#ಸಾತ್ವಿಕರನ್ನ_ಜೈಲಿಗೆ_ಕಳಿಸಿದ_ಈ_ಘಟನೆಗೆ_ಎಂಟು_ವರ್ಷ.
#ಸುದ್ದಿಯನ್ನ_ಸುದ್ದಿ_ಮಾಡದ_ಈ_ಸುದ್ದಿ.
#ಸಾತ್ವಿಕರನ್ನ_ಜೈಲಿಗೆ_ಕಳಿಸಿದವರು_ಯಾರು?.
#ಇವರಿಬ್ಬರ_ಹೆಸರು_ಗಣಪತಿ_ಭಟ್ಟರು_ಜಿಗಳೆಮನೆ_ಮತ್ತು_ನಿರಂಜನ_ಕುಗ್ವೆ.
#satyashoda #mitramandali #havyaka #ramachandramutt #sringerimutt #swarnavallimutt #sagar #sirsi #shivamogga #vishwahavyakasammelana
ಬಲಾಡ್ಯರು ಮಾಡುವ ಅನ್ಯಾಯದ ವಿರುದ್ದ ಧ್ವನಿ ಎತ್ತಿದರೆ ಜೈಲು ಎಂಬ ಈ ಘಟನೆ ನಡೆದು ಈ ಡಿಸೆಂಬರ್ ತಿಂಗಳಿಗೆ ಎಂಟು ವರ್ಷ ಆಯಿತು.
ಆದರೆ ಈ ಹೋರಾಟಗಾರರ ಧ್ವನಿ ಅಡಗಿಸಲು ಸಾಧ್ಯವಾಗಲೇ ಇಲ್ಲ ಆದರೆ ಬಲಾಡ್ಯರ ಅನ್ಯಾಯದ ಪ್ರಕರಣವನ್ನ ತಾಂತ್ರಿಕವಾಗಿ ತಡೆ ಆಜ್ಞೆಗಳ ಮೂಲಕ ಮುಂದೂಡುತ್ತಾ ಬಂದ ಐದು ಪ್ರಕರಣಗಳಿಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಅಂತಿಮ ತೀರ್ಪಿನ ಕ್ಷಣಗಣನೆ ಆರಂಭವಾಗಿದೆ.
ಇವರಿಬ್ಬರು ಸಾತ್ವಿಕರು ಇವರು ಮಾಡಿದ ಅಪರಾದ ಏನೆಂದರೆ...ಇವರ ಜಾತಿ ಸಮುದಾಯಕ್ಕೆ ಸಂಬಂದಪಟ್ಟ ಸ್ವಾಮಿ ಒಬ್ಬರ ಎರೆಡು ಅತ್ಯಾಚಾರ ಪ್ರಕರಣ ಮತ್ತು ಆ ಮಠದಲ್ಲಿ ಆ ಜಾತಿ ಸಮಾಜದ ಹೆಣ್ಣು ಮಕ್ಕಳಿಗೆ ದೇವರ ಹೆಸರಲ್ಲಿ ಭಯ ಬಿತ್ತಿ ಕನ್ಯಾಸಂಸ್ಕಾರ ಎಂಬ ಸ್ವಾಮಿಗಳ ಏಕಾಂತಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಕಳಿಸುವ ಕಾಯ೯ಕ್ರಮ ವಿರೋದಿಸಿ ಸಾಮಾಜಿಕ ಜಾಲತಾಣದಲ್ಲಿ ಇವರು ತಮ್ಮ ಸಮುದಾಯದ ಜನರಿಗೆ ಜನ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದು.
ಜಿಗಳೆಮನೆ ಗಣಪತಿ ಭಟ್ಟರು ಮತ್ತು ಕುಗ್ವೆ ನಿರಂಜನ....ಹಳೆ ಬೇರು ಹೊಸ ಚಿಗುರಿನಂತ ಇವರಿಬ್ಬರ ಜುಗಲ್ ಬಂದಿ.
ಇವರಿಬ್ಬರನ್ನ ಪೇಸ್ ಬುಕ್ನಲ್ಲಿ ಮಾನಹಾನಿ ಮಾಡಿದ್ದಾರಂತ ದೂರು ನೀಡಿಸಿ, ಎಂಟು ವರ್ಷದ ಹಿಂದೆ 2017 ಡಿಸೆಂಬರ್ ತಿಂಗಳ ಒಂದು ಶನಿವಾರ ಬಂದಿಸಿ ಕೋಟ್೯ ರಜಾದಿನದ ಲಾಭ ಪಡೆದು ಜೈಲಿಗೆ ಕಳಿಸಿದ್ದರು.
ತಮ್ಮ ದುರುದ್ದೇಶ ಈಡೇರಿಸಿಕೊಂಡ ಈ ಪ್ರಕರಣದ ಹಿಂದೆ ಇವರ ಸಮಾಜದ ಮಠ ಒಂದರ ಕಾಣದ ಕೈಗಳು ಇತ್ತು ಎನ್ನುವುದು ಬಹಿರಂಗ ಸತ್ಯ.
