#ವಾಮದೇವ_ಗೌಡರು
#ಮಹಾನ್_ರೈತ_ಹೋರಾಟಗಾರರು
#ಸೊರಬದ_ದಂಡಾವತಿ_ಆಣೆಕಟ್ಟು_ವಿರೋಧಿ_ಹೋರಾಟ_ಸಮಿತಿ_ಅಧ್ಯಕ್ಷರು
#ಒಂಬತ್ತು_ವರ್ಷದ_ಹಿಂದೆ_ಇದೇ_ದಿನ_ನನ್ನ_ಕಛೇರಿಗೆ_ಬಂದಿದ್ದರು.
#Soraba #Vamadevagowda #Dandavathiriver #SRHiremutt #Kagoduhorata #Ganapathiyappa
ಒಂಬತ್ತು ವರ್ಷಗಳ ಹಿಂದೆ 18- ಡಿಸೆಂಬರ್ - 2016 ರಂದು ನಾನು ಬರೆದ ಪೇಸ್ ಬುಕ್ ಲೇಖನ...
ಇವತ್ತು ದಿಡೀರ್ ಅಂತ ಸೊರಬದ #ವಾಮದೇವ_ಗೌಡರು ಬಂದರು ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು.
ಹಾಲಿ #S_R_ಹಿರೇಮಠರ ರಾಜ್ಯ ಬ್ರಷ್ಟಾಚಾರಿ ವಿರೋದಿ ಆಂದೋಲನದ ಉಪಾಧ್ಯಕ್ಷರು ಇವರ ಜೊತೆ ರಿಪ್ಪನಪೇಟೆಯ ಏಕಾಂಗಿ ಜನಪರ ಹೋರಾಟಗಾರ #ಟಿ_ಆರ್_ಕೃಷ್ಣಪ್ಪ ಕೂಡ ಬಂದಿದ್ದರು.
ಚಹಾ ಸ್ವೀಕರಿಸುತ್ತಾ "ದಂಡಾವತಿ ಹೋರಾಟದ ಸಂದಭ೯ದಲ್ಲಿ ಅರುಣ್ ಪ್ರಸಾದ್ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲಿಸಿ ನಿತ್ಯದ ಊಟದ ವೆಚ್ಚಕ್ಕಾಗಿ ದೇಣಿಗೆ ನೀಡಿದ್ದನ್ನ ಮರೆತಿಲ್ಲ ನಮ್ಮ ಖಚು೯ ವೆಚ್ಚದ ಪಟ್ಟಿ ನೋಡಿದಾಗಲೆಲ್ಲ ಅವರು ನೆನಪಾಗುತ್ತಾರೆ" ಅಂದರು.
ನಾನು ಮರೆತು ಬಿಟ್ಟಿದ್ದೆ,ಆ ದಿನ ಸಾಗರದಿಂದ ನಾನು, ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪ, ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು,ಮಾಜಿ ಶಾಸಕರಾದ ಸ್ವಾಮಿ ರಾವ್, ಕಲ್ಲೂರು ಮೇಘರಾಜ್,ತೀನಾ ಶ್ರೀನಿವಾಸ್, ಪತ್ರಕತ೯ರಾದ ಎಂ.ರಾಘು, ಚಾವಾ೯ಕ ರಾಘು ಮತ್ತು ಗೆಳೆಯರು ದಂಡಾವತಿ ಹೋರಾಟದ ಸ್ಥಳಕ್ಕೆ ಹೋಗಿದ್ದೆವು.
ಅದರ ಹಿಂದಿನ ದಿನ ಗೌರಿ ಗಣಪತಿ ಹಬ್ಬ ಇತ್ತು, ಹೋರಾಟಗಾರರು ಮಣ್ಣಿನ ಗಣಪತಿ ವಿಗ್ರಹ ಪೂಜೆ ಮಾಡಿ ನಿಯೋಜಿತ ಆಣೆಕಟ್ಟು ಪ್ರದೇಶದ ನೀರಲ್ಲಿ ವಿಸಜ೯ನೆ ಮಾಡಿದ್ದರು.
ಮಳೆಗಾಲದ ಆ ದಿನದಲ್ಲೇ ದಂಡಾವತಿ ನದಿ ಸಣ್ಣ ಹಳ್ಳದಂತೆ ಇತ್ತು, ಹಿಂದಿನ ದಿನ ವಿಸಜ೯ನೆ ಮಾಡಿದ ಗಣಪತಿಯೇ ಮುಳುಗಿರಲಿಲ್ಲ.
ಆಗ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪನವರು ಕೈ ಮುಗಿದು "ಮಹಾಗಣಪತಿ ಇಲ್ಲಿ ದಂಡಾವತಿ ಆಣೆಕಟ್ಟು ಕಟ್ಟದಂತೆ ನೋಡಿಕೊಂಡು ಈ ರೈತರ ಹೋರಾಟಕ್ಕೆ ಜಯ ತಂದು ಕೊಡು "ಅಂತ ಬೇಡಿಕೊಂಡರು.
ರೈತ ಪರ ಹೋರಾಟಗಾರ ಗಣಪತಿಯಪರ ಪ್ರಾಥ೯ನೆಯಂತೆ ಮತ್ತು ವಾಮದೇವ ಗೌಡರ ಪ್ರಾಮಾಣಿಕ ಹೋರಾಟದಿಂದ ದಂಡಾವತಿ ಆಣೆಕಟ್ಟು ಇವತ್ತಿನ ತನಕ ನಿಮಾ೯ಣ ಆಗಿಲ್ಲ, ಇದೆಲ್ಲ ಇವತ್ತು ನೆನಪಾಯಿತು.
ವಾಮದೇವ ಗೌಡರು " ಆ ಹೋರಾಟದ ದಿನದಲ್ಲಿ ಸಿದ್ದರಾಮಯ್ಯ ನಮ್ಮ ಜೊತೆ ಕುಳಿತು ನಮ್ಮ ಹೋರಾಟ ಬೆಂಬಲಿಸಿದ್ದರು ಈಗ ಮುಖ್ಯಮಂತ್ರಿ ಆಗಿದ್ದಾರೆ ಆದರೆ ಸಂಪುಟ ಸಭೆಯಲ್ಲಿ ಈವರೆಗೆ ಆಣೆಕಟ್ಟು ಕಟ್ಟಬೇಕೆಂಬ ಹಿಂದಿನ ಸಕಾ೯ರದ ನಿಣ೯ಯ ಮಾತ್ರ ಎಷ್ಟು ಸಾರಿ ನೆನಪಿಸಿದರೂ ರದ್ದು ಮಾಡಿಲ್ಲ "ಎಂದು ವಿಷಾದ ವ್ಯಕ್ತಪಡಿಸಿದರು.
ಈ ಇಳಿ ವಯಸ್ಸಲ್ಲೂ ವಾಮದೇವ ಗೌಡರ ಹೋರಾಟದ ಕಿಚ್ಚು ಕೊಂಚವೂ ಕಡಿಮೆ ಆಗಿಲ್ಲ ಅವರಿಗೆ ದೇವರು ಆರೋಗ್ಯ ಆಯಸ್ಸು ಮತ್ತು ಯಶಸ್ಸು ನೀಡಲಿ ಎಂದು ಹಾರೈಸುತ್ತೇನೆ.
Comments
Post a Comment