Skip to main content

Posts

Blog number 2137. ಕುಂಚಿಕಲ್ ಪಾಲ್ಸ್ ಬಗ್ಗೆ ಪಾಲ್ಸ್ ಸಮೀಪದಲ್ಲೇ ಬಾಲ್ಯಕಳೆದ ಖ್ಯಾತ ಬರಹಗಾರ ಮುಷ್ತಾಕ್ ಹೆನ್ನಾಬೈಲು ಬರೆದ ಪ್ರತಿಕ್ರಿಯೆ ನೋಡಿ

#ಮುಷ್ತಾಕ್_ಹೆನ್ನಾಬೈಲು_ನಾನು_ಇಷ್ಟಪಡುವ_ಹೊಸತಲೆಮಾರಿನ_ಲೇಖಕರು #ಇವರ_ಊರು_ಹೆನ್ನಾಬೈಲು_ಹೊಸಂಗಡಿ_ಮತ್ತು_ಸಿದ್ದಾಪುರ_ಮಧ್ಯದಲ್ಲಿದೆ. #ಇವರ_ತಂದೆ_ಅರಣ್ಯ_ಇಲಾಖೆಯಲ್ಲಿದ್ದವರು #ಅವರಿಗೆ_ಕುಂಚಿಕಲ್_ಜಲಪಾತದ_ಬಗ್ಗೆ_ಹೆಚ್ಚಿನ_ಮಾಹಿತಿ_ಇದ್ದವರು #ಮಗ_ಮುಷ್ತಾಕ್_ಮತ್ತು_ಗೆಳೆಯರು_ಈ_ಜಲಪಾತ_ನೋಡಲು #ಅಲ್ಲಿನ_ಅಪಾಯಕಾರಿ_ಮಾಗ೯ದಲ್ಲಿ_ಹೋಗುತ್ತಾರೆಂಬ_ಆತಂಕ_ಇತ್ತವರಿಗೆ  #ಕುಂಚಿಕಲ್_ಪಾಲ್ಸ್_ಲೇಖನಕ್ಕೆ_ಅವರು_ಪ್ರತಿಕ್ರಿಯೆ_ದಾಖಲಿಸಿದ್ದಾರೆ. https://youtu.be/p3W5GfY7v_Q?feature=shared    ಮುಷ್ತಾಕ್ ಹೆನ್ನಾಬೈಲು ನನ್ನ ಇಷ್ಟದ ಲೇಖಕರು ಹೊಸ ತಲೆಮಾರಿನ ಲೇಖಕರಲ್ಲಿ ಇವರು ಪ್ರಮುಖರು.    ಇವರು ವರಾಹಿ ಜಲ ವಿದ್ಯುತ್ ಸ್ಥಾವರಕ್ಕೆ ಸಮೀಪದ ಹೊಸಂಗಡಿ ಮತ್ತು ಸಿದ್ದಾಪುರದ ಮಧ್ಯದ ಹೆನ್ನಾಬೈಲು ಊರಿನವರು.    ಇವರ ತಂದೆ ಅರಣ್ಯ ಇಲಾಖೆಯಲ್ಲಿ ಸ್ಥಳಿಯವಾಗಿ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರಿಗೆ ಕುಂಚಿಕಲ್ ಪಾಲ್ಸ್ ಚೆನ್ನಾಗಿ ತಿಳಿದವರು ಆದ್ದರಿಂದಲೇ ಆ ಪಾಲ್ಸ್ ಗೆ ಹೋಗುವ ಮಾರ್ಗ ಅಪಾಯಕಾರಿ ಎಂದಿದ್ದಾರೆ ಅಷ್ಟೆ ಅಲ್ಲ ಮಗ ಮುಷ್ತಾಕ್ ಮತ್ತವರ ಗೆಳೆಯರು ಈ ಜಲಪಾತ ವೀಕ್ಷಣೆಗೆ ಹೋಗ ಬಹುದೆಂಬ ಆತಂಕ ಇತ್ತಂತೆ.     ಕುಂಚಿಕಲ್ ಪಾಲ್ಸ್ ಬಗ್ಗೆ ಅವರ ಪ್ರತಿಕ್ರಿಯೆ ಸ್ಥಳಿಯರಲ್ಲಿ ಈ ಜಲಪಾತದ ಬಗ್ಗೆ ಇರುವ ಅಭಿಪ್ರಾಯವೇ ಆಗಿದೆ....  #ArunPrasad ನನ್ನ...

