#ಭಾಗ_2_ಉತ್ತರ_ಭಾರತದ_ನಾಥ_ಪಂಥದವರ_ಜೊತೆ_ನನ್ನ_ಸತ್ಸಂಗಗಳು.
#ಬಾರಾಪಂಥ್_ಯಾತ್ರೆ
#ಭಾರತದ_ಉತ್ತರ_ದಕ್ಷಿಣದ_ಧಾರ್ಮಿಕ_ಸಂಬಂಧ_ಸೇತು.
#ಪ್ರತಿ_12_ವಷ೯ಕ್ಕೆ_ಒಮ್ಮೆ_ನಾಸಿಕ್_ಕು೦ಬಮೇಳ_ಮುಗಿದ_ಮರು_ದಿನ_ಪ್ರಾರಂಭ
#ಈ_ಯಾತ್ರೆ_ಪಶ್ಚಿಮ_ಘಟ್ಟದ_ಮಧ್ಯದಲ್ಲಿ_ನಡೆದು_ಬರುವನೂರಾರು_ಸಾಧು_ಸಂತರ_ಪಾದಯಾತ್ರೆ
#ಐದು_ಸಾವಿರ_ವಷ೯ದಿOದ_ನಿರಂತರವಾಗಿ_ನಡೆದು_ಬರುತ್ತಿರುವ_ವಿಸ್ಮಯ_ನಿಗೂಡ_ಯಾತ್ರೆ.
#ಶಿವಮೊಗ್ಗ_ಜಿಲ್ಲೆಯ_ಚಂದ್ರಗುತ್ತಿ_ಸಾಗರದ_ಗಣಪತಿ_ದೇವಸ್ಥಾನ
#ಹೊಸನಗರ_ತಾಲ್ಲೂಕಿನ_ಆಲಗೇರಿಮಂಡ್ರಿ_ಬಿದನೂರುನಗರದಲ್ಲಿ_ತಂಗುತ್ತದೆ.
#ಉತ್ತರ_ಭಾರತದ_ನಾಥ_ಪಂಥದ_ಜೊತೆ_ವಿಚಿತ್ರ_ವಿಚಿತ್ರ_ಮತ್ತು_ವಿಶೇಷ_ಸತ್ಸಂಗದ_ಈ_ಲೇಖನ_ಸರಣಿ.
#UP #YogiAdityanath #Gorakpura #Halawarimutt #Somanathbavoji #Nathapantha #Bharapanthyatre #Nasik #Kumbamela
12 ವಷ೯ಕ್ಕೆ ಒಮ್ಮೆ ನಾಸಿಕ್ ನಿಂದ ತ್ರ್ಯಯಂಬಕೇಶ್ವರ ಕುಂಬಮೇಳ ಮುಗಿದ ಮರುದಿನ ಹೊರಡುವ ಈ ಬಾರ ಪ೦ಥ್ ಯಾತ್ರೆಯಲ್ಲಿ ನೂರಾರು ಸಾದು ಸಂತರು ಭಾಗವಹಿಸುತ್ತಾರೆ.
ನಾಸಿಕ್ ನಿಂದ ಬರಿಗಾಲಲ್ಲಿ ನಡೆದು ಕೊಂಡು ಹೊರಟು ಮಂಗಳೂರಿನ ಕದ್ರಿ ಬೆಟ್ಟಕ್ಕೆ ತಲುಪುತ್ತದೆ.
ಪಾತ್ರ ದೇವತೆ ಎಂಬ ದೇವಿಯನ್ನ ತಲೆ ಮೇಲೆ ಹೊತ್ತು ಬರುತ್ತಾರೆ, ನಾಥ ಪಂಥದ ಸಂಪ್ರದಾಯದಂತೆ ಇವರ ಜೊತೆ ಆಯ್ದ ಶ್ವಾನಗಳೂ ನಡೆದು ಬರುತ್ತದೆ.
ಚಂದ್ರಗುತ್ತಿ ದೇವಸ್ಥಾನದ ಮೂಲಕ ಶಿವಮೊಗ್ಗ ಜಿಲ್ಲೆಯ ಪ್ರವೇಶಿಸುತ್ತದೆ.
