#ನಾವು_ಗೆಳೆಯರು...
#ಜೋಗ್_ಪಾಲ್ಸ್_ಗೆಳೆಯರು_ಈಗ
#ಬೆಂಗಳೂರು_ನಿವಾಸಿಗಳು
#ಜಾರ್ಜ್_ಪರ್ನಾಂಡೀಸ್_ಸಮತಾ_ಪಾರ್ಟಿ_ಬೆಂಬಲಿಸಿದವರು
#ನನ್ನ_ಅತಿಥಿಗಳು
#ಚಿನ್ನಾ_ಲೋಕೇಶ್
#Jogfalls #Kargal #Lokesh #Chinnu #Samathaparty #Georgefarnandis #Michelfarnandis #Srinivasprasad
ಆಗಷ್ಟೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಪ್ರಾಜೆಕ್ಟ್ ಏರಿಯಾ ಆಗಿದ್ದ ಜೋಗ್ ಮತ್ತು ಕಾರ್ಗಲ್ ಗೆ ಮೊದಲ ಸ್ಥಳೀಯ ಸಂಸ್ಥೆ ಆಗಿ #ಜೋಗ್_ಕಾರ್ಗಲ್ ಪಟ್ಟಣ ಪಂಚಾಯಿತಿ ಘೋಷಣೆ ಆಗಿತ್ತು.
ನಾನು ಆಗ ದೇಶದ ರಕ್ಷಣಾ ಮಂತ್ರಿಗಳಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ಕರ್ನಾಟಕ ರಾಜ್ಯ ಸಮತಾ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ.
ನಮ್ಮ ಸಾಗರ ತಾಲೂಕಿನ ಶರಾವತಿ ಯೋಜನ ಪ್ರದೇಶದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರ ಮೈಖೆಲ್ ಪರ್ನಾಂಡೀಸರ ಕೆಪಿಸಿ ಕಾರ್ಮಿಕ ಸಂಘಟನೆಗಳು ಹೆಚ್ಚು ಸಂಘಟಿತವಾಗಿತ್ತು.
ಆದ್ದರಿಂದ ನಾನು ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿಗೆ ಸಮತಾ ಪಾರ್ಟಿ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧೆಗೆ ಇಳಿಸಿದ್ದೆ.
ಆ ಚುನಾವಣೆಯಲ್ಲಿ ನಮ್ಮ ಸಮತಾ ಪಾರ್ಟಿ ಅಭ್ಯರ್ಥಿಗಳು ಗೆಲ್ಲಲಿಲ್ಲ ಆದರೆ ಜೆ.ಹೆಚ್. ಪಟೇಲರ ನಾಯಕತ್ವದ ಜನತಾ ದಳದ ಅಭ್ಯರ್ಥಿಗಳು ಗೆದ್ದು ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿನ ಕಾಂಗ್ರೇಸ್ ಪಕ್ಷದ ಸೋಲಿಗೆ ಕಾರಣ ಆಗಿತ್ತು.
ಕಾರ್ಗಲ್ ನ ಅಜಿತ್ ಪಾಲ್ ಆ ಚುನಾವಣೆಯ ಜನತಾ ದಳದ ರಿಯಲ್ ಹೀರೋ ಆಗಿದ್ದರು.
ಆ ಕಾಲದಲ್ಲಿ ಜೋಗ್ ಫಾಲ್ಸ್ ನ ಆಪಿಸರ್ಸ್ ಕ್ಲಬ್ ಎದುರಿನ ಆ ಕಾಲದ ಕಾರ್ಮಿಕ ಸಂಘಟನೆ ಮುಖಂಡರಾದ ಇಸ್ರೈಲ್ ಅವರ ಮನೆ ನಮ್ಮ ಆಫೀಸ್ ಆಗಿತ್ತು.
ಇವತ್ತು ಚಿನ್ನು ಮತ್ತು ಲೋಕೇಶ್ ಬೆಂಗಳೂರಿಂದ ಬರುವಾಗ ನನ್ನ ಆಫೀಸಿಗೆ ಬಂದಿದ್ದರು ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಊಟ ಮಾಡಿದರು.
ರಾಜ್ಯ ಕಾರ್ಮಿಕ ಮುಖಂಡರಾಗಿದ್ದ ಇಸ್ರೈಲ್ ಪುತ್ರ ಚಿನ್ನಾ ಮತ್ತು ಕಾರ್ಮಿಕ ಮುಖಂಡರಾಗಿ ನಿವೃತ್ತರಾದ #ದೇವದಾಸರ ಪುತ್ರ ಲೋಕೇಶ್ ನನ್ನ ಆ ಕಾಲದ ಒಡನಾಡಿಗಳು.
ದೇವದಾಸ್ ಅವರು ನಮ್ಮ ಸಮತಾ ಪಕ್ಷದ ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿಯ ಗಿಳಾಲಗುಂಡಿ ಬ್ಲಾಕ್ ಅಭ್ಯರ್ಥಿ ಆಗಿ ಸ್ಪರ್ದಿಸಿದ್ದರು.
ಜಾರ್ಜ್ ಸಹೋದರ ಮೈಕೆಲ್ ಪರ್ನಾಂಡೀಸ್ ಈ ಚುನಾವಣೆ ಪ್ರಚಾರಕ್ಕೆ ಬಂದಿದ್ದರು ಆಗ ದೇವದಾಸರ ಮನೆಗೆ ಬೇಟಿ ನೀಡಿದ್ದರು.
ಆಗ ಕೇಂದ್ರದ ಮಂತ್ರಿ ಆಗಿದ್ದ ಶ್ರೀನಿವಾಸ ಪ್ರಸಾದರು ನನ್ನ ವಿನಂತಿಗೆ ಮನ್ನಿಸಿ ಜೋಗ್ ಕಾರ್ಗಲ್ ನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸಮತಾ ಪಾರ್ಟಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು.
ಲೋಕೇಶ್ ಮತ್ತು ಚಿನ್ನಾ ಅವರ ತಂದೆಯರ ಕಾರ್ಮಿಕ ಸಂಘಟನೆಗಳ ನಾಯಕತ್ವ ಮತ್ತು ಜಾರ್ಜ್ ಫರ್ನಾಂಡಿಸ್ ಅವರ ಅಭಿಮಾನದಿಂದ ನನ್ನ ಜೊತೆ ಆದವರು.
ಅನೇಕ ವರ್ಷಗಳ ನಂತರ ಈ ಗೆಳೆಯರ ಬೇಟಿ ಹಳೇ ನೆನಪುಗಳ ಜೊತೆ ಹರ್ಷ ಮೂಡಿಸಿತು.
Comments
Post a Comment