Blog number 2136. ದೇಸಿ ತಳಿ ಕಬ್ಬಿನಿಂದ ತಯಾರಾಗುವ ಮಲೆನಾಡಿನ ನೀರು ಬೆಲ್ಲ / ಜೋನಿ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿದೆ ಆದರೆ ಉತ್ಪಾದನೆ ಕಡಿಮೆ, ಒಂದು ಕಿಲೋ ಈ ಬೆಲ್ಲಕ್ಕೆ ಸಕ್ಕರೆಯ ಮೂರು ಪಟ್ಟು ಬೆಲೆ ಗೊತ್ತಾ!....

#ಪಶ್ಚಿಮಘಟ್ಟದ_ಮಲೆನಾಡಿಗೆ_ಅದರಲ್ಲೂ_ಶಿವಮೊಗ_ಜಿಲ್ಲೆಗೆ_ಮತ್ತು #ಪಕ್ಕದ_ಉತ್ತರಕನ್ನಡ_ಚಿಕ್ಕಮಗಳೂರು_ಉಡುಪಿ_ಜಿಲ್ಲೆಯ_ಕೆಲ_ಪ್ರದೇಶಕ್ಕೆ_ಮಾತ್ರ #ಸೀಮಿತವಾದ_ಆಲೇಮನೆ_ನೀರು_ಬೆಲ್ಲ, #ಈ_ಬೆಲ್ಲಕ್ಕೆ_ಬೇಡಿಕೆ_ಜಾಸ್ತಿ_ಉತ್ಪಾದನೆ_ಕಡಿಮೆ_ಆದ್ದರಿಂದ_ಇದರ_ಬೆಲೆ_ಕಿಲೋಗೆ_100 #ಅಚ್ಚುಬೆಲ್ಲಕ್ಕೆ_ಕಿಲೋಗೆ_35_ಸಕ್ಕರೆ_ಕಿಲೋಗೆ_40_ರೂಪಾಯಿ. #ಸಕ್ಕರೆ_ಕಾರ್ಖಾನೆಯ_ಗೋದಾಮಿನಿಂದ_ಹಾಳಾದ_ಕಡಿಮೆ_ಬೆಲೆಯ_ಸಕ್ಕರೆ_ತಂದು_ಬೆಲ್ಲ_ಮಾಡುವ #ಪಾರ0ಪಾರಿಕ_ದೇಸಿ_ತಳಿಯ_ಕಬ್ಬು_ಬಿಟ್ಟು_ಸಕ್ಕರೆ_ಕಬ್ಬಿನಿಂದ_ಬೆಲ್ಲ #ತಯಾರಿಸುವ_ಅಡ್ಡ_ಕಸಬು_ಪ್ರಾರಂಭವಾಗಿದೆ. https://youtube.com/shorts/i8wdM0pa5yM?feature=shared    ನೀರು ಬೆಲ್ಲ - ಜೋನಿ ಬೆಲ್ಲ ಪಶ್ಚಿಮ ಘಟ್ಟದ ಮಲೆನಾಡಿನ ಸೀಮಿತ ಪ್ರದೇಶವಾದ ಶಿವಮೊಗ್ಗ - ಉತ್ತರ ಕನ್ನಡ - ಚಿಕ್ಕಮಗಳೂರು ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ಮಾತ್ರ ಪಾರಂಪರಿಕ ದೇಸಿ ತಳಿಯ ಕಬ್ಬುಗಳಿಂದ ತಯಾರಿಸುತ್ತಾರೆ ಇದರ ರುಚಿ ಬಲ್ಲವರಿಗೆ ಈ ಬೆಲ್ಲ ಬೇಕೇ ಬೇಕು.  ಅಲೇ ಮನೆ ಎಂಬ ಬೆಲ್ಲ ತಯಾರಿಯ ಕೆಲಸ ಸುಗ್ಗಿ ನಂತರದಲ್ಲಿ ಇಡೀ ಹಳ್ಳಿಗೆ ಸಂಭ್ರಮವಾಗಿರುತ್ತಿತ್ತು ಆದರೆ ಈಗಿನ ಕಾಲದ ವೇಗದಲ್ಲಿ ಯಾಂತ್ರಿಕ ಯುಗದಲ್ಲಿ ಇದು ಅನೇಕ ಮಾರ್ಪಾಡು ಆಗಿದೆ.   ಈ ಬೆಲ್ಲವನ್ನ ಮಣ್ಣಿನ ಕೊಡದಲ್ಲಿ ತುಂಬಿ ಅದಕ್ಕೆ ತೆಂಗಿನ ಗರಟೆ ಮುಚ್ಚಿ ಬಟ್ಟೆ ಸುತ್ತಿ ಅದನ್ನ ಹುತ್ತದ ಮಣ್ಣಿನಿಂದ ಸೀಲು ಮಾಡುವ ಪದ್ಧತಿ...

