Skip to main content

Posts

4219.ಕಸ್ತೂರಿ_ರಂಗನ್_ವರದಿ Kasturirangan_Committee_Report. ಈ ವರದಿ ಜಾರಿ ಆದರೆ ವಾಸದ ಮನೆ, ರಸ್ತೆ, ಶಾಲೆ, ಕೃಷಿ ಭೂಮಿ,ತೋಟ ಮತ್ತು ದೇವಸ್ಥಾನಗಳಿಗೆ ಕುತ್ತು ಬರುತ್ತದೆ ಎಂಬಂತೆ ಅನೇಕರು ಭಯ ಪಡಿಸುವ ಮಾತು - ಲೇಖನ ಎಷ್ಟು ಸತ್ಯ?...

ಕಸ್ತೂರಿ_ರಂಗನ್_ವರದಿ Kasturirangan_Committee_Report.   ಈ ವರದಿ ಜಾರಿ ಆದರೆ ವಾಸದ ಮನೆ, ರಸ್ತೆ, ಶಾಲೆ, ಕೃಷಿ ಭೂಮಿ,ತೋಟ ಮತ್ತು ದೇವಸ್ಥಾನಗಳಿಗೆ ಕುತ್ತು ಬರುತ್ತದೆ ಎಂಬಂತೆ ಅನೇಕರು ಭಯ ಪಡಿಸುವ ಮಾತು - ಲೇಖನ ಎಷ್ಟು ಸತ್ಯ?...    ಕಸ್ತೂರಿ ರಂಗನ್ ವರದಿ ಸರ್ಕಾರ ಕನ್ನಡದಲ್ಲಿ ಅನುವಾದ ಮಾಡಿ ಜನರಿಗೆ ತಲುಪಿಸಿಲ್ಲ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮಾಧ್ಯಮಗಳು ಹಾಗೂ ಪರಿಸರವಾದಿಗಳೂ ಈ ಪ್ರಯತ್ನ ಮಾಡಲೇ ಇಲ್ಲ.   ಕಸ್ತೂರಿ ರಂಗನ್ ವರದಿಯ ಮುಖ್ಯ ಪ್ಯಾರಗಳನ್ನು ನಾನು ಇಲ್ಲಿ ಪ್ರಕಟಿಸಲು ಕಾರಣ ಕಸ್ತೂರಿ ರಂಗನ್ ವರದಿ ಬಗ್ಗೆ ಕಪೋಲ ಕಲ್ಪಿತ ಸುದ್ದಿಗಳು ತಪ್ಪು ತಪ್ಪಾಗಿ ಜನರಿಗೆ ತಲುಪಬಾರದೆಂದು.    ಕಸ್ತೂರಿ_ರಂಗನ್_ವರದಿ #Kasturirangan_Committee_Report. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯವನ್ನು (Eco-Sensitive Area - ESA) ಸಂರಕ್ಷಿಸಲು ನೀಡಿದ ಶಿಫಾರಸುಗಳನ್ನು ಒಳಗೊಂಡಿದೆ.   ಈ ವರದಿಯ ವ್ಯಾಪ್ತಿಗೆ ಬರುವ ಗ್ರಾಮಗಳ ಸಾಮಾನ್ಯ ಜನಜೀವನ, ಅಸ್ತಿತ್ವದಲ್ಲಿರುವ ಕಟ್ಟಡಗಳು ಮತ್ತು ಮೂಲಸೌಕರ್ಯಗಳ ಮೇಲಾಗುವ ಪರಿಣಾಮಗಳ ಕುರಿತು ವರದಿಯ ಸ್ಪಷ್ಟ ನಿಲುವುಗಳು ಹೀಗಿವೆ.  ​ಮನೆಗಳು ಮತ್ತು ಕೃಷಿ ಚಟುವಟಿಕೆಗಳು ಅಭಾದಿತ, ​ಮನೆಗಳ ತೆರವು ಇರುವುದಿಲ್ಲ, ಈಗಾಗಲೇ ಅಸ್ತಿತ್ವದಲ್ಲಿರುವ ಮನೆಗಳನ್ನು ತೆರವುಗೊಳಿಸುವ ಯಾವುದೇ ಪ್ರಸ್ತಾಪ ವರದಿಯಲ್ಲಿಲ್ಲ....

4218.ಕಸ್ತೂರಿ_ರಂಗನ್_ವರದಿ Kasturirangan_Committee_Report. ಈ ವರದಿ ಜಾರಿ ಆದರೆ ವಾಸದ ಮನೆ, ರಸ್ತೆ, ಶಾಲೆ, ಕೃಷಿ ಭೂಮಿ,ತೋಟ ಮತ್ತು ದೇವಸ್ಥಾನಗಳಿಗೆ ಕುತ್ತು ಬರುತ್ತದೆ ಎಂಬಂತೆ ಅನೇಕರು ಭಯ ಪಡಿಸುವ ಮಾತು - ಲೇಖನ ಎಷ್ಟು ಸತ್ಯ?...

ಕಸ್ತೂರಿ_ರಂಗನ್_ವರದಿ Kasturirangan_Committee_Report.   ಈ ವರದಿ ಜಾರಿ ಆದರೆ ವಾಸದ ಮನೆ, ರಸ್ತೆ, ಶಾಲೆ, ಕೃಷಿ ಭೂಮಿ,ತೋಟ ಮತ್ತು ದೇವಸ್ಥಾನಗಳಿಗೆ ಕುತ್ತು ಬರುತ್ತದೆ ಎಂಬಂತೆ ಅನೇಕರು ಭಯ ಪಡಿಸುವ ಮಾತು - ಲೇಖನ ಎಷ್ಟು ಸತ್ಯ?...    ಕಸ್ತೂರಿ ರಂಗನ್ ವರದಿ ಸರ್ಕಾರ ಕನ್ನಡದಲ್ಲಿ ಅನುವಾದ ಮಾಡಿ ಜನರಿಗೆ ತಲುಪಿಸಿಲ್ಲ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮಾಧ್ಯಮಗಳು ಹಾಗೂ ಪರಿಸರವಾದಿಗಳೂ ಈ ಪ್ರಯತ್ನ ಮಾಡಲೇ ಇಲ್ಲ.   ಕಸ್ತೂರಿ ರಂಗನ್ ವರದಿಯ ಮುಖ್ಯ ಪ್ಯಾರಗಳನ್ನು ನಾನು ಇಲ್ಲಿ ಪ್ರಕಟಿಸಲು ಕಾರಣ ಕಸ್ತೂರಿ ರಂಗನ್ ವರದಿ ಬಗ್ಗೆ ಕಪೋಲ ಕಲ್ಪಿತ ಸುದ್ದಿಗಳು ತಪ್ಪು ತಪ್ಪಾಗಿ ಜನರಿಗೆ ತಲುಪಬಾರದೆಂದು.    ಕಸ್ತೂರಿ_ರಂಗನ್_ವರದಿ #Kasturirangan_Committee_Report. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯವನ್ನು (Eco-Sensitive Area - ESA) ಸಂರಕ್ಷಿಸಲು ನೀಡಿದ ಶಿಫಾರಸುಗಳನ್ನು ಒಳಗೊಂಡಿದೆ.   ಈ ವರದಿಯ ವ್ಯಾಪ್ತಿಗೆ ಬರುವ ಗ್ರಾಮಗಳ ಸಾಮಾನ್ಯ ಜನಜೀವನ, ಅಸ್ತಿತ್ವದಲ್ಲಿರುವ ಕಟ್ಟಡಗಳು ಮತ್ತು ಮೂಲಸೌಕರ್ಯಗಳ ಮೇಲಾಗುವ ಪರಿಣಾಮಗಳ ಕುರಿತು ವರದಿಯ ಸ್ಪಷ್ಟ ನಿಲುವುಗಳು ಹೀಗಿವೆ.  ​ಮನೆಗಳು ಮತ್ತು ಕೃಷಿ ಚಟುವಟಿಕೆಗಳು ಅಭಾದಿತ, ​ಮನೆಗಳ ತೆರವು ಇರುವುದಿಲ್ಲ, ಈಗಾಗಲೇ ಅಸ್ತಿತ್ವದಲ್ಲಿರುವ ಮನೆಗಳನ್ನು ತೆರವುಗೊಳಿಸುವ ಯಾವುದೇ ಪ್ರಸ್ತಾಪ ವರದಿಯಲ್ಲಿಲ್ಲ....

4217.ನಮ್ಮೂರು_ಆನಂದಪುರಂನ_ಐತಿಹಾಸಿಕಕೋಟೆ_ಅಂಜನೇಯ_ಸನ್ನಿದಿಯಲ್ಲಿ_ರುದ್ರಾಭಿಷೇಕ.

