Skip to main content

Posts

Blog number 1675. ಪುತ್ತೂರಿನ ಶಂಕರ ಭಟ್ಟರು ಮತ್ತು ಉಪ್ಪಿನಂಗಡಿಯ ಕಿರಣ್ ಮನ್ನಾಜೆ ಅವರನ್ನು ನನಗೆ ಪರಿಚಯಿಸಿದ ಪೇಸ್ ಬುಕ್ ಅದಕ್ಕೆ ವೇದಿಕೆ ಆದ ನಮ್ಮ ಮಲ್ಲಿಕಾ ವೆಜ್.

#ಸೋಷಿಯಲ್_ಮೀಡಿಯಾದ_ನಂಟು. #ಎಲ್ಲಿಂದ_ಎಲ್ಲಿಗೋ_ಸಂಪರ್ಕಿಸುವ_ಚಮತ್ಕಾರ #ಇಬ್ಬರು_ಹೋರಾಟಗಾರರ_ಮುಖತಃ_ಬೇಟಿಗೆ_ಕಾರಣವಾಯಿತು. #ನಮ್ಮ_ಮಲ್ಲಿಕಾವೆಜ್_ಒಂದು_ಪರಸ್ಪರ_ಬೇಟಿಗೆ_ಒಂದು_ಜಂಕ್ಷನ್_ಆಗಿದೆ.       ಮೊನ್ನೆ ಉಪ್ಪಿನಂಗಡಿಯ ಕಿರಣ್ ಮನ್ನಾಜೆ ಎಂಬ FB ಗೆಳೆಯರು ಪುತ್ತೂರಿನ ಶಂಕರ ಭಟ್ಟರ 2ವಷ೯ದ ಹಿಂದಿನ ಹುಟ್ಟುಹಬ್ಬದ೦ದು ರಿಪ್ಪನ್ ಪೇಟೆಯ ಮಲ್ಲಿಕಾ ವೆಜ್ ಲ್ಲಿ ಬೋಜನ ಮಾಡಿದ ನೆನಪಿನ ಪೋಟೋ ಅಂತ ಹಾಕಿದ್ದರು ಆದರೆ ಅದು ಆನಂದಪುರದ ನಮ್ಮ ಮಲ್ಲಿಕಾ ವೆಜ್ ಎಂದು ಉತ್ತರಿಸಿದ್ದೆ.  ಅದಕ್ಕೆ ಅವರು ಈ ಮಾಗ೯ದಲ್ಲಿ ಹೋಗುವಾಗ ಯಾವತ್ತೂ ಇದೇ ರೆಸ್ಟೋರೆಂಟನಲ್ಲಿ ಉಟೋಪಚಾರ ಮಾಡುತ್ತೇವೆ ಇದು ತಮ್ಮದೆಂದು ತಿಳಿದು ಸಂತೋಷ ಆಯಿತು ಅಂತ ಉತ್ತರ ನೀಡಿದ್ದರು.   ಇನ್ನೊಮ್ಮೆ ಈ ಕಡೆ ಬಂದಾಗ ಬೇಟಿ ಮಾಡಲು ವಿನಂತಿಸಿದ್ದೆ, ಇವತ್ತು ಅಕಸ್ಮಿಕವಾಗಿ ಮದ್ಯಾಹನ ಊಟಕ್ಕೆ ನಮ್ಮ ಮಲ್ಲಿಕಾ ವೆಜ್ ಗೆ ತಲುಪಿದ್ದರು , ಪರಸ್ಪರ ಪರಿಚಯಿಸಿಕೊಂಡೆವು ಮೊನ್ನೆಯ ಶಂಕರ ಭಟ್ಟರ ಹುಟ್ಟುಹಬ್ಬಕ್ಕೆ ತಡವಾಗಿ ಶುಭಾಷಯ ತಿಳಿಸಿದೆ ಈ ಎಲ್ಲಾ ನೆನಪಿಗಾಗಿ ನನ್ನ ಆತಿಥ್ಯ ಸ್ವೀಕರಿಸಲು ಒತ್ತಾಯಿಸಿ ಒಪ್ಪಿಸಿದೆ, ಈಗ ಸ್ವಣ೯ವಲ್ಲಿ ಮಠ ತಲುಪಿದವರು ಆತಿಥ್ಯಕ್ಕೆ ಪ್ರತಿ ವಂದನೆ ತಿಳಿಸಿದ್ದಾರೆ.   ಟೇಸ್ಟಿಂಗ್ ಪೌಡರ್, ಅಜಿನೋಮೊಟೊ, ಕೃತಕ ಬಣ್ಣ, ಬಳಸಿದ ಎಣ್ಣೆ, ನಕಲಿ ಚಹಾ ಪುಡಿಗಳನ್ನ ಕಟ್ಟುನಿಟ್ಟಾಗಿ ನಿಷೇದ ಮಾಡಿರುವ ನಮ್ಮ MALLIKA VE...

