Skip to main content

3539. ಬುದ್ಧಿವಂತರೇಕೆ ಬಡವರು ಪುಸ್ತಕ

#ಪತ್ರಕರ್ತ_ಎಂ_ನವೀನ್_ಕುಮಾರ್

#ಶಿಕಾರಿಪುರ_ತಾಲ್ಲೂಕು_ಪತ್ರಕರ್ತರ_ಸಂಘದ_ಅಧ್ಯಕ್ಷರು

#ಬಹುಮುಖ_ಪ್ರತಿಭೆ_ಅವರದ್ದು

#ಸದ್ಯದಲ್ಲೇ_ಬಿಡುಗಡೆ_ಆಗಲಿದೆ_ಅವರು_ಬರೆದ_ಪುಸ್ತಕ

#ಬುದ್ದಿವಂತರು_ಬಡವರಾಗುವುದೇಕೆ?

#ಈ_ಪುಸ್ತಕದಲ್ಲಿ_ಇದಕ್ಕೆ_ಪರಿಹಾರವೂ_ಇದೆ.


#Shikaripura #journalist #Naveen #digitalcreator #influencer #writer 

   ಗೆಳೆಯ ಶಿರಾಳಕೊಪ್ಪದ ಎಂ. ನವೀನ್ ಕುಮಾರ್ ಶಿಕಾರಿಪುರ ತಾಲ್ಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ ಅವರಿಗೆ ಅಭಿನಂದನೆಗಳು.

   ಇವರು ಬಹುಮುಖ ಪ್ರತಿಭೆಯ ಅಸಾದಾರಣ ಯುವಕರು, ತಾಳಗುಂದದ ಕನ್ನಡದ ಮೊದಲ ಶಾಸನ ಬೆಳಕಿಗೆ ತರಲು ವಿಶೇಷ ಪ್ರಯತ್ನ ಮಾಡಿದವರು.

   ಕನ್ನಡಾಭಿಮಾನಿಗಳು, ಸದಾ ಯುವ ಜನಾಂಗಕ್ಕೆ ಸ್ವಯಂ ಉದ್ಯೋಗ ಇತ್ಯಾದಿ ಸ್ಪೂರ್ತಿ ತುಂಬುವ ಕ್ರಿಯಾಶೀಲರು.

   ಅತ್ಯುತ್ತಮ ಓದುಗ- ವಾಘ್ಮಿ ಮತ್ತು ಬರಹಗಾರರೂ ಹೌದು.

   ಇವರು ಈಗಾಗಲೇ ವಿದ್ಯಾರ್ಥಿಗಳಿಗೆ, ಸ್ವಯಂ ಉದ್ಯೋಗಿಗಳಿಗೆ ಅನೇಕ ಉಪಯುಕ್ತ ಪುಸ್ತಕ -ಕೈಪಿಡಿಗಳನ್ನ ಬರೆದು ಪ್ರಕಟಿಸಿದ್ದಾರೆ.

    ಇವರ ಅಸಂಖ್ಯಾತ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟ ಆಗಿದೆ.

    ಸದ್ಯದಲ್ಲೇ ಕನ್ನಡ ನಾಡಿನ ಜನರಿಗೆ ಇವರು ಬರೆದ ವಿಶೇಷ ಪುಸ್ತಕ ಕೈ ಸೇರಲಿದೆ ಈ ಪುಸ್ತಕದ ಶಿರ್ಷಿಕೆ #ಬುದ್ದಿವಂತರೇಕೆ_ಬಡವರು?...

  ಇದಕ್ಕೆ ಮುನ್ನುಡಿ ಬರೆದಿದ್ದಾರೆ ಪ್ರಖ್ಯಾತ ಸಾಹಿತಿ ಕುಂ.ವೀರಭದ್ರಪ್ಪನವರು.

   ನವೀನ್ ಕುಮಾರ್  ಅವರು ನಮ್ಮ ಮೆದುಳಿಗೇ ಕೆಲಸ ಕೊಡುತ್ತಾರೆ, ತರ್ಕ ಮಾಡಲು ಪ್ರೇರೇಪಿಸುತ್ತಾರೆ ಅಷ್ಟೇ ಅಲ್ಲ ಸೋತರೂ ಎದ್ದು ನಿಂತು ಮತ್ತೆ ಗೆಲ್ಲುವ ಪಾಠ ಹೇಳುತ್ತಾರೆ ಸದ್ಯದಲ್ಲಿ ಬಿಡುಗಡೆ ಆಗಲಿರುವ ಇವರು ಬರೆದ ಪುಸ್ತಕ ಈಗಿನ ತಲೆಮಾರಿಗೆ ದಾರಿ ದೀಪ ಆಗಲಿದೆ.