ನಮ್ಮೂರು_ಆನಂದಪುರಂನ_ಐತಿಹಾಸಿಕ ಕೋಟೆ_ಅಂಜನೇಯ_ಸನ್ನಿದಿಯಲ್ಲಿ_ರುದ್ರಾಭಿಷೇಕ.   ಕೆಳದಿ ಅರಸರ ಆನಂದಪುರಂ ಕೋಟೆ ನಾಲ್ಕು ನೂರು ವರ್ಷಗಳ ಹಿಂದೆ #ಯಡೇಹಳ್ಳಿ_ಕೋಟೆ ಎಂಬ ಹೆಸರಿನಲ್ಲಿ ಹರತಾಳಿನ ಕಿರಾತಕರಿಂದ ರಾಜ ವೆಂಕಟಪ್ಟ ನಾಯಕರು ವಶಪಡಿಸಿಕೊಂಡು ಈ ಕೋಟೆ ಅಭಿವೃದ್ಧಿ ಮಾಡಿದರು ಮತ್ತು ಅವರು ಆನಂದಪುರಂನ #ಗಂಗಾಮಠದ_ಗುತ್ಯಮ್ಮ ದೇವರ ದೇವಸ್ಥಾನದ ಎದರು ನಿತ್ಯ ಸುಂದರವಾದ ರಂಗೋಲಿ ಬಿಡಿಸುತ್ತಿದ್ದ #ಬೆಸ್ತರ_ಸುಂದರಿ_ಚಂಪಕಳ ಮೇಲೆ ಮೋಹಗೊಂಡು ವಿವಾಹ ಆಗಿ ಆನಂದಪುರಂನ ಕೋಟೆಯ ಅರಮನೆಯಲ್ಲಿ ಇಡುತ್ತಾರೆ.   ಈ ಅಂತರ್ಜಾತಿ ವಿವಾಹ ವಿರೋಧಿಸಿ ಪಟ್ಟದ ರಾಣಿ #ಭದ್ರಮ್ಮಾಜಿ ಆಹಾರ ನೀರು ತ್ಯಜಿಸಿ ಜೀವ ತ್ಯಾಗ ಮಾಡುತ್ತಾರೆ ಇದರಿಂದ ಪ್ರಜೆಗಳಿಗೆ ರಾಜ ವೆಂಕಟಪ್ಪ ನಾಯಕರ ಮೇಲೆ ಅಸಮದಾನ ಉಂಟಾಗುತ್ತದೆ ಇದೆಲ್ಲ ರಾಜ ತನ್ನನ್ನ ಮದುವೆ ಆದ್ದರಿಂದ ತನ್ನ ಜಾತಿ ಕಾರಣದಿಂದ ಎಂದು ನೊಂದ ಚಂಪಕ ರಾಣಿ ಹಾಲಿನಲ್ಲಿ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.  ಕೋಟೆಗೆ ಸಮೀಪದಲ್ಲಿನ  ತನ್ನ ಪ್ರೀತಿಯ ರಾಣಿಯ #ಸಮಾದಿ_ಸ್ಥಳವನ್ನು ಸ್ಮಾರಕವಾಗಿ  ಕೆಳದಿ ರಾಜ ವೆಂಕಟಪ್ಪ ನಾಯಕರು #ಚಂಪಕ_ಸರಸ್ಸು ನಿರ್ಮಿಸಿ ಈ ಪ್ರದೇಶಕ್ಕೆ ಆನಂದಪುರಂ ಎಂದು ನಾಮಕರಣ ಮಾಡಿದರು ಎಂಬ ದಾಖಲೆ ಗೆಜೆಟಿಯರ್ ನಲ್ಲಿದೆ.   ಆನಂದಪುರಂನ ಚ೦ಪಕ ಸರಸ್ಸು ಈಗ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ ನಿತ್ಯ ನೂರಾರು ಪ್ರವಾಸಿಗರು ಇ...

4216.ಹೊನ್ನಾಳಿ_ತಾಲೂಕಿನ_ಸೊರಟೂರು_ಹನುಮಂತಪ್ಪ.ಜನಪರ_ಹೊರಾಟಗಾರರು

ಹೊನ್ನಾಳಿ_ತಾಲೂಕಿನ_ಸೊರಟೂರು_ಹನುಮಂತಪ್ಪ. ಜನಪರ_ಹೊರಾಟಗಾರರು   ಬಹಳ ವರ್ಷಗಳಿಂದ ನನ್ನ ಪೇಸ್ ಬುಕ್ ಗೆಳೆಯರು ಆದರೆ ನನ್ನ ಅವರ ಭೇಟಿ ಇವತ್ತೇ ಮೊದಲು.       ಕಳೆದ ವರ್ಷ ಇವರು ನಮ್ಮ ಊರಿಗೆ ಬಂದಾಗ ನಾನು ಊರಲ್ಲಿ ಇರಲಿಲ್ಲ ಆದ್ದರಿಂದ ಬೇಟಿ ಆಗಿರಲಿಲ್ಲ.   ಜೀವನೋಪಾಯಕ್ಕಾಗಿ  ಕೃಷಿ ಮತ್ತು ಸಣ್ಣ ಹೋಟೆಲ್ ನಡೆಸುತ್ತಾರೆ, ಪ್ರಾರಂಭದಲ್ಲಿ ಅತ್ಯುತ್ತಮ ಫೋಟೋಗ್ರಾಪರ್ ಆಗಿದ್ದವರು, ಜೊತೆಗೆ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.    ಇವರು ಇತ್ತೀಚಿನ ದಶಕಗಳಲ್ಲಿ ಜನಪ್ರಿಯರಾದ ಪ್ರಮುಖ ಭ್ರಷ್ಟಾಚಾರ ವಿರೋಧಿ ಹಾಗೂ ಸಾಮಾಜಿಕ ಹೋರಾಟಗಾರರು ಆಗಿದ್ದಾರೆ.   ಇವರ ಪೇಸ್ ಬುಕ್ ಮೂಲಕ ಇವರ ಹೋರಾಟಗಳನ್ನು ನೋಡುತ್ತಿರುತ್ತೇನೆ. ಸೊರಟೂರು ಹನುಮಂತಪ್ಪ ಅವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಪ್ರಮುಖ ಸಾಮಾಜಿಕ ಹಾಗೂ ಮಾಹಿತಿ ಹಕ್ಕು (RTI) ಹೋರಾಟಗಾರರಾಗಿದ್ದಾರೆ.   ಇವರು ಈ ಭಾಗದಲ್ಲಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ.   ಇವರು #ಭ್ರಷ್ಟಾಚಾರ_ವಿರೋಧಿ_ವೇದಿಕೆ ಕರ್ನಾಟಕ' ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾಗಿ ಮತ್ತು ಸಕ್ರಿಯ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ.   ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ವ್ಯಾಪ್ತಿಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳು ...

4215.ಕಸ್ತೂರಿ_ರಂಗನ್_ವರದಿ_8ನೇ_ಕರಡು_ಅಧಿಸೂಚನೆಅಥವ_ಕೇಂದ್ರ_ಪರಿಸರ_ಸಚಿವಾಲಯದಿಂದ_ಜಾರಿ

ಕಸ್ತೂರಿ_ರಂಗನ್_ವರದಿ_8ನೇ_ಕರಡು_ಅಧಿಸೂಚನೆ ಅಥವ_ಕೇಂದ್ರ_ಪರಿಸರ_ಸಚಿವಾಲಯದಿಂದ_ಜಾರಿ   ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯ Ecologically Sensitive Area ಬಗ್ಗೆ 8ನೇ ಅಧಿಸೂಚನೆ ಅಥವಾ ಜಾರಿ ಆಗುತ್ತಾ? ...  #ಏನಾಗಬಹುದು? .... ಕೇಂದ್ರ ಪರಿಸರ ಸಚಿವಾಲಯವು ಹೊರಡಿಸಿದ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಗಳನ್ನು ಪ್ರಮುಖವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಪ್ರಬಲವಾಗಿ ವಿರೋಧಿಸಿ ಸಂಪೂರ್ಣವಾಗಿ ತಿರಸ್ಕರಿಸಿವೆ.   ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಲು #ರಾಜ್ಯ_ಸರ್ಕಾರದ_ನೇರ_ಅನುಮೋದನೆಯೇ ಬೇಕೆಂಬ ಕಡ್ಡಾಯ ನಿಯಮವಿಲ್ಲ. ನ್ಯಾಯಾಲಯಗಳು ಕಟ್ಟುನಿಟ್ಟಿನ ಆದೇಶ ನೀಡಿದರೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ರಾಜ್ಯ ಸರ್ಕಾರಗಳು ಅಥವಾ ಜನಪ್ರತಿನಿಧಿಗಳು 7ನೇ ಕರಡು ಪ್ರಸ್ತಾವನೆಯನ್ನು ಬಹಿಷ್ಕರಿಸಿದ ತಕ್ಷಣ ಕಸ್ತೂರಿ ರಂಗನ್ ವರದಿಯ ವಿಚಾರ ಸಂಪೂರ್ಣ ಅಂತ್ಯವಾಗುವುದಿಲ್ಲ.    ಅಂತಿಮ ಒಮ್ಮತ ಮೂಡುವವರೆಗೆ ಅಥವಾ ನ್ಯಾಯಾಲಯವು ಸ್ಪಷ್ಟ ತೀರ್ಪು ನೀಡುವವರೆಗೆ ಕೇಂದ್ರ ಸರ್ಕಾರವು ಕರಡುಗಳನ್ನು ನವೀಕರಿಸಿ ಮುಂದಿನ 8ನೇ ಕರಡು ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆಯೇ ಹೆಚ್ಚು. ​​ #ಕರ್ನಾಟಕ_ರಾಜ್ಯ ಸಂಪೂರ್ಣ ತಿರಸ್ಕಾರ-ಸರ್ವಪಕ್ಷ ಸಭೆಯ ನಿರ್ಧಾರ.  ಕರ್ನಾಟಕ ಸರ್ಕಾರವು ಸರ್ವಪಕ್ಷ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್...

