Skip to main content

Posts

Blog number 1554. ಆನಂದಪುರಂ ಹೋಬಳಿ ಪ್ರದೇಶವೇ ಲಾಕ್ ಡೌನ್ ಆಗಿತ್ತು.24- ಮೇ-2021.

#ನಮಗಾಗಿ_ನಮ್ಮ_ನಮ್ಮದೇ_ಆರೋಗ್ಯ_ಕವಚ_ನಿರ್ಮಿಸಿಕೊಳ್ಳೋಣ #ಮನೆಯ_ಒಳಗೆ_ಯಾರನ್ನೂ_ಸೇರಿಸಬೇಡಿ_ನೀವೂ_ಇನ್ನೊಬ್ಬರ_ಮನೆಗೆ_ಹೋಗಬೇಡಿ #ನಿಮ್ಮ_ಅಂದು_ಬಂದುಗಳು_ಕೊರಾನಾಕ್ಕೆ_ಹೊರತಲ್ಲ #ನಮ್ಮ_ಆನಂದಪುರಂ_ಹೋಬಳಿ_ಇವತ್ತಿಂದ_ಒಂದು_ವಾರ_ಸಂಪೂರ್ಣ_ಲಾಕ್_ಡೌನ್. #ಎಲ್ಲಾ_ಊರು_ಕೇರಿ_ಅಷ್ಟೆ_ಅಲ್ಲ_ನಮ್ಮ_ಮನೆಯಲ್ಲೂ_ಜಾರಿ_ಆಗಲಿ.   ಸಕಾ೯ರ - ಮೋದಿ - ಯಡೂರಪ್ಪ ಅಂತೆಲ್ಲ ನೆಪ ನೆವಗಳನ್ನು ಹೇಳುತ್ತಾ ತಾವೂ ರೋಗ ತಡೆಯುವ ಮುಂಜಾಗೃತ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸರ್, ಲಸಿಕೆ ಮತ್ತು ಪರಸ್ಪರ ಅಂತರ ಕಾಪಾಡದೆ ತಮ್ಮ ಮನೆಗಳಿಗೆ ಕೊರಾನಾ ವೈರಸ್‌ ಹರಡಿ ಅನಾಹುತ ಆದ ನಂತರ ಪಶ್ಚಾತ್ತಾಪ ಮತ್ತು ಪಾಪ ಪ್ರಜ್ಞೆಯಿಂದ ನರಳುತ್ತಾ ಇರುವ ನಮ್ಮ ಜನ (ಇದು ಇಡೀ ದೇಶಕ್ಕೆ ಅನ್ವಯ) ಈಗ ವಾಸ್ತವವಾದಿಗಳಾಗುತ್ತಿದ್ದಾರೆ.   ಪತ್ರಕರ್ತರು, ವೈದ್ಯರು, ಮಂತ್ರಿಗಳು ಕೂಡ ಕೊರಾನಾಕ್ಕೆ ಬಲಿ ಆಗಿದ್ದಾರೆ ಈಗ ಎರಡನೆ ಅಲೆಯಲ್ಲಿ ನಮ್ಮ ಊರು ಮನೆಯಲ್ಲಿಯೇ ಸಾವಿನ ಸುದ್ದಿ ಕೇಳುತ್ತಿದ್ದೇವೆ ಆದರೂ ಬುದ್ದಿಗೇಡಿ ಜನರು ಈ ಕಾಯಿಲೆ ನಿಯಂತ್ರಣಕ್ಕೆ ಸಹಕರಿಸದೇ ದಿನೇ ದಿನೇ ಸಾವು ನೋವಿಗೆ ಕಾರಣರಾಗುತ್ತಿದ್ದಾರೆ.  ಪ್ರತಿಯೊಬ್ಬನಿಂದ, ಪ್ರತಿ ಕುಟುಂಬದಿಂದ, ಪ್ರತಿಹಳ್ಳಿಯಿಂದ ದೇಶ ಎನ್ನುವುದನ್ನು ಸ್ಮರಿಸೋಣ. ಪ್ರತಿಯೊಬ್ಬರು ತಮ್ಮ ತಮ್ಮ ಕುಟುಂಬದ ಆರೋಗ್ಯ ಕವಚ ರಚಿಸಿಕೊಳ್ಳಬೇಕು, ಕಾಯಿಲೆ ಬಂದ ನಂತರದ ತಯಾರಿಗಿಂತ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು...

