#ಸೊರಬ_ತಾಲ್ಲೂಕಿನ_ದೂಗೂರು_ಕಾಡಿನಿಂದ
#ಹೊರಬರದ_ಎರೆಡು_ಕಾಡಾನೆಗಳು
#ಮೂರು_ದಿನದಿಂದ_ಸಕ್ರೆಬೈಲಿನ_ನಾಲ್ಕು_ಕುಮ್ಕಿ_ಆನೆಗಳು
#ಅನೇಕ_ಅನುಭವಿ_ಮಾವುತರು
#ನೂರಾರು_ಅರಣ್ಯ_ಇಲಾಖೆ_ಸಿಬ್ಬಂದಿ_ಶ್ರಮಿಸುತ್ತಿದ್ದಾರೆ
#wildelephant #elephantcorridor #soraba #duguru #ulavi #barigi #kyasahuru.
ಭದ್ರಾ ಅಭಯಾರಣ್ಯದ ಕಾಡಾನೆಗಳು ಮಲೆನಾಡಿನಲ್ಲಿ ತಮ್ಮ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಹೊಸ ಕಾರಿಡಾರ್ ವಿಸ್ತರಿಸಿಕೊಂಡು ಮೂರು ವರ್ಷ ಆಗಿದೆ.
ಅವುಗಳು ಸೊರಬ ತಾಲ್ಲೂಕಿನ ಮೂಲಕ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದ ಕಾಳಿ ಅಭಯಾರಣ್ಯದ ಆನೆಗಳ ಸಂಪರ್ಕಿಸಲು ಪ್ರಯತ್ನದಲ್ಲಿದೆ.
ಅವುಗಳನ್ನ ಓಡಿಸುವ ಪ್ರಯತ್ನ ಮಾಡದೆ ಅವುಗಳಷ್ಟಕ್ಕೇ ಬಿಟ್ಟಿದ್ದರೆ ಇನ್ನೂ ಕೆಲವು ಕಿಲೋ ಮೀಟರ್ ಮುಂದೆ ಸಾಗಿ ಈ ವರ್ಷವೇ ದಾಂಡೇಲಿ ಅಭಯಾರಣ್ಯ ಸೇರುತ್ತಿತ್ತು ಅಥವ ಅಲ್ಲಿಗೆ ಸೇರಿ ಕೆಲ ದಿನದ ನಂತರ ವಾಪಾಸು ಬರುವ ಸಾಧ್ಯತೆ ಇತ್ತು ಅಥವ ಉಳುವಿ ಕಾಡಿನಿಂದಲೇ ವಾಪಾಸು ಬಂದ ದಾರಿಯಲ್ಲೇ ವಾಪಾಸಾಗಿ ಮುಂದಿನ ವರ್ಷ ಇದೇ ತಿಂಗಳಲ್ಲಿ ಪುನಃ ದಾಂಡೇಲಿ ಅಭಯಾರಣ್ಯಕ್ಕೆ ಹೋಗುವು ಪ್ರಯತ್ನ ಮಾಡುತ್ತಿತ್ತು ಎಂದು ಆನೆಗಳ ತಜ್ಞರು ಮತ್ತು ಅರಣ್ಯ ಇಲಾಖೆಯ ಹೆಸರು ಹೇಳಿಕೊಳ್ಳದ ಕೆಲವು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.
ಇವತ್ತು ಬೆಳಿಗ್ಗೆ ಥಮ೯ಲ್ ಡ್ರೋನ್ ಕ್ಯಾಮೆರಾದಲ್ಲಿ ದೂಗೂರು ಅರಣ್ಯದಲ್ಲಿ ಕಂಡು ಬಂದ ಆನೆಗಳು ನಂತರ ಎಲ್ಲಿದೆ ಎಂದು ಟ್ರೇಸ್ ಮಾಡಲು ಸಾಧ್ಯವಾಗಲಿಲ್ಲ.
ಕುಮ್ಕಿ ಆನೆಗಳು,ಮಾವುತರು ಮತ್ತು ನೂರಾರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸ ಪಟ್ಟರು ಮೂರು ದಿನದ ಶ್ರಮ ಈ ಕಾಡಿನಿಂದ ಕಾಡಾನೆ ಹೊರ ಹಾಕಲು ಸಾಧ್ಯವಾಗಲಿಲ್ಲ.