ನಂತರ ಸಾಗರದ ಮಹಾಗಣಪತಿ ದೇವಸ್ಥಾನದಲ್ಲಿ ಎರಡರಿಂದ ಮೂರು ದಿನ ತಂಗುತ್ತಾರೆ ಅಲ್ಲಿಂದ ಹೊರಟು ಹೊಸನಗರ ತಾಲೂಕಿನ ಆಲಗೇರಿಮಂಡ್ರಿಯಲ್ಲಿ ಒಂದು ರಾತ್ರಿ ತಂಗುತ್ತಾರೆ.
ಅಲ್ಲಿಂದ ಮರು ಬೆಳಿಗ್ಗೆ ಹೊರಟು ಬಿದನೂರು ನಗರದಲ್ಲಿ ತಂಗುತ್ತಾರೆ ಅಲ್ಲಿಂದ ಮಾಸ್ತಿಕಟ್ಟೆ ಮುಖಾಂತರ ಹುಲಿಕಲ್ ಘಾಟಿ ಇಳಿದು ಹೊಸಂಗಡಿಗಿಂತ ಮೊದಲೇ ಬಲಕ್ಕೆ ತಿರುಗಿ ಕಮಲಶಿಲೆ ರಸ್ತೆಯಎಡಮೊಗೆಯನ್ನ ತಲುಪಿ ಅಲ್ಲಿರುವ ಪುರಾತನವಾದ ಶ್ರೀಕ್ಷೇತ್ರ ಸಿದ್ಧಫೀಠ ಕೊಡಚ್ಚಾದ್ರಿ ಹಲವಾರಿ ಮಠ ತಲುಪುತ್ತಾರೆ.
ಕಳೆದ ಬಾರಿ 2016 ರಲ್ಲಿ ಹೊಸ ನಗರದ #ಆಲಗೇರಿಮಂಡ್ರಿ ಎಂಬ ಹಳ್ಳಿಯಲ್ಲಿ ತಂಗಲು ಯಾತ್ರೆ ಸಾಗುವಾಗ ಮಾರ್ಗ ಮಧ್ಯೆ ನಾನು ಬಾರಾಪಂತ್ ಯಾತ್ರೆಯ ಸರ್ವಾಧ್ಯಕ್ಷರಾಗಿದ್ದ ಶ್ರೀಶ್ರೀಶ್ರೀ ಯೋಗಿ ನಿರ್ಮಲಾನಂದಜೀ ಅವರ ಸಂದರ್ಶನ ಶಿವಮೊಗ್ಗದ #ಜನಹೋರಾಟ ದಿನಪತ್ರಿಕೆಗೆ ಮಾಡಿದ್ದೆ.
ಅವತ್ತು ಸಂಜೆಯ ಪೂಜೆಗೆ ನಾನು ನನ್ನ ಪತ್ನಿ ಜೊತೆ #ಹಾಯ್_ಬೆಂಗಳೂರು ರೋವಿಂಗ್ ರಿಪೋರ್ಟರ್ #ಶೃಂಗೇಶ್, ಬಿಲ್ಡರ್ #ರವೀಂದ್ರರಾವ್ ಗಂಗೊಳ್ಳಿ, ನನ್ನಣ್ಣ #ನಾಗರಾಜ್ ಮತ್ತು ನಮ್ಮ ಸಿಬ್ಬಂದಿ ಜೇಡಿಸರದ #ಕೃಷ್ಣಪ್ಪ ಬಾಗವಹಿಸಿದ್ದೆವು.
ಸುಮಾರು 6 ತಿಂಗಳು ಕಾಲ ಪಶ್ಚಿಮ ಘಟ್ಟದ ನಿಧಿ೯ಷ್ಟ ಮಾಗ೯ದಲ್ಲಿ ನಡೆದು ಬರುವ ಈ ಯಾತ್ರೆ, ನಿಧಿ೯ಷ್ಟ ಸ್ಥಳಗಳಲ್ಲೇ ತಂಗುತ್ತಾ, ನಿಧಿ೯ಷ್ಟ ದಿನ ಮಂಗಳೂರಿನ ಕದ್ರಿ ಮಠಕ್ಕೆ ತಲುಪುತ್ತಾರೆ.
