#ನಾ_ಹ್ಯಾಂಗ_ಮರೆಯಲಿ_ಉಂಡೆಕಡಬು.
#ಮತ್ತೆ_ಮತ್ತೆ_ಉಂಡೇ_ಕಡಬು.
#ಪಶ್ಚಿಮಘಟ್ಟದ_ಮಲೆನಾಡು_ಕರಾವಳಿಯಲ್ಲಿ_ಮಾತ್ರ_ಚಿರಪರಿಚಿತ_ಉಂಡೆಕಡುಬು.
#ಸಸ್ಯಹಾರ_ಮಾಂಸಹಾರಕ್ಕೂ_ಬಳಕೆ.
#malenadu #westernghats #desifoods #foodbloggers #shivamogga #kodagu #chikkamagalore #karavali #undekadabu
ಮಲೆನಾಡಿನ ಮಕ್ಕಳು ಉಂಡೆಕಡುಬು ಎಂದರೆ ಉರಿದು ಬೀಳುವುದು ಏಕೆ?
ಇತ್ತೀಚಿನ #ಮಲ್ನಾಡು_ಕಾರ್ಟೂನ್ ನಲ್ಲಿ "ಅಮ್ಮಾ ... ಇವತ್ತೇನೆ ?"...ಅನ್ನೋ #ಉಂಡೆ_ಕಡಬು ಪ್ರಸಂಗ ಬಾರೀ ವೈರಲ್ಲೂ ಆಗಿತ್ತು.
ಅಕ್ಕಿ ತುರಿ ಉಪ್ಪಿನೊಂದಿಗೆ ಬೇಯಿಸಿ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟರೆ ಆಯಿತು ಅದಾಗೆ ಬೆಂದು ಉಂಡೆ ಕಡಬು ಆಗುವ ಸುಲಭ ಅಡಿಗೆಗೆ ಗೃಹಿಣಿಯರು ಹೆಚ್ಚು ಅವಲಂಬಿಸಿರುತ್ತಾರೆ.
ಬೇರೆ ಉಪಹಾರ ತಯಾರಿಸುವುದು ಶ್ರಮದಾಯಕ ಅದು ಅವರಿಗೆ ಇಷ್ಟ ಇರುವುದಿಲ್ಲ.
ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯ ಉಪಹಾರ ಅಕ್ಕಿ ಉಂಡೆ ಕಡಬು ಇದಕ್ಕೆ ನಂಜಿಕೊಳ್ಳುವ ವ್ಯಂಜನ ಮಾತ್ರ ಬದಲಾಗುತ್ತದಾರಿಂದ ಈ ಭಾಗದ ಮಕ್ಕಳು ಉಂಡೆ ಕಡಬು ಅಂದರೆ ಉರಿದು ಬೀಳುತ್ತಾರೆ.
ಹಳ್ಳಿಯಿಂದ ಪೇಟೆ ಶಾಲೆಗೆ ಬರುವ ಮಕ್ಕಳ ಟಿಪನ್ ಡಬ್ಬಿಯಲ್ಲಿರುವ ಉಂಡೆ ಕಡುಬು ಪೇಟೆ ಮಕ್ಕಳಿಂದ ಟ್ರೋಲ್ ಆಗುವುದೂ ಒಂದು ಕಾರಣ.
ಉಂಡೆ ಕಡಬು ಪಶ್ಚಿಮ ಘಟ್ಟದಲ್ಲಿನ ಮಲೆನಾಡಿನ ಕೆಲ ಪ್ರದೇಶದಲ್ಲಿ ಈ ಪರಿ ಖ್ಯಾತಿ (ಕುಖ್ಯಾತಿ) ಪಡೆಯಲು ಕಾರಣ ಏನಿರಬಹುದು?
ತಾವು ಬೆಳೆಯುವ ಅಕ್ಕಿ ಕಾರಣವಾ?.... ಇಡ್ಲಿ, ದೊಸೆ ಮತ್ತು ರೊಟ್ಟಿಯಷ್ಟು ಶ್ರಮ ಇಲ್ಲವ೦ತನಾ?...
ರಾತ್ರಿ ಬಳಸಿ ಉಳಿದ ಚಟ್ನಿ, ಸಾರು, ಮೀನು ಮತ್ತು ಮಾಂಸದ ಅಡುಗೆಗೆ ಒಳ್ಳೆ ಕಾಂಬಿನೇಷನ್ ಅಂತಾನಾ?...
ಹೀಗೆ ಹತ್ತು ಹಲವು ಪ್ರಶ್ನೆಗಳಿದೆ.
ಕರಾವಳಿ ಪ್ರದೇಶದಲ್ಲಿ ಇದಕ್ಕೆ ಬೇರೆ ಹೆಸರಲ್ಲಿ ಕರೆಯುತ್ತಾರೆ ಮತ್ತು ಅವರವರ ಪದ್ದತಿಯಂತೆ ಬಿನ್ನ ಬಿನ್ನ ರೆಸಿಪಿಗಳಿದೆ ಈ ಉಂಡೆ ಕಡುಬಿಗೆ .
ಇತ್ತೀಚಿನ #ಮಲ್ನಾಡು_ಕಾರ್ಟೂನ್ ನಲ್ಲಿ "ಅಮ್ಮಾ ... ಇವತ್ತೇನೆ ?"....
ಅನ್ನೋ ಉಂಡೆ ಕಡಬು ಪ್ರಸಂಗ ಬಾರೀ ವೈರಲ್ಲೂ ಆಗಿತ್ತು.
ಈಶಾನ್ಯ ಭಾರತ, ಗುಜರಾತ್ ಮತ್ತು ಪಂಜಾಬ್ ಅಡುಗೆಯಲ್ಲಿ ಅಕ್ಕಿಯ ಬೇರೆ ರೀತಿ ಕಡಬು ಇದೆ.
