Skip to main content

Blog 3565. ಯಡೂರಪ್ಪರ ಹುಟ್ಟುಹಬ್ಬ

#ಶಿವಮೊಗ್ಗದ_ವಿಮಾನ_ನಿಲ್ದಾಣದ_ವಾರ್ಷಿಕೋತ್ಸವ_ಮತ್ತು_ಯಡೂರಪ್ಪರ_ಹುಟ್ಟು_ಹಬ್ಬ

 #ಇವತ್ತು_ಯಡ್ಯೂರಪ್ಪರ_84ನೇ_ಹುಟ್ಟು_ಹಬ್ಬ.

#ಶಿವಮೊಗ್ಗ_ವಿಮಾನ_ನಿಲ್ದಾಣ_ಉದ್ಘಾಟನೆ_ಆಗಿ_ಮೂರು_ವರ್ಷ

#ಶಿವಮೊಗ್ಗ_ವಿಮಾನ_ನಿಲ್ದಾಣದ_ಕನಸು_ನನಸು_ಮಾಡಿದವರು

#ಯಡೂರಪ್ಪನವರು_ಇದರ_ಸಂಪೂರ್ಣ_ಕ್ರೆಡಿಟ್_ಯಡೂರಪ್ಪನವರದ್ಧೆ.

#ತಮ್ಮ_ಹೆಸರಿನ_ನಾಮಕರಣ_ನಯವಾಗಿ_ನಿರಾಕರಿಸಿ_ಕುವೆಂಪು_ಹೆಸರು_ಸೂಚಿಸಿದ_ಯಡೂರಪ್ಪ

#ರಾಷ್ಟ್ರಪತಿಗಳು_ಕೊಯಮತ್ತೂರು_ಪ್ರವಾಸಕ್ಕೆ_ಬಳಸಿದ್ದ_ಬೋಯಿಂಗ್_737_ಶಿವಮೊಗ್ಗದಲ್ಲಿಳಿದ_ಮೊದಲ_ವಿಮಾನ.

#ಪೆಬ್ರುವರಿ_27_2023ರಂದು_ಪ್ರದಾನಿ_ಮೋದಿ_ಈ_ವಿಮಾನ_ನಿಲ್ದಾಣ_ಉದ್ಘಾಟಿಸಿದರು


#kuvempuairport #yadurappa #shivamogga #airport #743boying #PrimeMinisterOfIndia 

   ಇವತ್ತು ಶುಕ್ರವಾರ 27- ಫೆಬ್ರುವರಿ ಯಡೂರಪ್ಪರ 84ನೇ ಹುಟ್ಟು ಹಬ್ಬದ ಆಚರಣೆ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.

   ಮೂರು ವರ್ಷಗಳ ಹಿಂದೆ ಇದೇ ದಿನ ದೇಶದ ಪ್ರಧಾನ ಮಂತ್ರಿಗಳು ನಮ್ಮ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಯಡೂರಪ್ಪರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ಹೇಳಿದ್ದರು. ಅವತ್ತು ಯಡೂರಪ್ಪರ 81ನೇ ಹುಟ್ಟು ಹಬ್ಬದ ದಿನವಾಗಿತ್ತು

 ಮೂರು ವರ್ಷದ ಹಿಂದೆ  21- ಪೆಬ್ರುವರಿ-2023ರ ಮಂಗಳವಾರ ಮಧ್ಯಾಹ್ನ ಪ್ರಯೋಗಾರ್ಥವಾಗಿ ಮೊದಲ ವಿಮಾನ ಬೋಯಿಂಗ್ 737 ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿತ್ತು ಮತ್ತು ಪುನಃ ಅದು ದೆಹಲಿಗೆ ಹಾರಿತ್ತು.

   ಆ ವರ್ಷ ಶಿವರಾತ್ರಿಯಂದು ರಾಷ್ಟ್ರಪತಿಯವರನ್ನು ಕೊಯಮುತ್ತೂರಿನ ಸದ್ಗುರು ಜಗ್ಗಿ ವಾಸುದೇವರ ಆದಿಯೋಗಿ ಆಶ್ರಮಕ್ಕೆ ಕರೆದೊಯ್ದ ವಿಮಾನವೇ ಇದು.