Blog number 1553. ಸಾಗರದ ಜನ್ನತ್ ನಗರದ ಅಬ್ಬಾಸ್ ಸಾಹೇಬರು ಜಿಲ್ಲೆಯ ಮಾಂಸಹಾರಿ ಅಡುಗೆ ತಯಾರಿಸುವ ಸೂಪರ್ ಕುಕ್

https://youtu.be/t4NW_Q9RvNE #ಸಾಗರದ_ಜನ್ನತ್_ಗಲ್ಲಿಯ_ಅಬ್ಬಾಸ್_ಸಾಬ್. #ನಮ್ಮ_ಪ್ರಾಂತ್ಯದ_ಸೂಪರ್_ಕುಕ್ #ಟೇಸ್ಟಿಂಗ್_ಪೌಡರ್_ಕೃತಕ_ಬಣ್ಣ_ಬಳಸದ_ಪಕಾತಿ  #ಅತಿ_ಕಡಿಮೆ_ಸಂಭಾವನೆ_ಪಡೆದು_ಅತ್ಯಂತ_ರುಚಿಕರ_ಅಡುಗೆ_ಮಾಡುವವರು #ನನ್ನ_ಇವರ_ದೋಸ್ತಿ_35_ವರ್ಷದ್ದು #ನಮ್ಮ_ಕಲ್ಯಾಣಮಂಟಪದಲ್ಲಿ_ಈ_ವರ್ಷ_ಎರೆಡು_ಮದುವೆಗೆ_ಇವರದ್ದೇ_ಅಡುಗೆ.     ಸಾಗರದ ಜನ್ನತ್ ಗಲ್ಲಿ  ಅಬ್ಬಾಸ್ ಅಡುಗೆ ಅಂದರೆ ಶಿವಮೊಗ್ಗ ಜಿಲ್ಲೆಯ ಮಾಂಸಹಾರಿ ಪ್ರಿಯರ ಕಿವಿ ಮತ್ತು ಬಾಯಿ ಜಾಗೃತವಾಗುತ್ತದೆ, ಇವರ ಅಡುಗೆ ಹಸ್ತ ಗುಣ ಅಂತಹದ್ದು.    ಇವರು ಮಾಡುವ ಬಿರಿಯಾನಿ, ಗೀರೈಸ್, ಕಬಾಬ್, ಚಿಲ್ಲಿ,,ಡ್ರೈ , ಪಿಶ್ ಪ್ರೈಗಳು ಸಂಪ್ರದಾಯಿಕ ಶೈಲಿಯ ರುಚಿಕರ ಅಡುಗೆ.   1996 ರಲ್ಲಿ ಸನ್ಮಾನ್ಯ ಬಂಗಾರಪ್ಪರಿಗೆ ನಾವು ನೀಡಿದ ಔತಣ ಕೂಟದ ಅಡುಗೆ ತಯಾರಿಸಿದ್ದು ಅಬ್ಬಾಸ್ ಸಾಹೇಬರೆ?....ಬಂಗಾರಪ್ಪರಿಗೆ ಊಟ ಸಂತೃಪ್ತಿ ತಂದಿತ್ತು.    ಇಂತಹ ಸಂದರ್ಭದಲ್ಲಿ ಅಡುಗೆ ಮಾಡಿದವರನ್ನು ಕರೆದು ಪ್ರಶಂಸೆಯ ಮಾತಾಡಿ ಭಕ್ಷಿಸು ನೀಡುವ ದೊಡ್ಡ ಗುಣ ಬ೦ಗಾರಪ್ಪರಲ್ಲಿ ಇತ್ತು.    ಈಗಿನ ಆಧುನಿಕ ಅಡುಗೆಗೂ ಅಬ್ಬಾಸ್ ಸಾಹೇಬರ ಸಂಪ್ರದಾಯಿಕ ಅಡುಗೆಗೂ ಅಜಗಜಾಂತರವಿದೆ, ಅಬ್ಬಾಸ್ ಸಾಹೇಬರ ಈಗಿನ ಕಾಲದ ಟೇಸ್ಟಿಂಗ್ ಪೌಡರು ಅಜಿನೋಮೋಟೊ ಇತ್ಯಾದಿ ಹಾನಿಕಾರಕ ಕೆಮಿಕಲ್ ಬಳಸದೆ ಸಂಪ್ರದಾಯಿಕ ಶೈಲಿಯ ಅಡುಗೆ ಕಲೆಯವರು.   ...

