#ಕಸ್ತೂರಿ_ರಂಗನ್_ವರದಿ
#ಈ_ವರದಿಯಲ್ಲಿ_ಸೇರಲ್ಪಟ್ಟ
#ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಗ್ರಾಮಗಳು
#ಕಸ್ತೂರಿ_ರಂಗನ್_ವರದಿಯಲ್ಲಿ_ಅತಿಹೆಚ್ಚು_ಪ್ರದೇಶ_ಸೇರಿದ_ತಾಲ್ಲೂಕು
#ಪಶ್ಚಿಮ_ಘಟ್ಟದ_ಶೇಕಡಾ_60_ಭಾಗ_ಕರ್ನಾಟಕದಲ್ಲಿದೆ
#westernghats #malenadu #shivamogga #Hosanagara #kasturiranganreport #Gadgillreport
ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗೆಗೆ ಪರಿಸರ ತಜ್ಞ ಮಾದವ ಗಾಡ್ಗಿಲ್‍ರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿ ಅವರನ್ನು ಈ ವಿಷಯದಲ್ಲಿ ಒಂದು ವರದಿ ಕೊಡಲು ಕೆಂದ್ರ ಸರ್ಕಾರ ನೇಮಿಸಿತು.
ಗಾಡ್ಗಿಳ್ ಅವರು ದಿನಾಂಕ - 31- ಆಗಸ್ಟ್- 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು.
ಈ ವರದಿಯಲ್ಲಿ ಶೇ 94-97% ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳವಾಗ ಅದು ಅಲ್ಲಿಯ ಪರಿಸರವನ್ನು ಜೀವ ವೈವಿಧ್ಯತೆಯ ಕ್ರಮವನ್ನು ಕೆಡಿಸದಿರುವ ಷರತ್ತಿನ ಮೇಲೆ ಅನುಮತಿ ನೀಡಬೆಕೆಂದು ಶಿಪಾರಸು ಮಾಡಿತು.
ಈ ಭಾಗದಲ್ಲಿ ಬಹಳಷ್ಟು ತೋಟಗಳೂ, ವಸತಿ ಪ್ರದೇಶಗಳೂ, ಕೃಷಿ ಪ್ರದೇಶವೂ ಸೇರಿತ್ತು.
ಇದರಲ್ಲಿ ಆ ಪ್ರದೇಶದ ಮುಕ್ಕಾಲು ಭಾಗವನ್ನು ನಿರ್ಬಂಧಿತ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿತ್ತು.
ಆ ಕಮಿಟಿಯ ಆ ಪ್ರದೇಶದಲ್ಲಿ ಯಾವುದೇ ದೊಡ್ಡ ಹೊಸ ಅಣೆಕಟ್ಟುಗಳನ್ನು ಕಟ್ಟುಬಾರದು, ಈ ಪ್ರದೇಶ ವಿಶೇಷ ರಕ್ಷಣೆ ಮತ್ತು ಅದರ ಭೂಲಕ್ಷಣ, ವನ್ಯಜೀವಿಗಳ ಕಾಳಜಿ, ಫಲವತ್ತಾದ ಭೂಮಿಯನ್ನು ಉಳಿಸುವ ಅಗತ್ಯವಿದೆ.
ಈ ಪ್ರದೇಶದಲ್ಲಿ ಕೆಲವು ಐತಿಹಾಸಿಕ ಮೌಲ್ಯಗಳು ಸಹ ಇವೆ ಇತ್ಯಾದಿ ಕಾರಣಗಳನ್ನು ಕೊಟ್ಟಿತ್ತು.
ಆದರೆ ಅದರ ಅನೂಷ್ಟಾನಕ್ಕೆ ತಡೆ ಮಾಡಿ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗಾಗಿ ಇನ್ನೊಂದು ಸಮಿತಿ ಡಾ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ #ಕಸ್ತೂರಿ_ರಂಗನ್ ಸಮಿತಿ ಕೇಂದ್ರ ಸರ್ಕಾರ ರಚಿಸಿತು.
2013ರಲ್ಲಿ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಸಲ್ಲಿಸಿತು ಇದರಲ್ಲಿ ಪಶ್ಚಿಮ ಘಟ್ಟದ ಶೇ. 37ರಷ್ಟು ಭಾಗವನ್ನು (ಸುಮಾರು 59,949 ಚ.ಕಿ.ಮೀ.) ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಲು ಶಿಫಾರಸು ಮಾಡಿದೆ.
ಅಲ್ಲಿ ಗಣಿಗಾರಿಕೆ ಮತ್ತು ಕೆಲವು ಕೈಗಾರಿಕೆಗಳನ್ನು ನಿಷೇಧಿಸಲು ಪ್ರಸ್ತಾಪಿಸಿದೆ ಆದರೆ ಕರ್ನಾಟಕ ಸೇರಿದಂತೆ ರಾಜ್ಯ ಸರ್ಕಾರಗಳು ಈ ವರದಿಯನ್ನು ಸಂಪೂರ್ಣವಾಗಿ ಒಪ್ಪದೆ ವಿರೋಧಿಸಿವೆ.
ಈ ವರದಿಯು ಅಭಿವೃದ್ಧಿ ಹಾಗೂ ಪರಿಸರ ರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಉದ್ದೇಶ ಹೊಂದಿದ್ದರೂ ರೈತರು ಮತ್ತು ಸ್ಥಳೀಯರ ವಿರೋಧದಿಂದಾಗಿ ಜಾರಿಯಾಗಿಲ್ಲ.
