ದೀಘ೯ ಕಾಲ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಧ್ಯಕ್ಷರಾಗಿ, ದಿನಕರ ದೇಸಾಯಿಯವರ ಶೈಲಿಯಲ್ಲಿ ಚುಟುಕು ಸಾಹಿತ್ಯ ರಚಿಸಿ ಮಲೆನಾಡ ದಿನಕರ ದೇಸಾಯಿ ಎಂದೇ ಹೆಸರಾಗಿದ್ದ ಸಜ್ಜನ ಹಾ. ಸಾ. ಹಸನ್ ರು ಇನ್ನು ನೆನಪು ಮಾತ್ರ
#ಕಾರ್ಗಲ್_ಹಾ_ಸಾ_ಹಸನ್_ಸಾಹೇಬರು_ಇನ್ನು_ನೆನಪಿನಲ್ಲಿ. #ದೀಘಾ೯ವದಿ_ಸಾಗರ_ತಾಲ್ಲೂಕ್_ಕಾಂಗ್ರೇಸ್_ಅಧ್ಯಕ್ಷರಾಗಿದ್ದರು. #ಮಲೆನಾಡ_ದಿನಕರ_ದೇಸಾಯಿ_ಎಂಬ_ಬಿರುದು_ಇವರಿಗಿತ್ತು. #ನನ್ನ_ಕಥಾ_ಸಂಕಲನದ_ಪುಸ್ತಕದಲ್ಲಿನ_ಒಂದು_ಕಥೆಯಲ್ಲಿ_ಹಾ_ಸಾ_ಹಸನ್_ಸಾಹೇಬರಿದ್ದಾರೆ. ಲಿಂಗನಮಕ್ಕಿ ಡ್ಯಾಂ ನಿರ್ಮಾಣದ ವೇಳೆ ಸಣ್ಣದಾಗಿ ಕಂಟ್ರಾಕ್ಟ್ ಕೆಲಸ ಮಾಡ್ತಾ ಇದ್ದ ಕಾಗ೯ಲ್ ನ ಹಸನ್ ಸಾಬರಿಗೆ ನಿಧಿ ಸಿಕ್ಕಿತ್ತು ಅಂತ ಜನ ಅಂತಿದ್ದರು, ಒಮ್ಮೆ ಹಸನ್ ಸಾಬರಿಗೆ ಈ ಬಗ್ಗೆ ಕೇಳಿದಾಗ ಅವರು ಹೇಳಿದ್ದು, ಮಣ್ಣು ಆಗೆಸಲಿಕ್ಕೆ ಆಂಧ್ರದಿಂದ ಕೂಲಿ ಆಳುಗಳನ್ನು ಬಿಟ್ಟಿದ್ದೆ. ಮಧ್ಯಾಹ್ನದ ಹೊತ್ತು ಬಿಸಿಲಲ್ಲಿ ಅಲ್ಲೇ ಮರದ ಕೆಳಗೆ ಕುಳಿತಿದ್ದೆ, ಆಗ ಕೆಲಸ ನಿಲ್ಲಿಸಿ ಬಂದ ಕೂಲಿಗಳು ನೆಲದಲ್ಲಿ ದೊಡ್ಡ ಕೊಪ್ಪರಿಗೆ ಇದೆ ಅಂದರು, ನಾನು ಹುಷಾರಾದೆ, ತಕ್ಷಣ ಕೆಲಸ ನಿಲ್ಲಿಸಲು ಹೇಳಿದೆ. ರಾತ್ರಿ ಅವರನ್ನೂ ಉಪಯೋಗಿಸಿಕೊಂಡು ಆ ಕೊಪ್ಪರಿಗೆ ತೆಗೆದರೆ ಅದರಲ್ಲಿ ಏನೂ ಇರಲಿಲ್ಲ, ನಂತರ ಸಣ್ಣ ಕೊಪ್ಪರಿಗೆ ನನ್ನ ಹೆರಾಲ್ಡ್ ಕಾರ್ ನ ಡಿಕ್ಕಿಯಲ್ಲಿ ಹಾಕಿಕೊಂಡು ಬಂದೆ, ಒಂದು 40 ಕೇಜಿ ಬಿರಿಯಾನಿ ಮಾಡೋ ಅಂತ ತಾಮ್ರದ ತಪ್ಪಲೆ ಅದು. ಜನ ನನಗೆ ನಿಧಿ ಸಿಕ್ಕಿತು ಅಂತ ಪ್ರಚಾರ ಮಾಡಿದರು, ನನ್ನ ಹೆರಾಲ್ಡ್ ಕಾರ್ ಡಿಕ್ಕಿ ಈ ತಪ್ಪಲೆ ಇಡಬೇಕಾದರೆ ಸ್ವಲ್ಪ ಜಕ್ಕಂ ಆಗಿತ್ತು ಅದನ್ನು ಸಾಕ್ಷಿ ಮಾಡಿಕೊಂಡು ಹೇಳ್ತಾ ಬಂದರು ..... ಈ ಘಟನೆ ನನ್ನ ಕಥಾ ಸಂ...