#ಮಹಾನ್_ರೈತ_ನಾಯಕ
#ಪ್ರೋಪೆಸರ್_ನಂಜುಂಡಸ್ವಾಮಿ
#ರೈತರ_ಹಕ್ಕುಗಳಿಗಾಗಿ_ಪ್ರತಿಪಾದಿಸಿದವರು.
#ಕರ್ನಾಟಕ_ರಾಜ್ಯ_ರೈತ_ಸಂಘ_ಸಂಸ್ಧಾಪಕರು
#ಇವತ್ತು_ಅವರ_90ನೇ_ಹುಟ್ಟು_ಹಬ್ಬದ_ಸ್ಮರಣೆ
#professor #nanjundaswamy #raithasanga
#KRRS #gandian #Karnataka
ಪೋಪೆಸರ್ ನಂಜುಂಡ ಸ್ವಾಮಿ ಎಂದೇ ಜನ ಕರೆಯುವ ಮಹಾನ್ ರೈತ ನಾಯಕ ಎಂ. ಡಿ. ನಂಜುಂಡ ಸ್ವಾಮಿ ಅವರ ಪೂರ್ಣ ಹೆಸರು ಮಹಾಂತ ದೇವರು ನಂಜುಂಡಸ್ವಾಮಿ,
13 - ಫೆಬ್ರವರಿ - 1936 ಅವರ ಜನ್ಮ ದಿನ,ಇವತ್ತು 13 -ಡೆಬ್ರುವರಿ- 2026 ಅವರ 90ನೇ ಜನ್ಮ ದಿನ.
ರೈತ ನಾಯಕ ಪ್ರೋಪೆಸರ್ ನಂಜುಂಡಸ್ವಾಮಿ ಗಾಂಧಿವಾದಿ ನಾಯಕರು, ಭಾರತದ ಪ್ರಮುಖ ರೈತ ನಾಯಕರು.
ಅಸಾಧಾರಣ ಬುದ್ಧಿಮತ್ತೆಯವಿದ್ವಾಂಸರಾಗಿದ್ದ ಪ್ರೋಪೆಸರ್ ನಂಜುಂಡಸ್ವಾಮಿ ಭಾರತದ ಪ್ರಮುಖ ಸಾಮಾಜಿಕ ಹೋರಾಟಗಾರರು.
ಅವರು ರೈತರ ಹಕ್ಕುಗಳಿಗಾಗಿ ಪ್ರತಿಪಾದಿಸಿದರು ಮತ್ತು ರಾಜ್ಯದಲ್ಲಿ ಬಲಿಷ್ಟ ರೈತ ಸಂಘಟನೆಯನ್ನ ಮುನ್ನಡೆಸಿದ್ದರು.
ಅವರು 1980 ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ (KRRS) ಸಂಸ್ಥಾಪಕ ತ್ರಿಮೂರ್ತಿಗಳಾದ #ರುದ್ರಪ್ಪನವರು, #ಸುಂದರೇಶ್ ಮತ್ತು #ಪ್ರೋಪೆಸರ್_ಎಂ_ಡಿ_ನಂಜುಂಡಸ್ವಾಮಿ ಪ್ರಮುಖರು.
ಅವರು ಜಾಗತೀಕರಣ ವಿರೋಧಿ ಪ್ರಚಾರದ ಪ್ರಮುಖ ನಾಯಕರಾಗಿದ್ದರು.
3- ಫೆಬ್ರವರಿ - 2004 ರಂದು ತಮ್ಮ 68ನೇ ವಯಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ ಅವರ ಕರ್ನಾಟಕ ರಾಜ್ಯದ ರೈತ ಹೋರಾಟಗಳು ಇತಿಹಾಸ ಅವರ ನಂತರ ಈವರೆಗೆ ಇನ್ನೊಬ್ಬ ಅವರಂತ ಸಮರ್ಥ ರೈತ ನಾಯಕ ಇನ್ನೂಬ್ಬರು ಹುಟ್ಟಿ ಬಂದಿಲ್ಲ.
1999 ರಲ್ಲಿ ನಮ್ಮ ಮನೆಗೆ ರೈತ ನಾಯಕ ಪ್ರೋಪೆಸರ್ ನಂಜುಂಡ ಸ್ವಾಮಿ ಅವರು ಬಂದಾಗ ಅವರ ಕಟ್ಟಾ ಅಭಿಮಾನಿ ಮತ್ತು ಅವರ ಜೈಲ್ ಭರೋ ಕರೆಯ ಮೇರೆಗೆ ಜೈಲಿಗೆ ಹೋಗಿದ್ದ #ನನ್ನ_ತಂದೆ_ಕೃಷ್ಣಪ್ಪ ಮತ್ತು ನಾನು ಅವರ ಜೊತೆ ತೆಗೆದುಕೊಂಡ ನೆನಪಿನ ಚಿತ್ರ.
ನಮ್ಮ ತಂದೆ ಅವರಿಗೆ ಹಾರ ಹಾಕಿದ್ದರು ಆಗ ಪ್ರೋಪೆಸರ್ "ನಾನು ಯಾವಾಗಲೂ ಹಾರ ಹಾಕಿಸಿಕೊಳ್ಳುವುದಿಲ್ಲ ಆದರೆ ನಿಮ್ಮ ತಂದೆಯ ಪ್ರೀತಿಗಾಗಿ ಸ್ವೀಕರಿಸುತ್ತೇನೆ" ಎಂದಿದ್ದರು.
ನಮ್ಮ ಆತಿಥ್ಯದ ಕಾಫಿ ಸ್ವೀಕರಿಸಿ ಸಿಗರೇಟು ಸೇದಿದ್ದರು ಅವರ ಜೊತೆ ರೈತ ನಾಯಕರಾದ #ಕೋಡಿಹಳ್ಳಿ_ಚಂದ್ರಶೇಖರ್ ಮತ್ತು ರೈತ ಹೋರಾಟ ವಾರಪತ್ರಿಕೆ ಸಂಪಾದಕರಾದ #ವಸಂತ್_ಕುಮಾರ್ ಬಂದಿದ್ದರು.
Comments
Post a Comment