Skip to main content

Blog 3571.ಬೆತ್ತಲೆ ಸೇವೆ ನಿಶೇದ

#ಶಿವಮೊಗ್ಗ_ಜಿಲ್ಲೆಯ_ಚಂದ್ರಗುತ್ತಿ_ಜಾತ್ರೆ

#ಇದೇ_ತಿಂಗಳ_24_ಮತ್ತು_25_ನೆರವೇರಲಿದೆ

#ಜಿಲ್ಲಾ_ಆಡಳಿತ_ಪ್ರತಿ_ವರ್ಷ_ಬೆತ್ತಲೆ_ಸೇವೆ_ನಿಶೇದಿಸಿ

#ಕಳೆದ_40_ವರ್ಷದಿಂದ_ಆದೇಶ_ಹೊರಡಿಸುತ್ತದೆ

#ಬೆತ್ತಲೆ_ಸೇವೆ_ನಿಶೇಧಕ್ಕಾಗಿ_ಹೋರಾಡಿದ_ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕ_ಬಿ_ಕೃಷ್ಣಪ್ಪ

#ರೈತ_ಸಂಘದ_ಕಡಿದಾಳು_ಶಾಮಣ್ಣ

#ಇವರ_ಜೊತೆ_ಸಾವಿರಾರು_ಪ್ರಗತಿಪರ_ಹೋರಾಟಗಾರರ_ಶ್ರಮವಿದೆ

#ಆಗಿನ_1986ರ_ಜನತಾದಳದ_ಸರ್ಕಾರದಲ್ಲಿ_ಮಂತ್ರಿ_ಆಗಿದ್ದ_ಜೆ_ಹೆಚ್_ಪಟೇಲರ_ಬೆಂಬಲ_ಮರೆಯುವಂತಿಲ್ಲ
#Shivamogga #Soraba #Chandragutti #Bettaleseve #Govtofkarnataka #JHPatel #Dalithasangarshasamithee #BKrishnappa #Raithasanga #Kadidalshyamanna

   ಇಂತಹದ್ದೊಂದು ಅನಾಗರೀಕ ಪದ್ಧತಿ ಆದ #ಬೆತ್ತಲೆ_ಸೇವೆ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ವರ್ಷ ಸೊರಬ ತಾಲೂಕಿನ ಚಂದ್ರಗುತ್ತಿಯ ರೇಣುಕಾಂಬಾ ದೇವಿ ಜಾತ್ರೆಯಲ್ಲಿ ನಡೆಯುತ್ತಿತ್ತು.

   ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಅನಾರೋಗ್ಯವಾದಾಗ ಗುಣವಾದರೆ  ಈ ದೇವರಿಗೆ ಬೆತ್ತಲೆ ಸೇವೆ ಸಲ್ಲಿಸುವ ಹರಕೆ ಹೊರುತ್ತಿದ್ದ ಪೋಷಕರು ಅದನ್ನು ತೀರಿಸಲಾಗದೆ ಮಕ್ಕಳು ಪ್ರಾಯಕ್ಕೆ ಬಂದಾಗ ಅವರನ್ನು ದೇವರ ಹರಕೆ ಬಾಕಿ ತೀರಿಸಲು ಕರೆತರುತ್ತಿದ್ದರು.

   ಇದನ್ನು ನೋಡಲು ಸಾವಿರಾರು ಜನ ಬರುತ್ತಿದ್ದರು, ಬೆತ್ತಲೆ ಸೇವೆ ಸಲ್ಲಿಸುವ ಮಹಿಳೆಯರ ಫೋಟೋ ತೆಗೆದು ಲೈಂಗಿಕ ಪತ್ರಿಕೆಗಳಲ್ಲಿ ಯಾವುದೇ ಸೆನ್ಸಾರ್ ಇಲ್ಲದೆ ಅಚ್ಚಿಸುತ್ತಿದ್ದರು.
 
