#ಆನಂದಪುರಂ_ಸುತ್ತ_ಮುತ್ತ_ಮಂಗಗಳ_ಸಾವು
#ಮಂಗನ_ಕಾಯಿಲೆ_ಮುನ್ಸೂಚನೆಯಾ?!
#ಸಾಗರ_ತಾಲ್ಲೂಕಿನ_ಹೆಚ್ಚು_ಸ್ಥಳದಲ್ಲಿ_ಮಂಗಗಳ_ಸಾವು
#ಹೊಸನಗರ_ತಾಲ್ಲೂಕಿನಲ್ಲಿ_ಕೆಲವರಿಗೆ_ಮಂಗನಕಾಯಿಲೆ_ದೃಡ
#ಈ_ಪ್ರದೇಶಗಳ_ಜನ_ಮುಂಜಾಗೃತೆ_ವಹಿಸ_ಬೇಕು
#kyasanurudesease #Manganakayile #sagarataluk #Hosanagarataluk #Kfd
#healthminister #Govtofkarnataka #chiefministerkarnataka #dineshgundurao #DCShivamogga #DHO.
ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ಜಿಲ್ಲೆಯಲ್ಲಿ ಮಂಗನ ಕಾಯಿಲೆ (Kyasanuru forest deseas) ಅಲಾರಾಂ ಬಾರಿಸುತ್ತಿದೆ.
ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಮಾವಿನಸರದಲ್ಲಿ ಎರಡು, ಆವಿನಹಳ್ಳಿ ವ್ಯಾಪ್ತಿಯಲ್ಲಿ ಐದು, ಎಡಜಗಳೆಮನೆ, ಆಡೂರು, ಸುಳುಗೋಡು ಗ್ರಾಮದಲ್ಲಿ ತಲಾ ಒಂದೊಂದು ಮಂಗಗಳು ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಈಗಾಗಲೇ ಹೊಸನಗರ ತಾಲೂಕಿನ ಬಿಳ್ಳೋಡಿಯಲ್ಲಿ ಏಳು ಜನರಿಗೆ ಮಂಗನ ಕಾಯಿಲೆ ಪರೀಕ್ಷೆಯಲ್ಲಿ ದೃಡ ಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಸಾಗರ ತಾಲೂಕಿನ ತಲವಾಟ ಗ್ರಾಮ ಪಂಚಾಯಿತಿ ಸಮೀಪದ ಮಂಜಿನ ಕಾನು ಗ್ರಾಮದ ಅಂಗನವಾಡಿ ಹಿಂಬಾಗ ಐದು ಮಂಗಗಳ ಕಳೇಬರ ಸಿಕ್ಕಿತ್ತು.
ಈಗಲೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕಳೆದ ಕೆಲ ತಿಂಗಳಿನಿಂದ ಮಂಗಗಳು ನಿರಂತರವಾಗಿ ಸಾವನ್ನಪ್ಪುತ್ತಿರುವುದಾಗಿ ತಿಳಿದು ಬಂದಿದೆ.
ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಮಾವಿನಸರದಲ್ಲಿ ಎರಡು, ಆವಿನಹಳ್ಳಿ ವ್ಯಾಪ್ತಿಯಲ್ಲಿ ಐದು, ಎಡಜಗಳೆಮನೆ, ಆಡೂರು, ಸುಳುಗೋಡು ಗ್ರಾಮದಲ್ಲಿ ತಲಾ ಒಂದೊಂದು ಮಂಗಗಳು ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಈ ಭಾಗದ ಜನರು ಸಮೀಪದ ಆರೋಗ್ಯ ಇಲಾಖೆಯಲ್ಲಿ ಮತ್ತು ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಉಚಿತವಾಗಿ ನೀಡುವ DMP ಆಯಿಲ್ ತಮ್ಮ ಕೈಕಾಲುಗಳಿಗೆ ಸವರಿಕೊಂಡು ತೋಟದ ಕೆಲಸಕ್ಕೆ, ಕೊಟ್ಟಿಗೆ ಕೆಲಸಕ್ಕೆ ಅಥವ ಸಮೀಪದ ಅರಣ್ಯಕ್ಕೆ ಹೋಗಬೇಕು.
ಮೇಯಲು ಕಾಡಿಗೆ ಹೋಗುವ ದನ ಜಾನುವಾರುಗಳೂ ಈ ಉಣ್ಣೆ ನಿಮ್ಮ ಮನೆ ಬಾಗಿಲಿಗೇ ತರುವ ಸಾಧ್ಯತೆ ಇದೆ ಆದ್ದರಿಂದ ಮಂಗನ ಕಾಯಿಲೆ ಇರುವ ಪ್ರದೇಶದಲ್ಲಿ ಜನ ಜಾನುವಾರು ಅರಣ್ಯಕ್ಕೆ ಹೋಗಲೇ ಬಾರದೆಂದು ತಜ್ಞರು ಹೇಳುತ್ತಾರೆ.
ಜ್ವರ, ತೀವ್ರ ತಲೆನೋವು,ಮಾನಸಿಕ ತೊಂದರೆ, ನಡುಕ, ದೃಷ್ಟಿ ಕೊರತೆ ಅಥವ ವಾಂತಿ ಇತ್ಯಾದಿ ಲಕ್ಷಣ ಕಂಡರೆ ತಕ್ಷಣ ವೈದ್ಯರನ್ನ ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳ ಬೇಕು ಉದಾಸೀನ ಮಾಡಿದರೆ ಇದು ಮಾರಣಾಂತಿಕ ಪರಿಣಾಮ ಬೀರಬಲ್ಲದು.
Comments
Post a Comment