ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ
ಬೆಸ್ತರರಾಣಿ ಚಂಪಕ
(ಕೆಳದಿಯ ಖ್ಯಾತ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕಾ ರಾಣಿ ದುರಂತ ಪ್ರೇಮ ಕಥೆ )
ಸುಮಾರು 10 ವರ್ಷದ ಹಿಂದೆ ಮುದ್ರಿಸ ಬೇಕಾದ ಈ ಕಾದಂಬರಿ ಇವತ್ತು ಮಿತ್ರರಾದ ಹಾಯ್ ಬೆಂಗಳೂರು ವರದಿಗಾರ ಮತ್ತು ಶಿವಮೊಗ್ಗದ ಜನ ಹೋರಾಟ ಪತ್ರಿಕೆ ಸಂಪಾದಕರಾದ ಶೃಂಗೇಶ್ ರ ಸಹಕಾರದಿಂದ ಪ್ರಿಂಟ್ ಆಗಿ ರಕ್ಷಾ ಬಂದನದ ದಿನ ನನ್ನ ಕೈ ತಲುಪಿದೆ.
ನನ್ನ ಹಲವು ಅವತಾರ ನೋಡಿರುವ ಅವರದ್ದೇ ಸುಂದರ ಮುನ್ನುಡಿ ಇದೆ.
ಈ ಪುಸ್ತಕ ಆನಂದಪುರದ #ಮುರುಘರಾಜೇಂದ್ರ_ಸ್ವಾಮೀಜಿಗಳಿಗೆ, #ಆನಂದಪುರದ_ಕನ್ನಡ_ಸಂಘಕ್ಕೆ, #ಆನಂದಪುರದ_ಇತಿಹಾಸ_ಉಳಿಸಿ_ಅಭಿಯಾನ_ಸಮಿತಿಗೆ ಮತ್ತು #ಆನಂದಪುರದ_ಈಜು_ಮಿತ್ರರ_ಬಳಗಕ್ಕೆ_ಅಪಿ೯ಸಿದ್ದೇನೆ.
ಇದು ಆನಂದಪುರದ್ದೇ ಇತಿಹಾಸ ಮತ್ತು ಆನಂದಪುರದಲ್ಲೇ ಇರುವ ಚಂಪಕ ರಾಣಿ ಸ್ಮಾರಕದ ಕಥೆ ಆಗಿದೆ.
ಕೆಳದಿಯಿಂದ ಕೇರಳದ ಬೇಕಲ್ ವರೆಗೆ ಕೆಳದಿ ರಾಜ್ಯದ ಆಡಳಿತ, ಅವರ ಅವಧಿಯಲ್ಲಿ ನಿಮಿ೯ಸಿದ ಕೋಟೆ ಕೊತ್ತಳ, ದೇವಾಲಯ ಆ ಕಾಲದ ರೀತಿ ನೀತಿ ರಿವಾಜು, ಕೋಟಿ ಕಟ್ಟಿ ಕೋಟೆ ನಿವ೯ಹಿಸುವ ಕೋಟೆಗಾರ ಸಮಾಜ, ಕೊಡಚಾದ್ರಿಯ ತುದಿಯ ಮೂಲ ಮುಕಾಂಬಿಕೆಯ ಅಚ೯ಕರಾದ ಬಳೆಗಾರರು, ಪ್ರತಿ 12 ವರ್ಷಕ್ಕೆ ನಾಸಿಕ್ ನಿಂದ ನಡೆದು ಮಂಗಳೂರು ತಲುಪುವ ಬಾರಾಪಂಥ್, ಕೊಡಚಾದ್ರಿಯ ಪುರಾಣ ಪ್ರಸಿದ್ಧ ಉಕ್ಕಿನ ಕಂಭ, ಈ ಭಾಗದ ಜಂಬಿಟ್ಟಿಗೆ ಮಹತ್ವ, ಕಟ್ಟಡ ತಯಾರಿಕೆಗೆ ಮರ ಕಡಿಯುತ್ತಿದ್ದ ಗಂಜಿ ಮನೆತನಗಳು, ಚಂಪಕಾಳ ಬೆಸ್ತರ ಜಾತಿ, ರಾಣಿ ಅಬ್ಬಕ್ಕಳು ಪೋಚು೯ಗಿಸರ ಮೇಲೆ ನಡೆಸಿದ ಗೆರಿಲ್ಲಾ ಯುದ್ಧ ಮತ್ತು ಇವರಿಬ್ಬರ ಪ್ರೇಮಾ೦ಕುರ ಕ್ಕೆ ಕಾರಣವಾದ ರಂಗೋಲಿ ಇವೆಲ್ಲ ಈ ಕಾಲ್ಪನಿಕ ಕಾದಂಬರಿಯಲ್ಲಿ ಸೇರಿದೆ.
ಇತಿಹಾಸದ ಕಾಲ ಘಟ್ಟದಲ್ಲಿ ನಡೆದ ಈ ದುರಂತ ಪ್ರೇಮ ಕಥೆ ಜನ ಮಾನಸದಲ್ಲಿ ಮರೆಯುವ ಮೊದಲೆ ಈ ಪುಸ್ತಕವಾಗಿ ಬಂದಿದೆ.
ಇದಕ್ಕೂ ಮೊದಲು ಮುದ್ರಣ ಆಗಬೇಕಾಗಿದ್ದ ನನ್ನ ಸಣ್ಣ ಕಥೆಯ ಎರೆಡು ಪುಸ್ತಕ ಮುಂದಿನ ವಷ೯ ಮುದ್ರಿಸಲಿದ್ದೇನೆ.
ಹೊಸ ಲೇಖಕಕರ ಪುಸ್ತಕ ಪ್ರಕಟಿಸಲು ಪ್ರಕಾಶನಗಳು ಬರಲು ಸಾಧ್ಯವಿಲ್ಲ ಮತ್ತೆ ಕೆಲ ಪ್ರಕಾಶನಗಳು ಮುದ್ರಿಸಿದರೂ ಗ್ರಂಥಾಲಯಗಳಿಗಾಗಿ ಮುದ್ರಿಸಿ ಬರೆದವರಿಗೆ 100 ಉಚಿತ ಪ್ರತಿ ನೀಡುತ್ತಾರೆ ಆದರೆ ಇಲ್ಲಿ ನಿಜವಾದ ಓದುಗನಿಗೆ ಪುಸ್ತಕ ತಲುಪುವುದಿಲ್ಲ ಹಾಗಾಗಿ ನನ್ನದೇ ಪ್ರಕಾಶನ ಪ್ರಾರಂಬಿಸಿದ್ದೇನೆ ಅದರ ಹೆಸರು "ಪಶ್ಚಿಮ ಘಟ್ಟದ ಶಿವಮೊಗ್ಗ ಓದುಗ -ವಿಮಶ೯ಕ ಬಳಗ" ಈ ಪ್ರಕಾಶನದಿಂದ ಪ್ರತಿ ವಷ೯ ಮಲೆನಾಡಿನ ಹೊಸ ಬರಹಗಾರರ ಕೆಲ ಪುಸ್ತಕ ಪ್ರಕಟಿಸುವ ಯೋಚನೆ ಕೂಡ ಇದೆ.
ಮುಂದಿನ ವಾರ ಪುಸ್ತಕ ಬಿಡುಗಡೆ ಮತ್ತು ಮಾರಾಟ ಪ್ರಾರಂಭ ಮಾಡಬೇಕು.
ನನ್ನ ಹಲವು ಅವತಾರಗಳಲ್ಲಿ ಇದೂ ಒಂದು ಅವತಾರ
Comments
Post a Comment