#ಒಂದು_ಕಾಲದಲ್ಲಿ_ಕನ್ಯೆಯರಿಗೆ_ಸಾಣಿಗೆಯಲ್ಲಿ_ಸಾಣಿಸಿದಂತೆ_ಡಿಮೊರಲ್_ಮಾಡುತ್ತಿದ್ದರು.
#ಆಗ_ಪುರಷರಿಗಿಂತ_ಸ್ತ್ರೀಯರ_ಅನುಪಾತ_ಜಾಸ್ತಿ_ಇತ್ತು.
#ಎಲ್ಲಾ_ಜಾತಿಯ_ಮಾಣಿಗಳಿಗೆ_ಅನ್ವಯಿಸುವ_ಈ_ಹಾಡು
#ಆ_ಕಾಲದಲ್ಲಿ_ಅನೇಕ_ಹೆಣ್ಣುಗಳ_ಕಂಕಣ_ಬಲ_ಕೂಡಿ_ಬರದಂತೆ_ಮಾಡಿತ್ತು ...
#ಈಗ_ಗಂಡು_ಹೆಣ್ಣಿನ_ಅನುಪಾತದ_ವೃತ್ಯಾಸದಿಂದ_ಕಾಲ_ಬದಲಾಗಿದೆ..
#ಅನೇಕ_ಗಂಡುಗಳಿಗೆ_ಕಂಕಣ_ಬಲ_ಒಲಿಯುತ್ತಲೇ_ಇಲ್ಲ.
#ಸುಂದರವಾಗಿ_ರಚಿಸಿ_ಹವಿಗನ್ನಡದಲ್ಲಿ_ಸವಿಯಾಗಿ_ಹಾಡಿದ್ದಾರೆ
#ಇದು_ಒಂದು_ಕ್ಷಣ_ಎಲ್ಲರನ್ನೂ_ನಿಂತು_ಕೇಳುವಂತೆ_ಮತ್ತು_ಕೇಳಿದ_ಮೇಲೆ_ಪದೇ_ಪದೇ_ಕೇಳುವಂತೆ
#ಆಪ್ತರಿಗೆ_ಶೇರ್_ಮಾಡುವಂತೆ_ಮಾಡುತ್ತಿದೆ.
#ಅಮಿತಾರವಿಕಿರಣ್_ಅವರಿಗೆ_ಶಹಬ್ಬಾಸ್_ಹೇಳಲೇಬೇಕು.
#sexratio #lndia #marriage #lifepartner #castesystem #hindureligion #Amitharavikiran
ನಮ್ಮನೆ ಮಾಣಿಗೊಂದು ಕೂಸು....
ಇದು ನಮ್ಮ ದೇಶದ ಪ್ರಸ್ತುತ ಸಮಸ್ಯೆ ಇದಕ್ಕೆ ಪರಿಹಾರ ಮುಂದಿನ ಕೆಲವು ದಶಕಗಳು ಸಾಧ್ಯವೇ ಇಲ್ಲ.
ಈಗ ದೇಶದಲ್ಲಿ ಸ್ತ್ರೀ ಪುರುಷರ ಅನುಪಾತ 1000 ಪುರುಷನಿಗೆ 952 ಸ್ತ್ರೀ ಇದು 2036ರಲ್ಲಿ 1000 ಪುರುಷನಿಗೆ 982 ಆಗಬಹುದು ಎಂಬ ನಿರೀಕ್ಷೆ ಆದರೆ ಆಗದೆಯೇ ಇರಬಹುದು.
ಮೊದಲೆಲ್ಲ ಸ್ತ್ರೀಯರ ಸಂಖ್ಯೆ ಹೆಚ್ಚಾಗಿದ್ದಾಗ ಪುರುಷರಿಗೆ ಆಯ್ಕೆ ಸ್ವಾತಂತ್ರ ಇತ್ತು ಆಗ ವಿವಾಹ ವಯಸ್ಸಿನ ಹೆಣ್ಣು ಮಕ್ಕಳನ್ನ ಗೋಳು ಹೊಯ್ದು ಅವರ ಚಾರಿತ್ರ್ಯ ಹರಣ, ವರದಕ್ಷಿಣೆ ಇತ್ಯಾದಿ ಕೆಟ್ಟ ಸಂಪ್ರದಾಯ ಸಮಾಜದಲ್ಲಿ ಸೃಷ್ಟಿ ಆಗಿತ್ತು.
