Skip to main content

Posts

Blog number 2212.ಶಂಭೂರಾಮ ರೈನ್ ಕೋಟ್ ಧರಿಸಿ ವಾಕಿಂಗ್

#ಇವತ್ತಿನ_ಬೆಳಗಿನ_ನಿಲ್ಲದ_ಮಳೆ #ಆರಿದ್ರಾ_ನಕ್ಷತ್ರದ_ಮಳೆ_ಚೆನ್ನಾಗಿ_ಆಗಲಿ #ನನ್ನ_ಪ್ರೀತಿಯ_ಶಂಭೂರಾಮ_ರೈನ್_ಕೋಟ್ #ಧರಿಸಿ_ವಾಕಿಂಗ್. https://youtube.com/shorts/jTdeX2paUxQ?si=9GTI_eWSTx4nwUo1

Blog number 2211. ಜೀವಮಾನದಲ್ಲಿ ಮರೆಯಲಾರದ ಈ ಕಾರ್ಯ ಇದಕ್ಕೆ ಇರುವ ದಶಕಗಳ ಸಂಬಂದಗಳು.

#ಯೋಗಾ_ಯೋಗ_ಋಣಾನುಬಂದಗಳ_ಸತ್ಯ_ದರ್ಶನ #ಗಯಾದಲ್ಲಿ_ವಿಷ್ಣುಪಾದದಲ್ಲಿ_ನಮ್ಮ_ಪಿತೃಗಳಿಗೆ_ಪಿಂಡ_ತರ್ಪಣದ #ಕಾಯ೯ಕ್ರಮ_ನನ್ನ_ಅಣ್ಣನ_ಅನಾರೋಗ್ಯದಿಂದ_ರದ್ದಾಗಿತ್ತು #ಯೋಗಾ_ಯೋಗ_ಕೆ_ವಿ_ಸುರೇಶರು_ಇದೇ_ತಿಂಗಳು_22ರಂದು_ಗಯಾದಲ್ಲಿ #ನನ್ನ_ತಂದೆ_ತಾಯಿ_ಮತ್ತು_ನನ್ನ_ತಂದೆಯ_ಸಾಕು_ತಂದೆ_ಸುಬ್ಬಣ್ಣಾಚಾರ್_ಅವರಿಗೆ #ಕಾರಣ್ಯ_ತರ್ಪಣ_ಅರ್ಪಿಸಿದ್ದಾರೆ.   ನನ್ನ ತಂದೆ #ಎಸ್_ಕೃಷ್ಣಪ್ಪ ಅನಾಥ ಮಗು ಅದನ್ನ ಎತ್ತಿತಂದವರು #ನಲ್ಲಪ್ಪ ಎಂಬ ಡೇರ್ ಡೆವಿಲ್ ಕ್ಷೌರಿಕರು, ಸಾಕಿದ್ದು ನನ್ನ ಅಜ್ಜಿ ಮೀನುಗಾರರಾದ ಉಡುಪಿ ಜಿಲ್ಲೆಯ ಬಾರ್ಕೂರಿನ ಬೆಣ್ಣೆ ಕುದುರಿನ #ಅಬ್ಬಕ್ಕ ಎಂಬ ದೀರ ಮಹಿಳೆ ಮತ್ತು ಅವರ ಪತಿ ವಿಶ್ವಕರ್ಮ ಜಾತಿಯ #ಸುಬ್ಬಣ್ಣ_ಆಚಾರ್.    ಸುಬ್ಬಣ್ಣ ಆಚಾರ್ ಇಹಲೋಕ ತ್ಯಜಿಸಿದಾಗ ವೈಕುಂಠ ಸಮಾರಾಧನೆ ದಿನ ದಶದಾನವನ್ನು ನೀಡಿದ್ದರು ಅದನ್ನು ಸ್ವೀಕರಿಸಿದವರು ಮಹಾನ್ ವ್ಯಕ್ತಿ #ವೇದನಾರಾಯಣ_ಭಟ್ಟರು ಅವರು ದ್ವಾರಕೆ ಸಂಶೋಧಿಸಿದ #S_R_ರಾವ್ ಜನಿಸಿದ ಆನಂದಪುರಂನ ಮನೆ ಮಾಲಿಕರು, ಶಾಸಕರು, ಮಂತ್ರಿ ಸಂಸದರು ಆಗಿದ್ದ #ಬದರಿನಾರಾಯಣ_ಅಯ್ಯಂಗಾರರ ಆಪ್ತರು ಅವರು ಈ ದಾನ ಸ್ವೀಕರಿಸಲು ಕಾರಣ ನನ್ನ ತಂದೆ ಬಗ್ಗೆ ಅವರಿಗಿದ್ದ ಪ್ರೀತಿ ಮಾತ್ರ.   ಆ ಹಿತ್ತಾಳೆ ಹರಿವಾಣ ಅವರ ಮನೆಯಲ್ಲಿದೆ ಅವರ ವೈದಿಕದಲ್ಲಿ ಮಾತ್ರ ಅದನ್ನು ಈ ಕುಟುಂಬ ಬಳಸುತ್ತಾರೆ ಅದಕ್ಕೆ "ಸುಬ್ಬಣ್ಣಾಚಾರರ ಪರಾತ ಕೃಷ್ಣಪ್ಪ ಕೊಟ್ಟ...

