Skip to main content

Posts

ಭಾಗ - 57, ಆನಂದಪುರಂ ಇತಿಹಾಸ, ದೇಶದ ಮೊದಲ ಪ್ರದಾನಿ ಜವಾಹರಲಾಲ್ ರ ಆನಂದಪುರಂ ಬೇಟಿ, ಜೊತೆಗೆ ಪುತ್ರಿ ಇಂದಿರಾಗಾಂಧಿ, ಅಯ್ಯಂಗಾರ್ ಕುಟು೦ಬದ ಸಾರಥ್ಯ ಮತ್ತು ರಾಜ ಪ್ರತಿನಿದಿಗಳಾಗಿದ್ದ ಕಾಗೋಡಿನ ಕೆ.ಜಿ.ಒಡೆಯರ್ ನೇತೃತ್ವ.

#ಭಾಗ_57.  #ಆನಂದಪುರಂ_ಇತಿಹಾಸ #ಆನಂದಪುರಂಗೆ_ಪ್ರದಾನಿ_ನೆಹರೂ. #ಮಗಳು_ಇಂದಿರಾ_ಜೊತೆ_ಜೋಗ್_ಜಲಪಾತ_ಪ್ರವಾಸ. #ಆನಂದಪುರಂ_ಪ್ರೌಡಶಾಲೆ_ಎದರು_ಗಿಡ_ನೆಡುತ್ತಾರೆ.    ಸ್ವಾತಂತ್ರ್ಯ ನಂತರ ದೇಶದ ಪ್ರದಾನ ಮಂತ್ರಿ ಜವಾಹರಲಾಲ್ ನೆಹರೂರವರು ಜೋಗ ಜಲಪಾತ ವೀಕ್ಷಿಸಲು ಬರುವ ಕಾರ್ಯಕ್ರಮ ನಿಗದಿ ಅಗುತ್ತದೆ.     ಶಿವಮೊಗ್ಗ ಮಾರ್ಗವಾಗಿ ಆನಂದಪುರಂ ಮೇಲೆ ಜೋಗ್ ಫಾಲ್ಸ್ ಗೆ ಹೋಗುವುದರಿಂದ ಆನಂದಪುರಂ ನಲ್ಲಿ ಪ್ರದಾನ ಮಂತ್ರಿಗಳು ಒಂದು ಬೇಟಿ ಮಾಡುವ ಕಾರ್ಯಕ್ರಮ ನಿಗದಿ ಮಾಡಿಸಲು ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರು ಮತ್ತು ಅವರ ಪುತ್ರರಾದ ವೆಂಕಟಾಚಲ ಅಯ್ಯಂಗಾರ್ ಮತ್ತು ಬದರಿನಾರಾಯಣಯ್ಯಂಗಾರ್ ಯಶಸ್ವಿ ಆದ ಮತ್ತು ಐತಿಹಾಸಿಕ ಘಟನೆಗೆ ಕಾರಣರಾದ ಘಟನೆ ನಿಜಕ್ಕೂ ರೋಚಕ ಮತ್ತು ರೋಮಾಂಚನದ ವಿಷಯವಾಗಿತ್ತು ಆ ಕಾಲದಲ್ಲಿ.     ಆಗಿನ್ನು ದೇಶದ ಮೊದಲ ಚುನಾವಣೆ ಆಗಿರುವುದಿಲ್ಲ ರಾಜ ಪ್ರತಿನಿದಿಗಳಾಗಿ ಕಾಗೋಡಿನ ಕೆ.ಜೆ. ಒಡೆಯರ್ ನೇಮಕ ಆಗಿರುತ್ತಾರೆ.    ಅಯ್ಯಂಗಾರ್ ಕುಟುಂಬದ ಆತ್ಮೀಯರಾದ ಕೆ.ಜಿ. ಒಡೆಯರ್ (ಶಿವಮೊಗ್ಗ ಲೋಕಸಭಾ ಪ್ರಥಮ ಸದಸ್ಯರಾಗಿ ನಂತರ ಚುನಾವಣೆಯಲ್ಲಿ ಗೆಲ್ಲುತ್ತಾರೆ) ಪ್ರದಾನಿ ನೆಹರೂರವರ ಆನಂದಪುರಂ ಬೇಟಿ ನಿಗದಿಗೊಳಿಸುತ್ತಾರೆ.   ಆನಂದಪುರಂ ಪ್ರೌಡ ಶಾಲೆ ಎದುರಿಗೆ ಇಕ್ಕೆಲದಲ್ಲಿ ಮೈಸೂರು ಮಹಾರಾಜರ ಆ ಕಾಲದಲ್ಲಿ ಮೈಸೂ...