#ಸಾಗರ_ತಾಲೂಕ್_ನಲ್ಲಿ_ಕಸ್ತೂರಿ_ರಂಗನ್_ವರದಿಯಲ್ಲಿ_ಸೇರಿದ_ಪಶ್ಚಿಮ_ಘಟ್ಟದ_ಊರುಗಳು_ನೋಡಿ
ಗುತ್ತನಹಳ್ಳಿ, ತಲಗಳಲೆ, ಕರ್ಲಿಕೊಪ್ಪ, ಹಲವಗೋಡು, ಜಂಬನಿ, ತಲವಾಟ, ಬಿಲ್ಲಿಸಿರಿ, ಮಡಸೂರು, ಕಾನುತೋಟ.
ಬಿದರೂರು, ಹಿರೇಮನೆ, ಬೆಳಂದೂರು, ಲವಿಗೆರೆ, ಕೆರೋಡಿ, ಬಿಲ್ಲೇಮನೆ, ಮಲ್ಲ, ಬರಾಪುರ, ಉರುಳಗಲ್ಲು, ಕುಡಿಗೆರೆ, ಹೊನ್ನೇಮರಡು, ನೆಡವಳ್ಳಿ, ಬ್ರಾಹ್ಮಣಹಕ್ಕಲು, ಕಾನೂರು, ನರಗೋಡು.
ಚನ್ನಶೆಟ್ಟಿಕೊಪ್ಪ, ನೀಚಡಿ, ಹಿರೆಬೆಳಗುಂಜಿ, ಬಳ್ಳಿಗೆರೆ, ಎಲವರಚಿ, ಸಂಪಳ್ಳಿ, ಶಿರಗೊಪ್ಪೆ.
ಕನಪಗಾರು, ಮಡವಳ್ಳಿ, ಬಾನುಮನೆ, ಅರಳಗೊಡು, ಎಲಗಳಲೆ, ನಿತ್ಲಿ ಹಳೇ ತೋಟ, ಅರವಾಡೆ.
ಹಾರೋಗೊಪ್ಪ, ಚಿಕ್ಕಬಲಗುಂಜಿ, ಹೆಣ್ಣಗೆರೆ, ಬನದಕೊಪ್ಪ, ಗೌತಮಪುರ, ಹಿರಹಕ್ರ, ಬದಲಕೊಪ್ಪ, ಕಪ್ಟೆಮನೆ, ಉಳ್ಳೂರು.
ಕೆಸವಿನಮನೆ, ಕೊಪ್ಪರಿಗೆ, ಹೊಲಕೋಡು, ಪುರದಸರ, ಕಸ್ಪಾಡಿ, ಹೋಟಲಸರ, ನಾಗವಳ್ಳಿ, ಕೊಪ್ಪನಗದ್ದೆ, ಚೆನ್ನಶೆಟ್ಟಿಕೊಪ್ಪ, ಹುಳಿಹಿತ್ಲು, ನೆದರವಳ್ಳಿ, ನಾದವಳ್ಳಿ, ದನಂದೂರು, ಚಿಕ್ಕಮತ್ತೂರು, ಮತ್ತಿಕೊಪ್ಪ, ಚಿಪ್ಲಿ, ನಡವಟ್ಟಲಿ, ಬ್ರಾಹ್ಮಣಚಿರತ್ತೆ, ಹಾರಗೊಪ್ಪ, ನರಸೀಪುರ.
ಬಾನುಕುಳಿ, ಮುಂಬಾಳು, ಕಾನೂರು ಇನಾಂ, ನಂದೀತಾಳೆ, ಮಳಲಿ, ಹೊಂಗೋಡು, ಜಂಬೇಕೊಪ್ಪ, ಹೊಸಗುಂದ.
ಚನ್ನಗೊಂದ, ಬಲಿಗೆ, ಮಾವಿನಸರ, ಕಾನೂರುಮನೆ, ಮುಂಡಿಗೆಸರ, ತಂಗಲವಾಡಿ, ಚೆನ್ನಿಗತೋಟ, ಗುಡಿಹಿತ್ತಲು, ಕಲ್ಲೂರು, ತುಮರಿ, ತಂಗಳ, ಅಂಬಾರಗೋಡ್ಲು, ಹೆಬ್ಬಸೆ.
ಗಿಳಾಲಗುಂಡಿ, ಬಳ್ಳಿಬಲು, ಬಲಗೋಡು, ಹೆಬ್ಬರಿಗೆ, ಚಂದರವಳ್ಳಿ, ಕುರುವರಿ, ಕೆರೆಹಿತ್ಲು, ಬೇಸೂರು.
ಹೆಬ್ಬೋಡಿ, ತುಮರಿಕೊಪ್ಪ, ಕಪ್ಟೆಮನೆ, ನೆಗತ್ತು, ಅರಬಳ್ಳಿ, ಲಕ್ಕವಳ್ಳಿ, ಸಾತಲಲು, ಗೀಜಗ, ಇಂದುವಳ್ಳಿ, ಕಟ್ಟಿನಕರು.
ಗಂಟಿನಕೊಪ್ಪ, ಕುದರೂರು, ಬೊಬ್ಬಿಗೆ, ಕೋಳೂರು, ಕನ್ನಿಗೆ, ಮಾಳೂರು, ಕೊಂಡನವಳ್ಳಿ, ಬರುವೆ, ಅಡಗಳಲೆ, ಕರಾನಿ, ತಲಗೋಡು, ಶಂಕಣ್ಣ ಶಾನಭೋಗ, ಮರಾಠಿ, ವಳೂರು.
Comments
Post a Comment