#ಭಾಗ_13_ಸಾಗರ_ಮಾರಿಕಾಂಭಾ_ಚರಿತ್ರೆ.
#ಕೇರಳದ_ಇತಿಹಾಸ_ಸಂಶೋಧಕರಾದ
#ಪಾಂಡು_ಪ್ರದ್ಯುಮ್ನ_ಅವರ_ಲೇಖನದಲ್ಲಿ
#Historian #Kerala #Karnataka #Sagara #Marikhambha #keladi
ಕೆಳದಿ ಅರಸರ ಕುಲದೇವಿ ವರದಾಂಬಿಕೆ ಮತ್ತು ಕುಲದೇವರು ಅಘೋರೇಶ್ವರ ಇವು ಮುಖ್ಯ ಗ್ರಾಮದೇವರುಗಳು.
ಕೆಳದಿ ಅರಸರು ಮೈಸೂರು ಪ್ರಾಂತ್ಯಕ್ಕೆ ಯುದ್ದಕ್ಕೆ ಹೋದಾಗ ಮೈಸೂರು ಸೈನ್ಯ ಸೋಲುವ ಹಂತದಲ್ಲಿದ್ದಾಗ ಕೆಳದಿ ಸೈನ್ಯವನ್ನು ಈಗಲೂ ಅಲ್ಲಿರುವ ಕೋಟೆ ಮಾರಿಕಾಂಬೆ ಚದುರಿಸಿ ಕೊಂಡು ಬಂದು ಸಾಗರಕ್ಕೆ ಬಂದಳು ಎಂಬುದು ನಿಜ ಇತಿಹಾಸ.
ಹಾಗಾಗಿ ಇಂದಿಗೂ ಮೈಸೂರು ಅರಮನೆಯಿಂದ ಸಾಗರದ ಮಾರಿಕಾಂಬೆಗೆ ಮೊದಲ ಉಡಿ ತುಂಬುತ್ತಾರೆ.
ಸದಾಶಿವಸಾಗರ ಪಟ್ಟಣಕ್ಕೆ (ಇಂದಿನ ಸಾಗರ) ಕ್ಷಾಮ ಬಂದಾಗ ಕೆಳದಿ ರಾಜರು ಜ್ಯೋತಿಷಿಗಳ ಮೊರೆ ಹೋದಾಗ ಜ್ಯೋತಿಷಿಗಳ ಸೂಚನೆ ಮೇರೆಗೆ ತುಂಬಿದ ಬಸುರಿ ಬಲಿ ಕೊಡುವಂತೆ ತಿಳಿಸುತ್ತಾರೆ.
ಆಗ ಶಿಕಾರಿಪುರದ ಈಸೂರಿನ ಭೋವಿ ಗಂಗಾಮತ ಜಾತಿಯ ಹೆಣ್ಣನ್ನು ಬಲಿಕೊಡುತ್ತಾರೆ ಅವರ ವಂಶದವರು ಈಗಲೂ ಇದ್ದಾರೆ.
ಆಗಲು ಕ್ಷಾಮ ಪರಿಹಾರವಾಗದ ಕಾರಣ ಬಯಲು ಸೀಮೆಯಿಂದ ಸಾಧೀ ಜನಾಂಗದವರನ್ನು ಕರೆಯಿಸಿ ಕೆಳದಿ ಅರಸರು ಮಾರಿ ಸಂಪ್ರದಾಯವನ್ನು ಮಾಡಿಸುತ್ತಾರೆ.
ಕಾಲಾನಂತರ ಅದು ನಿಂತು ಮತ್ತೆ ಶುರುವಾಯಿತು ಎಂಬ ಇತಿಹಾಸ ಇದೆ.
ವರದಾಂಬಿಕೆ ದೇವಿಯೇ ಒಂದು ಅಂಶದಿಂದ ಮಾರಿಕಾಂಬೆಯಲ್ಲಿ ಸನ್ನಿಹಿತಳಾಗಿ ಸರ್ವರನ್ನು ಅನುಗ್ರಹ ಮಾಡಿದ್ದಾಳೆ ಸತ್ಯವಂತೆ ಸಿರಿದೆವೀ ಮಾರಿಕಾಂಬೆಯ ಜೊತೆಗೆ ಸಾಗರದ ಮಕ್ಕಳನ್ನು ಕಾಪಾಡುತಿದ್ದಾಳೆ ಎಂಬುವುದು ಅಕ್ಷರಶಃ ಸತ್ಯ.
ಲೇಖನ: ಇತಿಹಾಸ ತಜ್ಞ ಪಾಂಡು ಪ್ರದ್ಯುಮ್ನ ಕೇರಳ.
Comments
Post a Comment