Blog number 2135. ಸಹಾಯ ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ, ಇವರ ಸಹಾಯ ಆ ಕುಟುಂಬಕ್ಕೆ ಆ ಕ್ಷಣಕ್ಕೆ ದೊಡ್ಡ ಆಸರೆ.

#ವೃತ್ತಿಯಿಂದ_ನಿವೃತ್ತರಾದರೂ #ಸಮಾಜ_ಸೇವೆ_ಸಹಾಯ_ಮಾಡುವುದರಲ್ಲಿ #ಸಕ್ರಿಯರಾಗಿರುವ_ಬಾಲಕೃಷ್ಣ_ಶ್ರೀನಿವಾಸರು   News first Karnataka ದಲ್ಲಿ ಹುಬ್ಬಳ್ಳಿಯ ಅಂಜಲಿ ಸಹೋದರಿ ತನ್ನ ಅಕ್ಕನ ಹತ್ಯೆಯ ನಂತರ ತಾವಿರುವ ಬಾಡಿಗೆ ಮನೆ ತೆರವು ಮಾಡಲು ಮನೆ ಮಾಲಿಕರು ಒತ್ತಾಯ ಮಾಡುತ್ತಿರುವ ಬಗ್ಗೆ ವಿವರಿಸುತ್ತಿದ್ದಾಗ ನೋಡಿದವರ ಹೃದಯ ಹಿಂಡುತ್ತಿತ್ತು.   ಇದನ್ನು ನೋಡಿದವರು ಅನೇಕರು ಪ್ರತಿಕ್ರಿಯಿಸುತ್ತಿದ್ದರು ಆಗಲೇ ಒಬ್ಬರ ಪ್ರತಿಕ್ರಿಯೆ ಗಮನ ಸೆಳೆಯಿತು " ನಿಮ್ಮ owner G pay ನಂ ಕೊಡು ಅಮ್ಮ... 3 ತಿಂಗಳ ಬಾಡಿಗೆ ಕಟ್ಟಿ ನಿಮಗೆ ತಿಳಿಸುತ್ತೇನೆ.... ಚಾನಲ್ ನಲ್ಲಿ ನಿಮ್ಮ ಫೋನ್ ನಂಬರ್ ಕೇಳಿದ್ದೇನೆ. My Contact number 9845085667.Bendigere (ಹುಬ್ಬಳ್ಳಿ) ಪೋಲಿಸ್ ಸ್ಟೇಷನ್ ನಾಳೆ A/C ನಂ ತಿಳಿಸುವುದಾಗಿ ತಿಳಿಸಿದ್ದಾರೆ ಅಂತ ಬಾಲಕೃಷ್ಣ ಶ್ರೀನಿವಾಸ್ ಪ್ರತಿಕ್ರಿಯೆ ನೋಡಿ ಮನಸ್ಸು ಹಗುರಾಗಿತ್ತು.   ನಾನು ಅವರಿಗೆ  "ನಿಮ್ಮ ಸಹೃದಯದ ಮಾತಿಗೆ ಅನಂತಾನಂತ ಧನ್ಯವಾದಗಳು ಈ ತಕ್ಷಣದ ಪರಿಹಾರ ಅವರಿಗೆ ದೊಡ್ಡ ಸಹಾಯ ಆಗಲಿದೆ ಮತ್ತು ಅನೇಕರಿಗೆ ಸಹಾಯ ಮಾಡಲು ಪ್ರೇರಣೆ ಆಗಿದೆ" ಎಂದು ಬರೆದಿದ್ದೆ ಅವರು thanks ದಾಖಲಿಸಿದ್ದರು.    ನಂತರ 20 - ಮೇ - 2024ರಂದು ಅವರು "ನಾನು ಗಂಗವ್ವ ಅಂಬಿಗೇರ್ ಅಕೌಂಟ್ ನಂಬರ್ 17061556687 ಗೆ ರೂ 15000 ಜಮ ಮಾಡಿದ್ದೇನೆ ಎಂ...

