Skip to main content

Posts

Blog number 1926. ಆಹಾರ ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಆಹಾರ ಕಲಬೆರಕೆಯ ಶಿವಮೊಗ್ಗ ಜಿಲ್ಲೆಯ ಹೈ ಪ್ರೊಪೈಲ್ ಕೇಸ್ ಹಳ್ಳ ಹಿಡಿದ ಘಟನೆ

#ಆಹಾರ_ಕಲಬೆರಕೆಯ_ಹೈಪ್ರೊಪೈಲ್_ಕೇಸ್ #ಸ್ವತಃ_ಆಹಾರಮಂತ್ರಿ_ಭಾಗವಹಿಸಿದ್ದ_ಜಿಲ್ಲಾ_ಪಂಚಾಯತ್_ಸಭೆಯಲ್ಲಿ_ಪ್ರಸ್ತಾವನೆ. #ಕೇಸ್_ದಾಖಲಿಸಲು_ಸೂಚಿಸಿದ_ಆಹಾರ_ಮಂತ್ರಿಗಳು #ರಾಜ್ಯದ_ಅನೇಕ_ಜಿಲ್ಲೆಯ_ಅಂಗನವಾಡಿಗೆ_ಕಲಬೆರಕೆ_ಎಣ್ಣೆ_ಸರಬರಾಜು #ಪ್ರಯೋಗಾಲಯದ_ಪರೀಕ್ಷೆಯಲ್ಲಿ_ಸಾಬೀತು. #ರಾಜಿ_ಪಂಚಾಯಿತಿಗೆ_ಬಂದವರಿಗೆ_ನನ್ನ_ಪ್ರಶ್ನೆ #ನಿಮ್ಮ_ಮಕ್ಕಳ_ಸರ್ಕಾರದ_ಅಂಗನವಾಡಿಗೆ_ಕಳಿಸುತ್ತೀರಾ #ನನ್ನ_ಮಕ್ಕಳನ್ನು_ಸರಕಾರಿ_ಅಂಗನವಾಡಿಯಲ್ಲೇ_ಓದಿಸಿದ್ದೆ #ದಾಖಲಾದ_ಕೇಸ್_ಏನಾಯಿತು?     ನಮ್ಮ ಜಿಲ್ಲೆಯವರೇ ಆದ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳು ಆಗ ಜಿ.ಬಸವಣ್ಯಪ್ಪನವರು ಅವರ ಸಂಪುಟದಲ್ಲಿ ಆಹಾರ ಸಚಿವರು ಮತ್ತು ಶಿವಮೊಗ್ಗ ಉಸ್ತುವಾರಿ ಸಚಿವರು ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ.    ಆಗೆಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುತ್ತಿದ್ದರು ಅಂತಹ ಒಂದು ಜಿಲ್ಲಾ ಪಂಚಾಯತ್ ಸಭೆ ಅಧ್ಯಕ್ಷರಾಗಿದ್ದ ಶ್ರೀಮತಿ ಬಲ್ಕೀಷ್ ಬಾನು ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿತ್ತು.    ಜೆ. ಹೆಚ್.ಪಟೇಲರ ಸಂಪುಟ ಸಭೆಯಲ್ಲಿ ಆಹಾರ ಕಲಬೆರಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಯ್ದೆಯಲ್ಲಿ ಕೆಲ ಬದಲಾವಣೆಗೆ ಆಹಾರ ಸಚಿವರು ಸಂಪುಟದ ಅನುಮೋದನೆ ಪಡೆದು ಕೆಲ ದಿನಗಳಾಗಿತ್ತು.    ನಾನು ಅವತ್ತಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಆಹಾರ ಕಲಬೆರಕೆ ನಿಯಂತ್ರಣ...

Blog number 1925. ಹದವಾಗಿ ಉಪ್ಪು ಬೆರೆಸಿ ಬೇಯಿಸಿದ ಸಿಹಿ ಗೆಣಸಿನ ಸ್ಟಾದ ಅರಿಯದವರಾರು?