4214.ಚರ್ಮದ್ಯೋಗಿ_ಕಾಯಕ_ಕುಟುಂಬದಸಂತ_ಭಗತ್_ರವಿದಾಸ್ ಕರ್ನಾಟಕದ ಶಿವಶರಣರಾದ

ಚರ್ಮದ್ಯೋಗಿ_ಕಾಯಕ_ಕುಟುಂಬದ ಸಂತ_ಭಗತ್_ರವಿದಾಸ್   ಕರ್ನಾಟಕದ ಶಿವಶರಣರಾದ ಹರಳಯ್ಯನವರಂತೆ ಉತ್ತರ ಭಾರತದಲ್ಲಿ ಶ್ರಮಿಕ ವರ್ಗದ ಕಾಯಕವನ್ನು ದೈವಿಕ ಮಟ್ಟಕ್ಕೆ ಕೊಂಡೊಯ್ದು ಸಾಮಾಜಿಕ ಸಮಾನತೆಗಾಗಿ ಧ್ವನಿ ಎತ್ತಿದವರು ಮಹಾನ್ ಚೇತನ ಭಗತ್ ರವಿದಾಸ್.    ಸಂತ ರವಿದಾಸರು ಮೂಲತಃ ಸಿಖ್ ಧರ್ಮದವರಲ್ಲ ಅವರು 15–16ನೇ ಶತಮಾನದ ಭಕ್ತಿ ಪರಂಪರೆಯ ಸಂತರು.   ಅವರ ಜೀವನ ಸಿಖ್ ಧರ್ಮ ರೂಪುಗೊಳ್ಳುವುದಕ್ಕಿಂತ ಹಿಂದಿನದು ಆದರೆ ಅವರಿಗೆ #ಸಿಖ್_ಪರಂಪರೆಯಲ್ಲಿ ಬಹಳ ಮಹತ್ವವಿದೆ.    ಅವರ 40ಕ್ಕೂ ಹೆಚ್ಚು ಶಬ್ದಗಳು/ಪದ್ಯಗಳು #ಗುರು_ಗ್ರಂಥ_ಸಾಹಿಬ್‌ನಲ್ಲಿ “#ಭಗತ್_ರವಿದಾಸ”ರ #ಬಾಣಿಯಾಗಿ ಸೇರಿವೆ.   #ಸಂತ_ರವಿದಾಸ್ (ಭಗತ್ ರವಿದಾಸ್ / ರಾಯ್‌ದಾಸ್) ಅವರು 15-16ನೇ ಶತಮಾನದ ಭಾರತದ ಭಕ್ತಿ ಚಳವಳಿಯ ಪ್ರಮುಖ ಸಂತ, ಕವಿ ಹಾಗೂ ಸಮಾಜ ಸುಧಾರಕರಲ್ಲಿ ಒಬ್ಬರು.   ಉತ್ತರ ಪ್ರದೇಶದ ವಾರಾಣಸಿಯ ಸಮೀಪದ ಸೀರ ಗೋವರ್ಧನಪುರದಲ್ಲಿ ಜನಿಸಿದರು ಅವರು ಚಮ್ಮಾರ (ಚರ್ಮೋದ್ಯೋಗಿ) ಕಾಯಕದ ಕುಟುಂಬದಿಂದ ಬಂದವರಾಗಿದ್ದು, ತಮ್ಮ ಜೀವನದುದ್ದಕ್ಕೂ ಕಾಯಕ ನಿಷ್ಠೆ ಮತ್ತು ಭಕ್ತಿಯನ್ನು ಏಕಕಾಲದಲ್ಲಿ ಪಾಲಿಸಿದರು.    ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ಮಾಡುವ ಕರ್ಮ ಮತ್ತು ಗುಣದಿಂದ ಮಾತ್ರ ಮನುಷ್ಯ ಶ್ರೇಷ್ಠನಾಗುತ್ತಾನೆ ಎಂದು ಸಾರಿದರು.   ​ ಸಂತ ರವಿದಾಸರು ಕಲ್ಪಿಸಿದ ಆದರ್ಶ ನಗರದ ಪರಿಕಲ್ಪನೆ '#...

4213.ಹನುಮಾನ್_ಅಂಶ್_ಸಿನಿಮಾ_ಅಭೂತಪೂವ೯_ಯಶಸ್ಸನಲ್ಲಿ ನೀಮ್_ಕರೋಲಿಬಾಬಾ_ಪವಾಡ...

ಹನುಮಾನ್_ಅಂಶ್_ಸಿನಿಮಾ_ಅಭೂತಪೂವ೯_ಯಶಸ್ಸನಲ್ಲಿ ನೀಮ್_ಕರೋಲಿಬಾಬಾ_ಪವಾಡ...   ನೀಮ್ ಕರೋಲಿ ಬಾಬಾ ಅವರ ಶಿಷ್ಯರು ವಿಶ್ವ ವಿಖ್ಯಾತರಾದ #ಸ್ಟೀವ್_ಜಾಬ್ಸ್ (Apple),  #ಮಾರ್ಕ್_ಜುಕರ್‌ಬರ್ಗ್ #ವಿರಾಟ್_ಕೊಹ್ಲಿ ಮತ್ತು ಅವರ ಪತ್ನಿ #ಅನುಷ್ಕಾ_ಶರ್ಮಾ ಮುಂತಾದವರು.  ಈಗ ಪವಾಡದಂತೆ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಆಗಿರುವ #ಹನುಮಾನ್_ಅಂಶ್ ನೀಮ್ ಕರೋಲಿ ಭಾಬಾರದ್ದೇ ಆತ್ಮಕಥೆ.   Hanuman Ansh ಹಿಂದಿ ಸಿನಿಮಾದ ಪ್ರಮುಖ ನಿರ್ಮಾಪಕಿ #ರಾಗಿಣಿ_ಸೋನಾ  ಇವರೊಂದಿಗೆ ಅನುಪ್ರಿಯಾ ನಗರ್ ಮತ್ತು ನಮ್ರತಾ ಜಿ. ಸಿಂಗ್ ಕೂಡ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ.   ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ, ಆಧ್ಯಾತ್ಮಿಕ ಗುರು #ನೀಮ್_ಕರೋಲಿ_ಬಾಬಾ ಅವರ ಜೀವನ ಆಧಾರಿತ ಈ ಹಿಂದಿ ಚಲನಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡು 360 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ದಾಖಲೆ ಬರೆದಿದೆ.   21 ವರ್ಷದ ಯುವತಿ ರಾಗಿಣಿ ಸೋನಾ ಅವರು ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದು ಈ ಚಿತ್ರವನ್ನು ನಿರ್ಮಿಸಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ.  ಈ ಯಶಸ್ವಿ ಚಿತ್ರವನ್ನು #ವಿಶಾಲ್_ಚತುರ್ವೇದಿ ಅವರು ನಿರ್ದೇಶಿಸಿದ್ದಾರೆ.   ನೀಮ್ ಕರೋಲಿ ಬಾಬಾರನ್ನು ಭಕ್ತರು ಪ್ರೀತಿಯಿಂದ 'ಮಹಾರಾಜ್ ಜಿ' ಎಂದು ಕರೆಯುತ್ತಾರೆ, 20ನೇ ಶತಮಾನದ ಭಾರತದ ಅತ್ಯ...