   ನವೀನ್ ಕುಮಾರ್  ಅವರ #ಪೇಸ್_ಬುಕ್ ಲೇಖನ ಒಂದು ಇಲ್ಲಿ Repost ಮಾಡಿದ್ದೇನೆ ಓದಿ ಅವರ ಬರವಣಿಗೆ ಎಷ್ಟು ವಿಭಿನ್ನ ಎನ್ನಲು ಈ ಲೇಖನ ಸಾಕ್ಷಿ.
  
#ಪತ್ರಕರ್ತ_ನವೀನರ_ಪೇಸ್_ಬುಕ್_ಲೇಖನ...

 #ಏನು_ಗೊತ್ತಿಲ್ಲದವರು_Empire_ಕಟ್ಟುತ್ತಾರೆ!

#ಎಲ್ಲಾ_ಗೊತ್ತಿರುವವರು_EMI_ಕಟ್ಟ್ತಾರೆ !

#ಏಕೆ?

#why?...

ಆ ಒಂದು "ಯಕ್ಷ ಪ್ರಶ್ನೆ" 
#sciencebehindthemoney (ಹಣದ ಹಿಂದಿರುವ ವಿಜ್ಞಾನ) ಭಾಗ-1

ನಮಸ್ಕಾರ ಸ್ನೇಹಿತರೇ,
ನಾನು ಈ ಪುಸ್ತಕವನ್ನು ಅಥವಾ ನಮ್ಮ ಈ ಪಯಣವನ್ನು ಒಂದು ಸಣ್ಣ ಆದರೆ ಬಹುಶಃ ನಿಮ್ಮ ಜೀವನವನ್ನೇ ಬದಲಿಸಬಲ್ಲ ಒಂದು ಪ್ರಶ್ನೆಯೊಂದಿಗೆ ಆರಂಭಿಸಲು ಬಯಸುತ್ತೇನೆ.

  ಮಹಾಭಾರತದಲ್ಲಿ ವನವಾಸದ ಸಮಯದಲ್ಲಿ ಯಕ್ಷನು ಧರ್ಮರಾಯನಿಗೆ ಜೀವನದ ಗಹನವಾದ ಪ್ರಶ್ನೆಗಳನ್ನು ಕೇಳಿದನು.

   ಆ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದರಿಂದಲೇ ಪಾಂಡವರು ಬದುಕಿ ಉಳಿದರು.

   ಇಂದು 21ನೇ ಶತಮಾನದಲ್ಲಿ, ನಮ್ಮ ಸಮಾಜದ ಪ್ರತಿಯೊಬ್ಬ ಮಧ್ಯಮ ವರ್ಗದ ಮನುಷ್ಯನನ್ನೂ, ಪ್ರತಿಯೊಬ್ಬ ಯುವಕನನ್ನೂ ಕಾಡುತ್ತಿರುವ ಆಧುನಿಕ "ಯಕ್ಷ ಪ್ರಶ್ನೆ" ಒಂದಿದೆ. 

  ಅದು ನಮ್ಮ ನಿದ್ದೆಗೆಡಿಸಿದೆ ಅದು ನಮ್ಮ ನೆಮ್ಮದಿಯನ್ನು ಕದ್ದಿದೆ
ಆ ಪ್ರಶ್ನೆ ಏನು ಗೊತ್ತೇ?...

  ನಮ್ಮ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಗಣಿತದಲ್ಲಿ 100ಕ್ಕೆ 100 ಅಂಕ ಪಡೆದವರು, ತರಗತಿಗೆ ಮೊದಲ Rank ಬಂದವರು, ಎಂಬಿಎ (MBA) ಮತ್ತು ಸಿಎ (CA) ಪದವಿ ಪಡೆದ ಮೇಧಾವಿಗಳು ಜೀವನದ ಆರ್ಥಿಕ ಪರೀಕ್ಷೆಯಲ್ಲಿ ಯಾಕೆ ಪರದಾಡುತ್ತಿದ್ದಾರೆ?...

