ಕಳಲೆ ಅಂದರೆ ಟೆಂಡರ್ ಬೊಂಬೂ ಶೂಟ್ಸ್ ನ ಉಪ್ಪಿನ ಕಾಯಿ ಸ್ವಾದವೇ ಬೇರೆ.
ಕಳಲೆ ಸುತ್ತಲ ಇರುವ ಕವಚ ತೆಗೆದು ಜಾನುವಾರು ತಿನ್ನದಂತೆ ಗೊಬ್ಬರದ ಗುಂಡಿಯಲ್ಲಿ ಹುಗಿಯಬೇಕು ಏಕೆಂದರೆ ಕತ್ತಿ ತಾಗಿಸಿದ ಕಳಲೆ ತಿಂದರೆ ಜಾನುವಾರು ಸಾಯುವುದು ಸತ್ಯ.
ನಂತರ ಇದನ್ನು ಬೇಯಿಸಿ ನೀರು ಬಸಿದು ಬಟ್ಟೆಯ ಮೇಲೆ ಹರಡಿ, ಒಣಗಿದ ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯಲ್ಲಿ ಹುರಿಯಬೇಕು ಮತ್ತು ನೀರಿನ ಅಂಶ ಇಲ್ಲ ಎಂಬುದು ಖಾತ್ರಿ ಮಾಡಿಕೊಳ್ಳಬೇಕು.
ಇದಕ್ಕೆ ಉಪ್ಪಿನ ಕಾಯಿ ಮಸಾಲ ಹಾಕಿ ಒಗ್ಗರಣೆ ನೀಡಿದರೆ ಪಶ್ಚಿಮ ಘಟ್ಟದ ತಾಜಾ ಕಳಲೆ ಉಪ್ಪಿನ ಕಾಯಿ ಸಿದ್ದ.
ಯಾವುದೇ ಪ್ರಿಸವೇ೯ಟಿವ್ ಬಳಸುವುದಿಲ್ಲ ಆದ್ದರಿಂದ ಒ0ದು ವಾರದಲ್ಲಿ ತಿಂದು ಖಾಲಿ ಮಾಡಬೇಕು ಇದರ ಶೆಲ್ಪ್ ಲೈಪ್ ಕಡಿಮೆ
Comments
Post a Comment