Skip to main content

Blog 3567. ಜನವಾರ್ತೆ

#ಶಿವಮೊಗ_ಜಿಲ್ಲೆಯ_ಮೊದಲ_ಬ್ರಾಡ್_ಶೀಟ್_ದಿನಪತ್ರಿಕೆ

#ಜನವಾರ್ತೆ_ದಿನಪತ್ರಿಕೆ.

#ಜನವಾರ್ತೆ_ಸಂಪಾದಕ_ನಾಗರಾಜ್_ಅವರ_ಮೂರನೆ_ಪುಣ್ಯ_ಸ್ಮರಣೆ

#ಶಿವಮೊಗ್ಗದ_ಮೊದಲ_ಅಂತರ್_ಜಿಲ್ಲಾ_ನಾಲ್ಕು_ಪುಟಗಳ_ಬ್ರಾಡ್_ಶೀಟ್_ದಿನಪತ್ರಿಕೆ_ಪ್ರಾರಂಬಿಸಿದವರು.

#ಸ್ವಂತ_ಆಫ್_ಸೆಟ್_ಮುದ್ರಣ_ಯಂತ್ರ_ಹೊಂದಿದ್ದ_ಪತ್ರಿಕೆ_ಜನವಾರ್ತೆ

#ಕನಸುಗಾರ_ಉದ್ಯಮಿಯನ್ನು_ದಾರಿತಪ್ಪಿಸಿದ_ಜಿಲ್ಲೆಯ_ರಾಜಕಾರಣಿಗಳು

#ಆಶ್ರಯ_ಹಗರಣದಲ್ಲಿ_ಬಲಿಪಶು

#ಕೊನೆಯವರೆಗೂ_ಇವರೊಂದಿಗೆ_ಉಳಿದವರು_SPಶೇಷಾದ್ರಿ_ಮಾತ್ರ.

#ದುರಂತ_ಕಥಾ_ನಾಯಕ_ಜಿ_ಎಸ್_ನಾಗರಾಜ್

#ಯಶಸ್ಸಿಗೆ_ಹಲವು_ಅಪ್ಪಂದಿರು_ಇರುತ್ತಾರೆ_ಸೋಲು_ಅನಾಥ_ಎಂಬ_ಗಾದೆ_ಸುಳ್ಳಲ್ಲ.


#Janavarthe #GSNagaraj #Sheshadri #Shivamogga 
#Broadsheetdaily #Newspaper

   ಶಿವಮೊಗ್ಗ ಜಿಲ್ಲೆಯ ಮೊದಲ ಬ್ರಾಡ್ ಶೀಟ್ ದಿನ ಪತ್ರಿಕೆ #ಜನವಾರ್ತೆ ಇದು ಮೊದಲ ಅಂತರ್ ಜಿಲ್ಲಾ ಪತ್ರಿಕೆ ಕೂಡ ಆಗಿತ್ತು.

  ಇದನ್ನು ಪ್ರಾರಂಬಿಸಿದವರು ಶಿವಮೊಗ್ಗ ಜಿಲ್ಲೆಯ #ತೀರ್ಥಹಳ್ಳಿ ಮೂಲದ ಶಿವಮೊಗ್ಗದ ಉದ್ಯಮಿ #ಜಿ_ಎಸ್_ನಾಗರಾಜ್.

  ಇಂತಹ ಅಮೋಘ ದಾಖಲೆ ಮಾಡಿದ ಜಿ.ಎಸ್. ನಾಗರಾಜ್ ಒಬ್ಬ ಸಾಹಸಿ ಉದ್ದಿಮೆದಾರರು.

   ಕನ್ನಡದ ಮೊದಲ ಬ್ರಾಡ್‌ಶೀಟ್ ದಿನಪತ್ರಿಕೆ ಮತ್ತು ಮೊದಲ ಕನ್ನಡ ಪತ್ರಿಕೆ #ಮಂಗಳೂರು_ಸಮಾಚಾರ (Mangaluru Samachara).

  ಇದು ಜರ್ಮನಿಯ ಹರ್ಮನ್ ಮೋಗ್ಲಿಂಗ್ (Hermann Mögling) ಅವರಿಂದ 1843ರ ಜುಲೈ 1ರಂದು ಮಂಗಳೂರಿನಿಂದ ಪ್ರಕಟವಾಯಿತು. 