ಆದರೆ ನಮ್ಮ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಶಿವಮೊಗ್ಗ - ಚಿಕ್ಕ ಮಗಳೂರು - ಕೊಡಗು ಭಾಗದ ಈ ಉಂಡೆ ಕಡಬು ಬೇರೆಲ್ಲೂ ಕಾಣಬರುವುದಿಲ್ಲ.
ಹಾಗಾಗಿ ಇದು ಈ ಭಾಗದ Signature receipe ಮತ್ತು exclusive ತಿಂಡಿಯೇ ಸರಿ.
ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯ ಉಪಹಾರ ಅಕ್ಕಿ ಉಂಡೆ ಕಡಬು.
ಇದಕ್ಕೆ ನಂಜಿಕೊಳ್ಳುವ ವ್ಯಂಜನ ಮಾತ್ರ ಬದಲಾಗುತ್ತದಾರಿಂದ ಈ ಭಾಗದ ಮಕ್ಕಳು ಉಂಡೆ ಕಡಬು ಅಂದರೆ ಉರಿದು ಬೀಳುತ್ತಾರೆ.
ಉಪಹಾರದ ಏಕತಾನತೆ ಒಂದಾದರೆ,ಶಾಲಾ ಸಹಪಾಟಿಗಳು ಕಾಲೆಳೆಯುವುದು, ಇವರ ಟಿಫನ್ ಬಾಕ್ಸ್ ನಲ್ಲಿ ಯಾವತ್ತೂ ಉಂಡೆ ಕಡಬು ಎನ್ನುವುದು ಇವರಿಗೆ ಕೀಳರಿಮೆ ಅನ್ನಿಸಿದೆ.
ಆದರೆ ಮಳೆಗಾಲದಲ್ಲಿ ಚಳಿಗಾಲದಲ್ಲಿ ಬೆಳಿಗ್ಗೆ ಬೆಳಿಗ್ಗೆ ಬಿಸಿ ಬಿಸಿ ಉಂಡೆ ಕಡಬು ನೀಡುವ ರುಚಿ - ಘಮ- ತೃಪ್ತಿ ಮಾತ್ರ ನಂಬರ್ ಒನ್ ಎನ್ನುವುದು ಎಲ್ಲರಿಗೂ ಗೊತ್ತು.
ಈ ಉಂಡೇ ಕಡಬುನಿಲ್ಲಿ ತರಹೇವಾರಿ ರುಚಿ -ಬಣ್ಣ - ಘಮ ನಾವು ಬೆಳೆಯುವ ನೂರಾರು ತಳಿಯ ಅಕ್ಕಿಯಿಂದ ಬದಲಾಗುತ್ತಿರುತ್ತದೆ.
ಜಾತಿ ಮತ್ತು ಅಂತಸ್ತುಗಳಿಗೆ ಅನುಗುಣವಾಗಿ ಅದರ ಅಕೃತಿ ಮತ್ತು ಅದರ ಜೊತೆ ತುಪ್ಪ -ಬೆಲ್ಲ - ಬೆಣ್ಣೆ ಸೇರುತ್ತದೆ.
ಮಾಂಸಹಾರಿಗಳಲ್ಲೂ ಅವರ ಅಂತಸ್ತಿಗೆ ತಕ್ಕಂತೆ ತರಹಾವಾರಿ ಮಾಂಸಗಳ ಖಾದ್ಯ ಜೊತೆ ಆಗುತ್ತದೆ.
#ಸುಲಭ_ರೆಸಿಪಿ
ಅಕ್ಕಿ ತುರಿ ಉಪ್ಪಿನೊಂದಿಗೆ ಬೇಯಿಸಿ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟರೆ ಆಯಿತು ಅದಾಗೆ ಬೆಂದು ಉಂಡೆ ಕಡಬು ಆಗುವ ಸುಲಭ ಅಡಿಗೆಗೆ ಗೃಹಿಣಿಯರು ಹೆಚ್ಚು ಅವಲಂಬಿಸಿರುವುದರಿಂದ ಬೇರೆ ಉಪಹಾರ ತಯಾರಿಸುವ ಶ್ರಮ ಅವರಿಗೆ ಇಷ್ಟ ಇರುವುದಿಲ್ಲ.
ಮಡಿಕೆರೆ, ಚಿಕ್ಕಮಗಳೂರು ಭಾಗದ ಹೊಂ ಸ್ಟೇ ಗೆ ಬರುವ ಪ್ರವಾಸಿಗಳಿಂದ ಈ ಮಲೆನಾಡ ಕ್ಯೂಸಿನ್ ಉಂಡೆ ಕಡಬು ಪಂದಿ ಕರಿ, ಉಂಡೆ ಕಡಬು ಚಿಕನ್, ಉಂಡೆ ಕಡಬು ಕಳಲೆ ಪಲ್ಯಕ್ಕೆ ಹೆಚ್ಚು ಬೇಡಿಕೆ ಉಂಟಂತೆ.
ಇದೊಂದು ರೀತಿ ಬ್ರೆಡ್ ರೀತಿ ಎಲ್ಲಾ ರೀತಿ ಆಹಾರಕ್ಕೂ ಹೊಂದುತ್ತದೆ.
ಇವತ್ತು ನಮ್ಮ ಮನೇನಲ್ಲಿ "ಎಂತ ತಿಂಡೀನೆ" ಅಂದಾಗ ಉಂಡೆ ಕಡಬು ಅನ್ನೋ ಉತ್ತರ ಕೇಳಿ ಬಂದಾಗ ಇದೆಲ್ಲ ನೆನಪಾಯಿತು.
Comments
Post a Comment