Blog Number 2210. ಮುಳುಗಿದ ಎಸ್.ಎಸ್. ಗೇರುಸೊಪ್ಪಾ ಬ್ರಿಟೀಷ್ ಹಡುಗಿನಿಂದ ತೆಗೆದ ಬೆಳ್ಳಿ ಗಟ್ಟಿಗಳಿಂದ ನಾಣ್ಯಗಳನ್ನ ಟಂಕಿಸಿ ಆನ್ ಲೈನ್ ನಲ್ಲಿ ಮಾರಾಟಕ್ಕೆ ಇಡಲಾಗಿದೆ.

#ಎಸ್_ಎಸ್_ಗೇರುಸೊಪ್ಪಾ #ಎರಡನೆ_ಮಹಾಯುದ್ದದಲ್ಲಿ_ಮುಳುಗಿದ_ಹಡಗು #ಅದರಲ್ಲಿದ್ದ_200_ಟನ್_ಬೆಳ್ಳಿಗಟ್ಟಿಗಳು #ಮುಳುಗಿದ_ಬೆಳ್ಳಿ_ತೆಗೆದ_ಅಮೆರಿಕಾದ_ಒಡಿಸ್ಸಿ_ಮೆರಿನ್_ಎಕ್ಸಪ್ಲೋರೇಷನ್_ಕಂಪನಿ #ಈ_ರೀತಿ_ಸಮುದ್ರದಿಂದ_ತೆಗೆದ_ಬೆಳ್ಳಿಯಿಂದ_ನಾಣ್ಯ_ಟಂಕಿಸಿದೆ #ಇತಿಹಾಸದ_ಆಸಕ್ತರು_ಖರೀದಿಸುತ್ತಾರೆ #ಆನ್_ಲೈನ್_ನಲ್ಲಿ_ಲಭ್ಯವಿದೆ.   1941 ರಲ್ಲಿ ಮುಳುಗಿದ ಬ್ರಿಟನ್ ಸರ್ಕಾರದ ಹಡುಗಿನ ಹೆಸರು S.S.GERUSOPPA ಬ್ರಿಟಿಷರು ಜೋಗ್ ಜಲಪಾತವನ್ನು ಗೇರುಸೊಪ್ಪ ಜಲಪಾತವೆಂದೇ ಕರೆಯುತ್ತಿದ್ದರು ಈ ಪ್ರದೇಶ ಗೇರುಸೊಪ್ಪೆ ಸಂಸ್ಥಾನಕ್ಕೆ ಸೇರಿತ್ತು.   ಇಲ್ಲಿ ಆಳಿದ ಪ್ರಖ್ಯಾತ ಜೈನರ ರಾಣಿ ಚೆನ್ನಬೈರಾದೇವಿ ಅವಳು ಯುರೋಪಿನ ದೇಶದೊಂದಿಗೆ ನೇರವಾಗಿ ಕಾಳು ಮೆಣಸಿನ ವ್ಯವಹಾರ ನಡೆಸುತ್ತಿದ್ದರಿಂದ ಪೋರ್ಚ್ಗೀಸರು ಅವಳಿಗೆ ನೀಡಿದ ಬಿರುದು #ರೀನಾ_ಡಾ_ಪಿಮೆಂಟಾ ಅಂದರೆ ಕಾಳು ಮೆಣಸಿನ ರಾಣಿ.     ಅವಳ ಈ ವ್ಯವಹಾರಗಳು ಬೆಳ್ಳಿಯ ಗಟ್ಟಿಯೊಂದಿಗೆ (ಬಾರ್ ಗಳೊಂದಿಗೆ) ವಿನಿಮಯ ಮಾಡಿಕೊಳ್ಳುತ್ತಿದ್ದಳು ಮತ್ತು ಈ ರೀತಿ ಸಂಗ್ರಹವಾದ ಅಪಾರ ಸಂಪತ್ತು ಗುಪ್ತವಾಗಿ ನಿದಿಯಾಗಿ ಇಟ್ಟಿದ್ದಳು ಇದು ಯುರೋಪಿನವರಿಗೆ ಕಣ್ಣು ಕುಕ್ಕುತ್ತಿತ್ತು.    ಈ ನಿದಿಯ ಕೆಲ ಬಾಗ ಬ್ರಿಟಿಷರು ಕೈವಶ ಆಯಿತು ಎಂಬ ಸುದ್ದಿಗಳನ್ನ ಪುರಸ್ಕರಿಸುವಂತೆ ಗೇರುಸೊಪ್ಪ ಸಂಸ್ಥಾನದ ಹೆಸರಿನಲ್ಲಿಯೇ  ಬ್ರಿ...

Blog number 2209. ಅಂತರಾಷ್ಟ್ರೀಯ ನಿದಿ ಚೋರರಿಂದ ನಮ್ಮ ಗೇರುಸೊಪ್ಪೆ ಸಂಸ್ಥಾನ ಸಂಪೂರ್ಣ ಭಗ್ನವಾಯಿತು.