4212.ಶಿವಶರಣ_ಹರಳಯ್ಯರಿಗೆಮರಣದಂಡನೆ_ನೀಡಿದ_ಬಿಜ್ಜಳರಿಂದಕಲ್ಯಾಣ_ಕ್ರಾಂತಿಗೆ_ಮತ್ತು_ಶರಣರ_ಚದುರುವಿಕೆಗೆ_ಕಾರಣವಾಯಿತು.

ಶಿವಶರಣ_ಹರಳಯ್ಯರಿಗೆ ಮರಣದಂಡನೆ_ನೀಡಿದ_ಬಿಜ್ಜಳರಿಂದ ಕಲ್ಯಾಣ_ಕ್ರಾಂತಿಗೆ_ಮತ್ತು_ಶರಣರ_ಚದುರುವಿಕೆಗೆ_ಕಾರಣವಾಯಿತು.  ಬಲ್ಲಿರಾ ನಿಮ್ಮ ಇತಿಹಾಸ?... ನನ್ನ ಮಾಧ್ಯಮಿಕ ಶಾಲಾ ಸಹಪಾಠಿ ದಾಸಕೊಪ್ಪದ ನಾಗರಾಜ್ ಕೆ.ಎಸ್.ಎಪ್.ಸಿಯಲ್ಲಿ ಸೇವೆ ಮಾಡಿ ನಿವೃತ್ತ ಅಧಿಕಾರಿ ಆಗಿದ್ದಾರೆ ಇವರು ಈಗ #ಮೋಚಿ_ಸಮುದಾಯದ #ಶಿವಮೊಗ್ಗ_ಜಿಲ್ಲಾ_ಅಧ್ಯಕ್ಷರಾಗಿದ್ದಾರೆ.   ಇವರ ಸಮಾಜದ #ವದು_ವರರ ಸಮಾವೇಶ ಮತ್ತು ಅವರ ಸಮಾಜ ಬಂದುಗಳ ಸಭೆಗಾಗಿ ನಮ್ಮ ಶ್ರೀಕೃಷ್ಣ_ಸರಸ_ಕನ್ವೆನ್ಷನ್_ ಹಾಲ್ ಕಲ್ಯಾಣ ಮಂಟಪದ ದಿನಾಂಕ ನಿಗದಿ ಮಾಡಲು ಬಂದಿದ್ದರು.   ಶರಣ ಚಳವಳಿಯ ಪ್ರಮುಖರು, ಕ್ರಾಂತಿಕಾರಿ ಶಿವ ಶರಣ ಹರಳಯ್ಯರ ಬಗ್ಗೆ ಉಲ್ಲೇಖಿಸಿ ನಾವಿಬ್ಬರೂ ಮಾತನ್ನಾಡಿದ್ದನ್ನ ವಿಸ್ತರಿಸಿ ಇಲ್ಲಿ ಬರೆದಿದ್ದೇನೆ.    12ನೇ ಶತಮಾನದ ಬಸವೇಶ್ವರರ ಸಮಕಾಲೀನ ಶರಣ ಚಳವಳಿಯ ಪ್ರಮುಖ ವಚನಕಾರ ಹಾಗೂ ಕ್ರಾಂತಿಕಾರಿ ಶಿವಶರಣ ಹರಳಯ್ಯನವರ ವಚನಗಳ ಅಂಕಿತನಾಮ "ಬಿಜ್ಜಳೇಶ್ವರ" ಅಥವಾ "ಹಮ್ಮೀರ ಬಿಜ್ಜಳೇಶ್ವರ".    ಅವರು ಶ್ರಮ, ಕಾಯಕ ನಿಷ್ಠೆ ಮತ್ತು ಶಿವಭಕ್ತಿಯನ್ನು ಪ್ರತಿಪಾದಿಸುವ ಕೆಲವೇ ವಚನಗಳನ್ನು ರಚಿಸಿದ್ದಾರೆ.  ​ಅವರ ಒಂದು ಪ್ರಖ್ಯಾತ ವಚನ: ​"ಅಂಗದ ಮೇಲಣ ಲಿಂಗಕ್ಕೆ ಅಂಗವೇ ಪೀಠವಾಯಿತ್ತು. ಪ್ರಾಣದ ಮೇಲಣ ಲಿಂಗಕ್ಕೆ ಪ್ರಾಣವೇ ಆಶ್ರಯವಾಯಿತ್ತು. ಭಾವದ ಮೇಲಣ ಲಿಂಗಕ್ಕೆ ಭಾವವೇ ಆವಾಸವಾಯಿತ್ತು. ಬಿಜ್ಜಳೇಶ್ವರಾ, ನಿಮ್ಮ ಶರಣರ ಪಾ...

4208.ರಾಜ್ಯ_ಸರ್ಕಾರದಿಂದ_ಕಸ್ತೂರಿರಂಗನ್_ವರದಿ_ಬಗ್ಗೆಸರ್ವಾನುಮತದ_ತೀರ್ಮಾನ

ರಾಜ್ಯ_ಸರ್ಕಾರದಿಂದ_ಕಸ್ತೂರಿರಂಗನ್_ವರದಿ_ಬಗ್ಗೆ ಸರ್ವಾನುಮತದ_ತೀರ್ಮಾನ #ಪಶ್ಚಿಮ_ಘಟ್ಟದ_ಉಳಿವು_ಹಾಗೂ_ಜನರ_ಬದುಕಿನ_ನಡುವೆ_ಸಮತೋಲನ_ಅಗತ್ಯ! ... ಪಶ್ಚಿಮ ಘಟ್ಟದ ಜನರ ಬದುಕಿಗೆ ಬೆಂಬಲವಾಗಿ ನಿಂತ ರಾಜ್ಯ ಸರ್ಕಾರ!. ​ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಸಲ್ಲಿಕೆಯಾಗಿರುವ 'ಕಸ್ತೂರಿ ರಂಗನ್ ವರದಿ'ಯನ್ನು ಈಗಿರುವ ಸ್ವರೂಪದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲವೆಂದು ಕರ್ನಾಟಕ ವಿಧಾನಮಂಡಲವು ಸರ್ವಾನುಮತದಿಂದ ನಿರ್ಣಯ ಕೈಗೊಂಡು ತಿರಸ್ಕರಿಸಿದೆ.    ಪರಿಸರ ಸೂಕ್ಷ್ಮ ಪ್ರದೇಶ (ESA) ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶಗಳು, ಇತರೆ ಅರಣ್ಯ ಪ್ರದೇಶಗಳು ಮಾತ್ರ ಸೇರಿಸಬೇಕು.    ಕೃಷಿ ಭೂಮಿ, ತೋಟಗಾರಿಕೆ/ಪ್ಲಾಂಟೇಶನ್ ಪ್ರದೇಶಗಳು, ಜನವಸತಿ ಮತ್ತು ಸಾರ್ವಜನಿಕ ಚಟುವಟಿಕೆ ಪ್ರದೇಶಗಳನ್ನು ಸೇರಿಸಬಾರದು.   ಬಗ‌ರ್ ಹುಕುಂ, ಅರಣ್ಯ ಹಕ್ಕು, ಡೀಮ್ಸ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳನ್ನು ಪರಿಗಣಿಸಬೇಕು.    ತಜ್ಞ ಸಮಿತಿಯಿಂದ ಭೌತಿಕವಾಗಿ ಅರಣ್ಯಗಡಿ, ಜನವಸತಿ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು, ಜನವಸತಿ ಕೃಷಿ ಚಟುವಟಿಕೆ ಪ್ರದೇಶಗಳನ್ನು ಸರ್ವೆ ನಂಬರ್‌ವಾರು ಅಳತೆ ಮಾಡಿ ಪ್ರತ್ಯೇಕವಾಗಿ ಗುರುತಿಸಬೇಕು.   ESA ನಿಂದಾಗಿ ರೈತರ ಹಾಗೂ ಕಾರ್ಮಿಕರ ಪರ್ಯಾಯ ಜೀವನೋಪಾಯ ಮತ್ತು ಆರ್ಥಿಕ ನೆರವನ್ನು ನೀಡಲು ಸೂಕ್ತ ಮಾರ್ಗಸೂಚಿ ...

