಜೀ ಅವರ ಸಂದಶ೯ನ ಮಾಡಿದಾಗ.
ನಾನು ನನ್ನಣ್ಣ ನಾಗರಾಜ್, ಅಣ್ಣನ ಮಗ ಅನುದೀಶ್ ಮತ್ತು ಹೊಸನಗರದ ಕಂದಾಯ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಚಿತ್ರದಲ್ಲಿದ್ದಾರೆ.
ನಾಸಿಕ್ ನಿಂದ ಇಲ್ಲಿವರೆಗೆ ಯಾವುದೇ ಪತ್ರಕರ್ತರಿಗೆ ಸಂದರ್ಶನ ನೀಡದ #ಮಹಾಂತರಾದ_ನಿಮಲಾನಂದ_ಜೀ ಅವರಿಗೆ ನಾನು ಶಿವಮೊಗ್ಗದ #ಶೃಂಗೇಶರ #ಜನ_ಹೋರಾಟ ಪತ್ರಿಕೆಗೆ ಸಂದರ್ಶನ ಮಾಡಲು ಅನುಮತಿ ಕೇಳಿದಾಗ ದಾರಾಳವಾಗಿ ಮಾಡಿ ಎಂದು ಪ್ರೋತ್ಸಾಹದ ನುಡಿ ಹೇಳಿದ್ದರು.
ಇದು ಹೇಗೆ ಸಾಧ್ಯ? ಇದೇ #ಟೆಲಿಪತಿ ಅಥವ ಮೂರನೇ ಇಂದ್ರಿಯಗಳ ಜಾಗೃತಿ ಇರುವವರಿಗೆ ಎದುರಿನ ವ್ಯಕ್ತಿ ಅಂದಾಜಿಸುವ ಪರಿ ಎನ್ನುತ್ತಾರೆ ನಾಥ ಪಂಥದ ಅನುಯಾಯಿಗಳು.
ಇವತ್ತಿನಿಂದ ನಿರಂತರವಾಗಿ 2028 ರಲ್ಲಿ ಸಾಗರ ತಾಲೂಕಿನ ಮೂಲಕ ಹಾದು ಹೋಗುವ ಬಾರಾಪಂಥ ಯಾತ್ರೆ ಸಾಗಿ ಹೋಗುವ ತನಕ ಈ ಬಗ್ಗೆ ಸರಣಿ ಲೇಖನ ಪ್ರಕಟಿಸಲು ತೀರ್ಮಾನಿಸಿದ್ದೇನೆ.
ಈ ಲೇಖನಗಳನ್ನ ಓದಿ ಮತ್ತು ಆಸಕ್ತಿ ಇರುವವರಿಗೆ ಶೇರ್ ಮಾಡಲು ವಿನಂತಿ.
ಇವತ್ತು ಸಂಜೆಯ ವಿವರವಾದ ಲೇಖನದ ಎರಡನೆ ಭಾಗ ನೋಡಿ.
Comments
Post a Comment