ಭಾಗ- 56, ಆನಂದಪುರಂ ಇತಿಹಾಸ, 1936 ರಲ್ಲಿ 11 ಕುಟುಂಬಗಳಿಗಾಗಿ ನಿರ್ಮಿಸಿದ ಚರ್ಚ್.

#ಭಾಗ_56. #ಆನಂದಪುರಂ_ಇತಿಹಾಸ. #ಆನಂದಪುರಂ_ಕ್ರೈಸ್ತ_ಬಾಂದವರ_ಚರ್ಚ್_ಯಡೇಹಳ್ಳಿಯಲ್ಲಿದೆ. #1936ರ_ಮೊದಲು_ಪ್ರಾರ್ಥನೆಗಳು_ಬ್ರಿಟೀಷ್_ಬಂಗ್ಲೆ_ಈಗಿನ_ಪ್ರವಾಸಿಮಂದಿರದಲ್ಲಿ #ಸಂತ_ಜೂದ್_ತದೆಯಸರ_ಚರ್ಚ್_1936ರಲ್ಲಿ_ಪ್ರಾರಂಭ_ಆಯಿತು #ಕೊ೦ಕಣಿ_ಬಾಷೆಯ_ಕರಾವಳಿ_ಭಾಗದಿಂದ_ಬಂದ_ಹನ್ನೊಂದು_ಕುಟುಂಬದವರಿಗಾಗಿ_ಈ_ಚರ್ಚ್_ಪ್ರಾರಂಭ_ಆಗಿತ್ತು.     1930 ರ ದಶಕದಲ್ಲಿ ಕರಾವಳಿ ತೀರದ ಬೈಂದೂರು ಭಾಗದಿಂದ ಕೆಲ ಕೊಂಕಣಿ ಬಾಷಾ ಕ್ರೈಸ್ತ ಧರ್ಮಿಯರು ಆನಂದಪುರಂಗೆ ಬಂದು ನೆಲೆಸುತ್ತಾರೆ, ಆನಂದಪುರಂ ನಲ್ಲಿ ನೈಸರ್ಗಿಕವಾಗಿ ದೊರೆಯುವ ಕೆಂಪು ಕಲ್ಲು ಜಂಬಿಟ್ಟಿಗೆ ತೆಗೆಯಲು ಬಂದವರಿವರು.     ಆಗ ಕೈಯಲ್ಲೇ ಕಲ್ಲು ತೆಗೆಯುವ ಕುಶಲ ಕರ್ಮಿಗಳಾದ ಇವರು ಬೈಂದೂರು ಭಟ್ಕಳಗಳಲ್ಲಿ ಇದೇ ವೃತ್ತಿ ಮಾಡಿದವರು, ಇಲ್ಲಿಗೆ ಬಂದ ಕೆಲ ಕುಟುಂಬ ಇಲ್ಲೇ ನೆಲೆಸಿದರು, ಇವರ ಸಂಪರ್ಕದಿಂದ ಬಂದ ಬೇರೆ ಕುಟುಂಬಗಳು ಕೃಷಿ ಕೆಲಸದಲ್ಲಿ ತೊಡಗಿದರು, ಜಂಬಿಟ್ಟಿಗೆ ಕಲ್ಲು ಕಟ್ಟುವ ಗಾರೆ ಕೆಲಸದವರೂ ಬಂದರೂ, ಸರ್ಕಾರಿ ಉದ್ಯೋಗ ಪಡೆದವರೂ ಆನಂದಪುರಂನ ಯಡೇಹಳ್ಳಿಯಲ್ಲಿಯೇ ಗುಂಪಾಗಿ ನೆಲೆಸಿದರು.   ಹನ್ನೊಂದು ಕ್ರೈಸ್ತ ಕುಟುಂಬಗಳ ಪ್ರಾಥ೯ನೆ ಪೂಜೆಗಳು ಪ್ರತಿ ಭಾನುವಾರ ಯಡೇಹಳ್ಳಿಯ ಬ್ರಿಟೀಷ್ ಬಂಗ್ಲೆಯಲ್ಲಿ (ಈಗಿನ ಪ್ರವಾಸಿ ಮಂದಿರದಲ್ಲಿ) ಹನ್ನೊಂದು ಕುಟುಂಬದ ಐವತ್ತೈದು ಜನರ ಜೊತೆ ಅಂದಿನ ಕ್ರೈಸ್ತ ಗುರುಗಳಾದ ವಂದನೀ...