4211.ಕಸ್ತೂರಿ_ರಂಗನ್_ವರದಿಕೇರಳ_ಮಾದರಿ_ಏನಾಗಿದೆ ...ಕೇಂದ್ರ_ಪರಿಸರ_ಸಚಿವಾಲಯ_ಒಪ್ಪಿಲ್ಲ

ಕಸ್ತೂರಿ_ರಂಗನ್_ವರದಿ ಕೇರಳ_ಮಾದರಿ_ಏನಾಗಿದೆ ... ಕೇಂದ್ರ_ಪರಿಸರ_ಸಚಿವಾಲಯ_ಒಪ್ಪಿಲ್ಲ.   ಕಸ್ತೂರಿ ರಂಗನ್ ವರದಿ ವಿರೋದಿಸುವ ಭರದಲ್ಲಿ ಎಲ್ಲರೂ ಕೇರಳ ರಾಜ್ಯವನ್ನ ಹೊಗಳಿದ್ದಾರೆ, ಕೇರಳ ಮಾದರಿ ಅನುಕರಣನೀಯ ಎಂದಿದ್ದಾರೆ ಆದರೆ ವಾಸ್ತವದಲ್ಲಿ ಕೇರಳ ರಾಜ್ಯ ಸರ್ಕಾರದ ಗ್ರಾಮ ಮಟ್ಟದ ಪರಿಶೀಲನೆ ಮಾಡಿ 13108 ಚದರ ಕಿಲೋ ಮೀಟರ್ ಪ್ರದೇಶವನ್ನ 9993 ಚದರ ಕಿಲೋ ಮೀಟರ್ ವ್ಯಾಪ್ತಿಗೆ ಇಳಿಸಿದ್ದನ್ನು ಕೇಂದ್ರ ಪರಿಸರ ಸಚಿವಾಲಯ ಅಂತಿಮ ಮುದ್ರೆ ಒತ್ತಲಿಲ್ಲ.   7 ನೇ ಕರಡು ಅಧಿಸೂಚನೆಯಲ್ಲಿ ಯಥಾವತ್ತಾಗಿ 13108 ಚದರ ಕಿಲೋ ಮೀಟರ್ ವ್ಯಾಪ್ತಿಯನ್ನ ಉಳಿಸಿಕೊಂಡಿದೆ ಇದರಿಂದ ಕೇರಳ ರಾಜ್ಯ ಕೂಡ ಕಸ್ತೂರಿ ರಂಗನ್ ವರದಿಯ 7 ನೇ ಕರಡು ಅಧಿಸೂಚನೆ ಕನಾಟಕ ರಾಜ್ಯದಂತೆಯೇ ತಿರಸ್ಕರಿಸಿದೆ.  ಮೂಲ ಕಸ್ತೂರಿ ರಂಗನ್ ವರದಿಯಲ್ಲಿ ಕೇರಳದ 13,108 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ESA) ಎಂದು ಗುರುತಿಸಲಾಗಿತ್ತು.   ಕೇರಳ ಸರ್ಕಾರವು ಗ್ರಾಮ ಮಟ್ಟದಲ್ಲಿ ಭೌತಿಕ ಪರಿಶೀಲನೆ (Ground Verification) ನಡೆಸಿ ಸುಮಾರು 9,993 ಚದರ ಕಿ.ಮೀ.ಪ್ರದೇಶವನ್ನು ಮಾತ್ರ ಪರಿಸರ ಸೂಕ್ಷ್ಮ ವಲಯ (ESA) ಎಂದು ಗುರುತಿಸಿ ಕೇಂದ್ರಕ್ಕೆ ಕಳುಹಿಸಿತ್ತು.   ​ಆದರೆ ಕೇಂದ್ರ ಪರಿಸರ ಸಚಿವಾಲಯವು ಹೊರಡಿಸಿದ 7ನೇ ಕರಡು ಅಧಿಸೂಚನೆಯಲ್ಲಿ ಹಳೆಯ ಉಪಗ್ರಹ ಡೇಟಾವನ್ನೇ ಹೆಚ್ಚಾಗಿ ಆಧರಿಸಿ ಸುಮಾರು 13,108 ಚದರ ಕಿ.ಮೀ. ಗೂ ಹೆಚ್...

4210.ಭಾಗ_25ಘಟ್ಟಕ್ಕೆ_ಕರಾವಳಿಗರ_ವಲಸೆವಿಶ್ವದ_ವಲಸೆ_ಇತಿಹಾಸ.

ಭಾಗ_25 ಘಟ್ಟಕ್ಕೆ_ಕರಾವಳಿಗರ_ವಲಸೆ ವಿಶ್ವದ_ವಲಸೆ_ಇತಿಹಾಸ.   ಪ್ರಪಂಚದ ಇತಿಹಾಸವನ್ನು ಗಮನಿಸಿದರೆ ಮಾನವನ ವಲಸೆಗಳು ನಾಗರಿಕತೆಗಳ ಬೆಳವಣಿಗೆ, ಸಂಸ್ಕೃತಿಗಳ ಮಿಶ್ರಣ ಮತ್ತು ಆಧುನಿಕ ಜಗತ್ತಿನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.    ಜಾಗತಿಕ ಇತಿಹಾಸದಲ್ಲಿ ನಡೆದಿರುವ ಕೆಲವು ಮುಖ್ಯ ವಲಸೆಗಳನ್ನು (Major Migrations of the World) ಈ ಕೆಳಗಿನಂತೆ ಪಟ್ಟಿ ಮಾಡಬಹುದು: ​ 1.#ಇತಿಹಾಸಪೂರ್ವ_ಮತ್ತು_ಪ್ರಾಚೀನ_ವಲಸೆಗಳು ​'ಆಫ್ರಿಕಾದಿಂದ ಹೊರಗೆ' ವಲಸೆ (Out of Africa Migration):    ಇದು ಮಾನವ ಇತಿಹಾಸದ ಅತ್ಯಂತ ಮೊದಲ ಮತ್ತು ಪ್ರಮುಖ ವಲಸೆ. ಸುಮಾರು 60 ಸಾವಿರ ವರ್ಷಗಳ ಹಿಂದೆ ಆಧುನಿಕ ಮಾನವರು (ಹೋಮೋ ಸೇಪಿಯನ್ಸ್) ಆಫ್ರಿಕಾದಿಂದ ಹೊರಟು ಏಷ್ಯಾ, ಯುರೋಪ್ ಮತ್ತು ಆಸ್ಟ್ರೇಲಿಯಾ ಖಂಡಗಳಿಗೆ ವಲಸೆ ಹೋದರು. #ಇಂಡೋ_ಯುರೋಪಿಯನ್_ವಲಸೆ:    ಮಧ್ಯ ಏಷ್ಯಾದಿಂದ ಹೊರಟ ಇಂಡೋ-ಯುರೋಪಿಯನ್ ಭಾಷೆಗಳನ್ನಾಡುವ ಜನಾಂಗದವರು ಯುರೋಪ್ ಮತ್ತು ಭಾರತೀಯ ಉಪಖಂಡದ ಕಡೆಗೆ ವಲಸೆ ಬಂದರು ಇದು ಭಾಷೆ ಮತ್ತು ಸಂಸ್ಕೃತಿಯ ಮೇಲೆ ದೊಡ್ಡ ಪ್ರಭಾವ ಬೀರಿತು. #ಬಂಟು_ವಲಸೆ  (Bantu Migration): ಇದು ಆಫ್ರಿಕಾ ಖಂಡದಲ್ಲಿ ನಡೆದ ಅತಿ ದೊಡ್ಡ ವಲಸೆ, ಪಶ್ಚಿಮ ಆಫ್ರಿಕಾದಿಂದ ಬಂಟು ಭಾಷೆ ಮಾತನಾಡುವ ಜನರು ಇಡೀ ಮಧ್ಯ ಮತ್ತು ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋಗಿ ಅಲ್ಲಿ ಕೃಷಿ ಮತ್ತು ಕಬ್ಬಿಣದ ಬಳಕೆಯನ್ನು...

4209.ಪರಿಸರ_ಹರಿವು_Environment_Flow.ಕಸ್ತೂರಿರಂಗನ್_ವರದಿ_ಮತ್ತು_ಗಾಡ್ಗೀಳ್_ವರದಿಯಲ್ಲಿಪಶ್ಚಿಮ_ಘಟ್ಟದ_ನದಿಗಳನ್ನ_ಜೀವಂತವಾಗಿಡಲು_ಶಿಪಾರಸ್ಸುಗಳು.