Blog number 1552. ಚಂಪಕಾ ಕಾದಂಬರಿ ಇಂಗ್ಲೀಷ್ ಬಾಷೆಯಲ್ಲಿ ಮುದ್ರಣವಾಗುತ್ತಿದೆ.

#ನಾನು_ಬರೆದ_ಕಾದಂಬರಿ_ಇಂಗ್ಲೀಷ್_ಭಾಷೆಯಲ್ಲಿ_ಬರಲಿದೆ. #ಕವರ್_ಮುಖಪುಟ_ಹೀಗಿದೆ.   ಕೆಳದಿ ಅರಸರಲ್ಲೇ ಅತ್ಯಂತ ದೀರ್ಘ ಕಾಲ ಆಡಳಿತ ಮಾಡಿದ ರಾಜ ವೆಂಕಟಪ್ಪ ನಾಯಕ ಅವರ ಸಾದನೆ ಇತಿಹಾಸದ ಪುಟಗಳಲ್ಲಿ ಅಳಿಸಲಾಗಿದೆ ಯಾಕೆ? ಈ ಬಗ್ಗೆ ಮುಂದಿನ ದಿನಗಳಲ್ಲಿ ಇತಿಹಾಸ ಆಸಕ್ತರು ಸಂಶೋದನೆ ಮಾಡಬಹುದು.    ರಾಜ ವೆಂಕಟಪ್ಪ ನಾಯಕರ ಕೋಟೆ ಊರು ಆನಂದಪುರಂ ಅನೇಕ ಇತಿಹಾಸದ ಹೆಜ್ಜೆ ಗುರುತುಗಳ ಊರು ಇಲ್ಲಿಯೇ ಅವರು ನಿರ್ಮಿಸಿದ ಚಂಪಕ ಸರಸ್ಸು 400 ವರ್ಷಗಳಿಂದ ಇಲ್ಲಿದೆ, ಇದೇ ಊರು ಆನಂದಪುರಂ ನನ್ನ ಹುಟ್ಟೂರು.   ರಾಜ ವೆಂಕಟಪ್ಪ ನಾಯಕರು ರಂಗೋಲಿ ಚಿತ್ರಗಳಿಂದ ಸುಂದರಿ ಚಂಪಕಾಳ ಪ್ರೇಮಾಂಕುರ ಆಗುವುದು ನಂತರ ಚಂಪಕಾಳನ್ನು ವಿವಾಹವಾಗಿ ಆನಂದಪುರಂ ಕೋಟೆ ಒಳಗಿನ ಅರಮನೆಯಲ್ಲಿ ಹೆಚ್ಚು ಸಮಯ ರಾಜ ಕಾಲ ಕಳೆಯುತ್ತಿರುತ್ತಾರೆ.    ಕೆಳಜಾತಿ ಕಾರಣದಿಂದ ರಾಣಿ ಭದ್ರಮ್ಮಾಜಿ ಇದನ್ನು ವಿರೋದಿಸುವುದು ನಂತರ ಅನ್ನಾಹಾರ ತ್ಯಜಿಸಿ ರಾಣಿ ಭದ್ರಮ್ಮಾಜಿ ಜೀವ ತ್ಯಾಗ ಮಾಡುವುದು ಆ ಸಂದರ್ಭದಲ್ಲಿ ರಾಣಿ ಚಂಪಕಾಳ ಬಗ್ಗೆ ಸುಳ್ಳು ಸುದ್ದಿಗಳು ಪ್ರಜೆಗಳಲ್ಲಿ ಹರಡಿರುತ್ತದೆ.    ಈ ಸಂದರ್ಭದಲ್ಲಿ ಇಟಲಿಯ ಪ್ರವಾಸಿ ಡೆಲ್ಲೋ ವಲ್ಲೆ ರಾಜ ವೆಂಕಟಪ್ಪ ನಾಯಕರ ಬೇಟೆಗಾಗಿ ಇಕ್ಕೇರಿಗೆ ಬಂದಿರುತ್ತಾರೆ ಅವರ ಪತ್ರಗಳಲ್ಲಿ ಈ ಘಟನೆ ನಮುದಾಗಿರುವುದು ಒ0ದು ಐತಿಹಾಸಿಕ ದಾಖಲೆ.    ಈಗಲೂ ಚಂಪಕಾಳ ವಂಶಸ್ಥರು ಆನಂದಪುರಂ ನಲ...

