Skip to main content

Posts

Blog number 1758. ಎಲ್ಲಿಂದಾ?...ಯಾರು?...ಯಾಕೆ? ...ಹಳ್ಳಿಗಳಿಗೆ ಕುದುರೆಗಳನ್ನ ತಂದು ಬಿಡುತ್ತಿದ್ದಾರೆ?....

#ಕುದುರೆ_ಸಾಕುವವರಿಲ್ಲ #ಜಟಕಾಗಾಡಿ_ಟಾಂಗಾ_ಸಾರೋಟು_ಕಾಲ_ಮುಗಿಯಿತು. #ಅಶ್ವದಳ_ಈಗ_ಪ್ರದರ್ಶನಕ್ಕೆ_ಮಾತ್ರ #ಕುದುರೆ_ಹೊಟ್ಟೆಗೆ_ಹಾಕಲಾಗದವರು_ಹಳ್ಳಿಗಳಿಗೆ_ಕುದುರೆ_ತಂದು_ಬಿಡುತ್ತಿದ್ದಾರೆ #ಬಿಡಾಡಿ_ಕುದುರೆ_ಸಾಕುವವರೂ_ಹಳ್ಳಿಗಳಲ್ಲಿ_ಇದ್ದಾರೆ. #ಕುದುರೆಗಳು_ಆ_ಕಾಲದಲ್ಲಿ_ಬೆಂಜ್_ಕಾರಿದ್ದಂತೆ. #ಕ್ರಿಸ್ತಪೂರ್ವ_ನಾಲ್ಕು_ಸಾವಿರ_ವಷ೯ದಿಂದ_ಕುದುರೆ_ಬಳಕೆಯಲ್ಲಿತ್ತು.   ಆನಂದಪುರಂ ಇತಿಹಾಸದಲ್ಲಿ ಬರುವ ಆನಂದಪುರಂನ ಸುಂಕದ ಮನೆತನದ ಚಿರುಡ ಶೆಟ್ಟರು 1916 ರಿಂದ 1932ರವರೆಗೆ ವಕೀಲರಾಗಿದ್ದರು ಅವರೇ ನಮ್ಮ ಊರಿನ ಪ್ರಥಮ ವಕೀಲರು, ಆಗ ಆನಂದಪುರಂನ ಬ್ರಿಟೀಶ್ ಬಂಗ್ಲೆ ತಾಲ್ಲೂಕಿನ ಮೊದಲ ನ್ಯಾಯಾಲಯ ಆಗಿತ್ತು ಆಗ ಚಿರುಡ ಶೆಟ್ಟರು ಬಳಸುತ್ತಿದ್ದ ಕುದುರೆ ಉತ್ಕೃಷ್ಟ ತಳಿಯದಂತೆ.     ಆ ಕಾಲದಲ್ಲಿ ಸಂಚಾರಕ್ಕೆ ಕುದುರೆ ಬಳಕೆಯಲ್ಲಿದ್ದ ಕಾಲ ಬಹುಶಃ ಈಗಿನ ಇಷಾರಾಮಿ ಕಾರಿನಂತೆ ಶ್ರೀಮಂತರು ಮತ್ತು ದೊಡ್ಡ ಅಧಿಕಾರಿಗಳಿಗೆ ಮಾತ್ರ ಕುದುರೆ ಖರೀದಿಸುವ ಶಕ್ತಿ ಇದ್ದ ಕಾಲ.    1950ರ ತನಕ ಕುದುರೆ ಸವಾರಿಗೆ ಬಳಸುತ್ತಿದ್ದರಂತೆ ನಂತರ ಸೈಕಲ್ -ಬೈಕ್ -ಕಾರು - ರಿಕ್ಷಾಗಳಿಂದ ಕುದುರೆ ಬಳಕೆ ನಿ೦ತು ಹೋಯಿತು.   ಜಟಕಾ ಬಂಡಿ, ಟಾಂಗಾ ಎಂಬ ಜನ ಸಾಮಾನ್ಯರ ಸಾರಿಗೆ ಆಗಿದ್ದ ಕುದುರೆ ಗಾಡಿ ಸವಾರಿ ಈಗ ಇಲ್ಲವೇ ಇಲ್ಲ.   ರಾಜರ ಕಾಲದಲ್ಲಿ ಸೈನ್ಯದಲ್ಲಿ ಅಶ್ವದಳ ಒಂದು ಪ್ರಮುಖ ಸೇನಾ...