ಹಿರಿಯರಾದ ಗಣಪತಿ ಭಟ್ಟರು RSS ಪ್ರಚಾರಕರಾಗಿದ್ದವರು, ತುತು೯ ಪರಿಸ್ಥಿತಿ ವಿರೋದಿಸಿ ಜೈಲಿಗೆ ಹೋದವರು ಇವತ್ತಿನವರೆಗೂ ರಾಜಕಾರಣಕ್ಕೆ ಬಾರದ ಸಾತ್ವಿಕರು, ವರದಳ್ಳಿಯ ಪವಾಡ ಪುರುಷ ಶ್ರೀಧರ ಸ್ವಾಮಿಯವರ ಶಿಷ್ಯರು.
ನಿರಂಜನ ಕುಗ್ವೆ ಕಲಾ ಶಿಕ್ಷಕರು, ಉದಯೋನ್ಮುಖ ವ್ಯಂಗ್ಯಚಿತ್ರಗಾರರು ಇವರ ವ್ಯಂಗ್ಯಚಿತ್ರಗಳನ್ನ ಖ್ಯಾತ ಚಿತ್ರಕಾರ ಪಂಜು ಗಂಗೋಲೀಯವರು ಕೂಡ ಅಭಿನಂದಿಸಿದ್ದಾರೆ.
ಇವರಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಪೇಸ್ ಬುಕ್ ನಲ್ಲಿ ಬೆಂಬಲಿಸಿದ್ದಾರೆ.
ಆದರೆ ಪ್ರತ್ಯಕ್ಷವಾಗಿ ಬೆಂಬಲಿಸಲು ಇವರ ಸಮುದಾಯವರಿಗೆಲ್ಲ ಮಠದ ಕರಾಳ ಹಸ್ತದ ಭಯ.
ನಿರಪರಾಧಿಗಳನ್ನ, ಸಮಾಜ ಸುದಾಕರನ್ನ ಈ ರೀತಿ ಅವಮಾನಿಸುವ ಮತ್ತು ಶಿಕ್ಷಿಸುವ ಈ ಪ್ರಕರಣ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕೆಗಳು ಸುದ್ದಿ ಮಾಡಬೇಕಾಗಿತ್ತು ಮತ್ತು ಈ ಘಟನೆ ವಿರೋದಿಸಬೇಕಾಗಿತ್ತು.
ಆದರೆ ಈ ಸುದ್ದಿ ಅವತ್ತಿನ ಯಾವುದೇ ಪತ್ರಿಕೆ ಅಥವ ಮಾಧ್ಯಮದಲ್ಲೂ ಪ್ರಕಟವಾಗಲಿಲ್ಲ.
ಇದರ ಬಗ್ಗೆ ಆಶ್ಚಯ೯ ಮತ್ತು ಅನುಮಾನ ಸಾವ೯ಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.
ಅತ್ಯಾಚಾರ, ಮೂಡನಂಬಿಕೆಯ ಕನ್ಯಾ ಸಂಸ್ಕಾರ ನಡೆಸುತ್ತಿರುವವರ ಹಣ ಮತ್ತು ಅಧಿಕಾರಗಳು ಅವರನ್ನ ವಿರೋಧ ಮಾಡುವವರ ಧ್ವನಿಯನ್ನು ಈ ರೀತಿ ವಾಮ ಮಾರ್ಗದಲ್ಲಿ ಅಡಗಿಸುವಲ್ಲಿ ಯಶಸ್ವಿಯಾಗುತ್ತಿರುವುದು ಮಾತ್ರ ವಿಷಾದನೀಯ.
ಆದರೆ ಇದರಿಂದ ಇವರಿಬ್ಬರು ಹೋರಾಟಗಾರರ ಧ್ವನಿ ಮಾತ್ರ ಅಡಗಿಸಲು ಸಾಧ್ಯವಾಗಲೇ ಇಲ್ಲ ಇವರಿಬ್ಬರೂ ಅದನ್ನು ನೂರು ಪಟ್ಟು ಹೆಚ್ಚು ಮಾಡಿದರು.
ಬಲಾಡ್ಯರ ಅನ್ಯಾಯದ ಪ್ರಕರಣಗಳನ್ನು ಕೆಳ ನ್ಯಾಯಾಲಯಗಳಲ್ಲಿ ತಾಂತ್ರಿಕವಾಗಿ ತಡೆ ಆಜ್ಞೆಗಳ ಮೂಲಕ ಮುಂದೂಡುತ್ತಾ ತೀರ್ಪು ನೀಡದಂತೆ ಅನೇಕ ವರ್ಷಗಳಿಂದ ಎಳೆದುಕೊಂಡು ಬಂದ ಐದು ಪ್ರಕರಣಗಳಿಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಈಗ ಅಂತಿಮ ತೀರ್ಪಿನ ಕ್ಷಣಗಣನೆ ಆರಂಭವಾಗಿದೆ.
ಈ ಪ್ರಕರಣ ನಡೆದು ಇವತ್ತಿಗೆ ಎಂಟು ವರ್ಷ ಆಯಿತು.
Comments
Post a Comment