#ಬೆಳಗಿನ_ಚಳಿಯಲ್ಲಿ_ವಾಕಿಂಗ್_ಮುಗಿಸಿ_ಬಂದಾಗ #ಬಿಸಿ_ಬಿಸಿ_ಬೇಯಿಸಿದ_ಗೆಣಸು #ಗೆಣಸಿನ_ಸ್ಟಾದ_ಅರೋಮ_ಆರೋಗ್ಯ_ಅರಿಯದವರಿಲ್ಲ. #ಕೆಂಪು_ಬಿಳಿ_ನಸುಹಳದಿ_ಬಣ್ಣದ_ಸಿಹಿ_ಗೆಣಸುಗಳು #ಕೇರಳದಿಂದ_ಮಹಾರಾಷ್ಟ್ರದ_ಕರಾವಳಿ_ಪ್ರದೇಶದಲ್ಲಿ_ಹೆಚ್ಚು_ಬೆಳೆಯುತ್ತಾರೆ. #ಕರಾವಳಿಯ_ಜಾತ್ರೆ_ಯಕ್ಷಗಾನದ_ಸ್ಥಳದಲ್ಲಿ_ಬೇಯಿಸಿದ_ಗೆಣಸು_ಮಾರಾಟದ_ಚಹಾ_ಅಂಗಡಿಗಳು #ಈಗಿಲ್ಲ_ಬೇಯಿಸಿದ_ಗೆಣಸು_ತಿನ್ನುವುದು_ಅವಮಾನವಾ? https://youtu.be/jM9fCCQrWfA?feature=shared    ಇವತ್ತು ಬೆಳಿಗಿನ ಚಳಿಯಲ್ಲಿ ವಾಕಿಂಗ್ ಮುಗಿಸಿ ಮನೆ ತಲುಪಿದ ನನಗೂ ಮತ್ತು ನನ್ನ ಶಂಭೂರಾಮನಿಗೂ ನಮಗಿಷ್ಟವಾದ ಹಬೆಯಾಡುತ್ತಿರುವ ಕೆಂಪು ಸಿಹಿ ಗೆಣಸು ನಮ್ಮನ್ನು ಕಾಯುತ್ತಿತ್ತು.    ನನಗೆ ಗೆಣಸು ಎಂದರೆ ಪಂಚ ಪ್ರಾಣ, ಹದವಾಗಿ ಉಪ್ಪು ಸೇರಿಸಿ ಬೇಯಿಸಿದ ಸಿಹಿ ಗೆಣಸು ತಿನ್ನುತ್ತಾ ಜೊತೆಗೆ ಎರೆಡೆರುಡು ದೊಡ್ಡ ಲೋಟದ ಚಹ ಅಥವ ಕಾಫಿ ಹೀರುವುದು ಒಂದು ರೀತಿ ಸ್ವರ್ಗ ಲೋಕ ಅನುಭವಿಸಿದಂತೆ.   ಸಿಪ್ಪೆ ತೆಗೆದು ತೊಳೆದು ಹಾಗೆ ಹಸಿಯಾಗಿ ಗೆಣಸು ತಿನ್ನುವುದೂ ನನಗೆ ತುಂಬಾ ಇಷ್ಟ.    ಸಿಹಿ ಗೆಣಸಿನಲ್ಲಿ ನೂರಾರು ತಳಿಗಳಿದೆ, ಬಣ್ಣ ಮತ್ತು ಆಕೃತಿ ಅದರ ಗಾತ್ರಗಳೂ ಬಿನ್ನ ವಿಭಿನ್ನವಾಗಿರುತ್ತದೆ.   ಪಶ್ಚಿಮದ ಕರಾವಳಿಯ ಕೇರಳದಿಂದ ಮಹಾರಾಷ್ಟ್ರದ ರತ್ನಗಿರಿವರೆಗೆ ವಿವಿಧ ರುಚಿಯ ಸುವಾಸನೆಯ ಬಣ್ಣದ ಗೆಣಸುಗಳನ್ನು ಅಲ್ಲಿನ ಮರಳು...

Blog number 1924. ಶಿವಮೊಗ್ಗ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಆ ಹುಣಸಗೋಡು ಬ್ಲಾಸ್ಟ್ ಗೆ ಇವತ್ತಿಗೆ ಮೂರು ವರ್ಷ.

