Skip to main content

Posts

4201.ಭಾಗ_23.ಘಟ್ಟಕ್ಕೆ_ಕರಾವಳಿಗರ_ವಲಸೆಭಾರತೀಯರ_ದೇಶ_ವಿದೇಶದ_ವಲಸೆ.

ಭಾಗ_23. ಘಟ್ಟಕ್ಕೆ_ಕರಾವಳಿಗರ_ವಲಸೆ ಭಾರತೀಯರ_ದೇಶ_ವಿದೇಶದ_ವಲಸೆ.    ಭಾರತದ ಇತಿಹಾಸ ಮತ್ತು ಪ್ರಸ್ತುತ ಸಾಮಾಜಿಕ ವ್ಯವಸ್ಥೆಯನ್ನು ಗಮನಿಸಿದರೆ ವಲಸೆ ಎಂಬುದು ದೇಶದ ಒಳಗೆ ಮತ್ತು ಹೊರಗೆ ಶತಮಾನಗಳಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿದೆ.    ಭಾರತದ ಇತಿಹಾಸವನ್ನು ಬದಲಾಯಿಸಿದ ಮತ್ತು ಇಂದಿನ ಆರ್ಥಿಕತೆಗೆ ಮುನ್ನುಡಿ ಬರೆದ ಭಾರತದ ಮುಖ್ಯ ವಲಸೆಗಳನ್ನು ಮೂರು ಪ್ರಮುಖ ವಿಭಾಗಗಳಾಗಿ ನೋಡಬಹುದು. ​ 1. #ಇತಿಹಾಸದಲ್ಲಿ_ನಡೆದ_ಪ್ರಮುಖ_ವಲಸೆಗಳು #​ಇಂಡೋ_ಆರ್ಯನ್_ವಲಸೆ (ಕ್ರಿ.ಪೂ. 1500 ರ ಸುಮಾರಿಗೆ):    ಇತಿಹಾಸಕಾರರ ಪ್ರಕಾರ, ಮಧ್ಯ ಏಷ್ಯಾದಿಂದ ಇಂಡೋ-ಆರ್ಯನ್ ಭಾಷೆಗಳನ್ನು ಮಾತನಾಡುವ ಜನಾಂಗದವರು ವಾಯುವ್ಯ ಭಾರತದ ಮೂಲಕ ಉಪಖಂಡಕ್ಕೆ ವಲಸೆ ಬಂದರು ಇದು ವೈದಿಕ ಸಂಸ್ಕೃತಿಯ ಆರಂಭಕ್ಕೆ ಕಾರಣವಾಯಿತು. #ಆಗ್ನೇಯ_ಏಷ್ಯಾಕ್ಕೆ_ಚೋಳರ_ಕಾಲದ_ವಲಸೆ.   ತಮಿಳುನಾಡಿನ ಚೋಳ ರಾಜರ ಕಾಲದಲ್ಲಿ ಮತ್ತು ಅದರ ನಂತರದ ಅವಧಿಯಲ್ಲಿ, ಭಾರತೀಯ ವ್ಯಾಪಾರಿಗಳು, ಕಲಾಪ್ರವೀಣರು ಮತ್ತು ಬೌದ್ಧ/ಹಿಂದೂ ಧರ್ಮ ಪ್ರಚಾರಕರು ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಕಾಂಬೋಡಿಯಾ ದೇಶಗಳಿಗೆ ವಲಸೆ ಹೋಗಿ ಅಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ ಬೀರಿದರು. 2.#ವಸಾಹತುಶಾಹಿ_ಮತ್ತು_ಆಧುನಿಕ_ಕಾಲದ_ಮಹಾ_ವಲಸೆಗಳು.    #ಗಿರ್ಮಿಟಿಯಾ_ಕಾರ್ಮಿಕರ_ವಲಸೆ (Indentured Labour Migration - 19ನೇ ಶತಮಾನ)....

