#ಮಲೆನಾಡಿನ_ಆನೆ_ಕಾರಿಡಾರ್
#ಸೊರಬ_ತಾಲ್ಲೂಕಿನ_ಉಳುವಿ_ಕಾಡಿನಿಂದ
#ಸಾಗರ_ತಾಲ್ಲೂಕಿನ_ಅಂಬ್ಲಿಗೋಳ_ರೇಂಜಿಗೆ
#ಅರಣ್ಯ_ಇಲಾಖೆ_ಎರಡು_ಕಾಡಾನೆ_ಓಡಿಸಲಾಗಿದೆ
#ಒಂದೇ_ರಾತ್ರಿ_40_ಕಿಮಿ_ಓಡಿಸಿದ್ದಾರೆ
#ನಾಲ್ಕು_ಕುಮ್ಕಿ_ಆನೆ_ಸಿಬ್ಬಂದಿಗಳು_ಪಟಾಕಿ_ಬಳಿಸಿ_ಓಡಿಸಲಾಗಿದೆ
#wildlifeconservation #elephants #corridor #soraba #ulavi #Ambligola
ಆನಂದಪುರಂ ಆನೆ ಕಾರಿಡಾರ್ ಗೆ ಮೂರು ವರ್ಷದಿಂದ ಭದ್ರಾ ಅಭಯಾರಣ್ಯದಿಂದ ಕೆಲವು ತಂಡಗಳಲ್ಲಿ ಕಾಡಾನೆಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿದೆ.
ಪ್ರತಿ ವರ್ಷ ಹತ್ತಿಪ್ಪತ್ತು ಕಿಲೋ ಮೀಟರ್ ವಿಸ್ತರಿಸುತ್ತಾ ಉತ್ತರದ ಕಡೆ ಸಾಗಿ ವಾಪಾಸಾಗುತ್ತಿದೆ.
ಕಳೆದ ವರ್ಷ ಲಾವಿಗೆರೆಗೆ ತಲುಪಿದ್ದ ಈ ಕಾಡಾನೆ ತಂಡದಲ್ಲಿ ಈ ವರ್ಷದ ಮೊದಲ ತಂಡ ಸೊರಬ ತಾಲೂಕಿನ ಉಳುವಿ ತನಕ ತಲುಪಿತ್ತು.
ಅಲ್ಲಿಂದ ಅರಣ್ಯ ಇಲಾಖೆ ಸತತ ನಾಲ್ಕು ದಿನಗಳಿಂದ ನಾಲ್ಕು ಕುಮ್ಕಿ ಆನೆ, ಮಾವುತರು ಮತ್ತು ಸಿಬ್ಬಂದಿಗಳ ಪ್ರಯತ್ನದಿಂದ ನಿನ್ನೆ ಒಂದೇ ರಾತ್ರಿ 40 ಕಿಲೋ ಮೀಟರ್ ಗಳಷ್ಟು ದೂರ ಓಡಿಸಿದ್ದಾರೆ.
ಸೊರಬ ತಾಲ್ಲೂಕಿನ ರೇಂಜ್ ಫಾರೆಸ್ಟ್ ಗಡಿ ದಾಟಿಸಿ ಸಾಗರ ತಾಲೂಕಿನ ಅಂಬ್ಲಿಗೋಳ ರೇಂಜ್ ಫಾರೆಸ್ಟ್ ತಲುಪಿರುವ ಈ ಕಾಡಾನೆಗಳು ಇಲ್ಲಿಂದ ಎಲ್ಲಿಗೆ ಹೋಗುತ್ತದೆ ಕಾದು ನೋಡ ಬೇಕು.
ಈ ಕಾರಿಡಾರ್ ಗೆ ಬರುವ ಪ್ರಯತ್ನದಲ್ಲಿ ಎರಡನೆ ತಂಡ ಪ್ರಯತ್ನಿಸುತ್ತಿರುವ ಸುದ್ದಿಯೂ ಬಂದಿದೆ.
Comments
Post a Comment