#ಶ್ಯಾಮನ_ತಾಯಿ
#ಈ_ಪುಸ್ತಕ_ತಪ್ಪದೇ_ಓದಿರಿ
#ಮೂಲ_ಮರಾಠಿ_ಲೇಖಕರು_ಸಾನೆಗುರೂಜಿ
#ಕನ್ನಡಕ್ಕೆ_ಅನುವಾದ_ಬಾಲಚಂದ್ರ_ಘಾಣೇಕರ
#ಎರಡು_ಚಲನಚಿತ್ರಗಳಾಗಿದೆ_ಇದು
#Shyamanthayi #shyamachiayi #marati #saneguruji
ಇತ್ತೀಚಿಗೆ ನನ್ನ ಮಗಳು ಈ ಪುಸ್ತಕ ಕಳಿಸಿದ್ದರಿಂದ ನನಗೆ ಈ ಆದ್ಬುತ ಪುಸ್ತಕ ಓದಲು ಸಾಧ್ಯವಾಯಿತು.
ಇದು ಮರಾಠಿ ಭಾಷೆಯಲ್ಲಿ #ಶ್ಯಾಮಾಚಿ_ಆಯೀ ಎಂಬ ಪ್ರಸಿದ್ಧ ಪುಸ್ತಕವಾಗಿದೆ.
ಶ್ಯಾಮನ ತಾಯಿ (Shyamchi Aai) ಎನ್ನುವುದು ಸಂತ ಸಾನೇ ಗುರೂಜಿ ಅವರು ಮರಾಠಿಯಲ್ಲಿ ಬರೆದ, ಭಾಲಚಂದ್ರ ಘಾಣೇಕರ್ ಅವರು ಕನ್ನಡಕ್ಕೆ ಅನುವಾದಿಸಿದ ಒಂದು ಪ್ರಸಿದ್ಧ ನೀತಿ ಕಥೆ.
ಇದು ತಾಯಿ-ಮಗನ ಬಾಂಧವ್ಯ, ಭಾರತೀಯ ಸಂಸ್ಕೃತಿ, ಮತ್ತು ಆಧ್ಯಾತ್ಮಿಕತೆ ಬಗ್ಗೆ ಹೇಳುತ್ತದೆ.
ಈ ಕಥೆಯು ಮರಾಠಿಯಲ್ಲಿ ಚಲನಚಿತ್ರವಾಗಿ ಕೂಡ ಬಂದಿದೆ ಮತ್ತು ಇದು ಶ್ಯಾಮ್ ಎಂಬ ಹುಡುಗ ಮತ್ತು ಅವನ ತಾಯಿಯ ಜೀವನ, ಮಗನ ಸಂತೋಷಕ್ಕಾಗಿ ತಾಯಿಯ ತ್ಯಾಗ, ಹಾಗೂ ಸಂಪ್ರದಾಯದ ಸುಂದರ ಚಿತ್ರಣವನ್ನು ಬಿಂಬಿಸುತ್ತದೆ.
ಈ ಪುಸ್ತಕ ಆದರಿಸಿ ಎರೆಡು ಸಿನಿಮಾ ಮರಾಠಿಯಲ್ಲಿ ಬಂದಿದೆ ಎರೆಡೂ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.
ಸಾನೆ ಗುರೂಜಿ ಅವರು ಸ್ವಾತಂತ್ರ್ಯ ಹೋರಾಟಗಾರರು ಅವರು ಜೈಲಿನಿಂದಲೇ ಬರೆದ ಕಾದಂಬರಿ ಇದು.
1954 ರಿಂದ 2019ರವರೆಗೆ ಈ ವರೆಗೆ 14 ಮುದ್ರಣವಾಗಿದೆ.
ಇವರೇ ಬರೆದ #ಶ್ಯಾಮ ಎಂಬ ಪುಸ್ತಕ ಈವರೆಗೆ ಕನ್ನಡಕ್ಕೆ ಅನುವಾದ ಆಗಿಲ್ಲ.
ಈಗ ಅದೂ ಕೂಡ ಕನ್ನಡಕ್ಕೆ ಅನುವಾದ ಆಗುತ್ತಿದೆ ಬೆಳಗಾವಿಯ #ಚಂದ್ರಕಾಂತ_ಪೋಕಳೆ ಅನುವಾದಿಸುತ್ತಿದ್ದಾರೆ ಇವತ್ತು ಅವರ ಜೊತೆ ಪೋನಿನಲ್ಲಿ ಮಾತಾಡಿದಾಗ ವಿಷಯ ತಿಳಿಯಿತು.
#ಶ್ಯಾಮನ_ತಾಯಿ ಪುಸ್ತಕ ಸ್ವಪ್ನದಲ್ಲಿ ಸಿಗುತ್ತದೆ ಅದರ ಲಿಂಕ್ ಕಾಮೆಂಟ್ ನಲ್ಲಿದೆ.
Comments
Post a Comment