ಈಗ ಇದಕ್ಕೆ ಸರಿಪೂರ್ಣ ವಿರುದ್ಧವಾಗಿದೆ ವಿವಾಹದ ವ್ಯವಸ್ಥೆ ಆರೆಂಜ್ ಮ್ಯಾರೇಜ್, ವರದಕ್ಷಿಣೆ, ಜಾತಿಯಲ್ಲಿಯೇ ಮದುವೆ ಮತ್ತು ವರನ ಆಯ್ಕೆ ಇಲ್ಲವೇ ಇಲ್ಲ.
ಪರಸ್ಪರ ಇಷ್ಟ ಪಟ್ಟು ಮದುವೆ ಆದರೆ ಸಂಸಾರಿ ಇಲ್ಲದಿದ್ದರೆ ಜೀವನ ಪೂರ್ತಿ ಬ್ರಹ್ಮಚಾರಿ.
ರಾಮಾಯಣ ಮಹಾಬಾರತ ಕಾಲದಲ್ಲಿನ ಸ್ವಯಂವರ, ನಿಯೋಗ ಮತ್ತು ಸ್ತ್ರಿ ಯಾವುದೇ ಜಾತಿ ಆದರೂ ವಿವಾಹ ಆಗುತ್ತಿದ್ದ ಕಾಲ ನೆನಪಾಗುತ್ತದೆ.
ಭಾರತದ 2011 ರ ಜನಗಣತಿಯ ಪ್ರಕಾರ ಒಟ್ಟಾರೆ ಲಿಂಗ ಅನುಪಾತವು1,000 ಪುರುಷರಿಗೆ 943 ಮಹಿಳೆಯರು.
2001 ಕ್ಕೆ ಹೋಲಿಸಿದರೆ ಇದು ಸುಧಾರಣೆಯಾಗಿದೆ ಆದರೆ ಮಕ್ಕಳ ಲಿಂಗ ಅನುಪಾತ (0-6 ವರ್ಷಗಳು) 919 ಕ್ಕೆ ಕುಸಿಯುತ್ತಿದೆ, ಇದು ನಿರಂತರ ಲಿಂಗ ಪಕ್ಷಪಾತವನ್ನು ಸೂಚಿಸುತ್ತದೆ.
ಆದರೆ ಕೇರಳವು ಅತಿ ಹೆಚ್ಚು ರಾಜ್ಯ ಲಿಂಗ ಅನುಪಾತವನ್ನು (1084) ಮತ್ತು ಹರಿಯಾಣವು ಅತ್ಯಂತ ಕಡಿಮೆ (879) ಹೊಂದಿದೆ.
ಲಿಂಗ ಅನುಪಾತವು ಲಿಂಗ ಸಮಾನತೆಯ ಪ್ರಮುಖ ಸೂಚಕವಾಗಿದ್ದು, ಸಾಮಾಜಿಕ ಪ್ರಗತಿ ಮತ್ತು ಆರೋಗ್ಯ ಸ್ಥಿತಿಗಳನ್ನು ಬಹಿರಂಗಪಡಿಸುತ್ತದೆ.
ಮಕ್ಕಳ ಲಿಂಗ ಅನುಪಾತದಲ್ಲಿ ಕುಸಿತವು ಭಾರತದಲ್ಲಿ ಲಿಂಗ-ಆಯ್ದ ಗರ್ಭಪಾತಗಳು ಮತ್ತು ಸ್ತ್ರೀ ತಾರತಮ್ಯದ ಬಗ್ಗೆ ಕಳವಳಗಳನ್ನು ಎತ್ತಿ ತೋರಿಸುತ್ತದೆ.
ಈ ಸಂದರ್ಭದಲ್ಲಿ ಈ ಹಾಡು ಕೇಳಿ ಕಾಮೆಂಟನಲ್ಲಿ ಅದರ ಲಿಂಕ್ ಕ್ಲಿಕ್ ಮಾಡಿ ಕೇಳಿ
Comments
Post a Comment