#ಅಂತರಾಷ್ಟ್ರೀಯ_ನಿದಿ_ಚೋರರ_ತಂಡದಿಂದ #ಕಾಳು_ಮೆಣಸಿನ_ರಾಣಿ__ಗೇರುಸೊಪ್ಪೆಯ_ಜೈನರಾಣಿ #ಚೆನ್ನಬೈರಾದೇವಿ_ಸಂಸ್ಥಾನದ_ಸ್ಮಾರಕ_ಭಗ್ನವಾಯಿತು   1941 ರಲ್ಲಿ SS ಗೇರುಸೊಪ್ಪೆ ಎಂಬ ಬ್ರಿಟೀಷರ ಹಡಗು ಚೆನ್ನಬೈರಾ ದೇವಿಯ ಆಸ್ಥಾನಕ್ಕೆ ಸೇರಿದ್ದ ಟನ್ ಗಟ್ಟಲೆ ಬೆಳ್ಳಿ ಬಾರ್ ಗಳನ್ನು ಒಯ್ಯುತ್ತಿದ್ದಾಗ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿನ ಸಬ್ ಮೆರೀನ್ ಉಡಾಯಿಸಿದ ಟಾರ್ಪೆಡೋ ಒಂದು ಈ ಹಡಗನ್ನು ಮುಳುಗಿಸಿತು.    ಅನೇಕ ವರ್ಷಗಳ ನಂತರ 2012-13ರಲ್ಲಿ ಸಮುದ್ರದಲ್ಲಿ ಮುಳುಗಿದ ನಿಧಿಯನ್ನು ಸಂಶೋಧಿಸುವ ಅಮೆರಿಕದ ಸಂಸ್ಥೆ ಒಂದು ಈ ಮುಳುಗಿದ ಗೇರುಸೊಪ್ಪೆ ಹಡಗನ್ನು ಕಂಡುಹಿಡಿದು ಆ ಹಡಗಿನಲ್ಲಿ ರವಾನಿಸುತ್ತಿದ್ದ ಬೆಲೆಬಾಳುವ ಬೆಳ್ಳಿ ಬಾರ್ ಗಳನ್ನು ಆಳ ಸಮುದ್ರದಿಂದ ತೆಗೆಯಿತು.     ಅದು ಯುರೋಪಿನಿಂದ ಕಾಳುಮೆಣಸು ಖರೀದಿಗಾಗಿ ವಿನಿಮಯ ಮಾಡಿಕೊಂಡ ಬೆಳ್ಳಿ ಬಾರ್ ಗಳಾಗಿದ್ದು ಅದು ರಾಣಿ ಚೆನ್ನಬೈರಾ ದೇವಿಯ ಸಂಸ್ಥಾನದ್ದಾಗಿತ್ತು.   ಈ ಸುದ್ದಿ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ರಾಣಿ ಚೆನ್ನಬೈರಾ ದೇವಿಯ ಗುಪ್ತ ನಿಧಿಗಳನ್ನು ವಶಪಡೆದದ್ದರು ಎಂಬ ಸುದ್ದಿಗೆ ಪೂರಕವಾಗಿದೆ.           