ಮೂರು ವರ್ಷಗಳಿಂದ ಹೊಸನಗರ ತಾಲೂಕಿನ ಅರಸಾಳು,ಕೆಂಚನಾಲ,ಮಾದಾಪುರ, ಬಸವಾಪುರ, ಗರ್ತಿಕೆರೆ, ಹೆದ್ದಾರಿಪುರ, ಶಿವಮೊಗ್ಗ ತಾಲ್ಲೂಕಿನ ತುಪ್ಪೂರು, ಜೋಡನಳ್ಳ, ಬ್ಯಾಡನಳ್ಳ ಹಾಗೂ ಸಾಗರ ತಾಲೂಕಿನ ಲಕ್ಕವಳ್ಳಿ, ಮೂಡಾಹಗಲು, ಪತ್ರೆಹೊಂಡ, ಗಿಳಾಲಗುಂಡಿ, ಕೊಲ್ಲಿಬಚ್ಚಲು ಡ್ಯಾಮ್,ತಂಗಳವಾಡಿ, ಹೊಸಕೊಪ್ಪ, ಕಣ್ಣೂರು, ಬೈರಾಪುರ, ದಣಂದೂರು, ಅಂಬ್ಲಿಗೋಳ ಡ್ಯಾಮ್, ಕೊರ್ಲಿಕೊಪ್ಟ್ರ ಇಡುವಳ್ಳಿ, ಬರೂರು ಮತ್ತು ಲಾವಿಗೆರೆ ಗ್ರಾಮದಲ್ಲಿ ಸುತ್ತ ಮುತ್ತಲಿನ ಕಾಡಿನಲ್ಲಿ ಕಾಡಾನೆಗಳ ಅನೇಕ ತಂಡ ಸಂಚರಿಸಿದೆ.
ಆಗ ಅರಣ್ಯ ಇಲಾಖೆ ಈ ರೀತಿ ಯಾವುದೇ ಕುಮ್ಕಿ ಆನೇ ಕರೆಸಿ ವಾಪಾಸು ಕಳಿಸುವ ಪ್ರಯತ್ನ ಮಾಡಿದ ಉದಾಹರಣೆ ಇಲ್ಲ ಆದರೆ ಸೊರಬ ತಾಲೂಕಿನಲ್ಲಿ ಪ್ರವೇಶ ಮಾಡಿದ ತಕ್ಷಣ ಈ ಕಾಡಾನೆಗಳನ್ನ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಕಾಡಿಗೆ ಓಡಿಸುವ ಪ್ರಯತ್ನ ಮಾಡಿದ್ದಾರೆ.
ಇದಕ್ಕೆ ಅವರ ಇಲಾಖೆಯ ಕೆಲ ಅಧಿಕಾರಿಗಳು ವಿರೋದ ವ್ಯಕ್ತ ಪಡಿಸಿದ್ದರು, ವನ್ಯಜೀವಿ ಸಂರಕ್ಷಣಾ ಕ್ರಮಗಳನ್ನು ಅನುಸರಿಸದೆ ಅಧಿಕಾರಿಗಳು ರಾಜಕಾರಣಿಗಳಿಗೆ ಅವರ ಕ್ಷೇತ್ರದಿಂದ ಕಾಡಾನೆ ಓಡಿಸಿದ್ದೇವೆ ಎಂಬ ಶಹಬ್ಬಾಸು ಪಡೆಯಲು ಈ ಆತುರದ ಕ್ರಮವೇ ಮುಂದಿನ ದಿನಗಳಲ್ಲಿ ಅಚಾತುರ್ಯಕ್ಕೆ ಕಾರಣ ಆಗಲಿದೆ ಎಂದು ಎಚ್ಚರಿಸಿದ್ದರು ಅವರ ಮಾತು ಹಿರಿಯ ಅಧಿಕಾರಿಗಳು ಕೇಳಲಿಲ್ಲ ಎಂಬ ಸುದ್ದಿ ಹರಡಿದೆ.
ಏನೇ ಇರಲಿ ಕೆಲ ದಿನಗಳ ಕಾಲ ಈ ಪಟಾಕಿ ಸಿಡಿಸಿ ಅಥವ ಕುಮ್ಕಿ ಆನೆ ಬಳಸಿ ಈ ಕಾಡಾನೆಗಳ ಓಡಿಸುವ ಕೆಲಸ ತಾತ್ಕಾಲಿಕವಾಗಿ ನಿಲ್ಲಿಸಿ ಇಲ್ಲಿರುವ ಎರೆಡು ಕಾಡಾನೆಗಳು ಅವಾಗಿಯೇ ಭದ್ರಾ ಅಭಯಾರಣ್ಯಕ್ಕೆ ವಾಪಾಸಾಗಲು ಅಥವ ಉತ್ತರದ ದಾಂಡೇಲಿ ಅಭಯಾರಣ್ಯದ ಕಡೆಗೆ ಅವುಗಳು ಸಾಗಲು ಅನುವು ಮಾಡಿಕೊಡುವ ಬಗ್ಗೆ ವನ್ಯಜೀವಿ ಸಂರಕ್ಷಣಾ ಇಲಾಖೆಯ ತಜ್ಞರ ಸಲಹೆ ಅಭಿಪ್ರಾಯ ಪಡೆಯುವುದು ಒಳಿತು.
ಇಲ್ಲವಾದಲ್ಲಿ ಈ ಕಾಡಾನೆ ಜೀವಕ್ಕೇ ಅಪಾಯವಾಗುವ ಅಥವ ಕಾಡಾನೆ ಹಾಗೂ ಮನುಷ್ಯರ ನಡುವೆ ಸಂಘರ್ಷವಾಗಿ ಯಾರದದ್ದಾದರು ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಹೆಚ್ಚು ಇದೆ.
Comments
Post a Comment