Blog number 1757. ಜೇನಿಗಿಂತ ಬಿನ್ನ ಕಣಜಗಳು... ಕಣಜ ಕಡಿದರೆ!?....

#ಕಣಜ_ಕಡಿದರೆ... #ಬದುಕಿಗಾಗಿ_ಸುರಕ್ಷಿತ_ವಲಯ_ಹುಡುಕಾಟ. #ಕಣಜ_ಮತ್ತು_ಜೇನು_ಬಿನ್ನ_ಜೀವನ. https://youtube.com/shorts/SRunjs8O59A?feature=shared   ನಮ್ಮ ಸಂಸ್ಥೆಯ ವಿದ್ಯುತ್ ಟ್ರಾನ್ಸ್ ಪರ್ ಡಬ್ಬಿಯಿಂದ ಬರುವ ವಿದ್ಯುತ್ ಸಂಪರ್ಕ ಪ್ರತ್ಯೇಕ ವಿದ್ಯುತ್ ಕಂಬದಲ್ಲಿ ಅಳವಡಿಸಿರುವ ವಿದ್ಯುತ್ ಪ್ಯೂಸ್ ಗಳ ಬಾಕ್ಸ್ ನಿಂದ ಅಂಡರ್ ಗ್ರೌಂಡ್ ಕೇಬಲ್ ಮೂಲಕ ಭೂಮಿ ಒಳಗಿಂದ ನಮ್ಮ ಎಲೆಕ್ಟ್ರಿಕಲ್ ರೂಮಿಗೆ ಹೋಗಿದೆ.    ನಿನ್ನೆ ಬೆಳಿಗ್ಗೆ ಸಿಂಗಲ್ ಪ್ಯೂಸ್ ಸಂಪರ್ಕ ಆಗಿದ್ದರಿಂದ ಈ ಬಾಕ್ಸ್ ಬಾಗಿಲು ತೆರೆದು ಅಲ್ಲಿರುವ ಪ್ಯೂಸ್ ಗಳನ್ನು ಪರೀಕ್ಷಿಸಲು ನನ್ನ ಮಗ ಕೈ ಹಾಕಿದಾಗಲೇ ಅಲ್ಲಿ ಗೂಡು ಮಾಡಿಕೊಂಡಿದ್ದ ಕಣಜ ಒಂದು ಅವನ ಬಲ ಮುಂಗೈಗೆ ಕಡಿದಿದೆ ಉಳಿದ ಕಣಜಗಳು ಅಕ್ರಮಣ ಮಾಡುವ ಮೊದಲೇ ಅವನು ದೂರ ಬಂದಿದ್ದಾನೆ.    ಜೇನುಗಳು ಕಡಿದರೆ ಜೇನು ತನ್ನ ಕೊಂಡಿ ಕಳೆದುಕೊಂಡು ಸಾಯುತ್ತದೆ ಆದರೆ ಕಣಜದ ಕೊಂಡಿ ಕಳಚುವುದಿಲ್ಲ ಮತ್ತು ಅದು ಸಾಯುವುದಿಲ್ಲ.   ನಂತರ ನೋಡಿದರೆ ಈ ಬಾಕ್ಸಿನಲ್ಲಿ 5-6 ಕಣಜದ ಗೂಡುಗಳಿದೆ !!.. ಅದನ್ನು ಅಲ್ಲಿಂದ ನಿವಾರಿಸಲೇ ಬೇಕು ಯಾಕೆಂದರೆ ಫ್ಯೂಸ್ ಬಾಕ್ಸ್ ವಿದ್ಯುತ್ ಸಮಸ್ಯೆ ಆದಾಗ ದುರಸ್ತಿಗಾಗಿ ಕೈ ಆಡಿಸಲೇ ಬೇಕು.   ಈ ವಿದ್ಯುತ್ ಬಾಕ್ಸ್ ನ ಒಳಗೆ ಒಂದೇ ಕಣಜದ ಗೂಡಿದ್ದರೆ ಪ್ಲಾಸ್ಟಿಕ್ ಕವರ್ ನಿಂದ ಗೂಡು ಮುಚ್ಚಿ ನಂತರ ಗೂಡು ಕಿತ್ತು ದೂರ ಎಸೆಯುವ...