ಇದು 5000 ವಷ೯ಕ್ಕೂ ಹಿಂದಿನಿಂದ ತಪ್ಪದೇ ನಡೆದು ಬಂದಿರುವ ಈ ಬಾರಾಪಂಥ ಯಾತ್ರೆ ಅಥವ ಜೋಂಡಿ ಯಾತ್ರೆ ಒಂದು ವಿಸ್ಮಯ.
ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಪುರಾತನವಾದ ಧಾರ್ಮಿಕ ಆಚರಣೆಯ ಸಂಬಂಧವಿದು.
ಇಲ್ಲಿನ ಬಾರಾ ಪಂತ್ ಯಾತ್ರೆಯಲ್ಲಿ ಭಾಗವಹಿಸುವ ಸಾಧು ಸಂತರಲ್ಲಿರುವ ನಂಬಿಕೆ ಸನ್ಯಾಸಿ ಆಗಿ 78 ಜನ್ಮ ತಾಳಿದವರಿಗೆ ಮಾತ್ರ ಈ ಯಾತ್ರೆ ಮಾಡುವ ಅವಕಾಶ ಲಭ್ಯವಾಗುತ್ತದೆ ಎಂಬ ನಂಬಿಕೆ ಉತ್ತರ ಭಾರತದ ಸನ್ಯಾಸಗಳಲ್ಲಿ ಸಂತರಲ್ಲಿದೆ.
#ಗೋರಕಪುರದ ಮಹಾಂತರು ಈ ಬಾರಾಪಂತ್ ಯಾತ್ರೆಯನ್ನ ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ.
ಅವರೇ ಈ ಬಾರಾಪಂತ್ ಯಾತ್ರೆಯ ನೇತೃತ್ವ ವಹಿಸುವ ಸರ್ವಾದ್ಯಕ್ಷರನ್ನ, ಕೋಶಾದಿಕಾರಿಗಳನ್ನು ನೇಮಿಸುತ್ತಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ #ಯೋಗಿ_ಆದಿತ್ಯನಾಥ್_ಜೋಗಿ ಇದರ ಮಹಾಂತರಾಗಿದ್ದಾರೆ ಆದ್ದರಿಂದ ನಾಸಿಕ್ ನ #ತ್ರ್ಯಂಬಕೇಶ್ವರದ ಪಶ್ಚಿಮ ಘಟ್ಟದ ಮಧ್ಯದಲ್ಲಿ ಬರಿಗಾಲಿನಲ್ಲಿ ನಡೆದು ಮಂಗಳೂರು ತಲುಪುವ ಐದುನೂರಕ್ಕಿಂತ ಹೆಚ್ಚು ಸಾದು ಸಂತರ ಬಾರಾಪಂತ್ ಯಾತ್ರೆ ಮಂಗಳೂರು ತಲುಪುವಾಗ ಇವರನ್ನ ಸ್ವಾಗತಿಸಲು ಮಹಾಂತರು ಕೂಡ ಮಂಗಳೂರಿಗೆ ತಲುಪುತ್ತಾರೆ.
2016ರಲ್ಲಿ ಈ ಯಾತ್ರೆ ಆಗಮನದ ಬಗ್ಗೆ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ನನ್ನ ಲೇಖನವನ್ನ ಮುಖಪುಟದ ಲೇಖನವಾಗಿ ಪ್ರಕಟಿಸಿತ್ತು.
ಬಾರಾ ಪoತ್ ಯಾತ್ರೆ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ರೈಸ್ ಮಿಲ್ ಹಿಂಬಾಗ ಬಂದು ತಂಗಿದಾಗ ಅವತ್ತಿನ ಸಂಜೆಯ ಪೂಜಾ ಕಾಯ೯ಕ್ರಮದ ವಿಡಿಯೋ ಇದು.