#ಇಡೀ_ಶಿವಮೊಗ್ಗ_ಜಿಲ್ಲೆ_ಬೆಚ್ಚಿ_ಬಿದ್ದ_ಹುಣಸಗೋಡು_ಬ್ಲಾಸ್ಟ್. #ಮೊನ್ನೆಗೆ_ಮೂರು_ವಷ೯_ಆಯಿತು. #ಸತ್ತವರು_ಯಾರು_ಪರಿಹಾರ_ಸಿಕ್ಕಿತಾ? #ಈ_ದುರಂತದಿಂದ_ಕಲಿತಿದ್ದೇನು? #ಶಿವಮೊಗ್ಗ_ಹುಣಸೋಡು_ಬ್ಲಾಸ್ಟ್_ವಾಸ್ತವಗಳು #ಪ್ರದಾನಿ_ಮೋದಿ_ರಾಹುಲ್_ಗಾಂದಿ_ಸಂತಾಪ_ಮಾಜಿ_ಮುಖ್ಯಮಂತ್ರಿ_ಸಿದ್ದರಾಮಯ್ಯ_ಖಂಡನೆ_ಮುಖ್ಯಮಂತ್ರಿ_ಯಡೂರಪ್ಪ_ಸ್ಥಳಕ್ಕೆ. #ಅವತ್ತಿನ_ಘಟನೆ_ಬಗ್ಗೆ_ಇವತ್ತಿಗೆ_ಮೂರು_ವರ್ಷದ_ಹಿಂದಿನ_ನನ್ನ_ಲೇಖನ_ಇನ್ನೊಮ್ಮ     ಹೀಗೆ ಗುರುವಾರ ರಾತ್ರಿ 10 ರಿಂದ 10- 20 PM (ದಿನಾಂಕ 21- ಜನವರಿ 2021) ಕೇವಲ 20 ನಿಮಿಷ ಅವಧಿಯಲ್ಲಿ ಆಗಿರುವ ಘೋರ ದುರಂತದ ಸ್ಪೋಟದಿಂದ ಈ ಕ್ಷಣದವರೆಗೂ ಈ ಘಟನೆ ಬಗ್ಗೆ ಅನೇಕ ವರದಿ ವಿಶ್ಲೇಷಣೆಗಳು ಬರುತ್ತಲೇ ಇದೆ.    ಆಗಿರುವ ಅನಾಹುತ, ನಷ್ಟ,  ಜೀವಹಾನಿಗೆ ಪರಿಹಾರ ಏನು? ಕಾರಣರಾರು? ಶಿಕ್ಷೆ ಏನು? ಎನ್ನುವ ಚಚೆ೯ ಬದಿಗಿಟ್ಟು ಇಡೀ ಪ್ರಕರಣ ನೋಡುವ ಅನಿವಾಯ೯ತೆ ಇದೆ.    ಗ್ರೌಂಡ್ ರಿಯಾಲಿಟಿ ವರದಿ,ಘಟನೆ ಸಮೀಪದ ವಾಸಿ ಆಗಿರುವ ಬರಹಗಾರರಾದ ರಾಜೇಂದ್ರ ಬುರುಡಿಗಟ್ಟೆ ಅವರ ಲೇಖನದಿಂದ ಪೇಸ್ ಬುಕ್ ಓದುಗರಿಗೆ ಗೊತ್ತಾಯಿತು.   ಘಟನೆ ಸ್ಥಳದಿಂದ 3 ಕೀ ಮಿ ದೂರದ ಅಬ್ಬಲಗೆರೆ SR ಪೆಟ್ರೋಲ್ ಪಂಪ್ ಮಾಲಿಕರಾದ ನಿವೃತ್ತ ಕೃಷಿ ಬ್ಯಾಂಕ್ ನ  ಜಿಲ್ಲಾ ವ್ಯವಸ್ಥಾಪಕರಾದ ಹಂದಿಗೋಳ್ ಸಾಹೇಬರು " ಅವತ್ತು ರಾತ್ರಿ ಸಣ್ಣ ಬ್ಲಾಸ್ಟ್ ಶಬ್ದ ನ...

