#ರೈತರೇಕೆ_ಇಂತಹ_ಕೆಲಸಕ್ಕೆ_ಮುಂದಾಗುತ್ತಾರೆ.
#ಪಸಲು_ರಕ್ಷಣೆಗಾಗಿ_ಅಕ್ರಮ_ವಿದ್ಯುತ್_ಬೇಲಿಗೆ_ನೀಡುವುದು_ಸರಿಯಲ್ಲ
#ಕೆಲ_ವರ್ಷದ_ಹಿಂದೆ_ಮೂರು_ಕಾಡಾನೆ_ಅಕ್ರಮ_ವಿದ್ಯುತ್_ಬೇಲಿಯಿಂದ_ಮೃತವಾಗಿತ್ತು.
#ಅರಣ್ಯ_ಇಲಾಖೆ_ಕಾನೂನು_ಅಪರಾದಿಗಳಿಗೆ_ಶಿಕ್ಷೆ_ಆಗುತ್ತದೆ.
#ಹೊಸನಗರ_ತಾಲ್ಲೂಕಿನ_ಕೊಡೂರು_ಸಮೀಪ_ಅಕ್ರಮ_ವಿದ್ಯುತ್_ಬೇಲಿಯಿಂದ_ಕಾಡುಕೋಣ_ಸತ್ತಿದೆ
#Electricfence #illigalpower #wildlife #malnadu #westernghats #hosanagara
ವಿದ್ಯುತ್ ಅಕ್ರಮವಾಗಿ ಪಸಲು ರಕ್ಷಣೆಗಾಗಿ ಬೇಲಿಗೆ ಸಂಪರ್ಕ ನೀಡಿದ್ದರಿಂದ ಕಾಡುಕೋಣವೊಂದು ಇದನ್ನು ಸ್ಪರ್ಶಿಸಿ ಮೃತ ಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದಲ್ಲಿ ನಡೆದಿದೆ.
ಕೋಡೂರು ಸಮೀಪದ ಶಾಖವಳ್ಳಿ ಗ್ರಾಮದ ಸರ್ವೆ ನಂ 9 ರಲ್ಲಿ ಕಾಡುಕೋಣವೊಂದು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಸಮೀಪದಲ್ಲಿಯೇ ಅಂತ್ಯಕ್ರಿಯೆ ನಡೆಸಿದ್ದಾರೆ.
ಸ್ಥಳದಲ್ಲಿದ್ದ ವಿದ್ಯುತ್ ಕಂಬದಿಂದ ಬೇಲಿಗೆ ವಿದ್ಯುತ್ ಸಂಪರ್ಕ ಪಡೆದಿದ್ದು ಕಂಡುಬಂದಿದೆ.
ನಮ್ಮ ಮಲೆನಾಡಿನ ರೈತರು ಯಾಕೆ ಇಂತಹ ದುರಾಸೆಗೆ ಮುಂದಾಗುತ್ತಾರೋ ಗೊತ್ತಿಲ್ಲ.
ಕಾಡಂಚಿನ ಕೃಷಿ ಜಮೀನಿನಲ್ಲಿ ಸುಗ್ಗಿ ಕಾಲದಲ್ಲಿ ವನ್ಯಜೀವಿಗಳು ಉಪಟಳ ನೀಡುವುದು ಸಹಜ ಈಗ ಕಾಡು ಹಂದಿ ಸಾಯಿಸಿದರೂ ಶಿಕ್ಷೆ ಇದೆ.
ಇಂತಹ ಸಂದರ್ಭದಲ್ಲಿ ಅಕ್ರಮವಾಗಿ ವಿದ್ಯುತ್ ಕಂಬದಿಂದ ತಮ್ಮ ಕೃಷಿ ಜಮೀನಿನ ಬೇಲಿಗೆ ವಿದ್ಯುತ್ ಹಾಯಿಸುವುದು ಇದರಿಂದ ವನ್ಯ ಜೀವಿ ಸತ್ತರೆ ದೊಡ್ಡ ಶಿಕ್ಷೆ ಇದೆ.
ಇಂತಹದೇ ಕಾರಣದಿಂದ ಶಿವಮೊಗ್ಗ ತಾಲ್ಲೂಕಿನ ಅಯನೂರು ಭಾಗದಲ್ಲಿ ಮೂರು ಕಾಡಾನೆ ಸತ್ತಿತ್ತು.
ಇತ್ತೀಚೆಗೆ ಮೂರು ವರ್ಷದಿಂದ ಭದ್ರಾ ಅಭಯಾರಣ್ಯದಿಂದ ಕಾಡಾನೆಗಳು ಮಲೆನಾಡಿನಲ್ಲಿ ಕಾಡಾನೆ ಸಂಚಾರ ಪ್ರಾರಂಭ ಆಗಿದೆ.
ಯಾವುದೇ ರೈತರು ಪಸಲು ಸಂರಕ್ಷಣೆ ಅಥವ ಕಳ್ಳ ಬೇಟೆಗಾಗಿ ಅಕ್ರಮ ವಿದ್ಯುತ್ ಜಮೀನಿನ ಬೇಲಿಗೆ ಹರಿಸುವುದು ಕಂಡು ಬಂದರೆ ಸ್ಥಳೀಯರು ಅವರಿಗೆ ಬುದ್ಧಿ ಹೇಳಿ ಇಂತಹ ಕೆಲಸ ಮಾಡದಂತೆ ತಡೆಯಬೇಕು.
ಸ್ಥಳೀಯ ಗ್ರಾಮ ಪಂಚಾಯಿತಿಗಳು ಈ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಕೂಡ ಮಾಡಬಹುದಾಗಿದೆ.
Comments
Post a Comment