#ನಮ್ಮೂರ_ಕೆಂಜಿಗಾಪುರದ_ಶ್ರೀವೀರಭದ್ರಸ್ವಾಮಿ_ದೇವರ_ಜಾತ್ರೆ_ರಥೋತ್ಸವ.
#ಆನಂದಪುರಂ_ಸಮೀಪದ_ಕೆಂಜಿಗಾಪುರದಲ್ಲಿ
#ಪ್ರತಿವರ್ಷ_ಹೋಳಿಹುಣ್ಣಿಮೆ_ದಿನ_ರಥೋತ್ಸವ_ಆಚರಣೆ
#ವಿಜಯನಗರದ_ಅರಸು_ಪ್ರೌಡ_ಪ್ರತಾಪ_ರಾಯ_ಆರು_ಶತಮಾನದ_ಹಿಂದೆ_ನಿರ್ಮಿಸಿದ_ದಾಖಲೆಯಿದೆ
#ಪ್ರೌಡ_ಪ್ರತಾಪರಿಗೆ_ಗಜ_ಬೇ0ಟೆಗಾರ_ಎಂಬ_ಬಿರುದು_ಇತ್ತು.
#shivamogga #sagar #ananandapuram #Yadehalli #kenjigapura #veerabadreshwara #temple
ಇದೇ ಬರುವ ಮಾರ್ಚ್ 2 ರಿಂದ 4ನೇ ತಾರೀಖಿನ ತನಕ ಆನಂದಪುರಂ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಜಿಗಾಪುರದ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರೇಶ್ವರ ದೇವರ ಜಾತ್ರೆ ಮತ್ತು ರಥೋತ್ಸವ ನಡೆಯಲಿದೆ.
ದಿನಾಂಕ 3 - ಮಾರ್ಚ್ ಹೋಳಿ ಹುಣ್ಣಿಮೆ ದಿನ ರಥೋತ್ಸವ ನಡೆಯುತ್ತದೆ.
ಈ ಶಿಲಾಮಯ ದೇವಾಲಯವು ನಿರ್ಮಾಣವಾಗಿ ಆರು ಶತಮಾನಗಳಾಗಿದೆ.
ವಿಜಯನಗರದ ಅರಸು #ಪ್ರೌಡ_ಪ್ರತಾಪರಾಯ ಆ ಕಾಲದಲ್ಲಿ ಮಲೆನಾಡಿನ ಈ ಪ್ರದೇಶದಲ್ಲಿನ ಅರಣ್ಯದಲ್ಲಿನ ಕಾಡಾನೆಗಳನ್ನು ಹಿಡಿದು ಪಳಗಿಸಿ ಅದನ್ನು ತನ್ನ ಸೈನ್ಯದಲ್ಲಿ ಬಳಸುತ್ತಿದ್ದಂತ ಸಾಹಸಿ.
ಆದ್ದರಿಂದ ರಾಜ ಪ್ರೌಢ ಪ್ರತಾಪ ರಾಯರಿಗೆ #ಗಜ_ಬೇಂಟೆಗಾರ ಎಂಬ ಬಿರುದು ಇತ್ತು.
ಆರುನೂರು ವರ್ಷಗಳ ಹಿಂದೆ ಈ ಪ್ರದೇಶ ದೊಡ್ಡ ಜನ ವಸತಿ ಪ್ರದೇಶ ಆಗಿದ್ದಿರಬೇಕು.
ಕೆಂಜಿಗಾಪುರದ ಶ್ರೀವೀರಭದ್ರೇಶ್ವರ ದೇವಾಲಯ ನಿರ್ಮಾಣವಾಗಿ ಇಲ್ಲಿನ ಶಾಸನಗಳ ಪ್ರಕಾರ 607 ವರ್ಷಗಳಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಚಿಕ್ಕ ಗ್ರಾಮ ಕೆಂಜಿಗಾಪುರ ಈಗ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.
ಈ ದೇವಾಲಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಶ್ರೀವೀರಭದ್ರ ದೇವರ ರಥೋತ್ಸವ ನೆರವೇರುತ್ತದೆ ಅದರ ಹಿಂದಿನ ದಿನ ಹೂವಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
#ಇದೇ_03 _ಮಾರ್ಚ್_2026_ಮಂಗಳವಾರ ಹೋಳಿ ಹುಣ್ಣಿಮೆ ದಿನ ಕೆಂಜಿಗಾಪುರದ ಶ್ರೀವೀರಭದ್ರೇಶ್ವರ ದೇವರ #ರಥೋತ್ಸವ ನಡೆಯಲಿದೆ.
ಈ ದೇವಾಲಯ ವಿಜಯನಗರ ಸಾಮ್ರಾಜ್ಯದ ಅರಸು ಪ್ರೌಡ ಪ್ರತಾಪ ರಾಯ 1419 ರಲ್ಲಿ ನಿರ್ಮಿಸಿದ ಶಾಸನದ ಉಲ್ಲೇಖವಿದೆ.
ಬಹುಶಃ 2002 ರವರೆಗೆ ವೀರಭದ್ರ ದೇವರ ರಥ ಯಡೇಹಳ್ಳಿ ವೃತ್ತದ ತನಕ ಬರುತ್ತಿತ್ತು.
1975ರ ತನಕ ಈ ರಥ ರಾಜ ಬೀದಿ ಉತ್ಸವ ಆನಂದಪುರಂನ ಸಂತೆ ಮಾರ್ಕೆಟ್ ತನಕ ನಡೆಯುತ್ತಿತ್ತು.
ನಂತರ ಇದು ಯಡೇಹಳ್ಳಿ ವೃತ್ತಕ್ಕೆ ಸೀಮಿತವಾಗಿದ್ದು ಈಗ ಅದೂ ಬದಲಾಗಿ ದೇವಾಲಯದಿಂದ ಯಡೇಹಳ್ಳಿ ಪ್ರವಾಸಿ ಮುಂದಿರದ ಹಿಂಬಾಗದಲ್ಲಿರುವ ಗಡಿಕಲ್ಲಿನ ತನಕ ಮಾತ್ರ ರಥೋತ್ಸವ ನಡೆಯುತ್ತದೆ.
Comments
Post a Comment