Skip to main content

Posts

ಮ್ಯಾಗ್ಸಸೈ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣರೊಡನೆ.

ಹೆಗೋಡಿನ ನಿನಾಸಂ ಸಂಸ್ಥೆ ನಾಟಕ ಮತ್ತು ಸಿನಿಮಾ ಜನರಿಗೆ ಹೇಗೆ ಚಿರಪರಿಚಿತ ಹಾಗೆ ಇದರ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ತಮ್ಮ ವಿಚಾರ ಮತ್ತು ಬರವಣಿಗೆಯಿಂದ ವಿಶ್ವವಿಖ್ಯಾತರು, ಅಂತರಾಷ್ಟ್ರೀಯ ಮ್ಯಾಗ್‌ ಸೆಸೆ ಪ್ರಶಸ್ತಿ ವಿಜೇತರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಣ್ಣ ಹಳ್ಳಿ ಹೆಗೋಡುನವರು ನಮ್ಮ ತಾಲ್ಲೂಕಿನವರು ಅಂತ ನಮಗೆಲ್ಲ ಹೆಮ್ಮೆ.      ಒಮ್ಮೆ ನೀನಾಸಂ ಸಭಾ0ಗಣದಲ್ಲಿ ಸುಬ್ಬಣ್ಣನವರ ಜೊತೆ ಸಭೆ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದೆ, ದೇವಾಡಿಗ ಜಾತಿಯ (ವೀರಪ್ಪ ಮೊಯ್ಲ್ ) ಜಾತಿ ಸಮಾವೇಶವದು, ಸಂಘಟಕರು ನನ್ನನ್ನ ಕರೆದಾಗ ನನಗೆ ನಂಬಲಿಕ್ಕೆ ಆಗಲಿಲ್ಲ, ಸಣ್ಣ ಜಾತಿ ಸಮಾವೇಶಕ್ಕೆ ಸುಬ್ಬಣ್ಣ ಬರುವುದು ಅನುಮಾನ ಅಂದೆ. ಇಲ್ಲ ಒಪ್ಪಿದಾರೆ ಸಬಾo ಗಣ ಉಚಿತವಾಗಿ ನೀಡಿದಾರೆ ಅಂದರು.       ಅವತ್ತಿನ ಸಭೆಯಲ್ಲಿ ಸುಬ್ಬಣ್ಣರ ಬಾಷಣ ಸಣ್ಣ ಜಾತಿಯ ಶೂದ್ರರಿಗೆ ಒ೦ದು ಆಶಾದಾಯಕ ನೀತಿ ಪಾಠವಾಗಿತ್ತು, ಸಮಾಜವಾದದ ಅನುಯಾಯಿ ಆಗಿದ್ದ ಸುಬ್ಬಣ್ಣ ಲೋಹಿಯ ವಿಚಾರಧಾರೆ ಹೊಂದಿದವರು ಹಾಗಾಗಿ ಅವರ ಮಾತನ್ನ ಗಮನವಿಟ್ಟು ಆಲೈಸುತ್ತಿದ್ದೆ..........      " ದೇಶದಲ್ಲಿ ಮೇಲ್ಜಾತಿಗಳು ಸಂಘಟನೆಗಳು ಅವಶ್ಯವಿಲ್ಲ ಅದರಿಂದ ಸಮಾಜಕ್ಕೆ ಮಾರಕ ಆದರೆ ಅಸಂಘಟಿತ ಸಣ್ಣ ಸಣ್ಣ ಜಾತಿಗಳು ತಮ್ಮ ಹಕ್ಕು ಮತ್ತು ಸವಲತ್ತುಗಳಿಗಾಗಿ ಸಂಘಟಿತರಾಗಬೇಕು " ಎಂಬ ಮಾತು ಸ್ವತಃ ಬ್ರಾಹಮಣರಾದ ಹಾಗೂ ...