Blog number 1923. ಅಯೋಧ್ಯಯಲ್ಲಿ ದಿನಾಂಕ 22 ಜನವರಿ 2024ರಂದು ಬಾಲರಾಮನ ವಿಗ್ರಹದ ಪ್ರತಿಷ್ಟಾಪನೆಯ ದಿನ ಭಾರತ ದೇಶವನ್ನ ಭ್ರಷ್ಟಾಚಾರ ಮುಕ್ತ ರಾಮರಾಜ್ಯವಾಗಿ ನಿರ್ಮಾಣ ಮಾಡುವ ಸಂಕಲ್ಪ ದಿನವಾಗಿ ಆಚರಿಸಲಿ

#ಚರ್ಚೆಯ_ಮುನ್ನಲೆಗೆ_ಬಂದ_ರಾಮರಾಜ್ಯ. #ಮಹಾತ್ಮಾಗಾಂಧೀಜಿ_1921ರಲ್ಲಿ_ಅಯೋಧ್ಯೆಗೆ_ಬೇಟಿ_ನೀಡಿದ್ದರು. #ನವಜೀವನ್_ಪತ್ರಿಕೆಯಲ್ಲಿ_ದಾಖಲಿಸಿದ್ದಾರೆ #ಹಿಂದ್_ಸ್ಟರಾಜ್_ಪತ್ರಿಕೆಯಲ್ಲಿ_ರಾಮರಾಜ್ಯದ_ಬಗ್ಗೆ_ಬರೆದಿದ್ದಾರೆ. #ಇಂದಿನ_ಯುವ_ಜನಾಂಗ_ಭ್ರಷ್ಟಾಚಾರ_ಮುಕ್ತ_ಭಾರತ_ನಿರ್ಮಾಣಕ್ಕೆ_ಮುಂದಡಿ_ಇಡಲಿ #ಬಾಲರಾಮನನ್ನ_ಅಯೋಧ್ಯಯಲ್ಲಿ_ಪ್ರತಿಷ್ಟಾಪನೆ_ಮಾಡಿದ_ದಿನವೇ_ರಾಮರಾಜ್ಯ_ಸಂಕಲ್ಪ_ದಿನವಾಗಲಿ.    ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ ಬಾಲ ರಾಮನ ವಿಗ್ರಹದ ಪ್ರತಿಷ್ಟಾಪನೆ ನಾಳೆ 22- ಜನವರಿ- 2024 ರ ಸೋಮವಾರ ನಡೆಯುವ ಸುಸಂದರ್ಭದಲ್ಲಿ ಭಾರತೀಯರ ಮನಸ್ಸಿನಲ್ಲಿ ರಾಮ ರಾಜ್ಯದ ಚರ್ಚೆ ಮುನ್ನಲೆಗೆ ಬರುತ್ತಿರುವುದು ತಪ್ಪೇನಲ್ಲ.    ಇವತ್ತು ಭಾರತ ದೇಶದ ಸರ್ಕಾರದ ಆದಾಯ ಸಮರ್ಪಕ ವಿನಿಯೋಗ ಆಗುತ್ತಿದೆಯಾ? ಸರ್ಕಾರಿ ಉದ್ಯೋಗಗಳು ಅರ್ಹರಿಗೆ ದೊರೆಯುತ್ತಿದೆಯಾ? ಸ್ವಾತಂತ್ರ್ಯ ಬಂದು 75 ವರ್ಷದಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆಯಾ? ಬಡವರಿಗೆ ಇಂಜಿನಿಯರಿಂಗ್ ವೈದ್ಯಕೀಯ ಶಿಕ್ಷಣಗಳು ಸುಲಭವಾ? ಊಚಿತ ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸಿಗುತ್ತಿದೆಯಾ? ಜನಸಾಮಾನ್ಯರಿಗೆ ನ್ಯಾಯ ಸುಲಭವಾ?....ಇಂತಹ ನೂರಾರು ಪ್ರಶ್ನೆಗಳು ಭಾರತೀಯ ಯುವ ಜನತೆಯ ಮನಸ್ಸಿನಲ್ಲಿ ಸುಪ್ತವಾಗಿ ಉಳಿದ ಪ್ರಶ್ನೆಗಳು.   ಸಾವಿರಾರು ಕೋಟಿ ಹಣ ರಾಮಮಂದಿರ ನಿರ್ಮಾಣಕ್ಕೆ ಹರಿದು ಬಂದಿರುವ ಹಿಂದಿನ ಉದ್ದೇಶವೇ ರಾಮ ರಾಜ್ಯದಂತ ಆಡಳ...