Blog number 1756. ರಾಜಸ್ಥಾನದ ಬಿಕನೇರ್ ನ ಹುರುಳಿ ಕಾಳಿನ ಹಿಟ್ಟಿನಿಂದ ತಯಾರಿಸುವ ಸೇವ್ ಕಾರ 25 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಇದು ಪೆಪ್ಸಿಕೊ ನಂತಹ ಬಹುರಾಷ್ಟ್ರೀಯ ಕಂಪನಿಗಳ ಮಾರಾಟದ ಸರಕಾಗಿದೆ.

https://youtu.be/DheByXp_yOQ?feature=shared #ಬಿಕೇನರ್_ಬುಜಿಯಾ #ರಾಜಸ್ಥಾನದ_ಬಿಕೇನರ್_ಗುಡಿಕೈಗಾರಿಕೆ #ಎರೆಡುವರೆ_ಲಕ್ಷ_ಜನರಿಗೆ_ವಿಶೇಷವಾಗಿ_ಮಹಿಳೆಯರಿಗೆ_ಸ್ವಯಂ_ಉದ್ಯೋಗ #ಹುರುಳಿ_ಹಿಟ್ಟಿನ_ವಿಶೇಷ_ಖಾರಾ_ಶೇವ್ #ಬಿಕೇನರ್_ಮಹಾರಾಜ_ಡುಂಗರ್_ಸಿಂಗ್_ಆಳ್ವಿಕೆಯಲ್ಲಿ_1877ರಲ್ಲಿ_ಮೊದಲ_ಬ್ಯಾಚ್_ಬುಜಿಯ_ತಯಾರಿ #ಜಿ_ಐ_ಟ್ಯಾಗ್_2008ರಲ್ಲಿ_ಮತ್ತು_2010ರಲ್ಲಿ_ಪೆಟೆಂಟ್_ಪಡೆದಿದೆ.    ಮೊನ್ನೆ ಶಿವಮೊಗ್ಗಕ್ಕೆ ಹೋದಾಗ ಗೋಪಾಳದ ಶಂಕರ್ ಪ್ರಾವಿಜನ್ ಸ್ಟೋರ್ ಗೆ ಹೋಗಿದ್ದೆ, ಮಾಲಿಕರು ರಾಜಸ್ಥಾನದವರು ಅವರಲ್ಲಿ ಮಾರಾಟಕ್ಕಿಟ್ಟಿದ್ದ Haladiram ರವರ ರಾಜಸ್ಥಾನದ ಬಿಕೇನರ್ ಬುಜಿಯಾ ಮಾರಾಟಕ್ಕೆ ಇಟ್ಟಿದ್ದನ್ನು ಖರೀದಿಸಿದೆ.    ಇದು ವಿಶಿಷ್ಟ ಸ್ವಾದದ ರುಚಿಕರ ಶೇವ್ ಕಾರವಾಗಿದೆ ಈ ಬಿಕನೇರ್ ಬುಜಿಯ ಹೆಸರಿನಲ್ಲಿ ಪ್ರಖ್ಯಾತವಾದ ಈ ಬ್ರಾಂಡ್ ಈ ಪೆಪ್ಸಿಕೋ ಅಂತ ಬಹು ರಾಷ್ಟ್ರೀಯ ಕಂಪನಿಗಳ ಮಾರಾಟದ ಸರಕಾರವಾಗಿದೆ.     ರಾಜಸ್ಥಾನದ ಬಿಕೇನರ್ ನಲ್ಲಿ ಬೆಳೆಯುವ ಹುರುಳಿ ಹಿಟ್ಟು, ಕಾಬೂಲ್ ಕಡಲೆ ಹಿಟ್ಟು ಜೊತೆ ಮಸಾಲೆ ಸೇರಿಸಿ ಶೇಂಗಾ ಎಣ್ಣೆಯಲ್ಲಿ ಡಿಪ್ ಪ್ರೈ ಮಾಡಿದ ಸೇವ್ ಕಾರಕ್ಕೆ ವಿಶಿಷ್ಟ ಸ್ವಾದವಿದೆ ಆದ್ದರಿಂದಲೇ ಬಿಕನೇರ್ ಬುಜಿಯಾ ಈಗ ದೇಶ ವಿದೇಶಗಳಲ್ಲಿ ಜನಪ್ರಿಯಗಳಿಸಿದೆ.   1877 ರಲ್ಲಿ ಮಹಾರಾಜ ಶ್ರೀ ಡುಂಗರ್ ಸಿಂಗ್ ಆಳ್ವಿಕೆಯಲ್ಲಿ ಮೊದಲ ಬ್ಯಾಚ್ ಬುಜಿಯಾ ತಯಾರ...

