#ಕಾಡಾನೆಗಳ_ಕಾರಿಡಾರ್_ಬಗ್ಗೆ_ಸರ್ಕಾರದ_ಕ್ರಮ_ಏನು?.
#ಕಾಡಾನೆಗಳ_ಬಗ್ಗೆ_ಅರಣ್ಯ_ಸಚಿವರ_ಉತ್ತರ
#ಕಳೆದ_ವರ್ಷದ_ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ.
#ಹಾಸನ_ಜಿಲ್ಲೆಯ_ಬೇಲೂರು_ವಿಧಾನಸಭಾ_ಕ್ಷೇತ್ರದ_ಶಾಸಕರಾದ_H_K_ಸುರೇಶರ_ಪ್ರಶ್ನೆ.
#ಹಾಸನ_ಮತ್ತು_ಕೊಡಗು_ಜಿಲ್ಲೆಗಳಲ್ಲಿ_ಕಾಡಾನೆ_ನಿಯಂತ್ರಿಸಲು_ಸರ್ಕಾರ_ತೆಗೆದುಕೊಂಡ_ಕ್ರಮ_ಏನು?
#ಅದಕ್ಕೆ_ಅರಣ್ಯ_ಸಚಿವರ_ಉತ್ತರ
#ಎರಡು_ಸಾವಿರ_ಹೆಕ್ಟರ್_ನಲ್ಲಿ_ಆನೆಗಳ_ವಿಹಾರಧಾಮ_ನಿರ್ಮಿಸಲಾಗುವುದು.
#wildlifeconservation #malenadu #westernghatsofindia #Belagavi #kodagu #Hassan #shivamogga #Anandapuram #kollibachalu
#ಆನೆ_ಪಾರ್ಕ್ ಇರಲಿ ಮಲೆನಾಡಿನಲ್ಲಿ #ಮಂಕಿ_ಪಾರ್ಕ್ ಕಥೆ ಏನಾಯಿತು? ಎನ್ನುವ ಪ್ರಶ್ನೆ ಕೇಳ ಬೇಡಿ ಇದು ಕಾಡಾನೆ ಪಾರ್ಕ್ ವಿಷಯ.
ಆನೆ ಪಾರ್ಕ್ ಸಾಧ್ಯನಾ? ಸಾದುವಾ? ಗೊತ್ತಿಲ್ಲ ಈ ಬಗ್ಗೆ ಅರಣ್ಯ ಸಚಿವರು ವಿಧಾನ ಮಂಡಳದಲ್ಲಿ ನೀಡಿದ ಉತ್ತರಕ್ಕೆ ಒಂದು ವರ್ಷ ಆಯಿತು.
ಈ ಬಗ್ಗೆ ಅವರ ಇಲಾಖೆ ತೆಗೆದುಕೊಂಡ ಕ್ರಮ ಏನು? ಅಂತ ಶಾಸಕರು ಈ ಚಳಿಗಾಲದಲ್ಲಿ ಪ್ರಶ್ನಿಸ ಬಹುದು.
ವಿಧಾನಸಭೆಯಲ್ಲಿ ಬೇಲೂರು ಶಾಸಕರ ಪ್ರಶ್ನೆಗೆ ಸಚಿವ ಈಶ್ವರ ಖಂಡ್ರೆ ಉತ್ತರ ದಿನಾಂಕ
12/12/2024.
ಕೊಡಗು ಮತ್ತು ಹಾಸನದಲ್ಲಿ ಕಾಡಾನೆಗಳ ಕಾಟ ನಿಯಂತ್ರಿಸಲು ಕೊಡಗು ಮತ್ತು ಹಾಸನ ಬಳಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ವಿಧಾನಸಭೆಯಲ್ಲಿ ತಿಳಿಸಿದ್ದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೇಲೂರು ಶಾಸಕ ಎಚ್.ಕೆ. ಸುರೇಶ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೇಲೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿಯಿಂದ ಹಾನಿಗೊಳಗಾದ ಮಾನವ ಪ್ರಾಣಹಾನಿ ಮತ್ತು ಮಾನವ ಗಾಯ ಪ್ರಕರಣಗಳಿಗೆ ದಯಾತ್ಮಕ ಪರಿಹಾರ ಧನ ನೀಡಲಾಗುತ್ತಿದೆ ಎಂದರು.