   1995ರಲ್ಲಿ ಶಿವಮೊಗ್ಗದಿಂದ ಜಿ.ಎಸ್.ನಾಗರಾಜ್ ಸಂಪಾದಕತ್ವದಲ್ಲಿ ಪ್ರಾರಂಬಿಸಿದ #ಜನವಾರ್ತೆ ಪತ್ರಿಕೆ ಆ ಕಾಲದಲ್ಲಿ ಅನೇಕ ಪ್ರಥಮಗಳ ದಾಖಲೆ ಮಾಡಿತ್ತು.

  ಡೆಮ್ಮಿಸೈಜಿನ,ಬ್ರಾಡ್ ಶೀಟ್ ಗಾತ್ರದ ಪ್ರಜಾವಾಣಿ ಸೈಜಿನಲ್ಲಿ ನಾಲ್ಕು ಪುಟದ ಶಿವಮೊಗ್ಗ ಜಿಲ್ಲೆಯ ಮೊದಲ ದಿನ ಪತ್ರಿಕೆ ಜನವಾರ್ತೆ.

   ಸ್ವಂತದ್ದಾದ ಬೃಹತ್ ಆಫ್ ಸೆಟ್ ಮುದ್ರಣ ಯಂತ್ರ ಹೊಂದಿದ ಮೊದಲ ಸ್ಥಳಿಯ ದಿನ ಪತ್ರಿಕೆ ಅದು.

  ಶಿವಮೊಗ್ಗ - ದಾವಣಗೆರೆ (ಆಗ ಚಿತ್ರದುರ್ಗ ಜಿಲ್ಲೆಯಲ್ಲಿತ್ತು) - ಚಿಕ್ಕಮಗಳೂರು - ಹಾಸನ ಜಿಲ್ಲೆಗಳಿಗೆ ಪ್ರಸರಣಾ ಹೊಂದಿದ್ದ ಮೊದಲ ಅಂತರ್ ಜಿಲ್ಲಾ ಪತ್ರಿಕೆ.

   1995-2000 ಇಸವಿ ಅವಧಿಯಲ್ಲಿ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ  ಜನವಾರ್ತೆ ಪತ್ರಿಕೆ ನನ್ನ ಹೋರಾಟ, ಪತ್ರಿಕಾ ಹೇಳಿಕೆಗಳ ಪ್ರಕಟನೆ ಮುಖಾಂತರ ಹೆಚ್ಚಿನ ಸಹಾಯ ಮಾಡಲು ಜಿ.ಎಸ್.ನಾಗರಾಜ್ ಕಾರಣರಾಗಿದ್ದರು.

  ಆ ಕಾಲದಲ್ಲಿ ಸವಳಂಗ ರಸ್ತೆಯ ರೈಲ್ವೇ ಗೇಟ್ ದಾಟಿದ ನಂತರ ದೊಡ್ಡ ಬಯಲ ಮದ್ಯದಲ್ಲಿ ಬೃಹತ್ ಕಪ್ಪು ಗಾಜಿನ ಕಟ್ಟಡ ಒಂದು ಅಲ್ಲಿ ಸಂಚರಿಸುವವರ ಕಣ್ಣು ಕುಕ್ಕುತ್ತಿತ್ತು ಅದೇ ಜನವಾರ್ತೆ ದಿನಪತ್ರಿಕೆ ಕಛೇರಿ ಮತ್ತು ಮುದ್ರಣಾಲಯ.

    ಅಲ್ಲಿ ಮೊದಲ ಮಹಡಿ ಏರಿ ಹೋಗಿ ಎಡಕ್ಕೆ ಇರುವ ಬೃಹತ್ ಬಾಗಿಲ ಹಿಂದೆ ಹವಾ ನಿಯಂತ್ರಣ ಕೊಠಡಿಯ ವಿಶಾಲವಾದ ಟೇಬಲ್ ಹಿಂದೆ ಐಶಾರಾಮಿ ಖುಚಿ೯ಯಲ್ಲಿ ಗಡ್ಡದಾರಿ ಸುಂದರ ನಗುಮುಖದ ನಾಗರಾಜ್ ಕುಳಿತಿರುತ್ತಿದ್ದರು.