Blog number 1674. ಸಾಕ್ರೆಟಿಸ್ ನ ಮೂರು ಪ್ರಶ್ನೆಗಳು.

🍁ಬಾಳಿಗೊಂದು ಬಂಗಾರದಂಥ ಮಾತು🍁    🌷 ಸಾಕ್ರೆಟಿಸ್ ನ 3 ಪ್ರಶ್ನೆಗಳು 🌷 ಒಂದು ದಿನ ಸಾಕ್ರೆಟಿಸ್ ಏಕಾಂಗಿಯಾಗಿ ತಮ್ಮ ಮನೆಯ ಅಂಗಳದಲ್ಲಿ ನಡೆದಾಡುತ್ತಿದ್ದಾಗ, ಅವನಿಗೆ ಸ್ನೇಹಿತನೊಬ್ಬ : "ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ, ಆ ಸಂಗತಿ ನಿಮಗೆ ಗೊತ್ತಿದೆಯಾ ?’ ಎಂದು ಕೇಳಿದ. ಅದಕ್ಕೆ ಸಾಕ್ರೆಟಿಸ್ : "ಒಂದು ನಿಮಿಷ ತಾಳು, ನೀನು ಆ ವಿಷಯ ಹೇಳುವ ಮೊದಲು, ನಿನಗೊಂದು ಮೂರು ಹಂತದ ಪರೀಕ್ಷೆಯನ್ನೊಡ್ಡುತ್ತೇನೆ. ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ’ ಎಂದ. ಅದಕ್ಕೆ ಆತ ಒಪ್ಪಿಕೊಂಡ. 1) ಮೊದಲ ಹಂತ ಅಂದ್ರೆ, "ಸತ್ಯ"  ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿದೆಯೆ ?’ ಅದಕ್ಕೆ ಸ್ನೇಹಿತ : "ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾರೋ ಹೇಳಿದರು. ನಾನು ಅದನ್ನು ಕೇಳಿದೆ ಅಷ್ಟೆ" ಅವನ ಮಾತಿಗೆ ಸಾಕ್ರಟಿಸ್ : "ಹೌದಾ ? ಅಂದರೆ ನೀನು ಹೇಳುವ ವಿಷಯ ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು. 2) ಹಾಗಾದರೆ ಈಗ ಎರಡನೆಯ ಹಂತದ ಪರೀಕ್ಷೆ : ಇದು "Goodness" ಪರೀಕ್ಷೆ :  "ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ ?’ ಅದಕ್ಕೆ ಸ್ನೇಹಿತ : "ಇಲ್ಲ…ಇಲ್ಲ… ಅದು ...

Blog number 1673. ಈ ವೀರಪ್ಪನ್ ಬೇಟೆ ಮಾಡಿದ ಪೋಲಿಸ್ ಅಧಿಕಾರಿ ಕೆ. ವಿಜಯ ಕುಮಾರ್ ಪುಸ್ತಕ.

ಕೆ.ವಿಜಯಕುಮಾರ್ ಭಾಗವಹಿಸಿ ಬರೆದ "ವೀರಪ್ಪನ್ ದಂತ ಚೋರನ ಬೆನ್ನಟ್ಟಿ" ಪುಸ್ತಕ ಇವತ್ತಿಡಿ ಥ್ರಿಲ್ಲಿOಗ್ ಅನುಭವ ನೀಡಿತು.  ದಿನಪತ್ರಿಕೆಯಲ್ಲಿ ಪ್ರತಿವಾರ ಬರುತ್ತಿತ್ತು, ಈ ಪುಸ್ತಕ ಕನಾ೯ಟಕದ ನಿವೃತ್ತ ಪೋಲಿಸ್ ಅಧಿಕಾರಿ ಹಾಗೂ ಖ್ಯಾತ ಬರಹಗಾರ ಡಿ.ವಿ.ಗುರುಪ್ರಸಾದ್ ಅಷ್ಟೇ ಸುಂದರವಾಗಿ ಅನುವಾದಿಸಿದ್ದಾರೆ.   ಸಂಗ್ರಹಯೋಗ್ಯ ಮತ್ತು ಆಗಾಗ್ಗೆ ಓದಬೇಕೆನ್ನಿಸುವ ಪ್ರಸ್ತಕ ಇದು.