4200.ತುಳು_ಪಾತೆರ್ಂಡ_ಮೈ_ಮನಸ್ಸ್_ತಂಪು"ಪಾತೆರ_ಪಂಡ_ತುಳುವೆ, ಕೊರ್ಪಿನ_ದಾನೊಡು_ದಾನಿ"

ತುಳು_ಪಾತೆರ್ಂಡ_ಮೈ_ಮನಸ್ಸ್_ತಂಪು" ಪಾತೆರ_ಪಂಡ_ತುಳುವೆ,  ಕೊರ್ಪಿನ_ದಾನೊಡು_ದಾನಿ"   ತುಳು ಭಾಷೆಯ ಮಾಧುರ್ಯ ಹಾಗೂ ಆಪ್ತತೆಯನ್ನು ಬಣ್ಣಿಸುವ ಮಾತು ಗಾದೆಗಳು ಇದು. ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಹೋದಾಗ "ನಿಮ್ಮದೇ ರಾಜ್ಯದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕೊಟ್ಟಿಲ್ಲ, ಮೊದಲು ನೀವು ಮಾನ್ಯತೆ ನೀಡಿ" ಎಂಬ ತಾಂತ್ರಿಕ ಪ್ರಶ್ನೆ ಮತ್ತು ಹಿನ್ನಡೆ ಎದುರಾಗುತ್ತಿತ್ತು.    #ಕನ್ನಡ_ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪ್ರಸ್ತಾವನೆ ಮಾಡಿದ 58 ವರ್ಷದ ನಂತರ ದೊರೆಯಿತು.   23 ವರ್ಷದ ಹಿಂದೆ #ಕೊಡುವ ಮತ್ತು #ತುಳು ಭಾಷೆಗೆ ಸಲ್ಲಿಸಿದ ಪ್ರಸ್ತಾವನೆ ಕೇಂದ್ರ ಸರ್ಕಾರದಲ್ಲೇ ಹಾಗೇ ಉಳಿದಿದೆ.   ಈಗ #ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯದ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ (ಹೆಚ್ಚುವರಿ) ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾನ್ಯತೆ ನೀಡಲು ನಿರ್ಧರಿಸಿ ಪುನಃ ಕೇಂದ್ರ ಸರ್ಕಾರಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಪ್ರಸ್ತಾವನೆ ಕಳಿಸಿದೆ.    ಸಂವಿಧಾನದ 345ನೇ ವಿಧಿಯಡಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ಬಳಸಿ, ತುಳು ಭಾಷಿಕರು ಹೆಚ್ಚಾಗಿರುವ ಅವಿಭಜಿತ ದಕ್ಷಿಣ ಕನ್ನಡ (ದಕ್ಷಿಣ ಕನ್ನಡ ಮತ್ತು ಉಡುಪಿ) ಜಿಲ್ಲೆಗಳಲ್ಲಿ ಅಧಿಕೃತ ಆಡಳಿತಾತ್ಮಕ ಕಾರ್ಯಗಳಿಗೆ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗ...

4199.ಜನರಿಕ್_ಔಷದ_ಬಳಕೆ_ವಿಶ್ವದ_ಯಾವ_ಯಾವ_ದೇಶದಲ್ಲಿದೆ?..

ಜನರಿಕ್_ಔಷದ_ಬಳಕೆ_ವಿಶ್ವದ_ಯಾವ_ಯಾವ_ದೇಶದಲ್ಲಿದೆ?..  ಜೆನೆರಿಕ್ ಔಷಧಗಳ ಬಳಕೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ವಿಶ್ವದ ಬಹುತೇಕ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಅತ್ಯಂತ ವ್ಯಾಪಕವಾಗಿ ಜಾರಿಯಲ್ಲಿದೆ.   ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಲು ಅನೇಕ ದೇಶಗಳ ಸರ್ಕಾರಗಳು ಜೆನೆರಿಕ್ ಔಷಧಗಳ ಬಳಕೆಯನ್ನು ಕಡ್ಡಾಯ ಅಥವಾ ಹೆಚ್ಚು ಪ್ರೋತ್ಸಾಹಿಸುತ್ತವೆ.     #ಅಮೆರಿಕ_ಸಂಯುಕ್ತ_ಸಂಸ್ಥಾನ (USA)...   ​ಜಗತ್ತಿನಲ್ಲೇ ಜೆನೆರಿಕ್ ಔಷಧಗಳನ್ನು ಅತಿ ಹೆಚ್ಚು ಬಳಸುವ ದೇಶಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ.   ​ಅಲ್ಲಿ ಮಾರಾಟವಾಗುವ ಒಟ್ಟು ಪ್ರಿಸ್ಕ್ರಿಪ್ಷನ್ ಔಷಧಗಳಲ್ಲಿ ಸುಮಾರು ಶೇ. 90 ರಷ್ಟು ಜೆನೆರಿಕ್ ರೂಪದಲ್ಲೇ ಇರುತ್ತವೆ.  ಅಲ್ಲಿನ ಎಫ್‌ಡಿಎ (US FDA) ಇದಕ್ಕೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಹೊಂದಿದೆ.   #ಯುನೈಟೆಡ್_ಕಿಂಗ್‌ಡಮ್ (UK).... ​ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಅಡಿಯಲ್ಲಿ ವೈದ್ಯರು ಬ್ರಾಂಡ್ ಹೆಸರಿನ ಬದಲು ಕಡ್ಡಾಯವಾಗಿ ರಾಸಾಯನಿಕ ಸೂತ್ರದ (Generic name) ಹೆಸರನ್ನೇ ಬರೆಯಬೇಕೆಂಬ ನಿಯಮವಿದೆ ​ಇದರಿಂದಾಗಿ ಬ್ರಿಟನ್‌ನಲ್ಲಿ ಶೇ. 80 ಕ್ಕೂ ಹೆಚ್ಚು ಜೆನೆರಿಕ್ ಔಷಧಗಳು ಬಳಕೆಯಾಗುತ್ತವೆ.    #ಜರ್ಮನಿ_ಮತ್ತು_ಯೂರೋಪಿಯನ್_ಒಕ್ಕೂಟದ_ದೇಶಗಳು... ಜರ್ಮನಿ, ನೆದರ...