Blog number 2134. ಜೇನು ತುಪ್ಪದ ಜಾಡಿಯಲ್ಲಿ ಸಂಸ್ಕರಿಸಿದ ಹಣ್ಣುಗಳು ವರ್ಷಗಟ್ಟಲೆ ತಮ್ಮ ತಾಜಾತನ ಕಾಪಾಡಿಕೊಳ್ಳುವ ಗುಣ ಹೊಂದಿದೆ ಇದು ಪ್ರಾಚೀನ ಕಾಲದಲ್ಲಿ ಆಚರಣೆ ಇದ್ದಿದ್ದ ಹಣ್ಣಿನ ಸಂಸ್ಕರಣೆ ಮತ್ತು ನೈಸರ್ಗಿಕ ಶೆಲ್ಫ್ ಲೈಪ್ ಹೆಚ್ಚಿಸುವ ದೇಶಿ ಆಹಾರ ತಂತ್ರಜ್ಞಾನ,

#ಜೇನು_ತುಪ್ಪದ_ವಿಶೇಷ_ಗುಣಗಳು. #ಈ_ವರ್ಷದ_ಮಾವಿನಹಣ್ಣು_ಜಾಡಿಯಲ್ಲಿ_ಜೇನುತುಪ್ಪದಲ್ಲಿ_ಅದ್ದಿಟ್ಟರೆ #ಮುಂದಿನ_ವರ್ಷದಲ್ಲಿ_ತೆಗೆದು_ತಿಂದರೆ_ಅದೇ_ತಾಜಾತನ_ಇರುತ್ತದಂತೆ. #ಈ_ವರ್ಷ_ನಾನು_ಇದನ್ನು_ಪ್ರಯೋಗ_ಮಾಡಿ_ನೋಡಲಿದ್ದೇನೆ. https://youtube.com/shorts/r7wvbQDxlgs?feature=shared    ಪೈನಾಪಲ್ / ಅನಾನಸ್ ಉತ್ತರ ಕನ್ನಡ ಜಿಲ್ಲೆಯ ಮುಖ್ಯ ಬೆಳೆ ಆದರೆ ಕೇಂದ್ರ ಸರ್ಕಾರ #ಶಿವಮೊಗ್ಗ ಜಿಲ್ಲೆಯನ್ನು #ಪೈನಾಪಲ್ ಮುಖ್ಯ ಬೆಳೆ ಎಂದು ಘೋಷಿಸಿದೆ ಇದರಿಂದ ಪೈನಾಪಲ್ ಬೆಳೆ ಮೌಲ್ಯವರ್ದನೆ ಎಷ್ಟಾಗಿದೆ ಗೊತ್ತಿಲ್ಲ.   ಜೇನುತುಪ್ಪ ನೈಸರ್ಗಿಕ ಪ್ರಿಸರ್ವೇಟಿವ್ ಅದರಲ್ಲಿ ಯಾವುದೇ ಹಣ್ಣು ಹಾಕಿಟ್ಟರೆ ಆ ಹಣ್ಣು ವರ್ಷಾನುಗಟ್ಟಲೆ ತಾಜಾತನ ಉಳಿಸಿಕೊಳ್ಳುತ್ತದಂತೆ.   ಹಿಂದಿನ ಕಾಲದಲ್ಲಿ ಅಪರೂಪದ ಹಣ್ಣುಗಳನ್ನು ಜೇನು ತುಪ್ಪದ ಜಾರುಗಳಲ್ಲಿ ಹಾಕಿಟ್ಟು ಬೇಕಾದಾಗ ಬಳಸುವ ಸಂಪ್ರದಾಯ ಇತ್ತು ಎನ್ನುತ್ತಾರೆ.   ರಾಜರ ಆಸ್ಥಾನಗಳಲ್ಲಿ ಈ ಪದ್ದತಿ ಕಡ್ಡಾಯವಾಗಿ ರಾಜರ ಅಂತಃಪುರದ ಬಾಣಸಿಗರು ಪಾಲಿಸುತ್ತಿದ್ದರೆಂದು ಓದಿದ ನೆನಪು.      ಬಾಲ್ಯದಲ್ಲಿ ಮಾವ ಹೇಳುತ್ತಿದ್ದ ಕಥೆಗಳಲ್ಲಿ ಕರಡಿ ಹಲಸಿನ ಹಣ್ಣಿನ ತೊಳೆ ಬಿಡಿಸಿ ಒಯ್ದು ರಹಸ್ಯವಾದ ಮರದ ಪೊಟರೆಯಲ್ಲಿ ಜೇನುಗೂಡಿನಿಂದ ಕಿತ್ತು ತಂದ ಜೇನುತುಪ್ಪದಲ್ಲಿ ಅದ್ದಿಡುತ್ತದೆ ಹಲಸಿನ ಹಣ್ಣಿನ ಕಾಲ ಮುಗಿದ ಮೇಲೆ ಕರಡಿ ತಾ...