   ಬಂದವರಿಗೆಲ್ಲ ತಣ್ಣನೆಯ ಕೋಕಾ ಕೋಲಾದ ಸ್ವಾಗತ ಪೇಯವೂ ಇರುತ್ತಿತ್ತು.

  ಅನೇಕ ಬಾರಿ ನಾನು ಮಾಜಿ ಮಂತ್ರಿಗಳಾಗಿದ್ದ ಮೈಸೂರಿನ ಹೆಚ್. ವಿಶ್ವನಾಥರನ್ನು ಇವರ ಚೇಂಬರ್ ನಲ್ಲೇ ಬೇಟಿ ಮಾಡಿದ್ದೆ.

   ಅಂತಹ ಒಂದು ಸಂದರ್ಭದಲ್ಲಿ ವಿಶ್ವನಾಥರನ್ನು ನಾನು ಕೇಳಿದ್ದೆ ಸಾಮೂಹಿಕ ಮದುವೆಯಲ್ಲಿ ಅವರ ಪುತ್ರಿ ವಿವಾಹ ಮಾಡಿದ ಬಗ್ಗೆ ಅದಕ್ಕೆ ಅವರು ನೀಡಿದ ಉತ್ತರದ ಕಾರಣ ನನಗೆ ಅವರ ಬಗ್ಗೆ ಹೆಚ್ಚಿನ ಸದಭಿಪ್ರಾಯ ಮೂಡಲು ಕಾರಣವಾಗಿತ್ತು.

   ಶಿವಮೊಗ್ಗದ ಸಂಪನ್ನ ರಾಜಕಾರಣಿಗಳಾಗಿರುವ #S_P_ಶೇಷಾದ್ರಿ ಅವತ್ತಿಂದ ಇವತ್ತಿನವರೆವಿಗೂ ಕೊನೆಯ ತನಕ ಇವರ ಜೊತೆ ಎಲ್ಲಾ ಕಷ್ಟದಲ್ಲಿ ಬಾಗಿಯಾಗಿ ಉಳಿದಿದ್ದ ಏಕೈಕ ಆಪದ್ಬಾಂದವರು.

  ಆಗೆಲ್ಲ ಇವರ ಜನವಾರ್ತೆ ಪತ್ರಿಕಾ ಕಛೇರಿಗೆ ಹೋದಾಗ ಅಲ್ಲಿ ಶೇಷಾದ್ರಿ ಮತ್ತು ಬಟ್ಟೆಮಲ್ಲಪ್ಪದ #ಕ್ರಷರ್_ರಾಜಶೇಖರಗೌಡರು ಸದಾ ನಾಗರಾಜ್ ಜೊತೆ ಇರುತ್ತಿದ್ದರು.

   1996 ರಲ್ಲಿ ಆನಂದಪುರಂನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಆಗಿನ ಶಿವಮೊಗ್ಗ ಲೋಕಸಭಾ ಸದಸ್ಯರಾಗಿದ್ದ ಮಾಜಿ ಮುಖ್ಯಮಂತ್ರಿ S.ಬಂಗಾರಪ್ಪರಿಂದ ಉದ್ಫಾಟಿಸುವ ಕಾರ್ಯಕ್ರಮ ನಿಗದಿ ಮಾಡಿದ್ದೆ.

   ಆ ಕಾರ್ಯಕ್ರಮದಲ್ಲಿ ಜನವಾರ್ತೆ ನಾಗರಾಜ್ ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದೆ.

   ಸಂಜೆ ಉದ್ಘಾಟನಾ ಸಮಾರಂಭದ ನಂತರ ರಾತ್ರಿ ಊಟ ನಮ್ಮೂರ ಯಡೇಹಳ್ಳಿಯ ಪ್ರವಾಸಿ ಮಂದಿರದಲ್ಲಿ ವ್ಯವಸ್ಥೆ ಮಾಡಿದ್ದೆ.