ಹೊಸನಗರ ತಾಲ್ಲೂಕಿನ ಮಾದಾಪುರದ ಸಮಾಜ ಸೇವೆ -ಕ್ರೀಡೆ -ಕಲೆಗಳಲ್ಲಿ ಮು೦ಚೂಣಿಯಲ್ಲಿರುವ ರೇವಣ್ಣ ಸಹೋದರರ ಕುಟುಂಬ

#ಮಾದಾಪುರದ_ಪ್ರತಿಭಾವಂತ_ಸಹೋದರರು. #ಕ್ರೀಡೆ_ಮತ್ತು_ಸಾಂಸ್ಕೃತಿಕ_ಕಾಯ೯ಕ್ರಮದಲ್ಲಿ_ಅದ್ವಿತೀಯರು. #ಹೊಸನಗರ_ತಾಲ್ಲೂಕು_ರಿಪ್ಪನ್ಪೇಟೆ_ಸಮೀಪದ_ಮಾದಾಪುರ.     1985 ರಿಂದ 1995 ರವರೆಗೆ ಈ ಭಾಗದವರೆಗೆ ನನ್ನ ಅಕ್ಕಿ ಗಿರಣಿಗೆ ಎತ್ತಿನಗಾಡಿಯಲ್ಲಿ ಅಕ್ಕಿ ಮಾಡಿಸಲು ಭತ್ತ ಹೇರಿ ಕೊಂಡು ಬರುವ ರೈತರಿದ್ದರು, ನಾನು ಗಮನಿಸಿದಂತೆ ಈ ಮಾದಾಪುರದ ರೈತರು ಬೇರೆ ಭಾಗದ ರೈತರಿಗಿಂತ ಬಿನ್ನರು.   ಆಗ ನನಗೆ ಗಮನ ಸೆಳೆದದ್ದು ಈ ಊರಿನ ಮುಸಲ್ಮಾನರು, ಹಿಂದುಳಿದವರು, ಮುಂದುವರಿದ ದೈವಜ್ಞ ಬ್ರಾಹ್ಮಣರು ಸೇರಿ ಎಲ್ಲರ ಮನೆ ಎದುರು ವಿಶಾಲವಾದ ದನದ ಕೊಟ್ಟಿಗೆ, ಮನೆ ಅಂಗಳದಲ್ಲಿ ಧಾನ್ಯ ಸಂಗ್ರಹದ ಪಣತ, ಗಟ್ಟಿ ಮುಟ್ಟಿನ ಎತ್ತಿನಗಾಡಿ ಅದಕ್ಕೆ ಸರಿ ಹೊಂದುವ ಹಾಸನ ಜೋಡಿ ಎತ್ತು, ಸಿಂಗಾರದ ಬಾರಿ ಕೋಲು, ಗೆಜ್ಜೆಯ ಗಾಡಿ ಚಕ್ರದ ಕೀಲುಗಳು ಮತ್ತು ಶುದ್ದಾ ಶುದ್ಧಾ ಹಣಕಾಸು ವ್ಯವಹಾರ.   ಇವರ ಹಿರಿಯ ಸಹೋದರ ಲೋಕಪ್ಪ ಮಾದರಿ ಕೃಷಿಕರು, ಜಾನಪದ ಕಲಾವಿದರು ಮತ್ತು ಕೆಲ ಕಾಲ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕಾರಣವೂ ಮಾಡಿದ್ದರು, ಇನ್ನೊಬ್ಬ ಸಹೋದರ ಹೊಸನಗರದಲ್ಲಿ ಶಿಕ್ಷಕರಾಗಿದ್ದಾರೆ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡೆಯಲ್ಲಿ ಪದಕ ಪಡೆದವರು, ಇವರೂ ಜಾನಪದ ಕಲಾವಿದರು.   ಕಿರಿಯ ಸಹೋದರ ರೇವಣ್ಣ ಅಸಾದರಣ ಜಾನಪದ ಕಲಾವಿದರು ಈಗ ಬಿ ಆರ್ ಪಿ ಯಲ್ಲಿ ಮಾದರಿ ಶಿಕ್ಷಕರಾಗಿದ್ದು ಈಗಲೂ ಜಾನಪದ...