Blog number 2133. ಭಾಗ - 3.ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ಅವರೊಡನೆ ಮಾತುಕತೆ, ಸಾಕ್ಷರತಾ ಆಂದೋಲನ 90ರ ದಶಕದಲ್ಲಿ ಯಶಸ್ವಿಗೊಳಿಸಿದ ನೆನಪುಗಳು.

#ಭಾಗ_3. #ಹೊಸನಗರ_ವಿಧಾನಸಭಾ_ಕ್ಷೇತ್ರದ_ಮಾಜಿ_ಶಾಸಕರಾದ #ಬಿ_ಸ್ವಾಮಿರಾವ್_ಅವರೊಡನೆ_ಮಾತುಕತೆ #ಅವರ_ಕ್ಷೇತ್ರದಲ್ಲಿ_ಸಾಕ್ಷರತಾ_ಆಂದೋಲನದ_ಯಶಸ್ಸಿನ_ನೆನಪುಗಳು. https://youtu.be/Y-l93xJcxJc?feature=shared     ಶಿವಮೊಗ್ಗ ಜಿಲ್ಲೆಯ ಹೊಸನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ರಾಜ್ಯದ ಶಾಸಕರಲ್ಲೇ ವಿಭಿನ್ನ ನಡೆ ನುಡಿಯವರು, 2009 ರಿಂದ ಹೊಸನಗರ ವಿಧಾನ ಸಭಾ ಕ್ಷೇತ್ರವನ್ನು ಸಾಗರ - ತೀರ್ಥಹಳ್ಳಿ ಮತ್ತು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹರಿದು ಹಂಚಿದ್ದಾರೆ.    94 ನೇ ಹುಟ್ಟುಹಬ್ಬದ ಸಂಭ್ರಮ ಮಾಜಿ ಶಾಸಕರ ಅಭಿಮಾನಿಗಳಲ್ಲಿ ಈ ಸಂದರ್ಭದಲ್ಲೇ ಅವರ ಜೀವನ ವೃತ್ತಾಂತದ ಪುಸ್ತಕ #ನಾನು_ಹೇಳುವುದೆಲ್ಲ_ಸತ್ಯ ಬಿಡುಗಡೆ ಆಗಿದೆ.    ಅವರ 94ರ ವಯಸ್ಸಿನಲ್ಲಿ ಅವರ ಜೀವನ ವೃತ್ತಾಂತ ಪ್ರಸ್ತಕ ಅವರೇ ನನ್ನ ಕಛೇರಿಗೆ ಬಂದು ಅವರ ಸ್ಪಯಾಕ್ಷರದ ಸಹಿ ನಮೂದಿಸಿ ನನಗೆ ನೀಡಿದ್ದು ಅವರಿಗೆ ನನ್ನ ಮೇಲಿನ ಪ್ರೀತಿಯ ದ್ಯೋತಕವಾಗಿದೆ ಇದಕ್ಕಾಗಿ ನಾನು ಅವರಿಗೆ ಅಭಾರಿ.     ಈ ಸಂದರ್ಭದಲ್ಲಿನ ಅವರೊಡನೆ ಮಾತುಕಥೆಯ ಸಂದರ್ಶನಗಳನ್ನು ಮಾಡಿದ್ದೇನೆ ಅದರ 3 ನೇ ಭಾಗ ಇದು, ಸಾಕ್ಷರತಾ ಆಂದೋಲನ ಅವರ ಕ್ಷೇತ್ರದಲ್ಲಿ ಯಶಸ್ವಿ ಆಗಿ ನೆರವೇರಿಸಿದ ಆ ದಿನಗಳನ್ನ ಅವರು ನೆನಪು ಮಾಡಿಕೊಂಡರು.   ಈಗ ನಮ್ಮ ಹೆಬ್ಬೆಟ್ಟಿನ ಅಚ್ಚು ರೇಷನ್ ಕಾರ್ಡ್, ಆಸ್ತಿ ನೊಂದ...