Blog number 1922. ನಮ್ಮ ಸಂಸ್ಥೆಯ ನೆಚ್ಚಿನ ಆಡಿಟರ್ ರವೀಶರಿಗೆ ದುಃಖ ತಡೆಯುವ ಶಕ್ತಿ ದೇವರು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

#ನಮ್ಮ_ಸಂಸ್ಥೆಯ_ನೆಚ್ಚಿನ_ಆಡಿಟರ್_ಶಿವಮೊಗ್ಗದ_ರವೀಶ್ #ಇವರಿಗೆ_ದುಃಖ_ತಡೆಯುವ_ಶಕ್ತಿ_ದೇವರು_ದಯಪಾಲಿಸಲಿ.    ಸಾಗರದಲ್ಲೇ ಓದಿ ಶಿವಮೊಗ್ಗದಲ್ಲಿ ದುರ್ಗಿಗುಡಿಯ ಶನೀಶ್ವರ ದೇವಾಲಯದ ಹಿಂಬಾಗದ ಸಹಕಾರಿ ಭವನದ ಮೊದಲ ಮಹಡಿಯಲ್ಲಿ ತಮ್ಮ ಆಡಿಟರ್ ಕಛೇರಿಯಿಂದ ಕಾರ್ಯನಿರ್ವಹಿಸುವ ಆಡಿಟರ್ ರವೀಶ್ ಕಳೆದ 12 ವರ್ಷಗಳಿಂದ ನಮ್ಮ ಸಂಸ್ಥೆಯ ಆಡಿಟರ್ ಆಗಿದ್ದಾರೆ.   ತುಂಬಾ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾ ಮತ್ತು ಉಪಯುಕ್ತ ಮಾಹಿತಿ ಸಲಹೆ ನೀಡುವ ಹಸನ್ಮುಖಿಗಳು.   ಸಾಗರ ಮಾರ್ಗವಾಗಿ ಪ್ರಯಾಣ ಮಾಡುವಾಗ ನನ್ನ ಕಛೇರಿಗೆ ಒಂದು ಬೇಟಿ ಇರುತ್ತದೆ ಅನೇಕ ಬಾರಿ ಪತ್ನಿ ಮತ್ತು ಇಬ್ಬರು ಪುತ್ರಿಯರ ಜೊತೆ ನಮ್ಮ ಕಛೇರಿಗೆ ಬಂದಿದ್ದ ನೆನಪುಗಳು.    ಇವತ್ತು ಬೆಳಿಗ್ಗೆ ಪತ್ರಕರ್ತರಾದ ಶೃಂಗೇಶ್ ಫೋನ್ ನಲ್ಲಿ ತಿಳಿಸಿದ ಸುದ್ದಿ ಅನಿರಿಕ್ಷಿತವಾಗಿತ್ತು, ತಮ್ಮದೇ ಕಾರಿನಲ್ಲಿ ರವೀಶರ ಸಂಸಾರ ಚಿಕ್ಕಮಗಳೂರಿಗೆ ಹೋಗಿ ವಾಪಾಸು ಶಿವಮೊಗ್ಗಕ್ಕೆ ಬರುವಾಗ ಕಡೂರು ಸಮೀಪ ಮರಕ್ಕೆ ಡಿಕ್ಕಿಯಾಗಿ ಇಬ್ಬರೂ ಆಸ್ಪತ್ರೆಯಲ್ಲಿದ್ದರು ಇವತ್ತು ಬೆಳಿಗ್ಗೆ ರವೀಶರ ಪತ್ನಿ ಇಹಲೋಕ ತ್ಯಜಿಸಿದ್ದಾರೆ ಎಂದು.   ಇಬ್ಬರು ತುಂಬಾ ಚಿಕ್ಕ ಹೆಣ್ಣು ಮಕ್ಕಳ ತೊರೆದು ಹೋದ ರವೀಶರ ಪತ್ನಿ ಚಿಕ್ಕ ವಯಸ್ಸಿನವರು ಅನೋನ್ಯವಾಗಿದ್ದ ಈ ಪುಟ್ಟ ಸಂಸಾರದಲ್ಲಿ ಈ ಅಪಘಾತ ಸಂಭವಿಸಿದೆ.   ಆಡಿಟರ್ ರವೀಶರಿಗೆ ಈ ದುಃಖ ತಡೆಯುವ ಶಕ್ತಿ ದೇ...