Blog number 1755. ಹೋಟೆಲ್ ತಂದೂರಿ ಒಲೆ ತಯಾರಿಸಿ ಕೊಡುವ ಹಾರನಳ್ಳಿ ತಿಪ್ಪೇಶಪ್ಪ ಕುಂಬಾರ್.

#ಶಿವಮೊಗ್ಗ_ಜಿಲ್ಲೆಯಲ್ಲಿ_ಹೋಟೆಲಗಳಿಗೆ_ತಂದೂರಿ_ಒಲೆ_ತಯಾರಿಸಿ_ಕೊಡುವ_ಎಕ್ಸಪರ್ಟ್. #ಹಾರನಳ್ಳಿಯ_ತಿಪ್ಪೇಶಪ್ಪ_ಕುಂಬಾರರು. #ಕಳೆದ_ಹನ್ನೆರುಡು_ವಷ೯ದಿಂದ_ನಾವು_ಇವರ_ಗ್ರಾಹಕರು #ಸಂಪ್ರದಾಯಿಕ_ಕುಂಬಾರಿಕೆಯಿಂದ_ಆಧುನಿಕತೆಗೆ_ಬದಲಾದ_ಕುಂಬಾರಿಕೆ #ಒಂದು_ಕಾಲದಲ್ಲಿ_ಹಾರನಳ್ಳಿಯ_ಕುಂಬಾರರು_ತಯಾರಿಸುತ್ತಿದ್ದ_ಗುಡಾಣಗಳು_ಪ್ರಸಿದ್ದಿ_ಪಡೆದಿತ್ತು.   ನಾನು ಹೋಟೆಲ್ ವೃತ್ತಿಗೆ ಬಂದ ನಂತರ ಹಾರನಳ್ಳಿಯ ತಿಪ್ಪೇಶಪ್ಪ ಕುಂಬಾರರ ತಂದೂರಿ ಭಟ್ಟಿಗೆ ಗಿರಾಕಿ ಆಗಿದ್ದೇನೆ, ಒಂದು ಕಾಲದಲ್ಲಿ ಈ ಹಾರನಳ್ಳಿಯ ಬೃಹತ್ ಗಾತ್ರದ ಮಣ್ಣಿನ ಗುಡಾಣಗಳ ತಯಾರಿಗೆ ಪ್ರಸಿದ್ಧಿ ಪಡೆದಿತ್ತು.   ಇವರು ತಯಾರಿಸಿದ ಮಣ್ಣಿನ ದೊಡ್ಡ ದೊಡ್ಡ ಗುಡಾಣಗಳನ್ನು ಮುಸ್ಲಿಂ ವ್ಯಾಪಾರಿಗಳು ಎತ್ತಿನಗಾಡಿಯಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು ಆಗ ಹಣದ ಚಲಾವಣೆ ಕಡಿಮೆ ರೈತರು ಬೆಳೆದ ಬತ್ತ - ರಾಗಿ- ಅಡಿಕೆಗೆ ಕೈ ಬದಲಾಗುತ್ತಿತ್ತು.    ಈ ಗುಡಾಡಗಳಲ್ಲಿ ರೈತರು ಬೆಳೆದ ಕಾಳು ಕಡಿ ಸಂಗ್ರಹಿಸಿಟ್ಟರೆ ಅದು ಹಾಳಾಗುವುದಿಲ್ಲ.   ಕಾಲ ಬದಲಾದಂತೆ ಎಲ್ಲವೂ ಬದಲಾಯಿತು ಸಂಪ್ರದಾಯಿಕ ಕುಂಬಾರಿಕೆಗೆ ಬೇಡಿಕೆ ಕಡಿಮೆ ಆಗಿದೆ.   ಬಸವಣ್ಣರ ಕಾಲದಲ್ಲಿನ ಈ ಹಾರನಳ್ಳಿ ಕುಂಬಾರರು ಲಿಂಗಾಯಿತರು ಈಗ ತಮ್ಮ ಶತಮಾನಗಳ ವಂಶಪಾರಂಪರ್ಯವಾಗಿ ಬಂದ ಕು೦ಬಾರಿಕೆ ತೊರೆದಿದ್ದಾರೆ.  ಕುಂಬಾರಿಕೆ ವೃತ್ತಿ ಆದುನಿಕ...