#ಪೂಣ೯ ಚಂದ್ರ ತೇಜಸ್ವಿ ಮತ್ತು ನನ್ನ ಬೇಟಿ ಹಾಗೂ ಬೆಳ್ಳOದೂರಿನ ನರ ಭಕ್ಷಕ#

         ತೇಜಸ್ವಿಯವರನ್ನ ಬೇಟಿ ಆಗಬೇಕೆಂಬ ನನ್ನ ಅಭಿಲಾಷೆ ಅಕಸ್ಮಿಕವಾಗಿ ಮತ್ತು ಅವಿಸ್ಮರಣಿಯವಾಗಿ ಆಗುತ್ತೆ ಅಂತ ಗೊತ್ತಿರಲಿಲ್ಲ, ಅದು ಹೇಗೆ ಆಯಿತು ಅಂದರೆ 2000ನೆ ಇಸವಿಯಲ್ಲಿ ಕುಪ್ಪಳ್ಳಿಯ ಕವಿಶೈಲ ರಾಷ್ಟ್ರಕ್ಕೆ ಅಪಿ೯ಸುವ ಕಾಯ೯ಕ್ರಮ ನಿಗದಿ ಆಗಿತ್ತು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಾವೆಲ್ಲ ವಿಶೇಷ ಆಮಂತ್ರಿತರು ಆದರೆ ಸಾಹಿತ್ಯ ಆಸಕ್ತಿ ಯಾವತ್ತೂ ಕಡಿಮೆ ಇರುವ ನನ್ನ ಜೊತೆಯ ರಾಜಕಾರಣಿ ಸದಸ್ಯರು ಈ ಕಾಯ೯ಕ್ರಮಕ್ಕೆ ಬರಲಿಲ್ಲ.      ಹಿಂದಿನ ದಿನ ಸಾಹಿತಿಗಳಾದ ಕೊಣ0 ದೂರು ವೆಂಕಪ್ಪ ಗೌಡರು ಬೆಂಗಳೂರಿಂದ ಬಂದವರು ಕುವೆ೦ಪು ಮನೆ ಲೋಕಾಪ೯ಣೆ ಕಾಯ೯ಕ್ರಮ ನೋಡಲು ಬಂದೆ, ಕರಕೊಂಡು ಹೋಗಯ್ಯ ಅಂದರು. ಸರಿ ಗೌಡರೆ ಗಣಪತ ಪನವರನ್ನು ಕರಕೊಂಡು ಹೋಗೋಣ ಅಂದೆ.      ಮರುದಿನ ಕಾಗೋಡು ಸತ್ಯಾಗ್ರಹದ ರೂವಾರಿ ಹೆಚ್.ಗಣಪತಿಯಪ್ಪಾ, ಕೋಣಂದೂರು ವೆಂಕಪ್ಪ ಗೌಡರೊಂದಿಗೆ ಕುಪ್ಪಳ್ಳಿಗೆ ಹೋಗಿ ಸಭಾಂಗಣ ಪ್ರದೇಶಕ್ಕೆ ಹೋದೆವು, ಮುಂದಿನ ಸಾಲಿನಲ್ಲಿ ಈ ಇಬ್ಬರು ಹಿರಿಯರನ್ನ ಕುಳ್ಳಿರಿಸಿ ಹಿಂದಿನ ಸಾಲಿನಲ್ಲಿ ಕುಳಿತು ಸಭೆ ನೋಡೋಣ ಅಂತ ಹೊರಟೆ.     ಹಿಂದಿನ ಸಾಲಿನ ಕುಚಿ೯ಯಲ್ಲಿ ಕುಳಿತು ವೇದಿಕೆ ಕಡೆ ನೋಡುತ್ತಾ ಪಕ್ಕದಲ್ಲಿ ಕುಳಿತವರ ಕಡೆ ನೋಡಿದೆ, ಅದೇನು ಆಶ್ಚಯ೯ ಅಂತಿರಿ ಎರೆಡು ಕೈ ತಲೆ ಹಿಂದೆ ಕಟ್ಟಿಕೊಂಡು ಇಡೀ ದೇಹ ಕುಚಿ೯ಯಲ್ಲಿ ತೇಲಿಸಿಕೊಂಡು...

