#ಆನಂದಪುರಂ_ಇತಿಹಾಸ_ಭಾಗ_28 #ಬ್ರಿಟೀಷರ_ಆಡಳಿತದ_ಪಳಿಯುಳಿಕೆಯಂತೆ_ಉಳಿದಿರುವ_ಆನಂದಪುರಂನ_ಪ್ರವಾಸಿ_ಮಂದಿರ. #ಸುಮಾರು_ಮೂರು_ಶತಮಾನಕ್ಕೂ_ನಂಟು_ಇದೆ. #ಆನಂದಪುರಂ_ತಾಲ್ಲೂಕ್_ಆಗಿದ್ದಾಗ_ಇದು_ತಾಲ್ಲೂಕ್_ಕಚೇರಿ. #ಸಾಗರ_ತಾಲ್ಲೂಕಿನ_ಮೊದಲ_ನ್ಯಾಯಾಲಯ_ಕಚೇರಿ_ಇದಾಗಿತ್ತು. #ಒಂದು_ಕಾಲದ_ಶ್ರೀಮಂತ_ಬ್ರಿಟೀಶ್_ಬಂಗ್ಲೆ #ಇಲ್ಲಿ_ತಂಗಿದ್ದ_ಮಹನೀಯರು_ಅನೇಕರು. ಬ್ರಿಟಿಷರು ಯಡೇಹಳ್ಳಿಯ ದಟ್ಟ ಅರಣ್ಯದ ಮಧ್ಯೆ ಎತ್ತರದ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ಕಟ್ಟಿದ ಈ ಸುಸಜ್ಜಿತವಾದ ಬಂಗ್ಲೆ ಆ ಕಾಲದಲ್ಲಿ A ಗ್ರೇಡಿನದ್ದಂತೆ. ಪೂರ್ವದ ಎಡಗಡೆ ತಾವರೆಕೆರೆ ಬಲ ಬಾಗದಲ್ಲಿ ಶಿವಮೊಗ್ಗ ಕೊಲ್ಲೂರು ಹೆದ್ದಾರಿ ಇದೆ, ಕಾಡುಪ್ರಾಣಿಗಳು ನೀರು ಕುಡಿಯಲು ಬಂದಾಗ ಬ್ರಿಟೀಷ್ ದೊರೆಗಳು ಶಿಕಾರಿ ಮಾಡಲು ಅನುಕೂಲ ಇತ್ತು. ಸುಮಾರು 5 ಎಕರೆ ಪ್ರದೇಶದ ಮಧ್ಯದಲ್ಲಿ ಅತ್ಯುತ್ತಮ ಎರೆಡು ಬೆಡ್ ರೂಂನ (ಅಟ್ಯಾಚ್ ಟಾಯಲೆಟ್ ಇರುವ) ಸೂರ್ಯೋದಯ ಮತ್ತು ಸೂಯಾ೯ಸ್ಥಗಳ ವೀಕ್ಷಣೆಗೆ ವರಾಂಡಗಳಿರುವ, ಸುಸಜ್ಜಿತ ಅಡುಗೆ ಮನೆ ಮತ್ತು ಹಾವು ಇತ್ಯಾಧಿ ಸರಿಸೃಪಗಳಿಂದ ರಕ್ಷಣೆಗಾಗಿ ಸುಮಾರು 4 ಅಡಿ ಎತ್ತರದ ಅಡಿಪಾಯದ ವಿಷಾಲವಾದ ಮೆಟ್ಟಿಲುಗಳ ಈ ಸುಸಜ್ಜಿತ ಕಟ್ಟಡದ ಉತ್ತರಕ್ಕೆ ತೆರೆದ ಬಾವಿ ಅದರ ಸಮೀಪ ಬಂಗ್ಲೆ ಕಾವಲುಗಾರನ ಮನೆ ನಿರ್ಮಿಸಿದ್ದಾರೆ. ಇಲ್ಲಿ ತಂಗಿ ವಿಹರಿಸಲು ಬ್ರಿಟಿಷರಿಗೆ ಇದು ಸೊಗಸಾದ ಸುಸಜ್ಜಿತವಾದ ತಂಗುದಾಣವಾಗಿ ನೂರಾರು ವರ್ಷ ಬಳ...