Blog number 1672. ನಾಗೇಂದ್ರ ಸಾಗರ್ ಕೃಷಿ ಉದ್ಯಮದಲ್ಲಿ ಯಶಸ್ಸಿನ ಘಟ್ಟ ತಲುಪಲು ಪಟ್ಟ ಕಷ್ಟ ಸಾಮಾನ್ಯವಲ್ಲ ಇದು ಸ್ವಯ೦ ಉದ್ಯೋಗ ಮಾಡುವವರಿಗೆ ಒಂದು ನೀತಿ ಪಾಠ.

#ಪತ್ರಿಕೋದ್ಯಮದಲ್ಲಿ_ಭವಿಷ್ಯ_ಅರಸಿ_ಬೆಂಗಳೂರು_ಸೇರಿದ್ದರು. #ಪತ್ರಿಕೋದ್ಯಮದ_ಬೀಷ್ಮ_ವಿ_ಎನ್_ಸುಬ್ಬರಾವ್_ಅವರ_ಶಿಷ್ಯರಾದರು #ರವಿಬೆಳೆಗೆರೆ_ಪ್ರಕಾಶ್_ರೈ_ಪಬ್ಲಿಕ್_ಟೀವಿ_ರಂಗನಾಥ_ಮುಂತಾದವರ_ಜೊತೆಯಾದರು. #ಅದನ್ನೆಲ್ಲ_ಬಿಟ್ಟು_ಸ್ವಾತಂತ್ರ_ಹೋರಾಟಗಾರರಾದ_ಇವರ_ತಂದೆಯ_ಬರಡು_ಜಮೀನಲ್ಲಿ_ಕೃಷಿ_ಪ್ರಾರಂಬಿಸಿದರು. #ರೈತರಿಗಾಗಿ_ಅಗ್ರಿ_ಕ್ಲೀನಿಕ್_ಸಾಗರ್_ಅಗ್ರಿಕೋ_ಪ್ರಾರಂಬಿಸಿದರು. #ಉದ್ಯಮದಲ್ಲಿ_ನಷ್ಟವಾಯಿತು_ತಂದೆಯ_ಜಮೀನು_ಸಹೋದರನ_ಪಾಲಿಗೆ_ಹೋಯಿತು. #ಮತ್ತೆ_ಬೂದಿಯಿಂದ_ಎದ್ದು_ಬಂದ_ನಾಗೇಂದ್ರಸಾಗರ್ #ಸ್ವಯಂ_ಉದ್ಯೋಗ_ಮಾಡುವವರಿಗೆ_ನೀತಿ_ಪಾಠವಾಗಿದ್ದಾರೆ.   ನನ್ನ ಕೃಷಿ ಪ್ರಯೋಗದ ಪ್ರಾರಂಭದ ದಿನಗಳಲ್ಲಿ ಕೃಷ್ಣಪ್ಪ ಎಂಬ ಸಜ್ಜನರು ಸಾಗರದ ತೋಟಗಾರಿಕಾ ಇಲಾಖೆ ಮುಖ್ಯಾದಿಕಾರಿ ಆಗಿದ್ದರು ಅವರ ಮಾರ್ಗದರ್ಶನದಲ್ಲಿ ಕೃಷಿ ಪ್ರಾರಂಬಿಸಿದ್ದೆ ಆಗ ಡ್ರಿಪ್ ಇರಿಗೇಷನ್ ಮಾಡಲು ಬೀಮನಕೋಣೆಯ ಪಿ.ಎಲ್.ಡಿ ಬ್ಯಾಂಕಿಗೆ ಹೋದಾಗ ಅಲ್ಲಿ ವ್ಯವಸ್ಥಾಪಕರಾಗಿದ್ದ ಹಂದಿಗೋಳ್ ಸಾಹೇಬರು ನಾಗೇಂದ್ರ ಸಾಗರ್ ಅವರ ಸಾಗರ್ ಅಗ್ರಿಕೋ ತೋರಿಸಿದರು.    ಅಲ್ಲಿ ನನ್ನ ಸ್ವಭಾವವಾದ ಕೆಲವೇ ಕ್ಷಣದಲ್ಲಿ ವ್ಯವಹಾರ ಮುಗಿಸಿದ್ದೆ ನಂತರ ಉತ್ತುಂಗಕ್ಕೆ ಏರಿದ್ದ ಇವರ ವ್ಯವಹಾರ ನಷ್ಟಕ್ಕೆ ಇಳಿಯಿತು, ಸುಖದಲ್ಲಿ ಸುತ್ತುವರಿದಿದ್ದವರೆಲ್ಲ ಹಾರಿ ನಾಪತ್ತೆ ಆದರು.    ಬೆಂಗಳೂರಿನ ಚೆಕ್ ಕೇಸಿಗೆ ಜಾಮೀನು ಹಾಕಲು ಒಬ್ಬನೇ ಒಬ್ಬ ಗೆಳೆಯ ಮುಂದೆ ಬರಲ...

