Skip to main content

ಅರಿಶಿಣದ ಎಲೆಯಲ್ಲಿ ಮಾಡುವ ಸಿಹಿ ಕಡುಬಿನ ರುಚಿ ಮತ್ತು ಅದರ ಘಮ ತಿಂದವರಿಗೆ ಗೊತ್ತು.

#ಅರಿಶಿಣದ_ಎಲೆಯ_ಸಿಹಿಕಡಬು

#ಇವತ್ತು_ನಮ್ಮ_ಮನೆಯಲ್ಲಿ
 
  ಶ್ರಾವಣ ಶುರುವಾಗಲು ಅರಿಶಿಣದ ಎಲೆ ಒಂದು ಹದದಲ್ಲಿ ಬೆಳೆಯಲು ಶುರುವಾಗುತ್ತದೆ ಆಗಲೇ ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಅರಿಶಿಣದ ಎಲೆ ಕಡುಬಿನ ಘಮ ಘಮ ಎಲ್ಲಾ ಮನೆಗಳಲ್ಲಿ.
  ಕಡುಬಿನ ಹದದ ಅಕ್ಕಿ ಅರಿಶಿಣದ ಎಲೆಯಲ್ಲಿ ತಟ್ಟಿ ಮದ್ಯದಲ್ಲಿ ತೆಂಗಿನ ತುರಿ ಮತ್ತು ಮಲೆನಾಡಿನ ನೀರು ಬೆಲ್ಲದ ಮಿಶ್ರಣದ ಹೂರಣ ತುಂಬಿ ಎಲೆ ಮಡಚಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ಆಯಿತು ರುಚಿ ರುಚಿಯಾದ ಅರಿಶಿಣದ ಎಲೆಯ ಘಮ ಘಮಿಸುವ ಅರಿಶಿಣದ ಎಲೆಯ ಕಡಬು ತಯಾರು ತುಪ್ಪದ ಜೊತೆ ಬಡಿಸಿದರೆ ಆಯಿತು.
  ಸಿಹಿ ಬೇಡದಿದ್ದರೆ ಸಾದಾ ಕಡಬೂ ಮಾಡಬಹುದು.

Comments