   ಅದೇ ಸಮಯದಲ್ಲಿ... ಶಾಲೆಯ ಮೆಟ್ಟಿಲೇ ಹತ್ತದ ಸಹಿ ಹಾಕಲೂ ಬಾರದ ಲೆಕ್ಕದ ಗಂಧ-ಗಾಳಿ ಗೊತ್ತಿಲ್ಲದ ಎಷ್ಟೋ ಜನರು, ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯವನ್ನು ಕಟ್ಟಿ, ಈ ಮೇಧಾವಿಗಳಿಗೆ ಕೆಲಸ ಕೊಡುತ್ತಿದ್ದಾರಲ್ಲ... ಇದು ಹೇಗೆ ಸಾಧ್ಯ?” .. 

  ಒಮ್ಮೆ ನಿಮ್ಮ ಸುತ್ತಮುತ್ತ ಕಣ್ಣಾಡಿಸಿ ನೋಡಿ. ಈ ದೃಶ್ಯ ನಿಮಗೆ ಪ್ರತಿದಿನ ಕಾಣಿಸುತ್ತದೆ.

   ಒಬ್ಬ ವ್ಯಕ್ತಿ ಇದ್ದಾನೆ—ಅವನ ಹೆಸರು ‘ರಮೇಶ್’ ಎಂದುಕೊಳ್ಳೋಣ, ರಮೇಶ್ ಹತ್ತಿರ ಡಬಲ್ ಡಿಗ್ರಿ ಇದೆ. 

   ಎಕ್ಸೆಲ್ ಶೀಟ್ (Excel Sheet) ನಲ್ಲಿ ಎಂತಹದ್ದೇ ಕಷ್ಟದ ಲೆಕ್ಕವಿದ್ದರೂ ಕಣ್ಣುಮುಚ್ಚಿ ಬಿಡಿಸುತ್ತಾನೆ ಆತನ ಐಕ್ಯೂ (IQ) ತುಂಬಾ ಹೆಚ್ಚಿದೆ.

  ಆದರೆ... ಪ್ರತಿ ತಿಂಗಳ 25ನೇ ತಾರೀಕು ಬಂತೆಂದರೆ ಸಾಕು, ರಮೇಶ್ ಮುಖದಲ್ಲಿ ಬೆವರು ಇಳಿಯುತ್ತದೆ.

 ಮನೆ ಬಾಡಿಗೆ, ಸಾಲದ ಕಂತು (EMI), ಮಕ್ಕಳ ಸ್ಕೂಲ್ ಫೀಸ್... ಇವನ್ನೆಲ್ಲಾ ಹೊಂದಿಸಲು ಆತ ಹೈರಾಣಾಗುತ್ತಾನೆ. 

  ಆತನ ಬ್ಯಾಂಕ್ ಖಾತೆ ಸದಾ ಖಾಲಿ ಆತನ ಮನಸ್ಸು ಸದಾ ಆತಂಕದ ಗೂಡು.

   ಇನ್ನೊಂದು ಕಡೆ ನೋಡಿ. ಅಲ್ಲಿ ‘ಶಿವಣ್ಣ’ ಇದ್ದಾನೆ. ಶಿವಣ್ಣನಿಗೆ ‘ಟ್ರಿಗ್ನಾಮೆಟ್ರಿ’ (Trigonometry) ಗೊತ್ತಿಲ್ಲ, ‘ಬ್ಯಾಲೆನ್ಸ್ ಶೀಟ್’ ಓದಲು ಬರುವುದಿಲ್ಲ. ಆತ ಮಾತನಾಡಿದರೆ ಹಳ್ಳಿ ಭಾಷೆ.

  ಆದರೆ... ಶಿವಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಆತ ಒಂದು ಸೈಟ್ ತಗೊಂಡರೆ ಅದರ ಬೆಲೆ ಏರುತ್ತದೆ, ಆತ ಒಂದು ಅಂಗಡಿ ಇಟ್ಟರೆ ಅಲ್ಲಿ ಜನ ಮುಗಿಬೀಳುತ್ತಾರೆ. 

  ಆತನ ಮುಖದಲ್ಲಿ ಸದಾ ಒಂದು ನೆಮ್ಮದಿಯ ನಗು ಇದೆ ಹಣ ಆತನನ್ನು ಹುಡುಕಿಕೊಂಡು ಹೋಗುತ್ತಿದೆ.

  ಈ ವ್ಯತ್ಯಾಸವನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ಆ ಪ್ರಶ್ನೆ ಸುಳಿಯುವುದಿಲ್ಲವೇ?...