Blog number 1671. ಸಾಗರ ತಾಲ್ಲೂಕಿನ ಇರುವಕ್ಕಿ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ಘಟಿಕೊತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸ್ಥಳಿಯ ಶಾಸಕ ಮತ್ತು ಸಂಸದರನ್ನು ಆಹ್ವಾನಿಸದ ಪ್ರೋಟೋಕಾಲ್ ಬದಲಾಯಿಸದ ರಾಜ್ಯ ಸರ್ಕಾರ.

#ಸ್ಥಳಿಯ_ಗ್ರಾಮಪಂಚಾಯತಿ_ಅಧ್ಯಕ್ಷ_ಶಾಸಕರು_ಸಂಸದರನ್ನು_ಪ್ರೋಟೋಕಾಲ್_ಹೆಸರಲ್ಲಿ_ಆಹ್ವಾನಿಸದ. #ನಮ್ಮ_ಊರಿನ_ಕೃಷಿ_ವಿಶ್ವವಿದ್ಯಾಲಯದ_ಘಟಿಕೋತ್ಸವದ_ಆಹ್ವಾನ_ಪತ್ರಿಕೆ_ಬಂದಿದೆ. #ಇರುವಕ್ಕಿ_ಕೃಷಿವಿಶ್ವವಿದ್ಯಾಲಯದಲ್ಲಿ_21_ಜುಲೈ_2023_ಶುಕ್ರವಾರ_ನಡೆಯಲಿದೆ. #ರಾಜ್ಯಪಾಲರ_ಅದ್ಯಕ್ಷತೆ_ಕೃಷಿಸಚಿವರ_ಗೌರವ_ಉಪಸ್ಥಿತಿ_ದರ್ಮಸ್ಥಳದ_ವೀರೇಂದ್ರಹೆಗ್ಗಡೆ_ಬಾಷಣ. #ಸ್ಥಳಿಯ_ಜನಪ್ರತಿನಿಧಿಗಳು_ಘಟಿಕೋತ್ಸವದಲ್ಲಿ_ಭಾಗವಹಿಸುವ_ಆದೇಶ_ಸರ್ಕಾರ_ಮಾಡಲಿ.   ನಮ್ಮ ಊರಿನಲ್ಲಿ ಪ್ರಾರಂಭ ಆಗಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ನನ್ನ ಮನೆಯಿಂದ 2 ಕಿ.ಮಿ. ದೂರದಲ್ಲಿದೆ.    ಈ ವಿಶ್ವವಿದ್ಯಾಲಯಕ್ಕಾಗಿ 777 ಎಕರೆ ಕಂದಾಯ ಭೂಮಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನು ನೀಡಲಾಗಿದೆ.    ಹಿಂದಿನ 6 ಘಟಿಕೋತ್ಸವ ಶಿವಮೊಗ್ಗದಲ್ಲಿ ನಡೆದಿತು ಕಾರಣ ಈ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಮುಗಿದಿರಲಿಲ್ಲ ಕಳೆದ ವರ್ಷದ 7 ನೇ ಘಟಿಕೋತ್ಸವ ಇರುವಕ್ಕಿಯಲ್ಲೇ ಮೊದಲಬಾರಿ ನಡೆಯಿತು.   ಈ ವರ್ಷದ 8ನೇ ಘಟಿಕೋತ್ಸವ ಇದೇ ತಿಂಗಳ 21 ನೇ ತಾರೀಕು ನಡೆಯಲಿದೆ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ, ಕೃಷಿ ಮಂತ್ರಿ ಚೆಲುವರಾಯ ಸ್ವಾಮಿ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳ ಘಟಿಕೋತ್ಸವ ಭಾಷಣ ಧರ್ಮಸ್ಥಳದ ಧರ್ಮಾಧಿಕ...