ಆ ನಂತರದಲ್ಲಿ ನಮ್ಮ ದೇಶ ಸ್ವಾತಂತ್ರವಾಯಿತು, ಆ ಕಾಲಮಾನದಲ್ಲಿ ಇಟಲಿಯ ಮಾಫಿಯಾ ಸಂಸ್ಥೆ ಇಲ್ಲಿನ ರಾಣಿ ಚೆನ್ನಬೈರಾದೇವಿಯ ಗುಪ್...

Blog number 2208. ಚೋಟುದ್ದದ ಕ್ಯಾಕ್ಟಸ್ 9 ಅಡಿ ಎತ್ತರಕ್ಕೇರಿದೆ

#ನಮ್ಮ_ಕ್ಯಾಕ್ಟಸ್ #ನನ್ನ_ಮತ್ತು_ಶಂಭೂರಾಮನ_ನಿತ್ಯ #ವಾಕಿಂಗ್_ಜಾಗದ_ಗಾರ್ಡನ್_ಭೂಷಣವಾಗಿದೆ #ಅತಿ_ಸಣ್ಣದಾದ_ನಾಲ್ಕು_ಇಂಚಿನ_ಮರಿ_ಈಗ_9_ಅಡಿ_ಎತ್ತರ. https://youtu.be/pfCg6jFoZgY?si=aO3ydKVTb8VPsGu1 ಕಾಲ ಎಲ್ಲವನ್ನು ನಿರ್ದರಿಸುತ್ತದೆ, ಚೋಟುದ್ದದ ಈ ಮುಳ್ಳಿನ ಕ್ಯಾಕ್ಟಸ್ ಒಳಾಂಗಣದಲ್ಲಿ ಸಣ್ಣ ಪ್ಲಾಸ್ಟಿಕ್ ಪಾಟ್ ನಲ್ಲಿ ಮೊದಲಿಗೆ ಇಟ್ಟಿದ್ದು ನಂತರ ಅದರ ಬೆಳವಣಿಗೆಗೆ ತಕ್ಕಂತೆ ಪಾಟ್ ಮತ್ತು ಜಾಗ ಬದಲಾಗಿದೆ.   ಇದರಲ್ಲೇ ಬುಲ್ ಬುಲ್ ಹಕ್ಕಿ ಗೂಡು ಕಟ್ಟಿ ಮೊಟ್ಟೆ ಇಟ್ಟಿತ್ತು. #ವಿಕಿಪಿಡಿಯಾ_ಮಾಹಿತಿ ಅತಿ ಎತ್ತರದ [b] ಮುಕ್ತ-ನಿಂತಿರುವ ಕಳ್ಳಿ ಪಚೈಸೆರಿಯಸ್ ಪ್ರಿಂಗ್ಲೆ , ಗರಿಷ್ಠ ದಾಖಲಾದ ಎತ್ತರ 19.2 ಮೀ (63 ಅಡಿ), ಮತ್ತು ಚಿಕ್ಕದು ಬ್ಲಾಸ್‌ಫೆಲ್ಡಿಯಾ ಲಿಲಿಪುಟಿಯಾನಾ , ಪ್ರೌಢಾವಸ್ಥೆಯಲ್ಲಿ ಕೇವಲ 1 ಸೆಂ (0.4 ಇಂಚು) ವ್ಯಾಸವನ್ನು ಹೊಂದಿದೆ.

