#ದೊಂಡಿಯಾ_ವಾಘ್ ಶಿಕಾರಿಪುರದ ಹುಚ್ಚುರಾಯ ಸ್ವಾಮಿಗೆ ಅರ್ಪಿಸಿದ ವೀರ ಖಡ್ಗದ ಕಥೆ ಕೇಳಿ ಆ ಖಡ್ಗ ಈಗಲೂ ಶಿಕಾರಿಪುರದ ತಾಲ್ಲೂಕು ಖಜಾನೆಯಲ್ಲಿದೆ.... ನಮ್ಮ ಶಿವಮೊಗ್ಗ ಜಿಲ್ಲೆಯ ವೀರ ಸೇನಾನಿಯ 225 ವರ್ಷಗಳ ಹಿಂದಿನ ಕಥೆ. ಶಿಕಾರಿಪುರದ ಬಂಜಾರ ಸಮಾಜದವರ ಆ ಕಾಲದ ಸಹಾಯ ... ಬ್ರಿಟೀಷರು ಮತ್ತು ಮರಾಠರ ದಾಳಿಯಿಂದ ಕುಮದ್ವತಿ ನದಿಗೆ ಹಾರಿ ತಪ್ಪಿಸಿಕೊಂಡು ಕಾಡು ಸೇರಿದ್ದ ವೀರ ದೊಂಡಿಯಾ ವಾಘ್ ಗೆ ಶಶ್ರೂಸೆ ನೀಡಿ ಸಹಾಯ ಮಾಡುತ್ತಾರೆ. ಕೆಳದಿ ಸಾಮ್ರಾಜ್ಯದ ವೀರ ದೊಂಡಿಯಾ ವಾಘ್ ಕೆಳದಿ ಸಾಮ್ರಾಜ್ಯದ ಇತಿಹಾಸದ ಜೊತೆಗೆ ಹೈದರಾಲಿ ಸೈನ್ಯ ಸೇರಿ ದೊಡ್ಡ ಸ್ಥಾನ ಮಾನ ಪಡೆದು, ಹೈದರಾಲಿ ನಂತರ ಟಿಪ್ಪುಸುಲ್ತಾನರ ಸೈನ್ಯದಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ಸ್ವಂತ ಸೈನ್ಯ ಕಟ್ಟಿ ಅನೇಕ ಮರಾಠರ ಆಡಳಿತ ಪ್ರದೇಶ ವಶ ಪಡೆಯುತ್ತಾರೆ. ಟಿಪ್ಪು ಸುಲ್ತಾನ್ ರ ಮಂತ್ರಿ ಮೀರ್ ಸಾದಿಕ್ ಕುತಂತ್ರದಿಂದ ಶ್ರೀರಂಗ ಪಟ್ಟಣದ ಜೈಲು ಸೇರುತ್ತಾರೆ, ಟಿಪ್ಪುಸುಲ್ತಾನರನ್ನ ಬ್ರಿಟೀಷರು ಸೋಲಿಸಿದಾಗ ಅಲ್ಲಿಂದ ಐದು ವರ್ಷದ ಸೆರೆವಾಸದಿಂದ ತಪ್ಪಿಸಿಕೊಂಡು ಹೋಗಿ ಏನು ಮಾಡುತ್ತಾರೆ ಎಂಬ ವಿವರವಾದ ಈ ಲೇಖನ ಓದಿ. ಚೆನ್ನಗಿರಿ ಮೂಲದ ವೀರ ಸೇನಾನಿ ಶಿಕಾರಿಪುರದ ಕಾಡಿನಲ್ಲಿ ಸ್ಥಳೀಯ ಬಂಜಾರ ಜನರಿಂದ ಶಶ್ರೂಸೆ ಸಹಕಾರ ಪಡೆದು ಶಿಕಾರಿಪುರದ ಪುರದೈವ ಹುಚ್ಚರಾಯ ಸ್ವಾಮಿಗೆ ತನ್ನ ವೀರಖಡ್ಗ ಅರ್ಪಿಸುವ ದೊಂಡಿಯಾ ...