Skip to main content

3537. ಸೋಪಿನ ಕಥೆ

#ಸೋಪಿನ_ಪುರಾಣ

#ಶಿವಮೊಗ್ಗ_ಸಮೀಪದ_ನ್ಯಾಮತಿ_ತೀರ್ಥರಾಮೇಶ್ವರ_ಗುಡ್ಡದ_ಸವಳು

#ಶತಮಾನಗಳ_ಕಾಲ_ಈ_ಭಾಗದ_ಸೋಪು_ಆಗಿತ್ತು.

#ಸಾವಯವ_ಮಣ್ಣಿನ_ಸೋಪು

#197Oರ_ನಂತರ_ಹುಟ್ಟಿದವರಿಗೆ_ಗೊತ್ತೇ_ಇಲ್ಲದ_ಹಿಂದಿನ_ಸೋಪಿನ_ಪ್ರಪಂಚ

#ಶಿಲಾಯುಗದಲ್ಲೂ_ಜನ_ಸ್ನಾನಕ್ಕೆ_ಬಳಸುತ್ತಿದ್ದ_ಕ್ಷಾರಯುಕ್ತ_ಮಣ್ಣು.


#soap #detergent #bath #mud #deadsea #lifeboy #carbolicsoap 

    ಈಗೆಲ್ಲ ಅಮೆಜಾನ್ ನಿಂದ ಡೆಡ್ ಸೀ (ಮೃತ ಸಮುದ್ರದ) ಮಣ್ಣಿನ ಸೋಪು ನಮ್ಮ ಹಳ್ಳಿಗಳಲ್ಲೂ ಖರೀದಿಸುತ್ತಿದ್ದಾರೆ.

   ಕಾರಣ ಚಮ೯ ಕಾಂತಿ ಹೆಚ್ಚಿಸುತ್ತದೆ, ಮೃದು ಮಾಡುತ್ತದೆ, ಚರ್ಮದ ಟಾಕ್ಸಿನ್ ಕೊಳೆ ತೆಗೆಯುತ್ತದೆ, ಇದರಿಂದ ಪೇಶಿಯಲ್ ವಾಷ್ ಮಾಡುವುದರಿಂದ ಮುಖದ ಚರ್ಮ ಹೈಡ್ರೇಟ್ ಮಾಡುತ್ತದೆ ಅಂತ.

  ಲೈಫ್‌ಬಾಯ್ ಅನ್ನು 1895 ರಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಲಿವರ್ ಬ್ರದರ್ಸ್ ಪರಿಚಯಿಸಿದರು.

   ಮೂಲತಃ ಫೀನಾಲ್ ಹೊಂದಿರುವ ಕಾರ್ಬೋಲಿಕ್ ಸೋಪ್ ಆಗಿದ್ದ ಇದು ನಂತರ ಔಷಧೀಯ ಕಾರ್ಬೋಲಿಕ್ ವಾಸನೆಯಿಲ್ಲದೆ ವಿವಿಧ ಪ್ರಭೇದಗಳನ್ನು ಪರಿಚಯಿಸಲಾಯಿತು.

  1895 ರಲ್ಲಿ ಮುಂಬಾಯಿಯ ಹಾರ್ಬರ್ ಗೆ ಮೊದಲ ಲೈಫ್ ಬಾಯ್ ಸೋಪಿನ ಕಂಟೈನರ್ ಬಂದಿಳಿದ ದಾಖಲೆ ಇದೆ.

  1950 ರ ದಶಕದ ಉತ್ತರಾರ್ಧದಲ್ಲಿ ಹವಳದ ಬಣ್ಣದ ಲೈಫ್‌ಬಾಯ್ ಬಾರಿ ಪ್ರಸಿದ್ದಿ ಪಡೆದಿತ್ತು.

  ಲೈಫ್‌ಬಾಯ್ ಸುಮಾರು 1923 ರಿಂದ 50 ರ ದಶಕದ ಮಧ್ಯಭಾಗದವರೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅತ್ಯಂತ ಜನಪ್ರಿಯ ಸೋಪ್‌ಗಳಲ್ಲಿ ಒಂದಾಗಿತ್ತು.

    ಸೋಪು ಮಾರುಕಟ್ಟಿಗೆ ಬರುವ ಮುನ್ನ ಜನಗಳು ಆಯಾ ಅವರ ಪ್ರದೇಶದಲ್ಲಿ ಸಿಗುವ ಕ್ಷಾರದ ಮಣ್ಣು ಸೋಪಿನಂತೆ ಬಳಸುತ್ತಿದ್ದರು.

  ಕ್ಷಾರಯುಕ್ತ ಮಣ್ಣಿನ ಸ್ನಾನದ ಬಳಕೆ ಕ್ರಿಸ್ತ ಪೂರ್ವ 2800 ರಲ್ಲಿ ಇದ್ದಿತ್ತು ಎಂಬ ಸಂಶೋದನೆಯಲ್ಲಿ ಗೊತ್ತಾಗಿದೆ ಅಂತೆ.

    ಶೀಗೆ ಪುಡಿ, ಅಂಟುವಾಳಗಳನ್ನು ಬಳಕೆ ಮಾಡುವುದು ಕೂಡ ಈಗ ಕಡಿಮೆ.

  ಒಂದು ಕಾಲದಲ್ಲಿ ಅಂದರೆ ಸುಮಾರು 1965ರ ತನಕ ನಮ್ಮ ಭಾಗದಲ್ಲಿ ಹತ್ತಾರು ಕತ್ತೆ ಮೇಲೆ ಮತ್ತು ಎತ್ತಿನ ಗಾಡಿಗಳಲ್ಲಿ ಸವಳು ಮಣ್ಣಿನ ಮೂಟೆಗಳನ್ನ ತುಂಬಿಕೊಂಡು "ಸವಳು ಬೇಕಾ ಸವಳು" ಅಂತ ಸೋಪಿನ ಮಣ್ಣು ಮಾರಾಟಕ್ಕೆ ಬರುತ್ತಿದ್ದರು.