Blog number 1921. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ನಮ್ಮ ಸಾಗರ ತಾಲೂಕಿನ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಗೋಪಾಲ ನಾಗರಕಟ್ಟೆ,

#ನಾಡಿದ್ದು_ಸೋಮವಾರ_22_ಜನವರಿ_2024ರಂದು #ಅಯೋಧ್ಯಯಲ್ಲಿ_ಬಾಲರಾಮನ_ಪ್ರತಿಷ್ಟಾಪನೆ. #ಶಿಲ್ಪಿ_ಮೈಸೂರಿನ_ಅರುಣ್_ಯೋಗಿರಾಜ್ #ಶಿಲ್ಪ_ನಿರ್ಮಾಣದ_ಕೃಷ್ಣ_ಶಿಲೆ_ಮೈಸೂರಿನದ್ದು #ರಾಮಮಂದಿರ_ನಿರ್ಮಾಣದ_ಉಸ್ತುವಾರಿ_ಗೋಪಾಲ_ನಾಗರಕಟ್ಟೆ_ಸಾಗರದ_ಪಕ್ಕದ_ಸಿದ್ದಾಪುರದವರು.    ಸೋಮವಾರ 22 ಜನವರಿ 2024 ರಂದು ಆಯೋಧ್ಯಯಲ್ಲಿ ರಾಮ ಮಂದಿರದ ಸಂಕೀರ್ಣದ ನೆಲ ಅಂತಸ್ತಿನಲ್ಲಿ ಬಾಲ ರಾಮನ ಪ್ರತಿಷ್ಟಾಪನೆ ನೆರವೇರಲಿದೆ.  ಕಳೆದ ವರ್ಷ 9 ಫೆಬ್ರುವರಿ 2023 ರಲ್ಲಿ ಆಯೋಧ್ಯ ರಾಮ ಮಂದಿರ ನಿರ್ಮಾಣದ ದೇಣಿಗೆ ಒಂದು ಸಾವಿರ ಕೋಟಿ ದಾಟಿತ್ತು ನಂತರ 3200 ಕೋಟಿ ದೇಣಿಗೆ ಸಂಗ್ರಹವಾದ ನಂತರ ನಿರ್ಮಾಣದ ಕಾಮಗಾರಿ ಭರದಿಂದ ನಡೆದಿದೆ.   ಅಯೋಧ್ಯಯ ರಾಮ ಮಂದಿರ ನಿರ್ಮಾಣಕ್ಕೂ ನಮ್ಮ ರಾಜ್ಯಕ್ಕೂ ಅನೇಕ ರೀತಿಯ ಸಂಬಂದವಿದೆ.   ಅಯೋಧ್ಯ ರಾಮ ಮಂದಿರದ ಹಾಲಿ ಉಸ್ತುವಾರಿ ಆಗಿರುವ ಗೋಪಾಲ ನಾಗರ ಕಟ್ಟೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು ಅವರು ವಿಶ್ವ ಹಿಂದು ಪರಿಷತ್ ನ ರಾಷ್ಟ್ರೀಯ ಕೇಂದ್ರಿಯ ಕಾರ್ಯದರ್ಶಿ ಆಗಿದ್ದಾರೆ.    ಪ್ರತಿಷ್ಟಾಪನೆ ಆಗಲಿರುವ ಬಾಲರಾಮ ವಿಗ್ರಹದ ಕೃಷ್ಣಶಿಲೆ ಮೈಸೂರಿನಿಂದ ಆಯ್ಕೆ ಮಾಡಿರುವುದು ಮತ್ತು ಶಿಲ್ಪಿ ಕೂಡ ಮೈಸೂರಿನ ಅರುಣ್ ಯೋಗಿರಾಜ್.    ಕಳೆದ ವರ್ಷ ರಾಮ ಮಂದಿರದ ನಿರ್ಮಾಣದ ದೇಣಿಗೆ ಆಗಿ ನಮ್ಮ ಕುಟುಂಬದಿಂದ 1000, 10...