4198.ಸಂಯುಕ್ತ_ಮನವಿ_ಪತ್ರ_ಅರ್ಪಣೆ_ಆಗಲಿ

ಸಂಯುಕ್ತ_ಮನವಿ_ಪತ್ರ_ಅರ್ಪಣೆ_ಆಗಲಿ. #ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ನಾಳೆ 19- ಸೆಫ್ಟೆಂಬರ್ - 2026 ಶನಿವಾರ ಆಗಮಿಸುವ ಮುಖ್ಯಮಂತ್ರಿಗಳಿಗೆ  ಜಿಲ್ಲೆಯ ಜನತೆ ಪರವಾಗಿ ಸಂಸದರು - ಶಾಸಕರೂ - ಪರಿಸರ ಸಂಘಟನೆಗಳು ಮತ್ತು ರೈತ ಸಂಘಟನೆಗಳು #ಸಂಯುಕ್ತ_ಮನವಿ ಪತ್ರ ಸಲ್ಲಿಸಬೇಕು.  ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಅಧಿವೇಶನ ಕರೆದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಲೆನಾಡಿನ ಪಶ್ಚಿಮ ಘಟ್ಟದ ಜಿಲ್ಲೆಗಳ ಬೇಟಿ ಮಾಡುತ್ತಿದ್ದಾರೆ, ಇದಕ್ಕಾಗಿ ಅವರ ತೀರ್ಥಹಳ್ಳಿ ಬೇಟಿ ಬಗ್ಗೆ ಜನ ಸಾಮಾನ್ಯರಲ್ಲಿ ವಿಶೇಷ ಕುತೂಹಲ ಇದೆ. #ಕಸ್ತೂರಿ_ರಂಗನ್_ವರದಿ_ಬಗ್ಗೆ_ವಿಶೇಷ_ಅಧಿವೇಶನ_ಪೂರ್ವದ_ಮುಖ್ಯಮಂತ್ರಿಗಳ_ಮಲೆನಾಡಿನ_ಜನಾಭಿಪ್ರಾಯದ_ಬೇಟಿ_ಸಂದರ್ಭದ ಈ ಸಭೆಗಳು ಸಾಮಾನ್ಯವಾಗಿ ಕೆಲವೇ ನಿಮಿಷಗಳದ್ದಾಗಿರುತ್ತದೆ.  ಇದರ ಮಧ್ಯದಲ್ಲಿ ಅವರ ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನಗಳು ಇತ್ಯಾದಿಗಳಿಂದ ಮುಖ್ಯ ವಿಚಾರವೇ ಔಪಚಾರಿಕವಾಗಿ ಬದಲಾಗಿಬಿಡುತ್ತದೆ.   ಇದರಿಂದ ಅವರಿಗೆ ಜಿಲ್ಲೆಯ ಸಮಸ್ಯೆ ಅರಿಯಲು ಸಾಧ್ಯವಿರುವುದಿಲ್ಲ ಇದು ಕೇವಲ ಸಾಂಕೇತಿಕ ಬೇಟಿ ಆಗಿರುತ್ತದೆ.  ಇದನ್ನು ಸ್ಥಳೀಯ ಅವರ ಪಕ್ಷದ ಉಸ್ತುವಾರಿ ಮಂತ್ರಿ ಮತ್ತು ಜನಪ್ರತಿನಿದಿಗಳು ಹೇಗೆ ಪರಿಣಾಮಕಾರಿ ಆಗಿ ಹೇಗೆ ಆಯೋಜಿಸುತ್ತಾರೆ ಎಂದು ಕಾದು ನೋಡಬೇಕು.   ಮುಖ್ಯ ಮಂತ್ರಿಗಳ ಈ ಬೇಟಿ ಮುಖ್ಯ ಉದ್ದೇಶ ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ವ...