ಹಾಸನ ಜಿಲ್ಲಾ ವ್ಯಾಪ್ತಿಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಗ್ರಾಮಗಳಲ್ಲಿ ಕಳೆದ 3 ತಿಂಗಳಿನಿಂದ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ, ಈ ಕಾಡಾನೆಗಳನ್ನು ಅರಣ್ಯ ಪ್ರದೇಶಗಳ ಕಡೆಗೆ ಹಿಮ್ಮೆಟಿಸಲು ಇಲಾಖಾ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿರುತ್ತದೆ ಎಂದು ತಿಳಿಸಿದರು.
ಪ್ರತಿನಿತ್ಯ ಕಾಡಾನೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರುನ್ನು ಸಂಪರ್ಕಿಸಿ ಆನೆಗಳ ಚಲನ-ವಲನಗಳ ಮಾಹಿತಿಯನ್ನು ನೀಡಿ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕದ ಮೂಲಕ ತಿಳಿಸಲಾಗುತ್ತಿದೆ.
ಆನೆ ಕಾರ್ಯ ಪಡೆ(ETF), ಕ್ಷಿಪ್ರ ಸ್ಪಂದನ ತಂಡ(RRT) ಮತ್ತು ಹಿಮ್ಮೆಟ್ಟಿಸುವ ಶಿಬಿರ ತಂಡದ (ADC) ಸಿಬ್ಬಂದಿಗಳೊಂದಿಗೆ ರಾತ್ರಿ ಗಸ್ತು ಕಾರ್ಯ ಕೈಗೊಂಡು ಸ್ಥಳೀಯ ಸಾರ್ವಜನಿಕರನ್ನು ಎಚ್ಚರಿಸುವ ಕ್ರಮ ಕೈಗೊಂಡಿವೆ ಎಂದರು.
ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಡಿಜಿಟಲ್ ಸೂಚನಾ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿಯನ್ನು ರವಾನಿಸಲಾಗುತ್ತಿರುತ್ತದೆ.
ಆಕಾಶವಾಣಿ ಮುಖಾಂತರ ಹಾಗೂ ವಾಟ್ಸಾಪ್ ಗ್ರೂಪ್ ಗಳ ಮುಖಾಂತರ ಕಾಡಾನೆಗಳ ಚಲನ-ಚಲನ ಸಂದೇಶಗಳನ್ನು ರವಾನಿಸಲಾಗುತ್ತಿರುತ್ತದೆ, ಇಲಾಖಾ ವಾಹನಗಳಲ್ಲಿ ಪ್ರತಿನಿತ್ಯ ಕಾಡಾನೆಗಳಿರುವ ಸ್ಥಳಗಳಲ್ಲಿ ಗಸ್ತು ಮಾಡಿ ಧ್ವನಿವರ್ಧಕಗಳ ಮುಖಾಂತರ ಸಾರ್ವಜನಿಕರಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದೂ ವಿವರಿಸಿದರು.
ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟ ಕುಟುಂಬದ ಹತ್ತಿರದ ಬಂಧುಗಳಿಗೆ ಈ ಹಿಂದೆ ರೂ.7.50 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು.
ಈಗ ರೂ.15.00 ಲಕ್ಷ ರೂ. ದಯಾತ್ಮಕ ಪರಿಹಾರ ನೀಡಲಾಗುತ್ತಿದೆ.
ಜೊತೆಗೆ ಮಾಹೆಯಾನ ರೂ.4000.00 ರಂತೆ 5 ವರ್ಷಗಳ ಅವಧಿಗೆ ಮಾಸಾಶನ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದೂ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಗಿಳಾಲಗುಂಡಿ ಸಮೀಪದ ಕೊಲ್ಲಿಬಚ್ಚಲು ನೀರಾವರಿ ಡ್ಯಾಮ್ ಪ್ರದೇಶದಿಂದ ಅಂಬ್ಲಿಗೋಳ ನೀರಾವರಿ ಆಣೆಕಟ್ಟಿನ ತನಕ ಹೊಸ ಆನೆ ಕಾರಿಡಾರ್ ಪ್ರಾರಂಭ ಆಗಿ ಈ ವರ್ಷ ಅದು ಸೊರಬ ತಾಲ್ಲೂಕಿನ ತನಕ ವಿಸ್ತಾರವಾಗಿದೆ.
ಕಳೆದ ವರ್ಷದಲ್ಲಿ ಅರಣ್ಯ ಸಚಿವರು ಚಳಿಗಾಲದ ಅಧಿವೇಶನದಲ್ಲಿ ಈ ಉತ್ತರ ನೀಡಿದ್ದು ದಾಖಲೆ ಆಗಿದೆ.
Comments
Post a Comment