Blog number 2207. ಐತಿಹಾಸಿಕ ಗೇರುಸೊಪ್ಪೆ ಸಂಸ್ಥಾನ ನಿಧಿ ಚೊರರಿಂದ ಭಗ್ನಗೊಂಡಿದೆ

#ನಿದಿ_ಚೋರರಿಂದ_ಗೇರುಸೊಪ್ಪೆ_ಸಂಸ್ಥಾನ #ಸಂಪೂರ್ಣ_ಬುಡಮೇಲು_ಮಾಡಲಾಗಿದೆ #ಐತಿಹಾಸಿಕ_ಸ್ಮಾರಕ_ಸಂರಕ್ಷಿಸಲು_ಎಡವಿದ_ಕಾರಣಗಳು https://youtu.be/eL5Mts4zmvw?si=hXnAbiy_vjyePL7n    ಕಾಳು ಮೆಣಸಿನ ರಾಣಿ ಗೇರುಸೊಪ್ಪೆಯ ಚನ್ನಬೈರಾದೇವಿಯ ಸಂಸ್ಥಾನ ನಿಧಿ ಚೋರರಿಂದ ಸಂಪೂರ್ಣ ಲೂಟಿಯಾಗಿದೆ.    ಈ ಲೂಟಿ ನಡೆದ ಸಮಯ 1980 ರಿಂದ 1990 ಅಂದರೆ ಸುಮಾರು 10 ವರ್ಷ ದಟ್ಟ ಅರಣ್ಯದ ಮಧ್ಯೆ ಇದಿದ್ದ ಕಾಳು ಮೆಣಸಿನ ರಾಣಿಯ ಕೋಟೆ, ಕೊತ್ತಲಗಳು, ಜೈನ ಬಸದಿಗಳು, ದೇವಾಲಯಗಳನ್ನು ರಾಣಿಯ ಬಚ್ಚಿಟ್ಟ ನಿಧಿಗಾಗಿ ಸಂಪೂರ್ಣ ಬುಡ ಮೇಲು ಮಾಡಲಾಗಿದೆ. (ಮುಂದಿನ ಭಾಗಗಳಲ್ಲಿ ರೋಚಕ ಕಥೆಗಳು )

Blog number 2206. ಕುಂಚಿಕಲ್ ಜಲಪಾತ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿನ ಸಮೀಪ ಇರುವ ವರಾಹಿ ನದಿ ಜಲಪಾತ ಏಷ್ಯಾ ಖಂಡದ ಎರಡನೆ ಮತ್ತು ಭಾರತದ ಅತ್ಯಂತ ಎತ್ತರದ ಜಲಪಾತ