4197.ಹಿಂಗು_ಸಸ್ಯ_ಮೂಲ Asafoetida

ಹಿಂಗು_ಸಸ್ಯ_ಮೂಲ  Asafoetida    ಹಿಂಗು ಅಡುಗೆಯಲ್ಲಿ ಬಳಸುವ ಪ್ರಮುಖ ಸಾಂಬಾರ ಪದಾರ್ಥ ಇದು ಫೆರುಲಾ /Ferula ಎಂಬ ಸಸ್ಯದ ಬೇರುಗಳಿಂದ ತೆಗೆಯಲಾಗುವ ನೈಸರ್ಗಿಕ ರಾಳ. ​ಮುಖ್ಯ ಉಪಯೋಗಗಳು ​ಅಡುಗೆಯಲ್ಲಿ ಸಾರು, ಸಾಂಬಾರು, ತಂಬುಳಿ, ಉಪ್ಪಿನಕಾಯಿ ಮತ್ತು ಒಗ್ಗರಣೆಗಳಿಗೆ ವಿಶಿಷ್ಟ ಪರಿಮಳ ಮತ್ತು ರುಚಿ ನೀಡುತ್ತದೆ.  ಈರುಳ್ಳಿ-ಬೆಳ್ಳುಳ್ಳಿ ಬಳಸದ ಅಡುಗೆಗಳಿಗೆ ಇದು ಉತ್ತಮ ಪರ್ಯಾಯ. ​ಜೀರ್ಣಕ್ರಿಯೆಯಲ್ಲಿ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ. ​ಆಯುರ್ವೇದದಲ್ಲಿ,ಹೊಟ್ಟೆ ನೋವು, ಕೆಮ್ಮು ಮತ್ತು ಉಸಿರಾಟದ ತೊಂದರೆಗಳಿಗೆ ಮನೆಮದ್ದಾಗಿ ಬಳಕೆಯಾಗುತ್ತದೆ.  ​ಹಿಂಗು ಮೂಲತಃ ಇರಾನ್ ಮತ್ತು ಅಫ್ಘಾನಿಸ್ತಾನದಂತಹ ಶೀತ ಮತ್ತು ಒಣ ಮರುಭೂಮಿ ಪ್ರದೇಶಗಳ ಬೆಳೆ.    ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಮಾಚಲ ಪ್ರದೇಶ, ಲಡಾಖ್ ಮತ್ತು ಉತ್ತರಾಖಂಡದ ಎತ್ತರದ ಶೀತ ಪ್ರದೇಶಗಳಲ್ಲಿ ಇದರ ಪ್ರಾಯೋಗಿಕ ಕೃಷಿಯನ್ನು ಯಶಸ್ವಿಯಾಗಿ ಆರಂಭಿಸಲಾಗಿದೆ. ​ ಅತ್ಯಂತ ಶೀತ ಮತ್ತು ಕಡಿಮೆ ತೇವಾಂಶವಿರುವ ಶುಷ್ಕ ವಾತಾವರಣ ಅಗತ್ಯ ತಾಪಮಾನ ಮೈನಸ್ ಡಿಗ್ರಿಯಿಂದ ಹಿಡಿದು ಗರಿಷ್ಠ 25°C - 30°C ಒಳಗೆ ಇರಬೇಕು.  ನೀರು ನಿಲ್ಲದ ಸುಲಭವಾಗಿ ಬಸಿದು ಹೋಗುವ ಮರಳು ಮಿಶ್ರಿತ ಅಥವಾ ಕಲ್ಲು ಮಿಶ್ರಿತ ಒಣ ಮಣ್ಣು ಸೂಕ್ತ,ಮಣ್ಣಿನಲ್ಲಿ ತೇವಾಂಶ ಹೆಚ್ಚಿದ್ದರೆ ಬೇರುಗಳು ಕ...