  ಆದರೆ ಈ ಅನಾಗರೀಕ ಬೆತ್ತಲೆ ಸೇವೆ ನಿಲ್ಲಿಸಿದರೆ ಅಥವ ಇದರ ವಿರುದ್ಧ ಮಾತಾಡಿದರೆ ದೇವರ ಕೋಪಕ್ಕೆ ಈಡಾಗಬೇಕಾದೀತೆಂಬ ಭಯ ಅಲ್ಲಿ ಬಿತ್ತಲಾಗಿತ್ತು.

   ಇದೊಂದು ಮೂಡ ನಂಬಿಕೆ ಈ ಆಚರಣೆ ನಿಲ್ಲಿಸಲೇ ಬೇಕೆಂದು ಮೊದಲು ದ್ವನಿ ಎತ್ತಿ ಕಾರ್ಯಪ್ರವೃತ್ತರಾದವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ #ಬಿ_ಕೃಷ್ಣಪ್ಪ ಇವರಿಗೆ ಸಾಥ್ ನೀಡಿದವರು #ಪೂರ್ಣಚಂದ್ರ_ತೇಜಸ್ವಿ ಗೆಳೆಯ ರೈತ ಸಂಘದ #ಕಡಿದಾಳು_ಶ್ಯಾಮಣ್ಣ.

   ಅಂತಿಮವಾಗಿ ಈ ಅನಿಷ್ಟ ಪದ್ಧತಿ ರದ್ದಿಗೆ ಕಾರಣರಾದವರು ಅವತ್ತು ಮಂತ್ರಿಗಳಾಗಿದ್ದ ನಮ್ಮ ಜಿಲ್ಲೆಯ ಹೆಮ್ಮೆಯ ಸಮಾಜವಾದಿ #ಜೆ_ಹೆಚ್_ಪಟೇಲರು.

   ಆ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ #ಚಂದ್ರಗುತ್ತಿಯ ರೇಣುಕಾಂಬಾ ದೇವಾಲಯದಲ್ಲಿ ಪ್ರತಿ ವಷ೯ ನಡೆಯುತ್ತಿದ್ದ ಬೆತ್ತಲೆ ಸೇವೆಯನ್ನ ನಿಲ್ಲಿಸಲು ಪ್ರಗತಿಪರರು ಮುಂದಾದಾಗ ಅದಕ್ಕೆ ಅನೇಕ ಅಡಚಣೆಗಳು ವಿರೋಧಗಳು ಬ೦ದಿತ್ತು.

   ಗೌರವಾನ್ವತ ಕುಟುಂಬಗಳ ಪ್ರಾಯದ ಹೆಣ್ಣಮಕ್ಕಳು ತಮ್ಮ ಬಾಲ್ಯದಲ್ಲಿ ತಮ್ಮ ಪೋಷಕರು ಮಾಡಿದ ಹರಕೆ ತೀರಿಸಲು ವರದಾ ನದಿಯಲ್ಲಿ ಮಿಂದು ಬೆತ್ತಲೆಯಾಗಿ ನಾಕಾರು ಕಿ.ಮಿ. ನಡೆದು ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಬೇಕಿತ್ತು.

  ಬೆತ್ತಲಾಗಿ ಹೋಗುವ ಸಂಕಟ ಈ ಕುಟುಂಬಗಳದ್ದಾದರೆ ಇವರನ್ನ ನೋಡಲು ಪೋಲಿ ಪಟಾಲಂಗಳು ಕೆಲವು ಸಾವಿರ ಅಲ್ಲಿ ಸೇರುತ್ತಿತ್ತು.

 ಅವತ್ತಿನ ಲೈಂಗಿಕ ಪತ್ರಿಕೆಗಳಾದ #ರತಿವಿಜ್ಞಾನ ಮುಂತಾದವು ಆ ಚಿತ್ರಗಳನ್ನ ನೇರವಾಗಿ ಪ್ರಕಟಿಸಿ ಹೆಚ್ಚಿನ ಪ್ರಸಾರ ಪಡೆಯುತ್ತಿದ್ದವು.