ಪರಿಸರ_ಹರಿವು_Environment_Flow. ಕಸ್ತೂರಿರಂಗನ್_ವರದಿ_ಮತ್ತು_ಗಾಡ್ಗೀಳ್_ವರದಿಯಲ್ಲಿ ಪಶ್ಚಿಮ_ಘಟ್ಟದ_ನದಿಗಳನ್ನ_ಜೀವಂತವಾಗಿಡಲು_ಶಿಪಾರಸ್ಸುಗಳು.   ರಾಜ್ಯ #ಸರ್ಕಾರ ಕಸ್ತೂರಿ ರಂಗನ್ ವರದಿಯ 7 ಕರಡು ಅಧಿಸೂಚನೆ ದಿನಾಂಕ 22 - ಸೆಪ್ಟೆಂಬರ್ -2026ರಂದು #ತಿರಸ್ಕರಿಸಿದೆ.  ಕಸ್ತೂರಿ ರಂಗನ್ ವರದಿ ಸಂಪೂರ್ಣ ರದ್ದು ಮಾಡಬೇಕು ಎಂಬ ಕೂಗು ರಾಜಕೀಯ ಪಕ್ಷಗಳ ಪಾದ ಯಾತ್ರೆ ಮತ್ತು ಪ್ರತಿಭಟನಾ ಸಭೆಗಳಲ್ಲಿ ಕೇಳಿ ಬಂದಿತ್ತು ಆದರೆ ಪ್ರತಿಭಟನೆಗಳ #ಆಯೋಜಕರು ಕಸ್ತೂರಿ ರಂಗನ್ ವರದಿಗೆ ನಮ್ಮ ಸಂಪೂರ್ಣ ವಿರೋದವಿಲ್ಲ ಆದರೆ ಪಶ್ಚಿಮ ಘಟ್ಟದ ನಿವಾಸಿಗಳ ಕೃಷಿಕರ ಹಿತ ಕಾಪಾಡಲು ವರದಿಯಲ್ಲಿನ ಕೆಲ ಮಾರ್ಪಾಡುಗಳು ಆಗ ಬೇಕೆಂದು ಒತ್ತಾಯಿಸಿದ್ದರು.   ಕಸ್ತೂರಿ ರಂಗನ್ ವರದಿ ಸಂಪೂರ್ಣ ಕನ್ನಡದಲ್ಲಿ ತರ್ಜಿಮೆ ಮಾಡಿ ಈ ಪ್ರದೇಶದ ಜನತೆಯ ಕೈಗೆ ಇಡದೇ ಇರುವುದರಿಂದ ಕಸ್ತೂರಿ ರಂಗನ್ ವರದಿ ಕತ್ತಲಲ್ಲಿಟ್ಟು ಚರ್ಚೆ ಮಾಡಿದಂತೆ ಆಗಿದೆ.   ಈ ಕೆಳಗಿನ ಪಶ್ಚಿಮ ಘಟ್ಟದನದಿಗಳನ್ನ ಜೀವಂತವಾಗಿಡಲು ಈ ವರದಿಯ ಶಿಪಾರಸ್ಸು ಏನಿದೆ ಓದಿ ನೋಡಿ ಅಭಿಪ್ರಾಯ ವ್ಯಕ್ತಪಡಿಸಲು ವಿನಂತಿ. #ಕಸ್ತೂರಿರಂಗನ್ ವರದಿಯಲ್ಲಿ ಹಾಗೂ ಅದಕ್ಕೂ ಮುನ್ನ ಬಂದ #ಮಾಧವ್_ಗಾಡ್ಗೀಳ್ ವರದಿಯಲ್ಲಿ ಪಶ್ಚಿಮ ಘಟ್ಟಗಳ ನದಿಗಳ ಸಂರಕ್ಷಣೆಗಾಗಿ ‘ಪರಿಸರ ಹರಿವು’ (Environmental Flow ಅಥವಾ E-Flow) ಕುರಿತು ಈ ಪ್ರಮುಖ ಶಿಫಾರಸು ಮಾಡಲಾಗಿದೆ. ​ಈ ನಿಯಮದಲ್ಲಿ ಪಶ್ಚಿಮ ...

4207.ಹೀಗೂ_ಉಂಟಾ ...ಆಸ್ಪತ್ರೆಗಳಲ್ಲಿ_ರೋಗಿಗಳಿಗೆ_ಬ್ರಾಂಡಿ_ನೀಡುವ_ಕಾಲ_ಇತ್ತು ...ಈಗ_ಹೇಳಿದರೆ_ನಂಬುವುದಿಲ್ಲ_ಯಾರು.

ಹೀಗೂ_ಉಂಟಾ ... ಆಸ್ಪತ್ರೆಗಳಲ್ಲಿ_ರೋಗಿಗಳಿಗೆ_ಬ್ರಾಂಡಿ_ನೀಡುವ_ಕಾಲ_ಇತ್ತು ... ಈಗ_ಹೇಳಿದರೆ_ನಂಬುವುದಿಲ್ಲ_ಯಾರು.  ಬ್ರಿಟಿಷರ ಆಡಳಿತಾವಧಿಯಲ್ಲಿ ಮತ್ತು ಸ್ವಾತಂತ್ರ್ಯಾನಂತರದ ಆರಂಭಿಕ ದಶಕಗಳಲ್ಲಿ ಭಾರತದ ಸರ್ಕಾರಿ ಆಸ್ಪತ್ರೆಗಳು ಹಾಗೂ ಮಿಲಿಟರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಆಲ್ಕೋಹಾಲ್ (ಮುಖ್ಯವಾಗಿ ಬ್ರಾಂಡಿ ಅಥವಾ ರಮ್) ಅನ್ನು ಅಧಿಕೃತವಾಗಿ ನೀಡುವ ಪದ್ಧತಿ ಇತ್ತು. ​  ಅತಿಯಾದ ಚಳಿ, ಶ್ವಾಸಕೋಶದ ಸೋಂಕುಗಳು (ನ್ಯುಮೋನಿಯಾ), ಶಸ್ತ್ರಚಿಕಿತ್ಸೆಯ ನಂತರದ ತೀವ್ರ ನಡುಕ, ಶಾಕ್  ಅಥವಾ ರಕ್ತದೊತ್ತಡ ತೀವ್ರವಾಗಿ ಕುಸಿದ ಸಂದರ್ಭಗಳಲ್ಲಿ ರಕ್ತನಾಳಗಳನ್ನು ವಿಸ್ತರಿಸಿ ರೋಗಿಯ ದೇಹವನ್ನು ಬೆಚ್ಚಗಾಗಿಸಲು 'ಸ್ಟಿಮ್ಯುಲೆಂಟ್' ಆಗಿ ಬಳಸಲಾಗುತ್ತಿತ್ತು. ​ ಸಾಮಾನ್ಯವಾಗಿ ವೈದ್ಯರ ಚೀಟಿಯಲ್ಲಿ  30 mL ನಿಂದ 60 mL ವರೆಗೆ "Medicinal Brandy" ಎಂದು ನಮೂದಿಸಲಾಗುತ್ತಿತ್ತು ಇದನ್ನು ಔಷಧಿಯಂತೆಯೇ ಅಳತೆ ಮಾಡಿ ರೋಗಿಗಳಿಗೆ ಕುಡಿಸಲಾಗುತ್ತಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಒಳರೋಗಿಗಳಿಗೆ  ಇದನ್ನು ಸಂಪೂರ್ಣವಾಗಿ ಉಚಿತವಾಗಿಯೇ ನೀಡಲಾಗುತ್ತಿತ್ತು. ಆ ಕಾಲದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾತ್ರೆ, ಇಂಜೆಕ್ಷನ್‌ಗಳನ್ನು ಹೇಗೆ ಉಚಿತವಾಗಿ ನೀಡುತ್ತಿದ್ದರೋ, ಹಾಗೆಯೇ ಇದನ್ನು ಆಸ್ಪತ್ರೆಯ ವೆಚ್ಚದಲ್ಲೇ ಔಷಧಿಯಾಗಿ Medicinal Brandy ಪೂರೈಸಲಾಗುತ್ತಿತ್ತು. ರೋ...