ಹೊನ್ನೆ ಮರಡು ಸ್ವಾಮಿಯವರ GO GHAT ಸೈಕಲ್ನಲ್ಲಿ ಒಂದು ಸಾವಿರ ಜನರ ಪಶ್ಚಿಮ ಘಟ್ಟ ಪ್ರವಾಸ

ಹೊನ್ನೆ ಮರಡು ಸಾಗರ ತಾಲ್ಲಕಿನ ಶರಾವತಿ ನದಿಯ ಹಿನೀರಿನ ಸಣ್ಣ ಪ್ರದೇಶ ಆದರೆ ಅದೀಗ ವಿಶ್ವಮಾನ್ಯ ಪಡೆದಿದೆ, ಅಲ್ಲಿ ನೀರಿನ ಸಾಹಸ ಕ್ರೀಡೆಯ ತರಬೇತಿ, ಚಾರಣ, ಪರಿಸರ ಸಂರಕ್ಷಣೆಯ ನಿರಂತರ ಕಾಯ೯ಕ್ರಮ 25 ವಷ೯ದಿ...

ಶೀ ರಾಮಲು ಜೊತೆ ಕಳೆದ ಆ ನಾಲ್ಕು ಗಂಟೆ.

ಮಿತ್ರರು ಬಂದು ಗಡಿಬಿಡಿಯಲ್ಲಿ ಆಪೀಸಿಂದ ಹೊರಬನ್ನಿ ದೊಡ್ಡವರೊಬ್ಬರನ್ನ ಭೇಟಿ ಮಾಡಿ ಅಂದರು, ನನ್ನ ಅಜಗರ ಪ್ರವೃತ್ತಿ ಗೊತ್ತಿತ್ತವರಿಗೆ. ಅಂತೂ ಅವರ ಬೇಟಿ ಆಯಿತು, ಪರಿಚಯ ಆಯಿತು. ಸೌಜನ್ಯಕ್ಕಾಗಿ ಪುನಃ ...

ಜಾಜ್೯, ನಿತೀಶ್ರರ ಆಪ್ತ ಕನ್ನಡಿಗ ಅನಿಲ್ ಹೆಗ್ಗಡೆ

ಇವರು ಯಾರು ಗೊತ್ತಾ? ಜಾಜ್೯ ಪನಾ೯೦ಡಿಸ್ರ ನಿಕಟವತಿ೯, ಹಾಲಿ ಬಿಹಾರದ ನಿತೀಶರ ಜೊತೆಗಾರ. 10 ವಷ೯ ನಿರ೦ತರವಾಗಿ ಒಂದು ದಿನವೂ ತಪ್ಪದೆ ಕೋಕೊಕೋಲಾ, ಪೆಪ್ಸಿ ವಿರುದ್ಧ ಪ್ರತಿ ದಿನ ಸಂಸದ ಭವನದ ಎದರು ದರಣಿ ಮಾಡಿ ಪ...

ಸಾಹಸಿ ಆ.ನಾ. ವಿಜೇಂದ್ರ ಶಿವಮೊಗ್ಗ

ಒಬ್ಬOಟಿಯಾಗಿ ಆ.ನ.ವಿಜೇ೦ದ್ರರಿಂದ ಪ್ರಾರಂಭವಾದ ತು೦ಬಿದ ತು೦ಗೆಯಲ್ಲಿನ ದೊಣಿ ವಿಹಾರ ಈಗ ಅಪಾರ ಯುವ ದಂಡಿನೊಂದಿಗೆ ತು೦ಬಿ ತುಳುಕಿದೆ, ಸಕಾ೯ರ ಮತ್ತು ಸಾವ್೯ ಜನಿಕರ ಗಮನ ಸೆಳೆದಿದೆ, ತು೦ಗಾ ನದಿ ದಂಡೆ ಕಾಮ...

ಶಿಶುನಾಳ ಷರೀಪರು ನನ್ನ ಇಷ್ಟದ ಗುರುಗಳು

ಮೊಟ್ಟ ಮೊದಲ1982 ರಲ್ಲಿ ಶಿಶುನಾಳರ ಹಾಡು ಕೇಳಿ ಪ್ರಬಾವಿತನಾಗಿದ್ದೆ, 2003 ರಲ್ಲಿ ಶ್ರೀ ಹರಿಕೊಡೆಯುವರು ನೀಡಿದ ಶ್ರೀ ಶಿಶುನಾಳ ಷರೀಪ ಸಾಹೇಬರ ಜೀವನ ಲೀಲಾಮೃತ ಎಂಬ ಪುಸ್ತಕ ನೀಡಿದ್ದರು ಅದನ್ನ ಬರೆದವರು ಡಾll ಮಲ...