  ಅವತ್ತು #ದಲಿತ_ಸಂಘಷ೯_ಸಮಿತಿ ಸಂಸ್ಥಾಪಕರಾದ #ಬಿ_ಕೃಷ್ಣಪ್ಪ ಇದನ್ನೊಂದು ಸವಾಲಾಗಿ ತೆಗೆದು ಕೊಂಡರು.

   ಸಕಾ೯ರದಲ್ಲಿ ಆಗ ಮಂತ್ರಿ ಆಗಿದ್ದ #ಜೆ_ಹೆಚ್_ಪಟೇಲರು ಬಿ. ಕೃಷ್ಣಪ್ಪರ ಈ ಜನಪರ ಹೋರಾಟಕ್ಕೆ ಬೆಂಬಲ ನೀಡಿದರು.

  ಆದರೆ ಸ್ಥಳಿಯ ಶಾಸಕರಾಗಿದ್ದ #ಬಂಗಾರಪ್ಪ ಮತಗಳಿಗಾಗಿ ಈ ವಿಚಾರದಲ್ಲಿ ತಟಸ್ಥರಾಗಿದ್ದರು.

    ಬೆತ್ತಲೆ ಸೇವೆ ಪರವಾಗಿದ್ದ ಹಿತಾಸಕ್ತಿಗಳು ಮತ್ತು ಸಂಘಟನೆಗಳು ಬೆತ್ತಲೆ ಸೇವೆ ತಡೆಯಲು ಪ್ರಯತ್ನಿಸಿದವರ ಮೇಲೆ ಭಕ್ತರನ್ನ  ಎತ್ತಿಕಟ್ಟಿದರು.

   ಸಾವಿರಾರು ವರುಷದಿಂದ ನಡೆದುಕೊಂಡ ಪದ್ದತಿ ನಿಲ್ಲಿಸಿದರೆ ದೇವಿಯ ಶಾಪ ಎದುರಿಸಬೇಕಾದೀತೆಂಬ ಪಾಪ ಪ್ರಜ್ಞಾ ಪ್ರಚಾರ ಮಾಡಿದರು.

  ಇದನ್ನ ಅಡ್ಡಗಟ್ಟುತ್ತಿರುವವರು ದಲಿತರು ಅವರನ್ನ ಅಟ್ಟಾಡಿಸಿ ಹೊಡೆಯಿರಿ ಅಂತ ಭೂಮಾಲಿಕರುಗಳು, ವೈದಿಕರುಗಳು ಹುಕುಂ ಮಾಡಿದರು.

   ಜೋಗಪ್ಪಗಳ ದೊಡ್ಡ ಗುಂಪಿಗೆ ಪ್ರಚೋದನೆ ಮಾಡಿ ಬೆತ್ತಲೆ ಸೇವೆ ವಿರೋದಿಸುವ ಸಂಘಟನೆಗಳ ಮೇಲೆ ಪೋಲಿಸರ ಮೇಲೆ ಹಲ್ಲೆ ಮಾಡಲು ಪ್ರೇರೇಪಿಸಿದರು.

 ನಂತರ ಅವತ್ತು ಸುಯೋ೯ದಯದಿಂದ
 ಸೂಯಾ೯ಸ್ತದ ತನಕ ಚಂದ್ರಗುತ್ತಿಯಲ್ಲಿ ನಡೆದಿದ್ದು ಅಮಾನಿಯ ದೌಜ೯ನ್ಯ.

 ಚಳವಳಿಗಾರರನ್ನ ಜೀವ ಸಹಿತ ಬಿಟ್ಟಿದ್ದೆ ಪುಣ್ಯ, ಬಿ.ಕೃಷ್ಣಪ್ಪ ಮತ್ತು ರೈತ ಮುಖಂಡ ಕಡಿದಾಳ್ ಶ್ಯಾಮಣ್ಣ ಬದುಕಿ ಬಂದದ್ದೇ ಒಂದು ಕಥೆ.

