ಇದು ಮಲೆನಾಡಿನ ಅಕ್ಕಿ ಕಬ್ಬಿನ ಹಾಲು ಅಥವ ಬೆಲ್ಲದಲ್ಲಿ ಮಾಡಿದ ತೆಳುವಾಗಿ ಕಡೆದ ನೀರು ಹಿಟ್ಟು ಕಟ್ಟಿಗೆ ಒಲೆಯ ಮೇಲೆ ಮಗುಚಿರುವ ಮಡಕೆ ಮೇಲೆ ಎರೆಯುವ ಮತ್ತು ಹದವಾಗಿ ನೀರು ಸಂಪೂಣ೯ ಆರಿದ ನಂತರ ತೆಗೆದು ಆಕಾರಕ್ಕೆ ತಕ್ಕಂತೆ ಮಡಚಿ ಇಟ್ಟರೆ ಆಯಿತು ಇದೇ #ತೊಡದೇವು ಹಪ್ಪಳಕ್ಕಿಂತ ತೆಳು ಗರಿಗರಿಯಾದ ಸಿಹಿ ತಿಂಡಿ.
ಇದರ ಜೊತೆ ಬಾದಾಮಿ ಹಾಲು, ಸಕ್ಕರೆ ಪಾಕ, ಅಥವ ಹಾಲು ತುಪ್ಪದಲ್ಲಿ ವಿವಿದ ರೀತಿ ಸ್ವಾದದಲ್ಲಿ ತಿನ್ನ ಬಹುದೆಂದು ನನಗಾಗಿ ದೂರದ ಸಿಸಿ೯ಯಿಂದ ತಯಾರಿಸಿ ಕಳಿಸಿ ಕೊಟ್ಟ ಸಾಗರದ ಜೇನು ತಜ್ಞರಾದ ನಾಗೇಂದ್ರ ಸಾಗರ್ ತಿಳಿಸಿದ್ದಾರೆ.
ಇದನ್ನು ತಯಾರಿಸುವವರು ಸರಿಯಾದ ರೀತಿ ತಯಾರಿಸಿದರೆ ಹೆಚ್ಚು ದಿನ ಬಾಳಕೆ ಬರುತ್ತೆ ಅಂದಿದ್ದಾರೆ ಅದು ಸತ್ಯ ಕೂಡ ಯಾಕೆಂದರೆ ಕೆಲ ವರ್ಷದ ಹಿಂದೆ ನಾನು ಖರೀದಿಸಿದ್ದು ಕಮಟು ವಾಸನೆ ಬೀರುತ್ತಿದ್ದರಿಂದ ಬಳಸಿರಲಿಲ್ಲ ಮತ್ತು ತೊಡದೇವು ಅಂದರೆ ವಾಕರಿಕೆ ಉ೦ಟಾಗಿತ್ತು.
ಇದನ್ನು ಮಲೆನಾಡಿನ ಯಾವ ಪ್ರದೇಶದಲ್ಲಿ ಹೆಚ್ಚು ಬಳಸುತ್ತಾರೆ ಗೊತ್ತಿಲ್ಲ ನಮ್ಮ ಭಾಗದಲ್ಲಿ ಇದನ್ನು ತಯಾರಿಸುವವರೆ ಇಲ್ಲ.
Comments
Post a Comment