   ಇದು ಇಡೀ ಶಿವಮೊಗ್ಗ ಜಿಲ್ಲೆಯಲ್ಲಿನ ಜನತೆಗೆ ರೋಮಾಂಚನ ಮಾಡಿದ ಸುದ್ದಿ ಆಗಿತ್ತು ಮತ್ತು ಮೊದಲ ವಿಮಾನ ಇಳಿದಾಗ ಮತ್ತು ಹಾರಿದಾಗ ಮಾಡಿದ ವಿಡಿಯೋ ವೈರಲ್ ಆಗಿತ್ತು.

     ಕಳೆದ ವರ್ಷ ಹುಬ್ಬಳ್ಳಿಯ ಜಮೀನುದಾರರು ತಮ್ಮ ಕೃಷಿ ಕಾರ್ಮಿಕರನ್ನ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಗೋವಾಕ್ಕೆ ವಿಮಾನದಲ್ಲಿ ಕರೆದೊಯ್ದ ಸುದ್ದಿ ಕೂಡ ನೋಡಿದ್ದೀರಿ.

    ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾದರೆ ಮದ್ಯ ಕರ್ನಾಟಕದ ಶಿವಮೊಗ್ಗ - ಚಿಕ್ಕಮಗಳೂರು - ದಾವಣಗೆರೆ - ಚಿತ್ರದುರ್ಗ - ಹಾಸನ ಜಿಲ್ಲೆಗಳಿಗೆ ಸುಲಭ ಸಂಪರ್ಕವಾಗುವುದರಿಂದ ಈ ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಅನೇಕ ಉದ್ಯಮಗಳು ಬರಲಿದೆ ಇದರಿಂದ ಅನೇಕ ಉದ್ಯೋಗ ಸೃಷ್ಟಿ ಆಗಲಿದೆ.

  ಈ ಬಾಗದಲ್ಲಿ ವ್ಯಾಪಾರ- ಕೈಗಾರಿಕೆ - ಪ್ರವಾಸೋದ್ಯಮದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧ್ಯವಾಗಲಿದೆ ಎಂಬ ದೂರ ದೃಷ್ಟಿ ಯಡೂರಪ್ಪನವರದ್ದು.

  ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕನಸು ಕಂಡವರು ಯಡೂರಪ್ಪನವರು.

     ಕುಮಾರಸ್ವಾಮಿಯವರು ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಡೂರಪ್ಪನವರು ಉಪ ಮುಖ್ಯಮಂತ್ರಿ ಆಗಿದ್ದರು.

   ದಿನಾಂಕ 20 -ಜೂನ್ - 2008ರಲ್ಲಿ ಉಪಮುಖ್ಯಮಂತ್ರಿ
 ಯಡೂರಪ್ಪನವರು ಶಿವಮೊಗ್ಗ ವಿಮಾನ ನಿಲ್ದಾಣದ ಅಡಿಪಾಯ ಹಾಕಿದ್ದರು.

    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಜ್ಞರ ತಂಡ ಶಿವಮೊಗ್ಗದ ಸೋಗಾನೆ ಮತ್ತು ಅಯನೂರು ಬಳಿಯ ನಾಗರಬಾವಿ ಪ್ರದೇಶವನ್ನು ಪರಿಶೀಲಿಸಿ ಅಂತಿಮವಾಗಿ ಸೋಗಾನೆಯನ್ನು 4- ಏಪ್ರಿಲ್ -2006 ರಂದು ಅಂತಿಮಗೊಳಿಸಿದ್ದರು..

  ಆದರೆ ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನೆ ಅನೇಕ ಕಾರಣಗಳಿಂದ ಕಾರ್ಯಾರಂಭ ಮಾಡಲು ಸಾಧ್ಯವಾಗಲೇ ಇಲ್ಲ.

  ನಂತರ ಯಡೂರಪ್ಪನವರು ಮುಖ್ಯಮಂತ್ರಿ ಆದರೂ ಯೋಜನೆ ಕಾರ್ಯಾಗತವಾಗಲಿಲ್ಲ.

   ನಂತರ ಕಾಂಗ್ರೇಸ್‌ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದರೂ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಯಾವುದೇ ಆಸಕ್ತಿ ಕೈಗೊಳ್ಳಲಿಲ್ಲ.