ಜೊತೆಗೆ ಬಂದಿದ್ದ ಪತ್ರಕತ೯ ಶ್ರOಗೇಶ್ ಹಾಯ್ ಬೆಂಗಳೂರಲ್ಲಿ ಬಾರಾಪಂತ್ ಯಾತ್ರೆ ಬಗ್ಗೆ ವಿಶೇಷ ವರದಿಮಾಡಿದ್ದರು ಅದನ್ನು #ರವಿಬೆಳೆಗೆರೆ #ಹಾಯ್_ಬೆಂಗಳೂರು ಪತ್ರಿಕೆಯ ಮುಖಪುಟದ ಲೇಖನವಾಗಿ ಪ್ರಕಟಿಸಿದ್ದರು.
ಈ ಬಾರಾ ಪಂತ್ ಯಾತ್ರೆಗೆ ಹೆಚ್ಚಿನ ಪ್ರಚಾರ ಕೊಡಿಸ ಬೇಕೆಂದು ಉಡುಪಿ ಜಿಲ್ಲೆಯ ಕಮಲಶಿಲೆ ಸಮೀಪದ ಎಡಮೊಗೆಯ ಹಲವಾರಿ ಮಠದ ಪೀಠಾದಿಪತಿ ಶ್ರೀ ಶ್ರೀ ಶ್ರೀ ಪೀರ್ ಯೋಗಿ ಸೋಮನಾಥ ಗುರೂಜಿ ನನಗೆ ಆದೇಶಿಸಿದ್ದರು (ನಾಥ ಪಂಥದವರು ಗ್ವಾಲಿಯರ್ ಮೂಲದವರು) ಈ ಯಾತ್ರೆಗೆ 4 ವಷ೯ದ ಮೊದಲೇ ದೇಹ ತ್ಯಾಗ ಮಾಡಿದ್ದರು.
ಹಾಯ್ ಬೆಂಗಳೂರು ಬಾರಾಪಂತ್ ವಿಶೇಷ ಸುದ್ದಿ ಪ್ರಕಟಿಸಿದ ನಂತರ ರಾಜ್ಯದ ಎಲ್ಲಾ ಟಿವಿ ಚಾನಲ್ ಗಳು ಈ ಯಾತ್ರೆಯ ಸುದ್ದಿಯನ್ನು ವಿಶೇಷವಾಗಿ ವರದಿಮಾಡಿದವು.
#ತರಂಗ_ವಾರ_ಪತ್ರಿಕೆ 2015ರ ನಾಥಪಂಥದ ಬಾರಾಪಂಥ್ ಯಾತ್ರೆಯ ಬಗ್ಗೆ ವಿಶೇಷ ಸಂಚಿಕೆ ತಂದಿತು.
ಇದರಿಂದ ಎಡಮೊಗೆಯ ಹಲವಾರಿ ಮಠದ ಪೀಠಾದಿಪತಿ ಶ್ರೀಶ್ರೀಶ್ರೀ ಫೀರ್ ಯೋಗಿ ಸೋಮನಾಥಜೀ ಅವರ ಉದ್ದೇಶ ಈಡೇರಿತು.
#ಪಾತ್ರದೇವತೆಯನ್ನ ತಲೆಮೇಲೆ ಹೊತ್ತು ನಡೆದು ಬಂದು ಕದ್ರಿ ತಲುಪಿದಾಗ ನೈವೇದ್ಯ ಮಾಡಿದ ವಿಶೇಷ ಪ್ರಸಾದ ನನಗೆ ನೀಡಿದ್ದಾರೆ.
ಅದನ್ನ ಮುಂದಿನ ಬಾರ ಪಂಥಾ ಯಾತ್ರೆವರೆಗೆ ಜೋಪಾನ ಮಾಡಿ ಇಡಲು ಈ ಯಾತ್ರೆಯಲ್ಲಿ ನಡೆದು ಬಂದ ಸಾದುಗಳು ನನಗೆ ನೀಡಿದ್ದಾರೆ ಅದನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ.
