#ಇಡಗುಂಜಿ_ಮಹಾಗಣಪತಿ
#ರಂಗೋಲಿಯಲ್ಲಿ_ಮೂಡಿಸಿದ
#ಸೂರಜ್_ಕೊಡೂರು
#ದೇವರ_ವಿಗ್ರಹಗಳಿಗೆ_ಬೆಣ್ಣೆ_ಅಲಂಕಾರ_ಪ್ರವೀಣರು.
#Varasiddivinayaka #Siddivinayakatemple #yadehalli #Bennealankara #Rangoli #Rathotsava #Jatre #Idagunji #Mahaganapathi
ನಮ್ಮೂರ ಪುರ ದೈವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರ 20 ನೇ ವರ್ಷದ ಬ್ರಹ್ಮರಥೋತ್ಸವ ಕಳೆದ ಜನವರಿ ತಿಂಗಳ 22ನೇ ತಾರೀಖು ನೆರವೇರಿತು.
ಈ ಸಂದರ್ಭದಲ್ಲಿ ದೇವಾಲಯದಲ್ಲಿ #ಇಡಗುಂಜಿ_ಮಹಾಗಣಪತಿಯನ್ನ ರಂಗೋಲಿಯಲ್ಲಿ ಮೂಡಿಸಿದವರು ಅಪ್ರತಿಮ ಕಲಾವಿದರಾದ ಸೂರಜ್ ಅವರು.
ಇವರನ್ನ ನಮಗೆ ಪರಿಚಯಿಸಿ ಪ್ರೋತ್ಸಾಹಿಸಿದವರು ನಮ್ಮ ದೇವಾಲಯದ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರು ಮತ್ತು ಶಿವಮೊಗ್ಗದ ಸಿರಿ ಸೌಹಾರ್ದ ಬ್ಯಾಂಕಿನ ಉಪಾದ್ಯಕ್ಷರಾದ ಎಂ. ಜಿ. ಪ್ರಕಾಶ್ ಭಟ್ಟರು.
ಸೂರಜ್ ಭಟ್ಟರು ಪ್ರತಿ ವರ್ಷವೂ ಜಾತ್ರಾ ಮಹೋತ್ಸವದಲ್ಲಿ ದೇವಾಲಯದಲ್ಲಿ, ಹೋಮದ ಮಂಟಪದಲ್ಲಿ ವಿದಿ ವಿಧಾನದ ರೀತಿ ರಂಗೋಲೆಯಲ್ಲಿ ಮಂಡಲ, ಗಣಪತಿ ಮತ್ತು ಶ್ರೀಚಕ್ರಗಳ ಚಿತ್ರಿಸುತ್ತಾರೆ.
ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ.
ಹೋಮ ಹವನದಲ್ಲಿ, ಮದುವೆಯ ಹಸೆಮಣೆಯಲ್ಲಿ, ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ.
ನಿದಿ೯ಷ್ಟವಾದ ಆಳತೆಯ ಸ್ಪಷ್ಟವಾದ ಗೆರೆಗಳು ಹೊಂದಿರುವ ರಂಗೋಲಿಗೆ ಸೂಕ್ತ ಬಣ್ಣ ತುಂಬುವುದು ಕಲಾಕಾರಿಕೆ, ತಂತ್ರ ವಿದ್ಯೆಯಲ್ಲಿ ಇಂತಹ ರಂಗೋಲಿಗಳು ಸಾಧಕರ ಮನೋಸ್ಥಿಮಿತ ಉ೦ಟು ಮಾಡುತ್ತದೆ.
ಅವರನ್ನ ಸಮಾದಿ ಸ್ಥಿತಿಗೂ ಒಯ್ಯುತ್ತದೆ, ತಂತ್ರ ವಿದ್ಯೆಯಿಂದ ಸಾದನೆ ಮಾಡಬೇಕಾದರೆ ಮಂಡಲಗಳು, ರಂಗೋಲಿಗಳು ಬಹುಮುಖ್ಯ.
ಇದಕ್ಕೆ ಪ್ರಾಚಿನತೆ ಸ್ಪಶ೯ವಿದೆ, ದೈವ ಶಕ್ತಿಯ ಬಲವಿದೆ, ತಂತ್ರ ವಿದ್ಯೆಯ ಒಲವಿದೆ, ಸಂಸ್ಕೃತಿಯ ಹಿನ್ನೆಲೆಯಿದೆ, ದಾಮಿ೯ಕ ಭಾವನೆಯ ಸೆಳಕಿದೆ, ಸೌ೦ದಯ೯ದ ತಳುಕಿದೆ.
ಈ ಆಕರ್ಷಕ ರಂಗೋಲೆಯನ್ನ ಸಾವಿರಾರು ಭಕ್ತರು ಕಣ್ಣು ತುಂಬಿಕೊಂಡು ನಮಸ್ಕರಿಸುತ್ತಾರೆ.
ಈ ವರ್ಷ ಇವರು ಚಿತ್ರಿಸಿದ ಇಡಗುಂಜಿ ಮಹಾಗಣಪತಿ ಸಾವಿರಾರು ಜನರ ಆಕರ್ಷಿಸಿತ್ತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಮ್ಮ ದೇವಾಲಯದಲ್ಲಿ ಭಕ್ತರು ಶ್ರೀವರಸಿದ್ದಿ ವಿನಾಯಕ ಸ್ವಾಮಿಗೆ ಬೆಣ್ಣೆ ಅಲಂಕಾರ ಸೇವೆ ಹರಕೆ ಹೊರುತ್ತಾರೆ ಮೊದಲೆಲ್ಲ ದೇವರ ಬೆಣ್ಣೆ ಅಲಂಕಾರ ಪ್ರವೀಣರಾದ ಶಿವಮೊಗ್ಗದ ಭಾರ್ಗವ ಭಟ್ಟರು ಬಂದು ನೆರವೇರಿಸುತ್ತಿದ್ದರು ಈಗ ಅವರು ಬೆಂಗಳೂರಿನಲ್ಲಿ ಹೆಚ್ಚು ಅಲಂಕಾರ ಸೇವೆಯ ಕೆಲಸದಲ್ಲಿ ನಿರತರಾಗಿರುವುದರಿಂದ ನಮ್ಮಲ್ಲಿ ಸೂರಜ್ ಭಟ್ಟರು ಈ ಕೆಲಸ ನೆರವೇರಿಸಿ ಕೊಡುತ್ತಿದ್ದಾರೆ.
ಮೂಲತ ಹೊಸನಗರ ತಾಲೂಕಿನ ಕೋಡೂರಿನ ಸೂರಜ್ ಭಟ್ಟರು ಭದ್ರಾವತಿ ತಾಲ್ಲೂಕಿನ ಕೋಡಿಹಳ್ಳಿಯ ಗಣಪತಿ ದೇವಾಲಯದ ಅರ್ಚಕರಾಗಿದ್ದಾರೆ.
ದೇವಾಲಯಗಳ ಬೆಣ್ಣೆ ಅಲಂಕಾರ ಮಾಡಲು ಅವರ ಸಂಪರ್ಕ ಸಂಖ್ಯೆ ಕಾಮೆಂಟ್ ನಲ್ಲಿದೆ.
Comments
Post a Comment