Skip to main content

3533. ಕ್ರಿಸ್ಮಸ್ ಮತ್ತು ಪ್ಲಮ್ ಕೇಕ್

#ಕ್ರಿಸ್ಮಸ್_ಹಬ್ಬದ_ಶುಭಾಷಯಗಳು

#ಕ್ರಿಸ್ಮಸ್_ಹಬ್ಬಕ್ಕೂ_ಪ್ಲಮ್_ಕೇಕಿಗೂ_ಇರುವ_ಸಂಬಂದ

#ಪ್ಲಮ್_ಕೇಕ್_ಮೂಲ_ರೋಮನ್

#ರೋಮನ್_ಚರ್ಚ್_ರೆಗ್ಯೂಲೇಷನ್_ಕೇಕಿನಲ್ಲಿ_ಬೆಣ್ಣೆ_ಬಳಸಲು_ನಿಷೇದವಿತ್ತು.

#ಪ್ಲಮ್_ಕೇಕಿಗೆ_ಬೆಣ್ಣೆ_ಬಳಸಲು_ಲಿಖಿತ_ಅನುಮತಿ_ಪೋಪರಿಂದ_1499ರಲ್ಲಿ

#ಇತಿಹಾಸದಲ್ಲಿ_ದಾಖಲೆಯಾಗಿ_ಉಳಿದ_ಬಟರ್_ಲೆಟರ್_ಗೊತ್ತಾ ?.


 #chrissmass #xmas #plumcake #jesus #rome #pope #cristiancommunity
#criest #roman #cake #catholic #catholicchurch #protestant #cakelover 

   ಕೇಕ್ ಗೆ ಬೆಣ್ಣೆ ಬೆರೆಸಲು ರೋಮನ್ ಚಚ್೯ ರೆಗ್ಯೂಲೇಷನ್ ನಿಶೇದ ಇತ್ತು, ಪೋಪ್ ಇನ್ನೋಸೆಂಟ್ VIII 1490ರಲ್ಲಿ ನಿಶೇದ ತೆರವು ಮಾಡಿ ಅನುಮತಿ ನೀಡುತ್ತಾರೆ.

  ವಿಶ್ವದಾದ್ಯಂತ ಕ್ರೈಸ್ತರು ಕ್ರಿಸ್ ಮಸ್ ಗೆ ಪ್ಲಮ್ ಕೇಕ್ ಹೆಚ್ಚು ಬಳಸುತ್ತಾರೆ.

    ಕ್ರಿಸ್ಮಸ್ ಅಂದರೆ ಕೇಕ್ ನೆನಪಾಗದೇ ಇರುವುದಿಲ್ಲ ಎಲ್ಲಾ ಸಿಹಿ ತಿಂಡಿ ಅಂಗಡಿಗಳಲ್ಲಿ ಕೇಕ್ ಮಾರಾಟಕ್ಕೆ ಇಡುತ್ತಾರೆ.

   ಕ್ರಿಸ್ಮಸ್ ಹಬ್ಬದ ಕೇಕ್ ವಹಿವಾಟು ವಿಶ್ವದಾದ್ಯಂತ ಹಲವು ಸಾವಿರ ಕೋಟಿ ಗಳ ಗಾತ್ರದ್ದು,

   ಪ್ಲಮ್ ಕೇಕ್ ಅಂತ ಹೆಸರೇಕೆ ಬಂತು ಅಂತ ಸ್ಪಷ್ಟವಿಲ್ಲ ಆದರೆ ಪುರಾತನ ರೋಮನ್ ರು ಬಾಲಿ೯ ಹಿಟ್ಟು ಬಳಸಿ ಈ ಕೇಕ್ ತಯಾರಿಸುತ್ತಿದ್ದರಂತೆ ನಂತರ ಜೇನು ತುಪ್ಪ, ಸಂಸ್ಕರಿಸಿದ ಹಣ್ಣು ಮತ್ತು ಮಸಾಲೆ ಪದಾರ್ಥ (spice) ಬಳಕೆ ಪ್ರಾರಂಭ ಆಯಿತು.

  ನಂತರ ಈ ಕೇಕ್ ಖಾದ್ಯ ಯೋಗ್ಯವಾಗಲು ಸ್ಪಿರಿಟ್ ಬಳಕೆ ಪ್ರಾರಂಭ ಆಯಿತು ಆದರೆ ಈ ಕೇಕ್ ತಯಾರಿಸಲು ಬೆಣ್ಣೆ ಬಳಸಲು ಮಾತ್ರ ಚರ್ಚ್ ರೆಗ್ಯೂಲೇಷನ್ ನಲ್ಲಿ ಅನುಮತಿ ಇರಲಿಲ್ಲ!!.
 
  1490ರಲ್ಲಿ ಪೋಪ್ ಇನ್ನೊಸೆಂಟ್ VIII ಪ್ಲಮ್ ಕೇಕ್ ನಲ್ಲಿ ಬೆಣ್ಣೆ ಬಳಸಲು ಬಹು ಜನರ ಬಹು ಕಾಲದ ಮನವಿಗಾಗಿ ಲಿಖಿತವಾಗಿ ವಿಶೇಷವಾಗಿ ಅನುಮತಿ ನೀಡಿದರು.

  ಈ ಲಿಖಿತ ಅನುಮತಿ ಬಟರ್ ಲೆಟರ್ (Butter letter) ಎಂದೇ  ಇತಿಹಾಸದಲ್ಲಿ ಪ್ರಖ್ಯಾತವಾಗಿದೆ.

 16ನೇ ಶತಮಾನದಲ್ಲಿ ಅಮೇರಿಕಾದಿಂದ ಆಮದಾದ ಸಕ್ಕರೆ ಈ ಕೇಕ್ ತಯಾರಿಕೆಯಲ್ಲಿ ಬಳಕೆ ಮಾಡಲು ಪ್ರಾರಂಭ ಆಯಿತು.

  ಸಕ್ಕರೆ ಅತ್ಯುತ್ತಮ ಪ್ರಿಸರ್ವೇಟೀವ್ ಆಂತ ತಿಳಿದ ಮೇಲೆ ಹೆಚ್ಚು ವೈವಿಧ್ಯದ ಹಣ್ಣು ಬಳಕೆ ಹೆಚ್ಚಾಯಿತು ಇದರಿಂದ ಪ್ಲಮ್ ಕೇಕ್ ಹೆಚ್ಚು ಜನಪ್ರಿಯವಾಗಲೂ ಕಾರಣ ಆಯಿತು.

  ಆಲ್ಕೋಹಾಲ್ ಲೇಪನದಿಂದ ದೀರ್ಘ ಕಾಲ ಖಾದ್ಯದ ತಾಜತನ ಉಳಿಯುವುರಿಂದ ಈ ಕೇಕ್ ತಯಾರಿಯಲ್ಲಿ ಆಲ್ಕೋಹಾಲ್ ಬಳಕೆ ಇದೆ.

  106 ವರ್ಷದ ಪ್ಲಮ್ ಕೇಕ್ ಹಾಳಾಗದೆ ತಾಜಾತನ ಉಳಿಸಿಕೊಂಡಿರುವ ದಾಖಲೆ ಹೊಂದಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...