   ಆದರೆ 50 ವಷ೯ದಲ್ಲಿ ಎಂತಹ ಬದಲಾವಣೆ ಆಯಿತು ನೋಡಿ ಈಗ ಸೋಪು ಶಾಂಪುವಿನ ಕಾಲ.

  ಆ ಕಾಲದಲ್ಲಿ ಒಂದು ಸೇರು ಭತ್ತ ಅಥವ ರಾಗಿಗೆ 3 ಸೇರು ಸವಳು ಮಣ್ಣು ಮಾರಾಟ ಮಾಡುತ್ತಿದ್ದರಂತೆ.

  ಖರೀದಿಸಿದವರು ಅದನ್ನ ಸೋರುವ ಮಣ್ಣಿನ ಮಡಕೆಗಳಲ್ಲಿ (ಉಪಯೋಗಕ್ಕೆ ಬರದ ಮಡಕೆ) ಶೇಖರಿಸಿ ಇಡುತ್ತಿದ್ದರು.

    ಇದನ್ನ ಪಾತ್ರೆ ತೊಳೆಯಲು, ಸ್ನಾನಕ್ಕೆ ಮತ್ತು ಬಟ್ಟೆ ತೊಳೆಯಲು ಉಪಯೋಗಿಸುತ್ತಿದ್ದರು.

   ಇದರಲ್ಲಿ ನೊರೆ ಬರುತ್ತಿತ್ತು ಮತ್ತು ಮಣ್ಣಿನಲ್ಲಿನ ಸೂಕ್ಷ್ಮ ಮರಳು ಮನುಷ್ಯನ ಚಮ೯ದ ಮೇಲ್ಪದರದ ಕೊಳೆ ಬ್ರಷ್ ನಂತೆ ತೆಗೆಯುತ್ತಿತ್ತು.

  ಹೊನ್ನಾಳಿ ಮತ್ತು ನ್ಯಾಮತಿ ಮದ್ಯದ ಬೆಳಗುತ್ತಿಯ ತೀಥ೯ರಾಮೇಶ್ವರ ದೇವರ ಗುಡ್ಡ ಅನೇಕ ಶತಮಾನ ಈ ಸವಳು (ಸೋಪಿನ ಮಣ್ಣಿನ) ಗಣಿ ಆಗಿತ್ತು.

  ಮಂಡ್ಯದಲ್ಲೂ, ಚಿಕ್ಕಮಗಳೂರಿನಲ್ಲೂ ಈ ರೀತಿಯ ಮಣ್ಣಿನ ಗುಡ್ಡದಿಂದ ಸವಳು ಮಣ್ಣು ಮಾರಾಟ ಬಳಕೆ ಇತ್ತಂತೆ.

  ನಂತರ ಕಸ್ತೂರಿ, 50I ಬಾರ್ ಸೋಪು, ನಂದಿ, ವಿನಾಯಕ ಹೀಗೆ ಮುಂದುವರಿದು ವಾಷಿOಗ್ ಮೆಷಿನ್ ಜಗತ್ತಿನಲ್ಲಿ ಸೇರಿ ನಿರ್ಮಾ,ಸಪ್೯, ಅಕ್ಸೆಲ್ ವಾಷಿ೦ಗ್ ಪೌಡರ್ ವರೆಗೆ ನಾವು ಬಂದಿದ್ದೇವೆ.

 ಅದೇ ರೀತಿ ಸ್ನಾನದ ಸೋಪುಗಳು ಲೈಪ್ ಬಾಯ್ ನಿಂದ ಮೈಸೂರು ಸ್ಯಾ೦ಡೆಲ್ ವರೆಗೆ ಬದಲಾಗಿದ್ದೇವೆ, ಹಮಾಮ್, ಲಕ್ಸ್ ಇವೆಲ್ಲವೂ ಇದೆ.

  ಈಗ 100% ಸಾವಯವ ಸೋಪು ಅಂತ ಜ್ವಾಲಮುಖಿ ಮಣ್ಣಿನ ಸೋಪು, ಡೆಡ್ ಸೀ ಮಡ್ ಸೋಪು ಅ೦ತೆಲ್ಲ ಶ್ರೀಮಂತ ವಗ೯ದಲ್ಲಿ ಹೆಚ್ಚು ಪ್ರಚಲಿತವಾಗಿದೆ.

  ಕೇವಲ 50 ವಷ೯ದ ಹಿಂದೆ ಬಳಕೆಯಲ್ಲಿದ್ದ ನಮ್ಮ ಜಿಲ್ಲೆಯ ಸವಳು ಸೋಪಿನ ಮಣ್ಣು ಆದುನೀಕರಣದಲ್ಲಿ ಕಳೆದು ಹೋದರು ಈಗ ಅದು ದೂರದ ಜ್ವಾಲಾಮುಖಿ ಮಣ್ಣಿನ ಅಥವ ಡೆಡ್ ಸೀ ಮಣ್ಣಿನ ಸೋಪಿನ ರೂಪದಲ್ಲಿ ದುಬಾರಿ ಬೆಲೆಯಲ್ಲಿ ಪ್ರತ್ಯಕ್ಷ ಆಗಿದೆ.

  ಕಾಲ ಚಕ್ರ ಸದಾ ತಿರುಗುತ್ತಿದೆ ನೋಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...