#ಆನೆ_ಕಾರಿಡಾರ್
#ದಕ್ಷಿಣದಿಂದ_ಉತ್ತರಕ್ಕೆ_ಕಾಡಾನೆ_ಸಂಚಾರ_ಏಕೆ?
#ಈ_ಕಾಡಾನೆಗಳ_ಉತ್ತರ_ಪ್ರಯಣ_ಬಹಳ_ಮುಖ್ಯ_ಎನ್ನುತ್ತಾರೆ
#ಆನೆಗಳ_ತಜ್ಞರಾದ_ಅಶ್ವಿನ್_ಭಟ್
#Elephantcorridor #Bhadrawildlife #Kaliwildlife #westernghats
ಇವರು ಅಶ್ವಿನ್ ಭಟ್ ಹಾಸನದ ನೇಚರ್ ಕನ್ಸರ್ವೇಷನ್ ಪೌಂಡೇಶನ್ ನಲ್ಲಿ ಕಾಡಾನೆಗಳ ಬಗ್ಗೆ ಕೆಲಸ ಮಾಡಿದ್ದಾರೆ.
ಈಗ ಪ್ರಾಜೆಕ್ಟ್ ಅಸಿಸ್ಟೆಂಟ್ ಆಗಿ Environmental Management and Policy Research Institute ಸಂಶೋಧನಾ ಕೆಲಸದಲ್ಲಿದ್ದಾರೆ.
ದಕ್ಷಿಣದಿಂದ ಉತ್ತರಕ್ಕೆ ಕಾಡಾನೆಗಳ ಸಂಚಾರದಲ್ಲಿ ಕಳೆದ ಮೂರು ವರ್ಷದಿಂದ ನಮ್ಮೂರಿನ ಮೂಲಕ ಸಂಚರಿಸುವ ಕಾಡಾನೆ ಬಗ್ಗೆ ನಾನು ಬರೆಯುತ್ತಿರುವ ಪೇಸ್ ಬುಕ್ ಲೇಖನಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ಇಂತಹ ಉಪಯುಕ್ತ ಮಾಹಿತಿ ಆನೆ ಕಾರಿಡಾರ್ ಪ್ರವೇಶದಲ್ಲಿ ವಾಸಿಸುವವರಿಗೆ ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉಪಯುಕ್ತ ಮಾಹಿತಿ ಆಗಿದೆ ಒಮ್ಮೆ ಈ ಕೆಳಗಿನ ಲೇಖನ ಓದಿ.
#ಅಶ್ವಿನ್_ಭಟ್_ಅವರ_ಪ್ರತಿಕ್ರಿಯೆ.....
ಅವು ಬೇರೆ ಹಿಂಡು ಸೇರಲೆಂದೇ ದೂರದಿಂದ ಕ್ರಮಿಸಿ ಬಂದಿರುವ ಸಾಧ್ಯತೆ ಹೆಚ್ಚಿದೆ.
ಉತ್ತರ ಕನ್ನಡದಲ್ಲಿರುವ ಸಣ್ಣ ಆನೆ ಗುಂಪು ದಕ್ಷಿಣದ ಬೇರೆ ಸಮೂಹಗಳಿಂದ ದಶಕಗಳಿಂದ ಸರಿಯಾದ ಸಂಪರ್ಕವಿಲ್ಲದೆ ಸೊರಗುತ್ತಿದೆ.
ಅವುಗಳ ಸಂಖ್ಯೆ ಹಾಗೂ genetic connectivity ಈ ಎರಡೂ ಅಂಶಗಳಿಂದ ನೋಡುವುದಾದರೆ ಈ ಎರಡೂ ಆನೆಗಳ ಉತ್ತರದ ಪಯಣ ಬಹಳ ಮುಖ್ಯವಾಗಿರುತ್ತದೆ.
ಇವುಗಳಿಗೆ ಏನೂ ತೊಂದರೆ ಕೊಡದೆ ಬಿಟ್ಟರೂ ಇವು ಮರೆಯಾಗುತ್ತಿರುವ ಉತ್ತರ ದಕ್ಷಿಣ ಆನೆ ಕಾರಿಡಾರ್ ಅನ್ನು ಹುಡುಕಿ ಉತ್ತರ ಕನ್ನಡದ ಆನೆ ಗುಂಪನ್ನು ಸೇರಬಹುದು.
#ಸೊರಬ_ತಾಲ್ಲೂಕಿನಲ್ಲಿರುವ_ಎರೆಡು_ಕಾಡಾನೆ_ಅಪ್_ಡೇಟ್
ನಿನ್ನೆ ಸಂಜೆ 11- ಡಿಸೆಂಬರ್ - 2005ರ ಗುರುವಾರ #ಬರಗಿ ಕಾಡಿನಿಂದ ಹೊರ ಹೊರಟ ಎರೆಡು ಕಾಡಾನೆಗಳು ಹೊಳೆನಕೊಪ್ಪದ ರೈತರ ಕಬ್ಬಿನ ಗದ್ದೆ ನುಗ್ಗಿ ಹೊರಬಂದ ಮಾಹಿತಿ ಇದೆ.
ಹೊಳೆನಕೊಪ್ಪ, ಭದ್ರಾಪುರ ಮೂಲಕ ಮೊರೆಕಾನ್ ಕಡೆ ಅವುಗಳನ್ನು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೂರೂ ದಿಕ್ಕಿನಲ್ಲೂ ಪಟಾಕಿ ಸಿಡಿಸುತ್ತಿದ್ದಾರೆ ಎಂಬ ಸುದ್ದಿ ಸ್ಥಳಿಯರು ತಿಳಿಸಿದ್ದಾರೆ.
Comments
Post a Comment