Blog number 1754. ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಸಾಗರ ತಾಲೂಕಿನ ಆವಿನಳ್ಳಿಯಲ್ಲಿದೆ ಮತ್ತು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ ಹೆನ್ನೆ ಎ೦ಬ ಗ್ರಾಮದಲ್ಲಿ ರಾಣಿ ವಂಶಸ್ಥರು ಇದ್ದಾರೆ.

#ಗೇರುಸೊಪ್ಪೆಯ_ಜೈನರಾಣಿ_ವಂಶಸ್ಥರ_ಮತ್ತು_ರಾಣಿಚೆನ್ನಾಭೈರಾದೇವಿ_ಸಮಾದಿ_ಸ್ಥಳ_ಸಾರುವ_ಪ್ರಥಮ_ಲೇಖನ_ಇದು. #ಕಾಳುಮೆಣಸಿನ_ರಪ್ತಿನಿಂದ_ಯೂರೋಪ್_ದೇಶದಲ್ಲೂ_ಪ್ರಸಿದ್ಧಿ_ಆಗಿದ್ದ. #ಕಾನೂರು_ಕೋಟೆಯ_ಗೇರುಸೊಪ್ಪೆಯ_ಜೈನರ_ರಾಣಿ #ಅವ್ವರಸಿ_ಎಂದು_ಪೂಜಿಸಲ್ಪಡುವ_ರಾಣಿ_ಚೆನ್ನಾಭೈರಾದೇವಿ. #ಅವರ_ವಂಶಸ್ಥರು_ಸಾಗರ_ತಾಲ್ಲೂಕಿನಲ್ಲಿ_ಇದ್ದಾರೆ. #ಅವರನ್ನು_ಗುರುತಿಸುವ_ಕೆಲಸ_ಆಗಬೇಕು. #ಕೆಳದಿ_ರಾಜ_ವೆಂಕಟಪ್ಪನಾಯಕ_ಇಕ್ಕೇರಿ_ಕೋಟೆಯಲ್ಲಿ_ಬಂದನದಲ್ಲಿಟ್ಟ_ರಾಣಿ. #ರಾಣಿ_ಚೆನ್ನಾಭೈರಾದೇವಿ_ಸಮಾದಿ_ಸಾಗರ_ತಾಲ್ಲೂಕಿನ_ಅವಿನಹಳ್ಳಿಯಲ್ಲಿದೆ. #ಇದನ್ನು_ಸಂರಕ್ಷಿಸಬೇಕಾದ_ಪುರಾತತ್ವ_ಇಲಾಖೆ_ಮತ್ತು_ಹುಂಚಾದ_ಜೈನ_ಮಠಗಳಿಗೆ_ನಿರಾಸಕ್ತಿ_ಏಕೆ?     ಪಶ್ಚಿಮ ಘಟ್ಟಗಳ ಕಾಳು ಮೆಣಸು ಸಂಗ್ರಹಿಸಿ ಸಂಸ್ಕರಿಸಿ ಯೂರೋಪು ಖಂಡಗಳಿಗೆ ರಪ್ತು ಮಾಡುತ್ತಿದ್ದ ಜೈನ ಕುಲದ ರಾಣಿ ಚೆನ್ನಾ ಬೈರಾದೇವಿ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಗಳು ಆಗ ಬೇಕು ಮತ್ತು ರಾಣಿಯ ಬಗ್ಗೆ ಹೆಚ್ಚು ಮಾಹಿತಿಗಳು ಪ್ರಕಟವಾಗಬೇಕು.   ಸಾಗರ ತಾಲೂಕಿನ ಜೋಗ್ ಜಲಪಾತದ ಪಕ್ಕದಲ್ಲಿನ ದಟ್ಟ ಅರಣ್ಯದಲ್ಲಿ  ಕಾನೂರಿನ ಕೋಟೆ ಇದೆ ಇದು ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಇನ್ನೂ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ.   ಜೋಗ ಜಲಪಾತದಿಂದ ರಭಸದಿಂದ ದುಮುಕಿದ ಶರಾವತಿ ನದಿ ಶಾಂತವಾಗಿ ಹರಿಯುವ ಗೇರುಸೊಪ್ಪೆ ರಾಣಿ ಚೆನ್ನಾ ಬೈರಾದೇವಿಯ ರಾಜ್ಯದ ಕೇಂದ್ರ ಸ್ಥಳ ...