   ನಂತರ ಪ್ರಚೋದಿತ ಗುಂಪು ರಣೋಲ್ಲಾಸದಲ್ಲಿ ಮೈಮರೆತು ರಕ್ಷಣೆಗೆ ನಿಯೋಜಿತರಾದ ಪೋಲಿಸರನ್ನೂ ಬಿಡಲಿಲ್ಲ.

   ನಂತರದ್ದು ಇತಿಹಾಸ ಈಗ ಬೆತ್ತಲೆ ಸೇವೆ ನಿಂತಿದೆ.

   ಹೀಗೆ ಜನಪರ ಹೋರಾಟ ಹಲವು ಆಯಾಮ ದಾಟಿಯೇ ಗುರಿ ಮುಟ್ಟುತ್ತದೆ.

   ಆದರೆ ಕಾಲದ ವೇಗದಲ್ಲಿ ಎಲ್ಲವೂ ಮರೆಯುತ್ತೇವೆ.

     ಚಂದ್ರಗುತ್ತಿ ಬೆತ್ತಲೆ ಸೇವೆ ಹೋರಾಟದಲ್ಲಿ ಬಿ. ಕೃಷ್ಣಪ್ಪರ ಈ ಹೋರಾಟ ಇತಿಹಾಸದ ದಾಖಲೆ ಆಗಿದೆ.

   ಅವರು ಈ ಹೋರಾಟವನ್ನು ಅಹಿಂಸಾ ಮಾರ್ಗದಲ್ಲಿ ಮುನ್ನಡೆಸಿದರು ಇದಕ್ಕೆ ಕಾನೂನು ಬೆಂಬಲ ಪಡೆದಿದ್ದರು.

    ಚಂದ್ರಗುತ್ತಿ ಬೆತ್ತಲೆ ಸೇವೆ(ನಗ್ನ ಪೂಜೆ) ಆಗಿತ್ತುಕರ್ನಾಟಕದ ಶಿವಮೊಗ್ಗದ ರೇಣುಕಾಂಬ ದೇವಸ್ಥಾನದಲ್ಲಿ ಶತಮಾನಗಳಷ್ಟು ಹಳೆಯದಾದ ಆಚರಣೆ.

   ಅಲ್ಲಿ ಹೆಚ್ಚಾಗಿ ದಲಿತ ಮಹಿಳೆಯರು ಪ್ರತಿಜ್ಞೆಗಳನ್ನು ಪೂರೈಸಲು ಬೆತ್ತಲೆಯಾಗಿ ನಡೆಯುತ್ತಿದ್ದರು.

    ಇದು ರೇಣುಕಾ ದೇವಿಯ ಸ್ಥಳೀಯ ದಂತಕಥೆಗಳಲ್ಲಿ ಬೇರೂರಿರುವ ಅಭ್ಯಾಸವಾಗಿದೆ.

   1986 ರಲ್ಲಿ ಸಾಮಾಜಿಕ ಕಾರ್ಯಕರ್ತರು ಮತ್ತು ದಲಿತ ಸಂಘರ್ಷ ಸಮಿತಿಯಿಂದ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಂತರ, ಈ ಪದ್ಧತಿಯನ್ನು ನಿಷೇಧಿಸಲಾಯಿತು.

    ಮತ್ತು ಕರ್ನಾಟಕ ಜಿಲ್ಲಾಡಳಿತವು ವಾರ್ಷಿಕ ಜಾತ್ರೆಯ ಸಮಯದಲ್ಲಿ ಇದರ ವಿರುದ್ಧ ಕಠಿಣ ನಿಷೇಧಗಳನ್ನು ಜಾರಿಗೊಳಿಸುತ್ತದೆ.