   ಅದರ ನಂತರದ ಜೆ.ಡಿ.ಎಸ್ - ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ರಚನೆ ಆಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದರೂ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಟೇಕಾಪ್ ಆಗಲೇ ಇಲ್ಲ.

   ಈ ಸಮ್ಮಿಶ್ರ ಸರ್ಕಾರ ಬೀಳಿಸಿ ಮುಖ್ಯಮಂತ್ರಿ ಆದ #ಯಡಿಯೂರಪ್ಪನವರು 2020 ರಂದು ಎರಡನೆ ಬಾರಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದರು.

  ವಿಮಾನ ನಿಲ್ದಾಣದ ಕಟ್ಟಡ - ರನ್ ವೇ - ಕಂಪೌಂಡ್ ಕಾಮಗಾರಿ ನಿವ೯ಹಿಸಿದವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ #ಇಬ್ರಾಹಿಂ_ಷರೀಪರ ಪ್ರಖ್ಯಾತ ನಿರ್ಮಾಣ ಸಂಸ್ಥೆ #ನ್ಯಾಷನಲ್_ಕನ್ಸ್ಟ್ರಕ್ಷನ್_ಕಂಪನಿ.

   ಸೋಗಾನೆಯಲ್ಲಿ 775 ಎಕರೆ ಪ್ರದೇಶದಲ್ಲಿ 449 ಕೋಟಿ ವೆಚ್ಚದಲ್ಲಿ 3200 ಮೀಟರ್ ಉದ್ದದ 45 ಮೀಟರ್ ಅಗಲದ ರನ್ ವೇಯಲ್ಲಿ ಬೋಯಿಂಗ್ 737 ಮತ್ತು #ಏರ್_ಬಸ್_A320 ಯ೦ತ ವಿಮಾನ ಏರಿಳಿಯುವಂತೆ ನಿರ್ಮಿಸಲಾಗಿದೆ.

    ಈ ವಿಮಾನ ನಿಲ್ದಾಣದ ಕಟ್ಟಡದ ವಿನ್ಯಾಸ ಆಕಾಶದಿಂದ ನೋಡಿದರೆ ರಾಷ್ರೀಯ ಪುಷ್ಪ #ಕಮಲದ (ಭಾರತೀಯ ಜನತಾ ಪಕ್ಷದ ಚಿಹ್ನೆ ಕೂಡ ಕಮಲ) ಆಕೃತಿಯಲ್ಲಿದೆ.
 
  ಶಿವಮೊಗ್ಗ ಏರ್ ಪೋರ್ಟ್   #ಶಿವಮೊಗ್ಗದ_ಸೋಗಾನೆಯಲ್ಲಿ ನಿರ್ಮಾಣವಾಗಿ #27_ಪೆಬ್ರುವರಿ_2023ರಂದು ಸೋಮವಾರ ದೇಶದ #ಪ್ರದಾನ_ಮಂತ್ರಿ_ನರೇಂದ್ರ_ಮೋದಿಯವರಿಂದ ಉದ್ಘಾಟನೆ ಆಯಿತು.

  ಈ ವಿಮಾನ ನಿಲ್ದಾಣ ನಿರ್ಮಾಣ ಯಡೂರಪ್ಪರ ಸತತ ಪ್ರಯತ್ನದ ಫಲವಾದ್ದರಿಂದ ಅವರ ಹೆಸರನ್ನು ನಾಮಕರಣಕ್ಕೆ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ರಾಜ್ಯ ಸರ್ಕಾರದ ಸಂಪುಟ ಸಭೆ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿತ್ತು.

  ಆದರೆ ಸ್ಟತಃ ಯಡೂರಪ್ಪನವರೇ #ರಾಷ್ಟ_ಕವಿ_ಕುವೆಂಪು ಹೆಸರು ಸೂಚಿಸಿದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣ #ಕುವೆಂಪು_ವಿಮಾನ_ನಿಲ್ದಾಣವಾಗಿದೆ.
 
    ಶಿವಮೊಗ್ಗ ಜಿಲ್ಲೆಯ ಜನ ಸದಾ ಸ್ಮರಿಸುವಂತಾ ಕೆಲಸ ನಿರ್ವಹಿಸಿದ ಯಡೂರಪ್ಪನವರ ಈ ಸಾಧನೆಯ ನೆನಪು ಸರ್ವಕಾಲಿಕವಾಗಿ ಉಳಿಯುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...