ಅರುಣ್ ಚಕ್ರವರ್ತಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಬಾಜನರಾಗಿದ್ದಾರೆ, ಅವರಿಗೆ ಅಭಿನಂದನೆಗಳು

#ಅಭಿನಂದನೆಗಳು #ರಾಷ್ಟಪತಿಗಳ_ವಿಶಿಷ್ಟ_ಸೇವಾಪದಕಕ್ಕೆ_ಬಾಜನರಾದ_ಅರುಣ್_ಚಕ್ರವರ್ತಿ. #ಸಾಗರದಲ್ಲಿ_ಎ_ಎಸ್_ಪಿ_ಆಗಿ_ಶಿವಮೊಗ್ಗ_ಎಸ್_ಪಿ_ಆಗಿದ್ದರು.   ಇವತ್ತು ರಾಜ್ಯದ 21 ಪೋಲಿಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಆಗಿದೆ ಇದರಲ್ಲಿ ಇಬ್ಬರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ದೊರೆತಿದೆ ಅದರಲ್ಲಿ ಒಬ್ಬರು ನನ್ನ ಪ್ರೀತಿಯ ಪೋಲಿಸ್ ಅಧಿಕಾರಿಗಳಾ ಆಂತರಿಕ ಭದ್ರತಾ ಇಲಾಖೆಯ ಎ.ಡಿ.ಜಿ.ಪಿ. #ಅರುಣ್_ಜೇಜಿ_ಚಕ್ರವರ್ತಿಗಳು.   ಈ ವಿಶೇಷ ಗೌರವಕ್ಕೆ ಅವರನ್ನು ಅಭಿನಂದಿಸುತ್ತೇನೆ.   ಬಹು ಸೂಕ್ಷ್ಮ ಸ್ವಭಾವದ, ತಮ್ಮ ಭಾವನೆಗಳನ್ನು ಹೊರಗೆ ತೋರಿಸಿಕೊಳ್ಳದ, ಖಡಕ್ ಅಧಿಕಾರಿ ಇವರು. 1990 ರಲ್ಲಿ ಕಸ್ಟಮ್ ಇನ್ಸ್ಪೆಕ್ಟರ್ ಆಗಿ ನಂತರ 1995ರಲ್ಲಿ ಐಪಿಎಸ್ ಗೆ ಆಯ್ಕೆ ಆಗಿ ಮೊದಲಿಗೆ ಸಾಗರ ತಾಲ್ಲೂಕಿನಲ್ಲಿ ASP ಆಗಿ ಬಂದವರು, ಸಾಂಗ್ಲಿಯಾನರೂ ಕೂಡ ತಮ್ಮ ಸೇವಾ ವೃತ್ತಿ ಸಾಗರದಿಂದಲೇ ಪ್ರಾರಂಬಿಸಿ ಶಿವಮೊಗ್ಗ ರಕ್ಷಣಾಧಿಕಾರಿ ಆಗಿದ್ದವರು ಅವರಿಗೂ ಅರುಣ್ ಚಕ್ರವರ್ತಿಯವರಿಗೂ ಅನೇಕ ಸ್ವಾಮ್ಯವಿದೆ.   ಆ ಕಾಲದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಸಾಗರ ತಾಲ್ಲೂಕಿನ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿ  ಅರುಣ್ ಚಕ್ರವರ್ತಿಯವರ ಒಡನಾಟ ನನಗೆ ಅವರ ಬಗ್ಗೆ ಸದಭಿಪ್ರಾಯ ಮತ್ತು ಗೌರವಕ್ಕೆ ಕಾರಣವಾಗಿತ್ತು.   ನಂತರ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದರ...

ಒಂದು ಜಿಲ್ಲೆ ಒಂದು ಬೆಳೆ, ಕೇ೦ದ್ರ ಸರ್ಕಾರದ ಆತ್ಮ ನಿರ್ಬರ್ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ಬೆಳೆ ನಿಗದಿ ಮಾಡಿದೆ.