Blog number 1920. ಸುಸಜ್ಜಿತ ಡೈನಿಂಗ್ ಹಾಲ್ ನಿರ್ಮಿಸಿ ಅರ್ಪಿಸಿದ ಆನಂದಪುರಂ ಪಾರೆಸ್ಟರ್ ರುಕ್ಮಯ್ಯರ ಪುತ್ರ ಪ್ರಕಾಶ್ ಗೆ ಅಭಿನಂದನೆಗಳು

#ನಮ್ಮ_ಊರಿನ_ಕರ್ನಾಟಕ_ಪಬ್ಲಿಕ್_ಸ್ಕೂಲ್ #ಡೈನಿಂಗ್_ಹಾಲ್_ಸಮರ್ಪಿಸಿದ_ಪ್ರಕಾಶ್_ರುಕ್ಮಯ್ಯ. #ಅವರ_ಸಂಸ್ಥೆ_ರೇ_ಕ್ಯೂ_ಇಂಟರ್_ಕನೆಕ್ಷನ್_ಟೆಕ್ನಾಲಿಜೀಸ್_ಇಂಡಿಯಾ_ಪ್ರೈ_ಲಿ_ಕೊಡುಗೆ #ಈ_ಪದವಿ_ಪೂರ್ವ_ಕಾಲೇಜು_ವಿದ್ಯಾಮಂತ್ರಿಬದರಿನಾರಾಯಣಅಯ್ಯಂಗಾರ್_ಮತ್ತು_ಅವರ_ಸಹೋದರ_ವೆಂಕಟಚಲಅಯ್ಯಂಗಾರ್_ಕೊಡುಗೆ. #ಪ್ರಕಾಶ್_ಕೆಳದಿ_ಅರಸರಿಂದ_ನೇಮಕವಾಗಿದ್ದ_ಸುಂಕದ_ಮನೆತನದವರು.   ಆನಂದಪುರಂನ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಸುಸಜ್ಜಿತವಾದ ಡೈನಿಂಗ್ ಹಾಲ್ ದಾನಿಗಳಾದ ಪ್ರಕಾಶ್ ರುಕ್ಮಯ್ಯ ನಿರ್ಮಿಸಿ ಕೊಟ್ಟಿದ್ದಾರೆ ಅದು ಇವತ್ತು 19 ಜನವರಿ 2024ರ ಶುಕ್ರವಾರ ಸಮರ್ಪಣೆ ಮಾಡುವ ಸಮಾರಂಭ ನಡೆಯಲಿದೆ.    ದುಭಾರಿ ವೆಚ್ಚದಲ್ಲಿ ಡೈನಿಂಗ್ ಹಾಲ್  ನಿರ್ಮಿಸಿ ಕೊಟ್ಟಿರುವ ಪ್ರಕಾಶರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲಾ ಶಾಲೆಗಳಲ್ಲೂ ಡೈನಿಂಗ್ ಹಾಲ್ ನಿರ್ಮಾಣ ಮಾಡಲು ಅವರ ಈ ಕೆಲಸ ಪ್ರೇರಣೆ ಆಗಲಿದೆ.     ಪ್ರಕಾಶ್ ಆನಂದಪುರಂನ ಕನ್ನಡ ಸಂಘದವರಾದ ಕನ್ನಡ ಪ್ರಭ ಮತ್ತು ಉದಯವಾಣಿ ಪತ್ರಿಕೆ ವರದಿಗಾರ ಪತ್ರಕರ್ತ ಜಗನ್ನಾಥರ ಸಹೋದರ.    ಒಂದು ವಿಶೇಷ ಎಂದರೆ ಇವರ ಮನೆತನಕ್ಕೊಂದು ಇತಿಹಾಸದ ತಳಕು ಇದೆ ಅದೇನೆಂದರೆ ಸುಮಾರು ನಾಲ್ಕು ನೂರು ವರ್ಷಗಳಹಿಂದೆ ಆನಂದಪುರಂನ ಬನ್ನಿಮಂಟಪದ ಬಳಿಯ ಹತ್ತನೆ ಶತಮಾನದಿಂದ ಇದ್ದಿದ್ದ ಉತ್ತರ ಭಾರತದ ಗೋರಕಪ...