ಕೆಲವು ವರ್ಷಗಳ ಹಿಂದೆ ಒಂದು ದಿನ ಕುಂದಾಪುರದಿಂದ ಊರಿಗೆ ಬರುವಾಗಎಡಮೊಗೆಯ ಹಲವಾರಿ ಮಠಕ್ಕೆ ಹೋಗಿ ಅಲ್ಲಿ ಸೋಮನಾಥ್ ಜಿ ಅವರ ಸಮಾದಿಗೆ ವಂದಿಸಿ, ಅಲ್ಲಿನ ಕಾಲ ಬೈರವೇಶ್ವರ ದೇವರ ಪೂಜಿಸಿ ಬರಲು ಹೋದಾಗ ಏನು ಆಶ್ಚಯ೯ ಎಂದರೆ ಅವತ್ತು 14 ಪೆಬ್ರವರಿ 2019 ಪೀರ್ ಸೋಮನಾಥಜೀ ಅವರ 8ನೇ ಪುಣ್ಯಾರಾದನೆ ಆದರ ಅಂಗವಾಗಿ ನೂತನ ಗೋಶಾಲೆ ಪ್ರಾರಂಬೋತ್ಸವ ಮಾಡಿದ್ದಾರೆ ನೂತನ ಸ್ವಾಮಿಗಳಾದ #ಶ್ರೀಶ್ರೀಶ್ರೀ_ಪೀರ್_ಯೋಗಿ_ಜಗದೀಶ್_ಜಿ.
ಮುಂದಿನ ಬಾರಾ ಪಂಥ ಯಾತ್ರೆಗೆ 8 ವಷ೯ ಕಾಯಬೇಕು ಆಗ ಈ ಬಾರಾ ಪಂತ್ ಯಾತ್ರೆ ಸಾಗುವ ಮಾಗ೯ದಲ್ಲಿ ಬಾರೀ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ ಅಂತ ಅವತ್ತು ಮನಸ್ಸಲ್ಲಿ ಅಂದು ಕೊಂಡಿದ್ದೆ.
ಆ ದಿನ 2028 ಇವತ್ತಿಗೆ ಬಹಳ ದೂರವಿಲ್ಲ.
ಪಶ್ಚಿಮ ಘಟ್ಟದ ಆದಿವಾಸಿ ಜನರಿಗೆ ಮಾತ್ರ ಸಂಪಕ೯ ಇರುವ ಸಾವಿರಾರು ವಷ೯ದ ಇತಿಹಾಸ ಇರುವ ಪಶ್ಚಿಮ ಘಟ್ಟದ ಮಧ್ಯದಲ್ಲೆ ಪಾದಯಾತ್ರೆಯಲ್ಲಿ ಸಾಗುವ ಈ ಬಾರಾ ಪ೦ಥ್ ಯಾತ್ರೆ ಒಂದು ನಿಗೂಡ ಮತ್ತು ವಿಸ್ಮಯವಾದ ಉತ್ತರ ಭಾರತದ ಸಾದು ನಂತರ ಯಾತ್ರೆ ಆಗಿದೆ.
ಇವತ್ತಿನಿಂದ ನಿರಂತರವಾಗಿ 2028 ರಲ್ಲಿ ಸಾಗರ ತಾಲೂಕಿನ ಮೂಲಕ ಹಾದು ಹೋಗುವ ಬಾರಾಪಂಥ ಯಾತ್ರೆ ಸಾಗಿ ಹೋಗುವ ತನಕ ಈ ಬಗ್ಗೆ ಸರಣಿ ಲೇಖನ ಪ್ರಕಟಿಸಲು ತೀರ್ಮಾನಿಸಿದ್ದೇನೆ.
ಈ ಲೇಖನಗಳನ್ನ ಓದಿ ಮತ್ತು ಆಸಕ್ತಿ ಇರುವವರಿಗೆ ಶೇರ್ ಮಾಡಲು ವಿನಂತಿ.
Comments
Post a Comment