#ಒಂದು_ಜಿಲ್ಲೆ_ಒಂದು_ಬೆಳೆ_ಏನಿದು? #ಈ_ಯೋಜನೆಯಲ್ಲಿ_ಶಿವಮೊಗ್ಗದ್ದು_ಅನಾನಸ್  #ಅನಾನಸ್_ಹಣ್ಣು_ಮತ್ತು_ಸಂಸ್ಕರಣೆ. #ಬನವಾಸಿ_ರೋಪ್_ಸಾಹೇಬರು_ಮಾವಿನಗುಂಡಿ_ಐನಕೈ_ಅಶೋಕಹೆಗ್ಗಡೆ_ಮತ್ತಿಕೊಪ್ಪ_ಜಾನ್_ಪಾಸ್_ಜಯಪ್ರಕಾಶ್_ಹೆಗ್ಗಡೆ_ಅಗ್ರಗಣ್ಯರು.   ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮ ನಿರ್ಬರ್ ಯೋಜನೆಯಲ್ಲಿ ದೇಶದ ಸುಮಾರು 728 ಜಿಲ್ಲೆಗಳಲ್ಲಿ ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಲ್ಲಿ ಶೇಕಡಾ 35% ಸಹಾಯಧನ ಪ್ರೋತ್ಸಾಹದಲ್ಲಿ ಒ0ದೊಂದು ಬೆಳೆಯನ್ನು ಬೆಳೆಸಿ ಸಂಸ್ಕರಿಸಿ ಮಾರಾಟಕ್ಕೆ ಯೋಜನೆ ರೂಪಿಸಿದೆ.   ಇದರಲ್ಲಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ಬೆಳೆ ನಿಗದಿ ಮಾಡಿದೆ,ಈಗ ಪ್ರಗತಿ ಪರ ಕೃಷಿ ಮಿತ್ರ ನಾಗೇಂದ್ರ ಸಾಗರ್ ದಂಪತಿಗಳಿಗೆ ಕೃಷಿ ಇಲಾಖೆ ಆಸಕ್ತ ಸ್ವಯಂ ಉದ್ಯಮಿಗಳಿಗೆ ಅನಾನಸ್ ಹಣ್ಣು ಸಂಸ್ಕರಣ ಮತ್ತು ಮಾರಾಟ ತರಬೇತಿ ಹಾಗೂ ಇದಕ್ಕೆ ಬೇಕಾದ ಬ್ಯಾಂಕ್ ಸಾಲ ಯೋಜನೆ ಮಂಜೂರಾತಿಗೆ ತಯಾರು ಮಾಡುವ ಜವಾಬ್ದಾರಿ ನೀಡಿದೆ.  ಮೊನ್ನೆ ಮೊದಲ ತರಬೇತಿಗೆ 70 ಮಹಿಳೆಯರೇ ಭಾಗವಹಿದ್ದರೆಂದು ಅವರು FB ಪೋಸ್ಟ್ ಮಾಡಿದ್ದಾರೆ.  ಖುಷ್ಕಿ ಜಮೀನಲ್ಲಿ ಕಡಿಮೆ ನೀರಿನಲ್ಲಿ ಉಷ್ಣ ಪ್ರದೇಶದಲ್ಲಿ ಬೆಳೆಯುವ ಈ ಅನಾನಸ್ ಮೂಲ ದಕ್ಷಿಣ ಅಮೇರಿಕಾ, ಇದು ಭಾರತಕ್ಕೆ ಪೋರ್ಚುಗೀಸರಿಂದ 1548 ರಲ್ಲಿ ಅವರು ಇಂಡೋನೇಷಿಯದಿಂದ ತಂದ ಬಗ್ಗೆ ಮಾಹಿತಿ ಇದೆ.    ಇದಕ್ಕೂ ಹಿಂದೆ ಕ್ರಿಸ್ತ ಪೂರ...