Blog number 1670. ಪಶ್ಚಿಮ ಘಟ್ಟಗಳ ಹಳ್ಳಿಗಳ ಕಥೆ ಗಾಂಜಾ ಗಮಲು ಕ್ರಮೇಣ ಅವರಿಸುತ್ತಿದೆ.

https://youtu.be/5eXkuL1CdMs #ಸುದ್ದಿವಾಹಿನಿ_ಸುದ್ದಿಗಳು_ಮು೦ದಿನ_ಗಂಡಾಂತರ_ತೆರೆದಿಡುತ್ತಿದೆ. #ಪಶ್ಚಿಮಘಟ್ಟಗಳ_ಜನವಸತಿ_ಪ್ರದೇಶದಲ್ಲಿ_ಅವರಿಸಿರುವ_ಗಾಂಜಾ_ಗಮಲು. #ಪ್ರಾರಂಭದಲ್ಲಿ_ಗಾಂಜಾ_ಬೆಳೆಯುತ್ತಿದ್ದರು_ಆಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಇರಲಿಲ್ಲ #ಈಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಹೆಚ್ಚಾಗಿದ್ದಾರೆ_ಗಾಂಜಾ_ಬೆಳೆಯುವವರು_ಕಡಿಮೆ_ಆಗಿದ್ದಾರೆ. #ಬೇರೆ_ಕಡೆಯಿಂದ_ಗಾಂಜಾ_ಇಲ್ಲಿ_ಮಾರಾಟ_ಆಗುತ್ತದೆ. #ಅಮಲು_ಪದಾರ್ಥದ_ಮೇಲಿನ_ಸದ್ಬಾವನೆ_ನಂತರದ_ಪಲಾನುಭವಿ_ಆ_ಕುಟುಂಬದವರೆ_ಆಗುವ_ವಿಪರ್ಯಾಸ. #ಇದು_ಎಲ್ಲಾ_ನಮ್ಮ_ಪಶ್ಚಿಮಘಟ್ಟದ_ಹಳ್ಳಿ_ಕಥೆ          ಪಶ್ಚಿಮ ಘಟ್ಟಗಳ ಹಳ್ಳಿಗಳಲ್ಲಿ ವಾಡಿಕೆ ಮಳೆ ಕಡಿಮೆ ಆದಾಗ ಹತ್ತಿ ಮತ್ತು ಜೋಳದ ಕೃಷಿ ಪ್ರಾರಂಭವಾಯಿತು ಅದರ ಮಧ್ಯ ಗಾಂಜಾ ಬೆಳೆ ಸೇರಿಕೊಂಡಿತು, ಮೊದಲಿಗೆ ಮನೆಯ ಹೆಣ್ಣು ಮಕ್ಕಳು ವಾಷಿ೯ಕ ಒಂದು 50 ಸಾವಿರ ಆದಾಯ ಪಡೆಯಲು ಪ್ರಾರಂಬಿಸಿದರು ನಂತರ ಇದಕ್ಕೆ ದೊಡ್ಡ ಮಾರುಕಟ್ಟೆಯೇ ಸೃಷ್ಟಿ ಆಯಿತು.  ಉತ್ತರ ಭಾರತದಿಂದ ಹಳ್ಳಿಗಳಿಗೆ ದಲ್ಲಾಳರು ಬಂದರು ಬೀಜ, ಮುಂಗಡ ನೀಡಿದರು ಮತ್ತು ಅವರೇ ಖರೀದಿ ಮಾಡಲು ಶುರು ಮಾಡಿದರು. ಬೇರೆಯವರಿಗೆ ಅನುಮಾನ ಬರಬಾರೆದೆಂದು ಬೆಡ್ ಶೀಟ್, ಬಟ್ಟೆ ವ್ಯಾಪಾರಿಗಳಾಗಿ ಸಂವಹನ ಶುರು ಮಾಡಿದರು.   ಒಬ್ಬರ ನೋಡಿ ಎಲ್ಲರೂ ಗಾಂಜಾ ಕೃಷಿಕರಾದರು ವಾಷಿ೯ಕ ಆದಾಯ ಕೆಲ ಲಕ್ಷಗಳಾಯಿತು, ಮನೆ, ಬೈಕ್, ಕಾರುಗಳು...