Blog number 2132. ಇವತ್ತಿನಿಂದ (21-ಮೇ- 2024) ಕೆಳದಿ ರಾಜರ ಇತಿಹಾಸದ ಕಂತುಗಳು ಡಿಜಿಟಲ್ ಮಾಧ್ಯಮದಲ್ಲಿ ಪ್ರಾರಂಭ, ಇತಿಹಾಸ ತಜ್ಞ ಡಾ.ಗುರುರಾಜ ಕಲ್ಲಾಪುರ ಕೆಳದಿ ಇತಿಹಾಸ ಹೇಳಲಿದ್ದಾರೆ

#ಬಹು_ನಿರೀಕ್ಷಿತ_ಕೆಳದಿ_ಇತಿಹಾಸ #ಖ್ಯಾತ_ಡಿಜಿಟಲ್_ಮಾಧ್ಯಮದಲ್ಲಿ_ಇವತ್ತಿನಿಂದ_ಪ್ರಾರಂಭ #ನಿವೃತ್ತ_ಕೆಳದಿ_ಮ್ಯೂಸಿಯಂ_ಕ್ಯೂರೇಟರ್_ಗುರುರಾಜಕಲ್ಲಾಪುರ_ಜೊತೆ #ಶ್ರೀಮತಿ_ನಂದಿನಿ_ಮತ್ತು_ಆಕರ್ಷಹರಳಕಟ್ಟೆ #ತಪ್ಪದೇ_ವೀಕ್ಷಿಸಿ_ಇದು_ಸಾಗರ_ತಾಲ್ಲೂಕಿನ_ವರದಾನದಿ_ದಂಡೆಯ_ಪ್ರಭುತ್ವದ_ಇತಿಹಾಸ #ಸಾಗರ_ಪಟ್ಟಣ_ಮಾರಿಕಾಂಬಾ_ಗದ್ದುಗೆ_ಗಣಪತಿ_ದೇವಸ್ಥಾನ_ನಿರ್ಮಿಸಿದ #ಕೆಳದಿ_ರಾಜ_ವೆಂಕಟಪ್ಪನಾಯಕರ_ಮನೆತನದ_ಕಥೆ.    ನಿನ್ನೆಯ ತನಕ 50 ಕಂತುಗಳಲ್ಲಿ ನಮ್ಮ ಜಿಲ್ಲೆಯ ಶರಾವತಿ ನದಿ ದಂಡೆಯ ಸಾಗರ ತಾಲೂಕಿನ ಅರ್ದ ಭಾಗ ಸೇರಿದ ಗೇರುಸೊಪ್ಪೆ ಸಾಮ್ರಾಜ್ಯದ ಇತಿಹಾಸದ ಕಥೆ ಇತಿಹಾಸ ಸಂಶೋದಕ ಲೋಕರಾಜ ಜೈನರಿಂದ ಡಿಜಿಟಲ್ ಮಾಧ್ಯಮದಲ್ಲಿ ನೋಡಿದ್ದೀರಿ.    ಗೇರುಸೊಪ್ಪೆ ರಾಣಿ ಚೆನ್ನಬೈರಾದೇವಿ ಇತಿಹಾಸದ ಇನ್ನೊಂದು ಭಾಗ ಮುಂದಿನ ದಿನಗಳಲ್ಲಿ ವೀಕ್ಷಕರಿಗೆ ಡಿಜಿಟಲ್ ಮಾಧ್ಯಮ ತಲುಪಿಸಲಿದೆ ಆಗ ಪುನಃ ಲೋಕರಾಜ ಜೈನರ ಆಕರ್ಷಕವಾದ ಇತಿಹಾಸದ ಕಥೆ ಕೇಳಲು ಕಾತುರರಾಗಿದ್ದೇವೆ.   ಒಂದು ವಿಶೇಷ ಅಂದರೆ 5 ಲಕ್ಷ ವೀಕ್ಷಕರಿದ್ದ ಡಿಜಿಟಲ್ ಮಾಧ್ಯಮ ಶಿವಮೊಗ್ಗ ಜಿಲ್ಲೆಯ ಗೇರುಸೊಪ್ಪೆ ರಾಣಿ ಚೆನ್ನಬೈರಾದೇವಿ, ಕದಂಬರು ತಾಳಗುಂದದ ಮೊದಲ ಕನ್ನಡ ಶಾಸನ, ಖಂಡೋಬರಾವ್ ಮ್ಯೂಸಿಯಂ, ಈಸೂರು ಸ್ವಾತಂತ್ರ್ಯ ಹೋರಾಟ, ನೀನಾಸಂ, ಕಡಿದಾಳು ಮಂಜಪ್ಪ, ಸಿಂಹದಾಮ ಮತ್ತು ಸಕ್ಕರೆಬೈಲು ಆನೆ ಕ್ಯಾಂಪ್ ಗಳ ಪ್ರಸರಣದಿಂದ 8 ಲಕ್ಷ ತಲುಪಿದೆ ಅಂದ...