4196.ಆನಂದಪುರಂ_ಆನೆ_ಕಾರಿಡಾರ್ ಕಾಡಾನೆ_ಪ್ರವೇಶಕ್ಕೆ_ಕ್ಷಣಗಣನೆ ...

ಆನಂದಪುರಂ_ಆನೆ_ಕಾರಿಡಾರ್ ಕಾಡಾನೆ_ಪ್ರವೇಶಕ್ಕೆ_ಕ್ಷಣಗಣನೆ ...   2023 ರ ಅಕ್ಟೋಬರ್ 16ರಂದು ಮೊದಲ ಬಾರಿಗೆ ಒಂದು ತಾಯಿ ಮತ್ತು ಮರಿ ಆನೆ ಹೊಸನಗರ ತಾಲೂಕಿನ ಅರಸಾಳು ಕೆಂಚನಾಲ ಭಾಗದ  ಕೈರದಮನೆ ಎಂಬಲ್ಲಿ ಸ್ಥಳೀಯರ ಸೆಲ್ ಫೋನ್ ಕ್ಯಾಮರಾದಲ್ಲಿ ಸೆರೆ ಆದ ಫೋಟೋ ಕಾಡಾನೆ ಕಾರಿಡಾರ್ ಮೊದಲ ಸಾಕ್ಷಿ.   ಅದರ ನಂತರ 2026ರ ಮಾರ್ಚ್ ತನಕ ಈ ಕಾರಿಡಾರ್ ಗೆ ಭದ್ರಾ ಅಭಯಾರಣ್ಯದಿಂದ 15 ಕ್ಕೂ ಹೆಚ್ಚು ಬಾರಿ ಕಾಡಾನೆ ಪ್ರವೇಶ ಆಗಿದೆ.    2026 ರ ಅಕ್ಟೋಬರ್ ಗೆ ಆನೆ ಕಾರಿಡಾರ್ ಆಗಿ ನಾಲ್ಕು ವರ್ಷ ಆಗಲಿದೆ ಈಗ ಸೆಪ್ಟೆಂಬರ್ ತಿಂಗಳಲ್ಲಿಯೇ ಕಾಡಾನೆಗಳು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಅರಣ್ಯ ವ್ಯಾಪ್ತಿಯ ತಮ್ಮಡಿಕೊಪ್ಪ, ಬಟಾಣಿ ಜಡ್ಡು ಪ್ರದೇಶಕ್ಕೆ ಬಂದು ತಲುಪಿದೆ.   ಇಲ್ಲಿಂದ ಶಿಕಾರಿಪುರ ತಾಲ್ಲೂಕಿನ ಅಂಚಿನ ಅಂಬ್ಲಿಗೋಳ ಜಲಾಶಯ ತಲುಪಿ ಅಲ್ಲಿಂದ ಸೊರಬ ತಾಲ್ಲೂಕಿನ ಉಳವಿ ಅರಣ್ಯದ ಮೂಲಕ ಶತಮಾನದ ಹಿಂದಿನ ಕಾಳಿ ಮತ್ತು ಭದ್ರಾ ಆನೆ ಕಾರಿಡಾರ್ ಪುನಃ ಕೂಡಿಸಲು ಉತ್ತರ ಕನ್ನಡ ಜಿಲ್ಲೆಯ ಕಾಳಿ ಅಭಯಾರಣ್ಯದ ಕಾಡಾನೆಗಳ ಸಂಪರ್ಕದ ಪ್ರಯತ್ನದಲ್ಲಿ ಈ ಕಾಡಾನೆ ಸಂಚಾರ ಎಂದು ಕಾಡಾನೆಗಳ ಕಾರಿಡಾರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.   ಅರಸಾಳಿನಿಂದ -ಕೆಂಚನಾಲ - ಪತ್ರೆಹೊಂಡ ಮಾರ್ಗದ ಮೂಲಕ ಸಾಗರ ತಾಲೂಕಿನ ಆನಂದಪುರಂ ಸಮೀಪದ  ಕೊಲ್ಲಿಬಚ್ಚಲು ಡ್ಯಾಮ್ ತಲುಪಿ ಅಲ್ಲಿಂದ ಕಣ್ಣೂರು ಹಿರಿಯ...