Blog number 1753. ಪುರುಷರು ತಮ್ಮ ದೇಹದ ಸೌಂದರ್ಯ ನಿರ್ಲಕ್ಷಿಸಬಾರದು.

#ಪುರುಷರಿಗೆ_ತಮ್ಮ_ದೇಹ_ಸೌಂದರ್ಯದ_ಬಗ್ಗೆ_ನಿರಾಸಕ್ತಿ_ಏಕೆ? #ಉಗುರುಗಳನ್ನು_ನಿಯಮಿತವಾಗಿ_ತೆಗೆಯುವುದಿಲ್ಲ. #ಕಾಲಿನ_ಪಾದಗಳ_ನಿರ್ವಹಣೆ_ನಿರ್ಲಕ್ಷ_ಜಾಸ್ತಿ #ಮೊಣಕೈ_ಮಣಿಕಟ್ಟಿನಲ್ಲಿ_ಪಾದದ_ಹಿಮ್ಮುಡಿಯಲ್ಲಿ_ಜಡ_ಚರ್ಮಗಳು_ಜಡ್ಡುಗಟ್ಟಿರುತ್ತದೆ #ಇದು_ಪುರುಷನ_ದೇಹ_ಸೌಂದಯ೯ಕ್ಕೆ_ಕಪ್ಪು_ಚುಕ್ಕೆ. #ಇದಕ್ಕಾಗಿ_ಸ್ಕೃಬ್ಬರುಗಳು_ಸ್ಕೃಚ್_ಸೋಪುಗಳು_ಅಭ್ಯವಿದೆ #ಒಮ್ಮೆ_ಕನ್ನಡಿಯಲ್ಲಿ_ನಿಮ್ಮ_ಮೊಣಕೈ_ಮಣಿಕಟ್ಟು_ಪರೀಕ್ಷಿಸಿಕೊಳ್ಳಿ.    ಪುರುಷರು ತಮ್ಮ ಮುಖ ಸೌಂದರ್ಯದ ಭಾಗವಾಗಿ ನಿತ್ಯ ಶೇವಿಂಗ್ ಮಾಡುತ್ತಾರೆ ಮತ್ತು ಬಿಳಿ ಕೂದಲು ಮರೆ ಮಾಚಲು ಹೇರ್ ಡೈ ಮಾಡಿಸುತ್ತಾರೆ ಆದರೆ ಕೈ ಕಾಲಿನ ಉಗರುಗಳು ನಿಯಮಿತವಾಗಿ ತೆಗೆಯಲು ಸೋಮಾರಿತನ.   ಅಷ್ಟೇ ಅಲ್ಲ ಮೊಣಕೈ ಮಣಿಕಟ್ಟಿನಲ್ಲಿ ಜಡ ಚರ್ಮಗಳು ಶೇಖರಗೊಂಡು ಪುರುಷ ದೇಹದ ಅವಲಕ್ಷಣವಾಗಿ ಗೋಚರಿಸುತ್ತಿರುತ್ತದೆ ಅದೇ ರೀತಿ ಪಾದದ ಮಣಿಕಟ್ಟುಗಳಲ್ಲಿ ಕೂಡ ಚರ್ಮ ಜಡ್ಡು ಕಟ್ಟಿರುತ್ತದೆ.   ಪುರುಷರ ಪಾದದ ಹಿಮ್ಮಡಿಗಳು ಬಿರಿ ಬಿಟ್ಟು ಕಾಲು ಒಡೆದು ಚರ್ಮದ ಸತ್ತ ಜೀವಕೋಶಗಳು ಅಲ್ಲೇ ಉಳಿದು ನೋಡುವವರಿಗೆ ಅಸಹ್ಯ ಅನ್ನಿಸುವುದು ಸುಳ್ಳಲ್ಲ.   ಯಾರ ಮಾತು ಕೇಳದ ಪುರುಷನ ಅಹಂನಿಂದ ಈ ರೀತಿ ಪುರುಷ ತನ್ನ ದೇಹ ಸೌಂದಯ೯ ಪಾಲಿಸುವುದಿಲ್ಲ ಆದರೆ ಮಹಿಳೆಯರು ಮಾತ್ರ ತಮ್ಮ ದೇಹ ಸೌಂದಯ೯ವರ್ದನೆಗಾಗಿ ಹೆಚ್ಚು ಕಾಳಜಿ ಮತ್ತು ಶ್ರಮವಹಿಸುತ್ತಾರೆ.   ...