Blog number 2131. ಅಡಿಕೆ 10 ನೇ ಶತಮಾನದಲ್ಲಿನ ಉಲ್ಲೇಖಗಳನ್ನ ದಾಖಲಿಸಿರುವ ಶಿವಮೊಗ್ಗದ ಉದೋಯೋನ್ಮುಖ ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರ್

#ಹತ್ತನೆ_ಶತಮಾನದಲ್ಲಿ #ಈಗಿನ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಹಳ್ಳಿ #ಹೊನ್ನಾಳಿ_ತಾಲ್ಲೂಕಿನ_ನ್ಯಾಮತಿಯ_ಅಡಿಕೆಗೆ_ಹೆಚ್ಚು_ಬೇಡಿಕೆ_ಇತ್ತು #ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ #ಸಂಶೋದಕರಾದ_ರಮೇಶ್_ಹಿರೇಜಂಬೂರ್ #ಹನ್ನೆರಡನೆ_ಶತಮಾನದಲ್ಲಿ_ಶಾಸನಗಳಲ್ಲಿ_ಅಡಿಕೆ_ಉಲ್ಲೇಖದ_ಬಗ್ಗೆ_ಬರೆದಿದ್ದಾರೆ. #ಈಗಿನ_ಇರುವಕ್ಕಿ_ಶಿವಪ್ಪನಾಯಕ_ಕೃಷಿ_ವಿಶ್ವವಿದ್ಯಾಲಯದ_ಸಂಶೋದನೆ. #ತೀರ್ಥಹಳ್ಳಿ_ತಾಲ್ಲೂಕಿನ_ಅಡಿಕೆ_ಉತ್ಕೃಷ್ಟ_ಎಂದು_ವರದಿಯಾಗಿದೆ.     ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಮ್ಮ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಡಿಕೆಗೆ ದೇಶದಾದ್ಯಂತ ಬೇಡಿಕೆ ಇರುವುದು ಅಂಕಿಅಂಶಗಳ  ಮಾಹಿತಿ ಪ್ರಕಾರ ಸಂಗ್ರಹಿಸಿದ್ದಾರೆ ಇದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗಿದೆ.    ಶಿರಾಳಕೊಪ್ಪದ ರಮೇಶ್ ಹಿರೇಜಂಬೂರ್ ನಮ್ಮ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋದಕರು ಅವರು ಕದಂಬರ ತಾಳಗುಂದದ ಶಾಸನಗಳ ಸಂಶೋದನೆಗಾಗಿ ಹೆಚ್ಚು ಶ್ರಮಪಟ್ಟಿದ್ದಾರೆ.     ಅವರು 10ನೇ ಶತಮಾನದಲ್ಲಿ ನಮ್ಮ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಳ್ಳಿ ಊರಿನ ಅಡಿಕೆ ಮತ್ತು ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಅಡಿಕೆಗೆ ಹೆಚ್ಚು ಬೇಡಿಕೆ ಇತ್ತೆಂಬ ಐತಿಹಾಸಿಕ ದಾಖಲೆ ನಮ್ಮ ಜಿಲ್ಲೆಯ ಇತಿಹಾಸ ಸಂಶೋಧಕರಾದ ರಮೇಶ್ ಹಿರೇಜಂಬೂರ್ ಎರೆಡು ವರ್ಷದ ಹಿಂದೆ ಪೇಸ್ ಬುಕ್ ನಲ್ಲಿ ಪ್ರಕಟಿಸ...