4195.ಭಾಗ_22.ಘಟ್ಟಕ್ಕೆ_ಕರಾವಳಿಗರ_ವಲಸೆಯಕ್ಷಗಾನ_ಪ್ರಸಂಗದಲ್ಲಿ...

ಭಾಗ_22. ಘಟ್ಟಕ್ಕೆ_ಕರಾವಳಿಗರ_ವಲಸೆ ಯಕ್ಷಗಾನ_ಪ್ರಸಂಗದಲ್ಲಿ...   ಯಕ್ಷಗಾನವು ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಜೀವನಾಡಿ.     ಕರಾವಳಿಯ ಜನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ಕಾಲಕಾಲಕ್ಕೆ ಯಕ್ಷಗಾನದ ಪ್ರಸಂಗಗಳಲ್ಲಿ ನಾಟಕದ ಕಥಾಹಂದರ)ಮತ್ತು ವೇದಿಕೆಯ ಮೇಲಿನ ಹಾಸ್ಯಗಾರರ ಕೋಡಂಗಿ/ದೂತ/ವಿದೂಷಕ ಸಂಭಾಷಣೆಗಳಲ್ಲಿ ಪ್ರತಿಫಲಿಸುತ್ತಾ ಬಂದಿವೆ.  ​ಕರಾವಳಿ ಜನರ ಪ್ರಮುಖ ಜೀವನಶೈಲಿಯಾದ ವಲಸೆ ವಿಶೇಷವಾಗಿ ಮುಂಬೈ (ಬಾಂಬೆ), ಗಲ್ಫ್ ದೇಶಗಳು (ದುಬೈ) ಮತ್ತು ಇತ್ತೀಚಿನ ಬೆಂಗಳೂರು ವಲಸೆಯು ಯಕ್ಷಗಾನ ಪ್ರಸಂಗಗಳಲ್ಲಿ ಹೇಗೆ ಉಲ್ಲೇಖಗೊಂಡಿದೆ ಎಂಬುದರ ಒಂದು ಚಿತ್ರಣ ಇಲ್ಲಿದೆ ಓದಿ... ​  20ನೇ ಶತಮಾನದ ಮಧ್ಯಭಾಗದಲ್ಲಿ ಕರಾವಳಿಯ ಪ್ರತಿಯೊಂದು ಮನೆಯಿಂದಲೂ ಕನಿಷ್ಠ ಒಬ್ಬರಾದರೂ ಮುಂಬೈಗೆ ವಲಸೆ ಹೋಗುತ್ತಿದ್ದರು.    ಇದನ್ನು ಯಕ್ಷಗಾನ ರಂಗಭೂಮಿ ಅತ್ಯಂತ ಆಪ್ತವಾಗಿ ಹಿಡಿದಿಟ್ಟಿದೆ,​ ಯಕ್ಷಗಾನ ಹಾಸ್ಯ ಪ್ರಸಂಗಗಳಲ್ಲಿ ಮುಂಬೈ ಚಾಕರಿ ಕಥೆ ಬಳಸಿಕೊಂಡಿದೆ.    ಸಾಂಪ್ರದಾಯಿಕ ಪ್ರಸಂಗಗಳಾದ ದೇವಿ ಮಹಾತ್ಮೆ, ಕನಕಾಂಗಿ ಕಲ್ಯಾಣ ಅಥವಾ ಕೃಷ್ಣ ಲೀಲೆಗಳಲ್ಲಿ ಬರುವ ದೂತರು ಅಥವಾ ಸೇವಕರು ತಮ್ಮ ಸಂಭಾಷಣೆಯಲ್ಲಿ ಮುಂಬೈ ಜೀವನವನ್ನು ರಂಗಕ್ಕೆ ತರುತ್ತಾರೆ.  ಉದಾಹರಣೆಗೆ "ನಾನು ಮಹಾರಾಜನ ಹತ್ತಿರ ಕೆಲಸ ಮಾಡುವುದಕ್ಕಿಂತ ಬಾಂಬೆ ಹೋಟೆಲ್‌ನಲ್ಲಿ ಕಪ...