4206.ಪುನಿತ್_ಅರಸ್_ನನ್ನ_ಅತಿಥಿ

ಪುನಿತ್_ಅರಸ್_ನನ್ನ_ಅತಿಥಿ   ಬಹುಮುಖ ಆಸಕ್ತಿಯ ಪೇಸ್ ಬುಕ್ ಗೆಳೆಯರಾದ ಪುನಿತ್ ಅರಸ್ ಅವರ ಬೇಟಿ ಸಾಧ್ಯವೇ ಆಗಿರಲಿಲ್ಲ ಆದರೆ ಗುರುವಾರ 17- ಸೆಪ್ಟೆಂಬರ್-2026ರಲ್ಲಿ ಅವರು ನನ್ನ ಅತಿಥಿ ಆಗಿ ನನ್ನ ಆಫೀಸಿನಲ್ಲಿ ಬೇಟಿ ಆಗಿದ್ದು ಖುಷಿಯ ವಿಷಯ ಇವರ ಈ ಪ್ರವಾಸದಲ್ಲಿ ಇವರ ಜೊತೆ ಇತಿಹಾಸ ಆಸಕ್ತರಾದ ವೈದ್ಯಕೀಯ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಮಹಿಳಾ ವೈದ್ಯರೂ ಬಂದಿದ್ದರು ಅವರು ಕೆಳದಿ ರಾಜ ವೆಂಕಟಪ್ಟ ನಾಯಕರು ಮತ್ತು ಚಂಪಕ ರಾಣಿ ಬಗ್ಗೆ ನಾನು ಬರೆದ ಕಾದಂಬರಿ ಬೇಕೆಂದು ಪಡೆದರು.   ಪುನೀತ್  ಸ್ವಂತ ಊರು ಅರಸಿಕೆರೆ, ಇವರ ತಾಯಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದಾರೆ ಅವರ ಜೊತೆ ಪುನಿತ್ ಇದ್ದಾರೆ.   MBBS ವ್ಯಾಸಂಗ ಮಾಡುವಾಗಲೇ ಕೆಲವು ವಿಚಾರಗಳಿಂದ ಪ್ರಭಾವಿತರಾಗಿ ಓದಿನಿಂದ ದೂರ ಸಾಗಿದ್ದವರು ಪುನಃ ವ್ಯಾಸಂಗ ಮುಂದುವರಿಸಿದ್ದಾರೆ.    ಅಡುಗೆ, ಛಾಯಾಗ್ರಹಣ, ಡ್ರೈವಿಂಗ್, ಸೈಕ್ಲಿಂಗ್, ಪ್ರವಾಸ, ಇತಿಹಾಸ ಸಂಶೋಧನೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಸದಾ ಕ್ರಿಯಾಶೀಲರಾಗಿದ್ದಾರೆ.   ಇವರ ಅಡುಗೆಯ ಪೇಸ್ ಬುಕ್ ಲೇಖನಗಳಿಂದ ನಾನು ಇವರ ಅಭಿಮಾನಿ ಆಗಿದ್ದೇನೆ.    ಅತ್ಯುತ್ತಮ ಸೈಕ್ಲಿಸ್ಟ್ ಆಗಿರುವ ಪುನಿತ್ ದೂರ ದೂರದ ಸ್ಥಳಗಳಿಗೆ ತಮ್ಮ ದುಬಾರಿ ಸೈಕಲ್ ನಲ್ಲಿ ಸವಾರಿ ಮಾಡುತ್ತಾರೆ.    ಶಿವಮೊಗ್ಗ ಜಿಲ್ಲೆಯ ಎ...

4205.ಭಾಗ_24 ಘಟ್ಟಕ್ಕೆ_ಕರಾವಳಿಗರ_ವಲಸೆ.ಹರಿಕಥೆ_ಯಕ್ಷಗಾನದಲ್ಲಿ_ವಲಸೆ_ಪ್ರಸಂಗ.

ಭಾಗ_24 ಘಟ್ಟಕ್ಕೆ_ಕರಾವಳಿಗರ_ವಲಸೆ. ಹರಿಕಥೆ_ಯಕ್ಷಗಾನದಲ್ಲಿ_ವಲಸೆ_ಪ್ರಸಂಗ.  ಯಕ್ಷಗಾನದಂತೆಯೇ ಕರಾವಳಿಯ ಮತ್ತೊಂದು ಪ್ರಭಾವಶಾಲಿ ಕಲಾಪ್ರಕಾರವಾದ #ಹರಿಕಥೆ (ಕೀರ್ತನೆ) ಯಲ್ಲಿಯೂ ಕರಾವಳಿ ಜನರ ವಲಸೆಯ ಉಲ್ಲೇಖಗಳು ಅತ್ಯಂತ ಮಾರ್ಮಿಕವಾಗಿ ಮೂಡಿಬಂದಿವೆ.    ಹರಿಕಥೆಯು ಕೇವಲ ಪುರಾಣ ಕಥೆಗಳನ್ನು ಹೇಳುವುದಕ್ಕೆ ಸೀಮಿತವಾಗಿರದೆ ಕೀರ್ತನಕಾರರ (ದಾಸರ) ಸಮಯಪ್ರಜ್ಞೆ ಮತ್ತು ಲೌಕಿಕ ಜ್ಞಾನದ ಮೂಲಕ ಸಮಕಾಲೀನ ಸಮಾಜಕ್ಕೆ ಕನ್ನಡಿ ಹಿಡಿಯುತ್ತದೆ.   ​ಕರಾವಳಿಯ ಹರಿಕಥೆಗಳಲ್ಲಿ #ಮುಂಬೈ, #ಗಲ್ಫ್ ಹಾಗೂ ಇತ್ತೀಚಿನ #ಬೆಂಗಳೂರು ವಲಸೆಯ ಚಿತ್ರಣ ಹೇಗೆ ಮೂಡಿಬರುತ್ತದೆ ನೋಡಿ... ​      ಲೌಕಿಕ ವರ್ಣನೆಯಲ್ಲಿ ಮುಂಬೈ ವಲಸೆಯ ಕಷ್ಟಗಳು ​ಹರಿಕಥೆಯಲ್ಲಿ ಪುರಾಣದ ಕಥೆಗಳನ್ನು ಹೇಳುವಾಗ ಮಧ್ಯೆ ಮಧ್ಯೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ಇಂದಿನ ಉದಾಹರಣೆಗಳನ್ನು (ದೃಷ್ಟಾಂತಗಳನ್ನು) ನೀಡಲಾಗುತ್ತದೆ.     ಕರಾವಳಿಯ ಕೀರ್ತನಕಾರರು ಮುಂಬೈ ವಲಸೆಯನ್ನು ಹೆಚ್ಚಾಗಿ ಭವಬಂಧನ ಅಥವಾ ಕಷ್ಟದ ಬದುಕಿಗೆ ಹೋಲಿಸುತ್ತಾರೆ. ​ಮುಂಬೈ ಹೋಟೆಲ್ ಚಾಕರಿ ಮತ್ತು ಸಂಸಾರ ಚಕ್ರವನ್ನು ಸಂಸಾರದ ಜಂಜಾಟವನ್ನು ವಿವರಿಸುವಾಗ, "ಊರಿನಲ್ಲಿ ನೆಮ್ಮದಿಯಾಗಿರದೆ ಹೊಟ್ಟೆಪಾಡಿಗಾಗಿ ಬಾಂಬೆಗೆ ಹೋಗಿ, ಅಲ್ಲಿನ ಶೆಟ್ಟಿ ಹೋಟೆಲ್‌ಗಳಲ್ಲಿ ಹಗಲಿರುಳು ಕಪ್- ಸಾಸ್ ತೊಳೆದು, ಲೋಕಲ್ ಟ್ರೈನ್‌ನಲ್ಲಿ ನೇತಾಡಿ, ಕಷ್ಟಪಟ್ಟು ಹಣ ಗಳ...

4204.ಪಶ್ಚಿಮ_ಘಟ್ಟಗಳ_ಅಳಿವು_ಉಳಿವು.ಕಸ್ತೂರಿ_ರಂಗನ್_ವರದಿಯ_ಸುತ್ತಲಿನ ಸುಳ್ಳು_ಮತ್ತು_ಸತ್ಯ'! ...

ಪಶ್ಚಿಮ_ಘಟ್ಟಗಳ_ಅಳಿವು_ಉಳಿವು. ಕಸ್ತೂರಿ_ರಂಗನ್_ವರದಿಯ_ಸುತ್ತಲಿನ  ಸುಳ್ಳು_ಮತ್ತು_ಸತ್ಯ'! ...   ಈ ಲೇಖನ #ನಾಗೇಶ_ಹೆಗಡೆ ಬರೆದು ಅವರ ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದನ್ನ ಇಲ್ಲಿ ಇನ್ನೊಮ್ಮೆ ಶೇರ್ ಮಾಡಿದ್ದೇನೆ.   ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಅಧಿವೇಶನ ನಡೆಸುವ ಹಿನ್ನೆಲೆಯಲ್ಲಿ ಎಲ್ಲರೂ ಈ ಲೇಖನ ಓದಬೇಕು ಮತ್ತು ಹೆಚ್ಚು ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಲಿ ಎಂಬ ಸದುದ್ದೇಶದಿಂದ.  ನಾಗೇಶ್ ಹೆಗಡೆ ಕನ್ನಡದ ಪ್ರಸಿದ್ಧ ವಿಜ್ಞಾನ ಬರಹಗಾರ, ಹಿರಿಯ ಪತ್ರಕರ್ತ ಮತ್ತು ಪರಿಸರವಾದಿ.   ಅವರ ಹಿನ್ನೆಲೆ ಫೆಬ್ರವರಿ 14, 1948 ರಂದು ಉತ್ತರ ಕನ್ನಡ ಜಿಲ್ಲೆಯ ಬಕ್ಕಮನೆಯಲ್ಲಿ ಜನನ, ಈಗ ಅವರಿಗೆ 78 ರ ಹರಯ.   ಅವರ ವಿದ್ಯಾಭ್ಯಾಸ ಖರಗ್‌ಪುರ ಐಐಟಿ (IIT Kharagpur) ಮತ್ತು ದೆಹಲಿಯ ಜೆಎನ್‌ಯು (JNU) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ.    ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಪರಿಸರ ಭೂವಿಜ್ಞಾನದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.    'ಪ್ರಜಾವಾಣಿ' ಹಾಗೂ 'ಸುಧಾ' ಪತ್ರಿಕೆಗಳಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದ್ದಾರೆ.   ಕ್ಲಿಷ್ಟಕರವಾದ ವಿಜ್ಞಾನ ಮತ್ತು ಪರಿಸರ ಸಂಬಂಧಿ ವಿಷಯಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆಯುವುದರಲ್ಲಿ...