#ಖ್ಯಾತ_ವೈಚಾರಿಕ_ಲೇಖಕ_ಮುಷ್ತಾಕ್_ಹೆನ್ನಾಬೈಲು #ಅವರು_ಕುಂಚಿಕಲ್_ಪಾಲ್ಸ್_ಬಗ್ಗೆ_ಬರೆಯಬೇಡಿ #ಎಂದವರಿಗೆ_ನೀಡಿದ_ಉತ್ತರ #ನಾವೆಲ್ಲ_ಕುಂಚಿಕಲ್_ಪಾಲ್ಸ್_ತಲೆಯ_ಕಡೆ_ಇದ್ದರೆ #ಮುಷ್ತಾಕ್_ಹೆನ್ನಾಭೈಲು_ಕುಂಚಿಕಲ್_ಪಾಲ್ಸ್_ಕಾಲ_ಬುಡದಲ್ಲಿ_ಅತೀ_ಸಮೀಪದಲ್ಲಿದ್ದಾರೆ.    ಬರೀ ಗೂಗಲ್ ನೋಡಿಕೊಂಡು ವಿವರಣೆ ಕೊಡುತ್ತಾ ಹೋದರೆ ನೀವು ತಿಳಿದಂತೆ ಎಲ್ಲರೂ ತಿಳಿಯುತ್ತಾರೆ,, ಭಾರತದ ಅತ್ಯಂತ ದೊಡ್ಡ ಜಲಪಾತ ಎಂದು ಪರಿಗಣಿಸಿರುವುದು ಮತ್ತು ಅದನ್ನು ಅಂಗೀಕಾರಗೊಳಿಸಿರುವುದು ನಾನಲ್ಲ,  🤣🤣 ಭಾರತದ ಸರ್ಕಾರದ ಸಂಬಂಧಪಟ್ಟ ಇಲಾಖೆ..     ಜಲಪಾತವನ್ನು ಸೂಕ್ತ ಸಂಸ್ಥೆಗಳಿಂದ ಅಳತೆಯನ್ನು ಮಾಡಿದ ನಂತರವೇ ಹೀಗೆ ಅಂಗೀಕಾರಗೊಂಡಿದೆ.. ಜಲಪಾತವನ್ನು ಅಳೆಯ ಬೇಕಾಗಿರುವುದು ಒಂದು ಹಂತದ ನೀರಿನ ಆಧಾರದ ಮೇಲೆ ಅಲ್ಲ.     ಜೋಗ ಜಲಪಾತವು ಸೇರಿದಂತೆ ಹೆಚ್ಚಿನ ಜಲಪಾತಗಳು ಹಲವು ಹೀಗಿನ ಹಂತಗಳನ್ನು ಹೊಂದಿದೆ,ಇದನ್ನು ಏಷ್ಯಾದ ಎರಡನೇ ಅತಿ ದೊಡ್ಡ ಜಲಪಾತ ಮತ್ತು ಭಾರತದ ಅತಿ ದೊಡ್ಡ ಜಲಪಾತ ಎಂದು ಪರಿಗಣನೆ ಮಾಡಿದ ಕೇಂದ್ರ ಸರ್ಕಾರ ಮತ್ತು ಅದನ್ನು ಕಣ್ಣಾರೆ ಕಂಡ ನಾವೆಲ್ಲ ಪೆದ್ದರಾಗಿ ಬರೀ ಗೂಗಲ್ ಮ್ಯಾಪ್ ನಲ್ಲಿ ಮಾತ್ರ ಕಂಡ ನೀವು ಬುದ್ಧಿವಂತರು ಎಂದು ನೀವು ಸ್ವಯಂ ಸಾರುತ್ತಿರುವುದು ಕಂಡು ನನಗೆ ನಗು ಬರುತ್ತಿದೆ.     ಜಗತ್ತಿನ ಪ್ರಮುಖ 10 ಜಲಪಾತಗಳು ಹಂತ ಹಂತವಾಗಿಯೇ ಹಾರುತ್ತಿವೆ,...