ಭಾಗ - 55, ಆನಂದಪುರಂ ಇತಿಹಾಸ, ಮೈಸೂರು ಚಲೋ ಚಳವಳಿಯಲ್ಲಿ ಆನಂದಪುರಂ ಬದರಿನಾರಾಯಣಯ್ಯ೦ಗಾರರು ಮತ್ತು ಎ.ರಾಮರಾವ್ ಬಾಗವಹಿಸಿ ಜೈಲಿಗೆ ಹೋದವರು, ಈ ಚಳವಳಿಯಲ್ಲಿ ಭಾಗವಹಿಸಿದ್ದ ಕಾಗೋಡು ಕೆ.ಜಿ.ಒಡೆಯರ್ ಪಾರ್ಲಿಮೆಂಟ್ ಸದಸ್ಯರಾಗಿದ್ದು ಮತ್ತು ಎ.ಆರ್. ಬದರಿನಾರಾಯಣ ಅಯ್ಯಂಗಾರರು ವಿದ್ಯಾ ಮಂತ್ರಿಗಳಾಗಿದ್ದು ಇತಿಹಾಸ.

#ಭಾಗ_55. #ಆನಂದಪುರಂ_ಇತಿಹಾಸ. #ಸ್ವಾತಂತ್ರ್ಯ_ನಂತರ_ನಡೆದ_ಮೈಸೂರು_ಚಲೋ_ಚಳವಳಿ #ಚಳವಳಿಯಲ್ಲಿ_ಭಾಗವಹಿಸಿ_ಜೈಲು_ಸೇರಿದವರಲ್ಲಿ_ಆನಂದಪುರಂನಿಂದ_ಇಬ್ಬರು. #ಬದರಿನಾರಾಯಣಯ್ಯಂಗಾರ್_ಮತ್ತು_ರಾಮರಾವ್.    1947 ಆಗಸ್ಟ್ 15ಕ್ಕೆ ಸ್ಟಾತಂತ್ರ್ಯ ಲಭಿಸಿ ಈಗ 75 ನೇ ವರ್ಷಾಚಾರಣೆಯಲ್ಲಿದ್ದೇವೆ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಿ ಮತ್ತು ಆ ಕುಟುಂಬಗಳನ್ನು ಪ್ರೀತಿಯಿಂದ ಆಧರಿಸುವ ಈ ಸಂದರ್ಭದಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಮೈಸೂರು ಚಲೋ ಚಳವಳಿ ನೆನಪಿಸಿ ಕೊಳ್ಳಬೇಕಾಗಿದೆ.   ಇದು ಬ್ರಿಟಿಷರ ವಿರುದ್ದ ನಡೆದ ಸ್ವಾತಂತ್ರ್ಯ ಚಳವಳಿ ಅಲ್ಲ, ಮೈಸೂರು ಸರಕಾರವು ಸ್ವತಂತ್ರ ಭಾರತದಲ್ಲಿ ಐಕ್ಯವಾಗಿ ಅರಸೊತ್ತಿಗೆ ಅಳಸಿಹಾಕಲು ಮೀನಾ - ಮೇಷ ಎಣಿಸಿತ್ತು ಆದ್ದರಿಂದ ಕಾಂಗ್ರೇಸ್ #ಮೈಸೂರು_ಚಲೋ ಚಳವಳಿಗೆ ಕರೆ ಕೊಟ್ಟಿತ್ತು.   ಈ ಚಳವಳಿ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಹಬ್ಬಿ ಉಗ್ರ ರೂಪ ತಾಳಿತು, ಇದಕ್ಕೆ ಎಲ್ಲೆಲ್ಲೂ ರೈಲು ಚಳವಳಿ, ವಿದ್ಯಾರ್ಥಿ ಚಳವಳಿ, ಪೋಲಿಸರ ಮುಷ್ಕರಗಳಿಂದಲೂ ಚಳವಳಿಯ ಪರಿಣಾಮ ಪ್ರಚಂಡವಾಗಿ ಅರಮನೆ, ಆಳರಸರು ಅವರ ಸಕಾ೯ರ ಮತ್ತು ಅದರ ದಿವಾನ್ ಅರ್ಕಾಟ್ ಲಕ್ಷ್ಮಣ ಸ್ವಾಮಿ ಮೊದಲಿಯಾರ್ ಸಾಹೇಬರು ಮಣಿದರು.   13- ಅಕ್ಟೋಬರ್ -1947ರಲ್ಲಿ ಮಹಾರಾಜರು "ಪ್ರಜಾಪ್ರತಿನಿದಿಗಳ ಮಂತ್ರಿ ಮಂಡಲ ಸ್ಥಾಪನೆ ಆಗಿದೆ" ಎಂದು ಘೋಷಿಸಿದರು, 24- ಅ...