4203.ಒಂದು_ಹಾಡು_ಸಾವಿರ_ಕಿಲೋಮೀಟರ್_ಪ್ರಯಾಣಕ್ಕೆ_ಕಾರಣವಾಯಿತು

ಒಂದು_ಹಾಡು_ಸಾವಿರ_ಕಿಲೋಮೀಟರ್_ಪ್ರಯಾಣಕ್ಕೆ_ಕಾರಣವಾಯಿತು. ಆ ಹಾಡು ಕೇಳಿದ ನಂತರ ಅಲ್ಲಿಗೆ ಹೋಗಲೇ ಬೇಕೆಂದು ನಿರ್ದರಿಸಿದ್ದೆ,ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಘತ್ತರಗಿಯ ಬಾಗಮ್ಮ ದೇವಾಲಯಕ್ಕೆ. ವಿಜಯನಗರ ಪತನದ ನಂತರ ಕೃಷ್ಣದೇವರಾಯರ ಕುಲದೇವತೆ ಇಲ್ಲಿಗೆ ಬಂದು ನೆಲೆಸಿದಳೆಂಬ ಸ್ಥಳಪುರಾಣ,ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಇಷ್ಟಾರ್ಥ ನೂರಕ್ಕೆ ನೂರು ಸಿದ್ಧಿ ಎಂಬ ನಂಬಿಕೆ.  ನಿತ್ಯ ಕನಿಷ್ಟ ಎರೆಡು ಸಾವಿರ ಭಕ್ತರಿಗೆ ದಾಸೋಹ ಇಲ್ಲಿ ದೇವರ ಅರ್ಚಕರು ಹಿಂದುಳಿದ ಮೀನುಗಾರ ಸಮೂದಾಯದ ಮಹಿಳೆಯರು.  ನಾನು ಈ ಚೌಡಿಕೆಯ ಪ್ರಕಾರದ ಸ್ಥಳ ಪುರಾಣದ ಹಾಡು ಒಂದು ಸಾವಿರಕ್ಕೂ ಹೆಚ್ಚು ಸಾರಿ ಕೇಳಿದ್ದೇನೆ, ಉತ್ತರ ಕರ್ನಾಟಕದ ಸೊಗಡಿನ ಕನ್ನಡದಲ್ಲಿ ತಮ್ಮದೇ ಸಂಪ್ರದಾಯಿಕ ವಾದ್ಯದೊಂದಿಗೆ ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಘತ್ತರಗ ಎಂಬ ಊರಿನ ಬಾಗಮ್ಮ ತಾಯಿಯ (ಭಾಗ್ಯವಂತೆ ದೇವಿಯ) ಸ್ಥಳ ಪುರಾಣದ ಕಥೆ ಹೇಳುವು ಹಾಡು ಇದು.  ವಿಜಯನಗರದ ಅರಸರ ಕುಲದೇವತೆ ಭಾಗ್ಯವತಿ ವಿಜಯನಗರದ ಸಿರಿ ಸಮೃದ್ಧಿಗೆ ಕಾರಣಳಾದವಳೆಂದು ಕೃಷ್ಣದೇವರಾಯರ ನಂತರ ಕೊನೆಯ ಅರಸ  ರಾಮರಾಯನು ಈ ದೇವಿಯ ವಚನ ಮಾನ್ಯ ಮಾಡದಾದನು ಇದರ ಪರಿಣಾಮ ವಿಜಯ ನಗರದ ಮಹಾ ಸಂಪತ್ತು ಕ್ಷೀಣಿಸ ತೊಡಗಿತ್ತು.   ಆ ಕಾಲದಲ್ಲಿ ದೇವಿಯ ಕಡೆಗಾಣಿಸಿದ್ದರಿಂದ ದೇವಿ ತುಂಗಾ ಭದ್ರಾ ನದಿಗೆ ಸರ್ಪದ ರೂಪದಲ್ಲಿ ಹಾರಿ ನಂತರ ಪ್ರವಾಹದಲ್ಲಿ ಸಾಗಿ ಕಲಬುರ್ಗಿ...

4202.ಸಂಸದ_ರಾಘವೇಂದ್ರ_ಮಾತು_ಮಾತ್ರ_ಸಕಾಲಿಕವಾಗಿತ್ತು.ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯಲ್ಲಿ_ನಡೆದ_ಮುಖ್ಯಮಂತ್ರಿಗಳ_ಕಸ್ತೂರಿ_ರಂಗನ್_ವರದಿ_ಸಂವಾದ_ಸಭೆ.

ಸಂಸದ_ರಾಘವೇಂದ್ರ_ಮಾತು_ಮಾತ್ರ_ಸಕಾಲಿಕವಾಗಿತ್ತು. ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯಲ್ಲಿ_ನಡೆದ_ಮುಖ್ಯಮಂತ್ರಿಗಳ_ಕಸ್ತೂರಿ_ರಂಗನ್_ವರದಿ_ಸಂವಾದ_ಸಭೆ.   ತೀರ್ಥಹಳ್ಳಿಯ ಸಂವಾದದಲ್ಲಿ #ರಮೇಶ್_ಹೆಗ್ಡೆ, ರೈತ ಸಂಘದ #ರಾಜೇಂದ್ರ ಮತ್ತು #ಬಿ_ಆರ್_ಜಯಂತ್ ಮುಖ್ಯ ಮಂತ್ರಿಗಳ ಗಮನ ಸೆಳೆಯುವಂತೆ ವಿಚಾರಗಳ ಪ್ರಸ್ತಾವನೆ ಮಾಡಿದ್ದಾರೆ ಇವರಿಗೆ ಅವಕಾಶ ಕಲ್ಪಿಸಿದ್ದು ಸರಿಯಾದ ಆಯ್ಕೆ ಆಗಿತ್ತು.    ಮುಖ್ಯಮಂತ್ರಿ #ಡಿ_ಕೆ_ಶಿವಕುಮಾರ್ ತೀರ್ಥಹಳ್ಳಿಯಲ್ಲಿ ಇವತ್ತು (19- ಸೆಪ್ಟೆಂಬರ್ - 2026 ಶನಿವಾರ) ನಡೆಸಿದ ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶದ ಗ್ರಾಮಗಳ ಸೇರ್ಪಡೆ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದ ಬಗ್ಗೆ ಇಡೀ ರಾಜ್ಯದಲ್ಲಿ ಕುತೂಹಲ ಮೂಡಿಸಿತ್ತು.   ಇದಕ್ಕಾಗಿಯೇ ಎರೆಡು ದಿನಗಳ ವಿಶೇಷ ವಿದಾನ ಸಭಾ ಸಮಾವೇಶ ಮುಖ್ಯಮಂತ್ರಿ ಹಮ್ಮಿಕೊಂಡಿದ್ದಾರೆ ಅದರ ಪೂರ್ವ ಬಾವಿ ಆಗಿ ಈ ಸಂವಾದಗಳು ಎಂದು ಸರ್ಕಾರ ಹೇಳಿದ್ದರೂ ಅಲ್ಲಿನ ಕಾಲ ಮಿತಿಯಲ್ಲಿ ಯಾವ ರೀತಿ ಸಂವಾದ ಸಾಧ್ಯ ಎಂಬ ಪ್ರಶ್ನೆ ಸಹಜ.    ಮುಖ್ಯಮಂತ್ರಿಗಳ ಆಪ್ತರಾದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ #ಆರ್_ಎಂ_ಮಂಜುನಾಥ_ಗೌಡರು ಹೊಸನಗರ - ಸಾಗರ ಮತ್ತು ತೀರ್ಥಹಳ್ಳಿಗಳಲ್ಲಿ ಅವರ ಸಹಕಾರಿ ಮಂಡಲಗಳ ಮೂಲಕ ಪಕ್ಷಾತೀತವಾಗಿವಾಗಿ ಪಾದ ಯಾತ್ರೆ ಮುಗಿಸಿದ್ದಾರೆ.   ಅವರ ಪ್ರಯತ್ನದಿಂದಲೇ ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿಗಳ ಈ ಸ...