“Why? ಎಂತಕ್ಕೆ ಹೀಗೆ?”

ನನಗೂ ಇದೇ ಪ್ರಶ್ನೆ ಕಾಡಿತ್ತು. ವರ್ಷಗಟ್ಟಲೆ ಕಾಡಿತ್ತು 
ನಮಗೆ ಬಾಲ್ಯದಿಂದಲೂ ಒಂದು ಸುಳ್ಳನ್ನು ಬಲವಂತವಾಗಿ ಕಲಿಸಲಾಗಿದೆ:

“ಮಗನೇ, ಚೆನ್ನಾಗಿ ಓದು. ಗಣಿತ ಕಲಿ. ಲೆಕ್ಕಚಾರದಲ್ಲಿ ಪಕ್ಕಾ ಇರು. ಆಗ ಮಾತ್ರ ನೀನು ಶ್ರೀಮಂತನಾಗುತ್ತೀಯ.”

ಸ್ನೇಹಿತರೇ, ನಾನು ನೂರಾರು ಪುಸ್ತಕಗಳನ್ನು ಓದಿ, ಮನಶಾಸ್ತ್ರಜ್ಞರನ್ನು ಭೇಟಿಯಾಗಿ, ಯಶಸ್ವಿ ಉದ್ಯಮಿಗಳ ಜೊತೆ ಸಮಯ ಕಳೆದ ನಂತರ ನನಗೆ ಅರ್ಥವಾಯಿತು—ಅದು ಹಸಿ ಸುಳ್ಳು ಎಂದು!

ಸತ್ಯ ಏನು ಗೊತ್ತೇ?
ನಾನು ಈ ಪುಸ್ತಕದ ಮೊದಲ ಮಂತ್ರವನ್ನು ನಿಮಗೆ ನೀಡುತ್ತಿದ್ದೇನೆ. ಇದನ್ನು ನಿಮ್ಮ ಮನಸ್ಸಿನಾಳದಲ್ಲಿ ಅಚ್ಚೊತ್ತಿಕೊಳ್ಳಿ:
“Money is not Mathematics – Money is Science.”

ಹಣ ಎನ್ನುವುದು ಗಣಿತವಲ್ಲ – ಹಣ ಎನ್ನುವುದು ಒಂದು ವಿಜ್ಞಾನ ಆದರೆ ಎಚ್ಚರ! ನಾನು ಹೇಳುತ್ತಿರುವ ವಿಜ್ಞಾನ ನೀವು ಶಾಲೆಯಲ್ಲಿ ಕಲಿತ ಫಿಸಿಕ್ಸ್ (Physics) ಅಥವಾ ಕೆಮಿಸ್ಟ್ರಿ (Chemistry) ಅಲ್ಲ. ಇದು ರಾಕೆಟ್ ಉಡಾಯಿಸುವ ವಿಜ್ಞಾನವಲ್ಲ.

 ಇದು “ಮನಸ್ಸಿನ ವಿಜ್ಞಾನ” (The Science of the Mind).
ಇದು “ಭಾವನೆಯ ವಿಜ್ಞಾನ” (The Science of Emotion).
ಇದು “ನಂಬಿಕೆಯ ವಿಜ್ಞಾನ” (The Science of Belief).

ಹೌದು, ಹಣಕಾಸು ಎನ್ನುವುದು ಫಾರ್ಮುಲಾ (Formula) ಅಲ್ಲ, ಅದು ಫೀಲಿಂಗ್ (Feeling).

ಈ ಅಧ್ಯಾಯದಲ್ಲಿ, ನಾವು ಆ ಭಾವನೆಯ ಆಳಕ್ಕೆ ಇಳಿಯಲಿದ್ದೇವೆ.

 ಬನ್ನಿ, ಹಣದ ಹಿಂದಿರುವ ಅಸಲಿ ರಹಸ್ಯವನ್ನು ಭೇದಿಸೋಣ.

ಲೇಖಕರು
#ನವೀನ್‌_ಕುಮಾರ್_ಎಂ
ಸಂಸ್ಥಾಪಕರು ಉದ್ಯಮಮಿತ್ರ.

  ಇವರ ಸಂಪರ್ಕ ಸಂಖ್ಯೆ ಮತ್ತು ಪೇಸ್ ಬುಕ್ ಪ್ರೊಪೈಲ್ ಲಿಂಕ್ ಕಾಮೆಂಟ್ ನಲ್ಲಿದೆ ನೋಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...