   ಅಲ್ಲಿ ಎಸ್. ಬಂಗಾರಪ್ಪ ಮತ್ತು ನಾಗರಾಜ್ ಒಟ್ಟಿಗೆ ಬೋಜನ ಸ್ವೀಕರಿಸಿದ್ದರು.

    ನಾಗರಾಜ್ ಉದ್ಯಮ ಲೋಕದಲ್ಲಿ ದೊಡ್ಡ ಕನಸು ಕಂಡವರು ಅದಕ್ಕೆ ತಕ್ಕಂತೆ ಅವರ ಹತ್ತಿರ ಮೂಲ ಬಂಡವಾಳ ಇತ್ತು.

  ಶಿವಮೊಗ್ಗದ ಪ್ರೈಮ್ ಲೊಕೇಷನ್ ನಲ್ಲಿ ಜಮೀನುಗಳಿತ್ತು ಆದರೆ ಅವರ ಜೀವನದಲ್ಲಿನ ಅವರ ಕನಸಿನ ಉದ್ಯಮದ ಹಾದಿ ತಪ್ಪಿಸಿದವರು ನಮ್ಮ ಜಿಲ್ಲೆಯ ರಾಜಕಾರಣಿಗಳು.

    ಆಗ ನಡೆದದ್ದೇ ರಾಜ್ಯದ ದೊಡ್ಡ ಅವ್ಯವಹಾರದ ಆಶ್ರಯ ಹಗರಣ.

    ಸರ್ಕಾರದ ಆಶ್ರಯ ಯೋಜನೆ  ಹಣ ನಾಗರಾಜ್ ಸಂಸ್ಥೆ ಗುತ್ತಿಗೆ ಪಡೆದಿತ್ತು ಆ ಸಂದರ್ಭದಲ್ಲಿ ಅವರ ಸಂಸ್ಥೆಗೆ ಅಡ್ವಾನ್ಸ್ ಆಗಿ ಹಣ ಬಿಡುಗಡೆ  ಮಾಡಿಸಿ ಅದನ್ನು ರಾಜಕಾರಣಿಗಳು ತಮ್ಮ ಕನಸಿನ ವಿದ್ಯಾಸಂಸ್ಥೆಯ ಜಮೀನು ಖರೀದಿಗೆ ಬಳಸಿಕೊಂಡು ನಾಗರಾಜ್ ರನ್ನು ಬಲಿ ಪಶು ಮಾಡಿದರು.

   ನಂತರ ಇದೆಲ್ಲ ಸಮಸ್ಯೆಗಳಿಂದ ಹೊರಬಂದ ನಾಗರಾಜ್ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೃಹತ್ ಗೋದಾಮುಗಳ ಚೈನ್ ನಿರ್ಮಿಸಿದರು.

   ಅದನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಬಾಡಿಗೆ ನೀಡಿದರು. 

    ಶಿವಮೊಗ್ಗ ಜಿಲ್ಲೆಯ ಮೆಕ್ಕೆಜೋಳವನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಿ ಅದನ್ನು ಈ ಗೋದಾಮಿನಲ್ಲಿ ದಾಸ್ತಾನು ಮಾಡಲು ಇವರ ಗೋದಾಮುಗಳು ಬಾಡಿಗೆಗೆ ಪಡೆಯಿತು.

     ಈ ಮೆಕ್ಕೆಜೋಳ ಖರೀದಿ ಮಾಡಿದ ವಿದೇಶಿ ಕಂಪನಿಗಳ ಹಡುಗಿಗೆ  ಮಂಗಳೂರು ಬಂದರಿಗೆ ಟ್ರಾನ್ಸ್ ಪೋರ್ಟೆಶನ್ ಮಾಡಲು ನಾಗರಾಜ್ ಅವರು ನೂರಾರು ಲಾರಿ ತಂದರು.

     ಆಗ ಈ ದಾಸ್ತಾನು ಮತ್ತು ಟ್ರಾನ್ಸ್‌ಪೋರ್ಟಿಶನ್ ದಂದೆ ದೊಡ್ಡ ಮಟ್ಟದಲ್ಲಿ ನಡೆಯಿತು ಮತ್ತು ದೊಡ್ಡ ಮಟ್ಟದ ಉದ್ಯೋಗ ಜಿಲ್ಲೆಯಲ್ಲಿ ಸೃಷ್ಟಿ ಮಾಡಿತ್ತು.