#ಶಿವಮೊಗ್ಗ_ಜಿಲ್ಲಾಧಿಕಾರಿಗಳ_ಅದೇಶ_ಮಾಹಿತಿಗಾಗಿ

ಶಿವಮೊಗ್ಗ ರೇಣುಕಮ್ಮ ದೇವಿ ಜಾತ್ರೆಯಲ್ಲಿ ‘ಬೆತ್ತಲೆ ಸೇವೆ’ ನಿಷೇಧ
ರಚಿಸಿದ ದಿನಾಂಕ:  20 ಫೆಬ್ರವರಿ 2026 ಬೆಳಿಗ್ಗೆ 11:11 IST

ಶಿವಮೊಗ್ಗ ರೇಣುಕಮ್ಮ ದೇವಿ ಜಾತ್ರೆಯಲ್ಲಿ ‘ಬೆತ್ತಲೆ ಸೇವೆ’ ನಿಷೇಧ
ಜಾಹೀರಾತು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಫೆ.24 ಮತ್ತು 25ರಂದು ನಡೆಯುವ ವಾರ್ಷಿಕ ಶ್ರೀ ರೇಣುಕಮ್ಮ ದೇವಿ ಜಾತ್ರೆಯಲ್ಲಿ ‘ಬೆತ್ತಲೆ ಸೇವೆ’ಗೆ ಜಿಲ್ಲಾಡಳಿತ ನಿಷೇಧ ಹೇರಿದೆ.

  ಪ್ರದೇಶದಾದ್ಯಂತ ಸಾವಿರಾರು ಭಕ್ತರನ್ನು ಸೆಳೆಯುವ ಎರಡು ದಿನಗಳ ಧಾರ್ಮಿಕ ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಅಗತ್ಯವನ್ನು ಉಲ್ಲೇಖಿಸಿ 1963 ರ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 35 ರ ಅಡಿಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಈ ಆದೇಶವನ್ನು ಹೊರಡಿಸಿದ್ದಾರೆ.

   ಈ ಆದೇಶವು ಹಬ್ಬದ ಅವಧಿಯಲ್ಲಿ ವರದಾ ನದಿಯಲ್ಲಿ ಧಾರ್ಮಿಕ ಸ್ನಾನ, ಕೂದಲು (ಮುಡಿ) ಅರ್ಪಿಸುವುದು, ಪಡ್ಲಿಗಿ ತುಂಬುವುದು ಮತ್ತು ವಿವಾದಾತ್ಮಕ 'ಬೆಟ್ಟಲೆ ಸೇವೆ' ಪದ್ಧತಿಯನ್ನು ನಿಷೇಧಿಸುತ್ತದೆ. 

   ನಿರ್ಬಂಧಗಳು ಪ್ರಕೃತಿಯಲ್ಲಿ ತಡೆಗಟ್ಟುವ ಸ್ವಭಾವದ್ದಾಗಿದ್ದು, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೊಡ್ಡ ಸಭೆಗಳ ನಡುವೆ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ದೇವಾಲಯದ ರಥೋತ್ಸವ (ರಥೋತ್ಸವ), ನಿಯಮಿತ ಪೂಜೆಗಳು ಮತ್ತು ಶ್ರೀ ರೇಣುಕಮ್ಮ ದೇವಿ ದೇವಸ್ಥಾನಕ್ಕೆ ಸಂಬಂಧಿಸಿದ ಇತರ ಸಾಂಪ್ರದಾಯಿಕ ಧಾರ್ಮಿಕ ಸಮಾರಂಭಗಳಿಗೆ ಈ ನಿಷೇಧವು ಅನ್ವಯಿಸುವುದಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

    ಚಂದ್ರಗುತ್ತಿಯಲ್ಲಿ ನಡೆಯುವ ವಾರ್ಷಿಕ ಜಾತ್ರೆಯು ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಮತ್ತು ಸಾಮಾನ್ಯವಾಗಿ ಭಾರೀ ಜನದಟ್ಟಣೆಗೆ ಸಾಕ್ಷಿಯಾಗುತ್ತದೆ, ಪ್ರತಿ ವರ್ಷವೂ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...