#ಮಲೆನಾಡಿನ_ಪತ್ರಕರ್ತರಲ್ಲಿ_ಹೊಸತನದ_ಕೊರತೆ_ಆಗದಿರಲಿ. #ಸುದ್ದಿ_ಆಗದ್ದನ್ನು_ಸುದ್ದಿ_ಮಾಡಲಿ #ಸುದ್ದಿ_ಆಗದ_ಸುದ್ದಿ_ಎಂಬ_ಲೋಪವಾಗದಿರಲಿ #ಸತ್ತಂತೆ_ಇರುವ_ವ್ಯವಸ್ಥೆ_ಬಡಿದೆಚ್ಚರಿಸುವ೦ತ_ಕೆಲಸ_ಪತ್ರಕರ್ತರಿಂದ_ಸಾದ್ಯವಿದೆ #ಪತ್ರಿಕೆ_ಮತ್ತು_ಪತ್ರಕರ್ತರು_ಸ್ಥಳಿಯ_ಸುದ್ದಿ_ಮೂಲಗಳನ್ನು_ಕಡೆಗಾಣಿಸದಿರಲಿ. ನಾನು ಸಣ್ಣಿಂದನೇ ಪತ್ರಿಕೆಗಳನ್ನು ಓದುತ್ತಾ ಬಂದವನು ಆಗ ಪೇಪರ್ ಯಾವ ಕಾರಣಕ್ಕೂ ಕಾಲಿನಿಂದ ತುಳಿಯಬಾರದಂತ ಸರಸ್ವತಿ ದೇವಿಯಾಗಿದ್ದಳು,ಗೊತ್ತಿಲ್ಲದೆ ಕಾಲು ತಾಗಿಸಿದರೆ ಪಶ್ಚಾತ್ತಾಪದಿಂದ ಅದಕ್ಕೆ ನಮಸ್ಕರಿಸಿ ಕ್ಷಮೆ ಕೇಳುತ್ತಿದ್ದೆವು. ಆಗೆಲ್ಲ ಪತ್ರಕರ್ತರೆಂದರೆ ಬಡ ಬ್ರಾಹ್ಮಣ ಪುರೋಹಿತರಂತೆ ಸಮಾಜದ ಅಂಕು ಡೊಂಕು ತಿದ್ದ ಬೇಕು, ಸಂವಿಧಾನಕ್ಕೆ ಚ್ಯುತಿ ಬಂದರೆ ಎಚ್ಚರಿಸ ಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಅವೇಳೆಯಲ್ಲೂ ಎದ್ದು ಬರಬೇಕು ಆದರೆ ಅವನಿಗೆ ಸಂಭಾವನೆ ? ಸಮಾಜದಲ್ಲಿ ಗೌರವ? ಈಗಿನ ರೀತಿ ಇರಲಿಲ್ಲ. ಈಗ ಎಲ್ಲದೂ ಇದೆ, ಸಂಖ್ಯೆಯೂ ಬರಪೂರ ಆದರೆ ಸುದ್ದಿಯಾಗದ ಸುದ್ದಿಗಳು ಮತ್ತು ಸುದ್ದಿಯ ಬರಗಾಲ ಸೃಷ್ಟಿ ಆಗಿದೆ. ಈಗ ಪ್ರತಿ ನಿತ್ಯ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸುದ್ದಿಗಳು ಪತ್ರಿಕಾ ಗೋಷ್ಟಿ - ಶಂಕುಸ್ಥಾಪನೆ - ಸನ್ಮಾನಗಳು ಆದ್ದರಿಂದ ಜನ ಸಾಮಾನ್ಯರಿಗೆ ಉಪಯೋಗ ಆಗುವಂತ ತನಿಖಾ ಲೇಖನಗಳು ಪ್ರಕಟವಾಗುವುದು ತುಂಬಾ ಅಪರೂಪ. ರಾಜ್ಯ...