Blog number 1752. ಸಾಕಿದ ನಮ್ಮ ಮನೆಯ ಬೆಕ್ಕು ಕಥಾ ನಾಯಕಿ ಆದ ಕಥೆ ಮತ್ತು ಸಣ್ಣ ಕಥಾ ಸಂಕಲನ ಪುಸ್ತಕದ ಮುಖಪುಟದಲ್ಲಿ ಅದರ ಹೆಸರು ಚಿತ್ರ ಶಾಶ್ವತ ಸ್ಥಾನ ಪಡೆದ ಅಚ್ಚರಿಯ ಸಂಗತಿ.

#ಬೆಕ್ಕೊಂದು_ಕಥಾ_ನಾಯಕಿ_ಆದ_ಕಥೆ #ಅದರ_ಹೆಸರಿನ_ಕಥಾ_ಸಂಕಲವಾಗಿ_ಮುದ್ರಣವೂ_ಆಯಿತು #ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ  #ಏಳು_ವರ್ಷ_ಬದುಕಿತ್ತು.   ಸಣ್ಣ ಬೆಕ್ಕಿನ ಮರಿ 8 ಜೂನ್ 2008 ಕ್ಕೆ ಬಂದು ಸೇರಿತ್ತು ನಂತರ ಏಳು ವರ್ಷಗಳ ಕಾಲ ನಮ್ಮ ಜೊತೆಯೇ ಇತ್ತು.   ಇದು ಸಾಹಸಿ ಹೆಣ್ಣು ಬೆಕ್ಕು ಇದಕ್ಕೆ ಊರಿನ ನಾಯಿಗಳು ಕಾಗೆಗಳು ಎಲ್ಲಾ ಶತೃಗಳು ಅಂದರೆ ಇದು ಅವುಗಳಿಗೆ ಅಷ್ಟೆಲ್ಲಾ ತೊಂದರೆ ಕೊಟ್ಟ ಬಜಾರಿ ಆದ್ದರಿಂದಲೇ ಅದಕ್ಕೆ ಬಿಲಾಲಿ ಬಿಲ್ಲಿ ಎಂಬ ಉಪನಾಮ ಗೆಳೆಯರಿಂದ ಲಭಿಸಿತ್ತು.   ನಮ್ಮ ಊರಿನ (ತಾಕತ್ ಬೊಂಡಾದ) ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿದ್ದು ಬಂದಿದ್ದರಿಂದ ಆ ಸ್ವಾರಸ್ಯ ಘಟನೆ ಆದರಿಸಿ ಒಂದು ಕಥೆ ಬರೆದಿದ್ದೆ ಆದಕ್ಕೆ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಶಿರೋನಾಮೆ ಕೊಟ್ಟಿದ್ದೆ.   ನನ್ನ ಸಣ್ಣ ಕಥಾ ಸಂಕಲನ ಮುದ್ರಣದ ಸಮಯದಲ್ಲಿ  ಖ್ಯಾತ ಶಿಕ್ಷಣ ತಜ್ಞರು ಸಾಹಿತಿಗಳು ಆದ ಅರವಿಂದ ಚೊಕ್ಕಾಡಿ ಅವರು ಮುನ್ನುಡಿ ಬರೆಯಲು ನನ್ನ ಎಲ್ಲಾ ಸಣ್ಣ ಕಥೆ ಓದಿದವರು ಈ ಕಥೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದರಿಂದ ಇದೇ ಶಿರೋನಾಮೆಯನ್ನು ಕಥಾ ಸಂಕಲನಕ್ಕೆ ಇಟ್ಟು ಕಥಾ ಸಂಕಲನ ಬಿಡುಗಡೆ ಮಾಡಿದ್ದೆ.    2015 ರ ಆಗಸ್ಟ್ ನಲ್ಲಿ ಇನ್ನೊಂದು ಬೆಕ್ಕನ್ನು ಓಡಿಸಿಕೊಂಡು ಹೋದಾಗ ಹೃದಯ ಸ್ತಂಭನ...