   ಆದರೆ ಇಲ್ಲೂ ಅವರ ಅದೃಷ್ಟ ಕೈಕೊಟ್ಟಿತು.

   ನಾಗರಾಜ್ ಅವರು ಇಹಲೋಕ ತ್ಯಜಿಸುವಾಗ ಅವರಿಗೆ #ಶಿವಮೊಗ್ಗ_ಡಿಸಿಸಿ ಬ್ಯಾಂಕಿನಲ್ಲಿ ಸಾಲ ಸುಮಾರು 40 ಕೋಟಿ ಅಷ್ಟಿತ್ತು.

 ಖಾಸಾಗಿಯಾಗಿಯೂ 7 ರಿಂದ 8 ಕೋಟಿ ಇರಬಹುದು ಆದರೆ ಅದರ ನಾಲ್ಕರಷ್ಟು ಮೌಲ್ಯದ ಅವರ ಆಸ್ತಿ ಇತ್ತು.

    ಅವರ ಕನಸಾಗಿದ್ದ ಸುರಕ್ಷಾ ವೇರ್ ಹೌಸ್ ಕಾರ್ಪೋರೇಷನ್ ಮಾಡಬೇಕೆಂಬ ಯೋಜನೆ ಹಾಗೆಯೇ ಉಳಿಯಿತು.

     ಮೂರು ವರ್ಷದ ಹಿಂದೆ ಬೆಂಗಳೂರಿಂದ ಅವರ ಇನ್ನೋವಾ ಕಾರಿನಲ್ಲಿ ಪತ್ನಿ ಜೊತೆ ಶಿವಮೊಗ್ಗಕ್ಕೆ ಬರುವಾಗ ಅರಸಿಕೆರೆಯಲ್ಲಿ ಡ್ರೈವರ್ ಅಚಾತುರ್ಯದಿಂದ ಬ್ಯಾರಿಕೇಡ್ ಗೆ ಆಕ್ಸಿಡೆಂಟ್ ಆಗಿ ನಾಗರಾಜ್ ಗೆ ತೀವ್ರ ಸ್ವರೂಪದ ಪೆಟ್ಟುಗಳಾಗಿತ್ತು.   
   
     ಬೆಂಗಳೂರಿನಲ್ಲಿ ಚಿಕಿತ್ಸೆಗೂ ಚೇತರಿಸಿಕೊಳ್ಳಲಿಲ್ಲ ಇಹಲೋಕ ತ್ಯಜಿಸಿದರು.

   ಅವರಲ್ಲಿನ ಮಹತ್ವಾಕಾಂಕ್ಷೆಗಳು ಅವರನ್ನ ದೊಡ್ಡ ಕಾಪೋ೯ರೇಟ್ ಉದ್ಯಮಿ ಮಾಡುತ್ತದೆಂಬ ನನ್ನ ನಿರೀಕ್ಷೆ ಹುಸಿ ಆಯಿತು.

     ಜನವಾರ್ತೆ ನಾಗರಾಜ್ ಅವರಿಂದ ನೇರವಾಗಿ ಲಾಭ ಪಡೆದವರೆಲ್ಲ ಅವರ ಹಿಂದಿನಿಂದ ಅ ಹೀಗಳೆಯುತ್ತಿದ್ದರು.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ G.S. ನಾಗರಾಜ್ ಅವರ ಮೂರನೇ ಪುಣ್ಯಸ್ಮರಣೆಯ ದಿನದ ಲ್ಲಿನ ನೆನಪುಗಳು ಇದು.

   ಯಶಸ್ಸಿಗೆ ಹಲವು ಅಪ್ಪ೦ದಿರು ಇರುತ್ತಾರೆ ಆದರೆ ಸೋಲು ಮಾತ್ರ ಅನಾಥ ಎಂಬ ಗಾದೆ ಜನ ವಾರ್ತೆ ನಾಗರಾಜ್ ಜೀವನದಲ್ಲಿ ಸುಳ್ಳಾಗಲಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...