Blog number 1551.ಶೂದ್ರ ದಲಿತ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಹವ್ಯಕ ಬ್ರಾಹ್ಮಣ ಮುಖಂಡ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಅಡುಗೆ ಮನೆಯಲ್ಲಿ ಹೋಳಿಗೆ ಊಟ ಬಡಿಸಿದ ನೆನಪು.

#ಒಂದು ಘಟನೆ ನೆನಪಾಯಿತು (23-ಮೇ-2017)        ಆಗ ನಾನು ಸಾಗರ ತಾಲ್ಲೂಕನ ಯುವ ಕಾಂಗ್ರೇಸನ ಅಧ್ಯಕ್ಷ ಹುದ್ದೆಯ ಆಕಾ೦ಕ್ಷಿ ಆಗಿದ್ದೆ ಆದರೆ ನಾಯಕರು ನನ್ನನ್ನ ಪ್ರದಾನ ಕಾಯ೯ದಶಿ೯ಯಾಗಿ ಎಲ್. ಟಿ.ತಿಮ್ಮಪ್ಪರನ್ನ ಅದ್ಯಕ್ಷರನ್ನಾಗಿ ನೇಮಿಸಿದ್ದರು.    ನಾವೆಲ್ಲ ಅತ್ಯುತ್ಸವದಿಂದ ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯತಗಳಲ್ಲಿ ಸಂಘಟನೆಗಾಗಿ ಪ್ರವಾಸ ಹಮ್ಮಿಕೊಂಡಿದ್ದೆವು.     ಇಂತಹ ಸಂದಭ೯ದಲ್ಲಿ ಅಧ್ಯಕ್ಷರಾಗಿದ್ದ ಎಲ್.ಟಿ. ತಿಮ್ಮಪ್ಪರ ಮನೇಲಿ ಮಧ್ಯಾಹ್ನದ ಊಟ ನಿಗದಿ ಆಗಿತ್ತು, ನಮಗೆಲ್ಲ ಇರಸು ಮುರುಸು ಅಧ್ಯಕ್ಷರ ತಂದೆ ಮಾಜಿ ಶಾಸಕರು ಹಾಗೂ ಹವ್ಯಕ ಬ್ರಾಹ್ಮಣ ಮುಖಂಡರು ಅವರ ಮನೆಯಲ್ಲಿನ ಮಡಿ ನಮಗೆ ಅಪಥ್ಯ ಅವರಿಗೆ ಶೂದ್ರರಿಂದ ಮೈಲಿಗೆ ಅಂತ ನಾವೆಲ್ಲ ಆ ಬೋಜನ ಕೂಟ ನಿರಾಕರಿಸಿದೆವು ಆದರೆ ಯುವ ಕಾಂಗ್ರೇಸ್ ಅಧ್ಯಕ್ಷರು ನಮ್ಮ ಅನುಮಾನ ನಿರಾಕರಿಸಿ ತಮ್ಮ ಮನೇಲಿ ಅಂತಹದ್ದೇನಿಲ್ಲ ಬರಲೇ ಬೇಕು ಅಂತ ಹಠ ಹಿಡಿದರು.    ಆ ಮದ್ಯಾಹನ ಅವರ ಮನೇಲಿ ನಮಗೆಲ್ಲ ಅವರ ಅಡುಗೆ ಮನೇಲಿ ಕೂರಿಸಿ ಊಟ ಹಾಕಿ ತಮ್ಮಲ್ಲಿ ಜಾತಿಯತೆ ಆಚರಣೆ ಇಲ್ಲ ಅಂತ ತೋರಿಸಿದ್ದರು.      ಅವತ್ತು ಇವತ್ತಿನ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ತೀ.ನಾ.ಶ್ರೀನಿವಾಸ್, ನಗರಸಭಾ ಸದಸ್ಯರಾದ ಮಂಜು, ಮೈಖೆಲ್ ಎಲ್ಲಾ ಇದ್ದರು.     ಅವತ್ತಿನ ಯುವ ಕಾಂಗ್ರೇಸ್ ಅಧ್ಯಕ್ಷರು ಈಗ ಸಾಗರ ತಾಲ್ಲೂ...