ಹೆಗ್ಗೋಡಿನಲ್ಲಿ TSS ಸೂಪರ್ ಮಾರ್ಕೆಟ್ ಶುಭಾರಂಭ ಆಗಲಿದೆ.

#ಸಿರ್ಸಿಯ_TSS_ಅಡಿಕೆ_ರೈತರ_ಸಹಕಾರಿ_ವಿಸ್ಮಯ_ಜಗತ್ತು #ಹೆಗ್ಗೋಡಿನ_ಪ್ರತಿಷ್ಟಿತ_ಕಾಕಲ್_ಗುಂಪಿನಿಂದ_TSS_ಪ್ರಾಂಚೈಸಿ_ಆಗಿ_ಸೂಪರ್_ಮಾಕೆ೯ಟ್. #ಬಹು_ಜನರ_ಅಪೇಕ್ಷೆಯ_TSS_ಸೂಪರ್_ಮಾಕೆ೯ಟ್_ಯಶಸ್ವಿ_ಆಗಲು_ಶುಭಹಾರೈಕೆಗಳು.   1923 ರಲ್ಲಿ ಸಿರ್ಸಿಯಲ್ಲಿ ಸಹಕಾರಿ ಸಂಸ್ಥೆಯಾಗಿ ದಿ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ ಪ್ರಾರಂಭವಾಗಿ ಈಗ ವಾರ್ಷಿಕವಾಗಿ ಹತ್ತಿರ ಹತ್ತಿರ ಒಂದು ಸಾವಿರ ಕೋಟಿ ಟರ್ನ್ಒವರ್ ಇದೆ.  ಅಡಿಕೆ ಖರೀದಿ, ಪರಿಕ್ಷಕರಣೆ, ಮಾರಾಟದ ಜೊತೆ  ಕಲ್ಯಾಣ ಮಂಟಪ, ಲಾಡ್ಜ್, ಹೋಟೆಲ್, ಆಸ್ಪತ್ರೆ, ಪ್ರಾಥಮಿಕ ಶಾಲೆ, ಜನೌಷದಿ ಕೇಂದ್ರ, ಅಡಿಕೆ ಖರೀದಿ ಕೇಂದ್ರ, ಕೃಷಿ ಉಪಕರಣಗಳ ಸೂಪರ್ ಮಾಕೆ೯ಟ್, ದಿನಬಳಕೆ ವಸ್ತುಗಳ ಸೂಪರ್ ಮಾರ್ಕೆಟ್, ಈ ವರ್ಷದಿಂದ ಶುಂಠಿ ಖರೀದಿಸಿ ಒಣ ಶುಂಠಿ ಮಾಡುವವರೆಗೆ ಈ ಸಂಸ್ಥೆ ಬೃಹದಾಕಾರವಾಗಿ ಬೆಳೆದಿದೆ.   ಈ ಸಂಸ್ಥೆ ತನ್ನ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕ - ಪ್ರಾಮಾಣಿಕವಾಗಿ ನಿರಂತರವಾಗಿ ನಡೆಸಿಕೊಂಡು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ TSS ಹೆಸರಿನ ಬ್ರಾಂಡ್ ವ್ಯಾಲ್ಯೂ ಅಪರಂಜಿ ಆಗಿ ಕಾಪಾಡಿಕೊಂಡಿದೆ.     ಹೆಗ್ಗೋಡಿನಂತ ಹಳ್ಳಿಯಲ್ಲಿ ಕಾಕಲ್ ಉಪ್ಪಿನಕಾಯಿ, ಕಾಕಲ್ ಪೆಟ್ರೋಲ್ ಬಂಕ್ ಗಳನ್ನು ಸ್ಥಾಪಿಸಿರುವ ಆ ಬಾಗದ ಶೈಕ್ಷಣಿಕ ಸಂಸ್ಥೆಗೆ ದೊಡ್ಡ ಮಟ್ಟದ ದಾನದ ಸಹಾಯ ಮಾಡಿದ ಸಾಹಸಿ ಸಹೃದಯರಾದ ಕಾಕಾಲ್ ಕ...