Blog number 1669. ಕೊರೊನಾ ಲಾಕ್ ಡೌನ್ ಡೈರಿ 2020 ಲೆಟರ್ ನಂಬರ್ 54.( 15- ಜುಲೈ 2020)

#ಇಂತಹ_ಮಾತುಗಳೇ_ನಿರಾಸೆ_ಹೊಡೆದೋಡಿಸುವ_ಮತ್ತು_ಆತ್ಮವಿಶ್ವಾಸ_ಹೆಚ್ಚಿಸುವುದು #ಬೆಂಗಳೂರಿಂದ_ಬರುವವರಿಗೆ_ಹೃದಯಸ್ಪಷಿ೯_ಬೆಂಬಲ_ಸಹಕಾರ_ನೀಡಿದ_ಸಾಗರದ_ಶಾಸಕರಾದ_ಹರತಾಳುಹಾಲಪ್ಪನವರು.    ಮಲೆನಾಡಿನಿಂದ ರಾಜಧಾನಿಗೆ ತಮ್ಮ ಭವಿಷ್ಯ ಹುಡುಕಿ ಹೋಗುವ ಯುವಕ/ಯುವತಿಯರೆಲ್ಲ ನಮ್ಮ ಸಹೋದರ ಸಹೋದರಿಯರೆ, ರೈತರು ಮತ್ತು ಕೃಷಿ ಕಾಮಿ೯ಕ ಕುಟುಂಬದವರೆ.   ಅವರೆಲ್ಲರ ಕನಸು ಹೆತ್ತವರಿಗೆ ಅಥಿ೯ಕ ಸಹಾಯ ಮಾಡಿ ಮನೆಯಲ್ಲಿನ ಕೃಷಿ ಅಭಿವೃದ್ದಿ, ಹೊಸ ಮನೆ ಕಟ್ಟುವುದು, ಸಹೋದರ / ಸಹೋದರಿಯರ ವಿದ್ಯಾಬ್ಯಾಸ ಅವರ ಮದುವೆ, ಮನೇನಲ್ಲಿ ಕಾಯಿಲೆ ಇದ್ದವರಿಗೆ ಚಿಕಿತ್ಸೆ, ಮನೆಯಲ್ಲಿ ಮಾಡಿದ ಬ್ಯಾಂಕ್ ಅಥವ ಖಾಸಾಗಿ ಸಾಲ ತೀರುಸುವುದು ಮತ್ತು ಹಳ್ಳಿಯಲ್ಲಿ ತಮ್ಮ ಕುಟುಂಬಕ್ಕೆ ಒಂದು ಐಡೆಂಟಿಟಿ ಸಿಗುವಂತೆ ಮಾಡುವುದು.    ಆದರೆ ಇದರಲ್ಲಿ ಎಷ್ಟು ಜನ ಯಶಸ್ವಿ ಆಗುತ್ತಾರೆ ಎನ್ನುವುದು ಅವರವರ ಪ್ರಯತ್ನ ಮತ್ತು ಅದೃಷ್ಟದ ಮೇಲೆ ಅವಲಂಬಿಸಿದೆ.   ಈಗ ಬಂದಿರುವ ಕೊರಾನಾ ಗಂಡಾಂತರದಿಂದ ಲಾಕ್ ಡೌನ್ ಗಳಿಂದ ಇಡಿ ರಾಜ್ಯದಲ್ಲಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿಮಾ೯ಣ ಆಗಿದೆ ಇದರಿಂದ ತಾತ್ಕಾಲಿಕವಾಗಿ ಇದು ನಿಯ೦ತ್ರಣಕ್ಕೆ ಬರುವಷ್ಟು ದಿನ ಊರಿಗೆ ಮರಳಿ ಕೃಷಿಯ ಈ ದಿನದಲ್ಲಿ ಮನೆಯವರಿಗೆ ಸಹಕಾರ ಮಾಡುವ ಉದ್ದೇಶ ಮತ್ತು ಮನೆಯವರ ಆತಂಕ ಕಡಿಮೆ ಮಾಡಲಿಕ್ಕಾಗಿ ಊರಿಗೆ ಮರಳುತ್ತಿದ್ದಾರೆ.    ಬೆಂಗಳೂರಿಂದ ಊರಿಗೆ ಬಂದವರು 14...