Blog number 1550. ಕೊರಾನಾ ಲಾಕ್ ಡೌನ್ ಡೈರಿ 2020 ಲೆಟರ್ ನಂಬರ್ 40 (23- ಮೇ -2020)

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 40    ದಿನಾ೦ಕ: 24 -ಮೇ -2020 #ಮನೇಯಲ್ಲೇ_ನಮಾಜ್_ಮಾಡಿ_ರಮ್ಜಾನ್_ಆಚರಿಸಿದ_ಮುಸ್ಲಿಂ_ಸಮೂದಾಯ.        ಕೊರಾನಾ ವೈರಸ್ ಮನುಷ್ಯ ಜೀವನದ ಎಲ್ಲಾ ಕೋನಗಳಲ್ಲೂ ತನ್ನ ಅಸ್ತಿತ್ವ ತೋರಿಸಿದೆ ಮತ್ತು ಪರಿವತ೯ನೆ ಜಗದ ನಿಯಮ ಎಂಬ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತಾ ಉವಾಚ ಸತ್ಯವಾಗಿದೆ.    ಹಿಂದೂ ದಮಿ೯ಯರ ಹೊಸ ವಷ೯ದಲ್ಲೇ (ಯುಗಾದಿ) ಕೊರಾನಾ ವೈರಸ್ ಒಕ್ಕರಿಸಿದ್ದರಿಂದ ಯುಗಾದಿ ಸಂಭ್ರಮವಾಗಿ ಆಚರಿಸಲಾಗಲಿಲ್ಲ ಹಾಗಾಗಿ ಯುಗಾದಿ ಖರೀದಿಗಳು ನಡೆಯಲಿಲ್ಲ.   ಅಕ್ಷಯ ತದಿಗೆಗೆ ಚಿನ್ನದ ಅಂಗಡಿಗಳು ತೆರೆಯಲೇ ಇಲ್ಲ ಮತ್ತು ವಿವಾಹಗಳಿಗೆ ಅನುಮತಿಯೆ ಇರಲಿಲ್ಲ.    ಮುಸ್ಲಿಂ ಸಮಾಜದ ಒಂದು ತಿಂಗಳ ಕಾಲ ನಡೆಯುವ ರಮ್ಜಾನ್ ಉಪವಾಸದ ತಿಂಗಳು ಇವತ್ತಿಗೆ ಮುಗಿದು ನಾಳೆ ರಮ್ಜಾನ್ ಹಬ್ಬ ಆಚರಿಸುತ್ತಿದ್ದಾರೆ.    ಭಕ್ತಿಯಿ೦ದ ಮಸೀದಿಯಲ್ಲಿ 5 ಬಾರಿ ದೇವರನ್ನ ಪ್ರಾಥಿ೯ಸುವ ನಮಾಜ್ ಮನೇಲೇ ಮಾಡಬೇಕಾದ ಅನಿವಾಯ೯ತೆ ಪ್ರಕಾರ ನಡೆಯಿತು.   ರಮ್ಜಾನ್ ಸಾಮೂಹಿಕ ಪ್ರಾಥ೯ನೆ, ಮೆರವಣಿಗೆಗಳಿಗೆ  ಈ ಬಾರಿ ತಿಲಾ೦ಜಲಿ ನೀಡಲಾಗಿದೆ.   ಹೊಸ ಬಟ್ಟೆ, ಅದ್ದೂರಿ ಆಚರಣೆ, ಹಬ್ಬದ ಪ್ರಯುಕ್ತ ರಜಾ ಮಾಡಿ ಸಂಬಂದಿಗಳ ಬೇಟಿ ಮಾಡುವುದು ರದ್ದಾಗಿದೆ.   ಪ್ರಾರ೦ಭದಲ್ಲಿ ಇದನ್ನೆಲ್ಲ ಕಟ್ಟರ್ ದಮ೯ವಾದಿಗಳು ವಿರೋದಿಸಿದ...

Blog number 1549.ಸೋತವರನ್ನು ಗೌರವದಿಂದ ಕಾಣುವ ಕೆಲಸ ಗೆದ್ದವರದ್ದು.

ಬೃಹತ್ ಪ್ರಜಾಪ್ರಭುತ್ವ ದೇಶ ಭಾರತದ ಮಹಾಚುನಾವಣೆ ಮುಗಿದು ಪಲಿತಾಂಶ ನಾಳೆ ಇದೆ. ಗೆದ್ದು ಬಹುಮತ ಪಡೆದ ಪಕ್ಷ 5 ವಷ೯ ಆಡಳಿತ ನಡೆಸುವುದು, ಬಹುಮತ ಪಡೆಯದ ಪಕ್ಷ ವಿರೋದ ಪಕ್ಷವಾಗಿ ಪ್ರಜಾಪ್ರಭುತ್ವವನ್ನ ಕಾಪಾಡುತ್ತದೆ.   ಅದೇ ರೀತಿ ಪ್ರತಿ ಲೋಕ ಸಭಾ ಕ್ಷೇತ್ರದಲ್ಲಿ ಗೆದ್ದು ಸಂಸದರಾದವರು ನಮ್ಮ ಲೋಕ ಸಭಾ ಪ್ರತಿನಿಧಿಗಳಾಗಿ ಸೋತವರು ವಿರೋದ ಪಕ್ಷದಂತೆ ಗೆದ್ದವರ ತಪ್ಪುಗಳನ್ನ ತಿದ್ದುವವರಾಗುತ್ತಾರೆ.   ಮತದಾರನಿಗೆ ಪಕ್ಷವಿಲ್ಲ ಅವನು ಹರಿಯುವ ನೀರಿನಂತೆ, ಬೀಸುವ ಗಾಳಿಯ೦ತೆ. ಇವತ್ತು ಒಬ್ಬರ ಗೆಲುವಿಗೆ ನೀಡಿದ ಮತ ಮುಂದೆ ಅವರ ಸೋಲಿಸುವ ಮತವೂ ಆಗಬಹುದು.  ಗೆದ್ದವರು ಮೈಮರೆಯದೆ ಕ್ಷೇತ್ರಕ್ಕೆ ಅಭಿವೃದ್ಧಿಯ ಕೊಡುಗೆ ನೀಡಲಿ ಸೋತವರು ಕಾವಲುಗಾರನಂತೆ ಕಾಯ೯ ನಿವ೯ಹಿಸಲಿ.   ಇನ್ನಾದರೂ ಕಾಂಗ್ರೇಸ್ ಮುಕ್ತ, ಬಿಜೆಪಿ ಮುಕ್ತ ಭಾರತ ಅನ್ನುವುದಕ್ಕಿಂತ ಭ್ರಷ್ಟಾಚಾರ ಮುಕ್ತ ಭಾರತ ನಮ್ಮೆಲ್ಲರ ಗುರಿ ಆಗಲಿ.  ಭಕ್ತರು - ಗುಲಾಮರು ಎಂಬ ಅಪಹಾಸ್ಯಕ್ಕಿಂತ ಭಾರತೀಯರೆಂಬ ಅಭಿಮಾನ ಪ್ರಜ್ವಲಿಸಲಿ.  ಗೆದ್ದವರಂತೆ ಸೋತವರನ್ನು ಗೌರವಿಸೋಣ ಇದು ಪ್ರಜಾಪ್ರಭುತ್ವ.

Blog number 1548. ರಾಟ್ ವೀಲರ್ ಶಂಭೂರಾಮನಿಗೆ ಸುರಕ್ಷಿತ ವಲಯದಲ್ಲಿ ನಿಂತು ಸವಾಲೊಡ್ಡುವ ಬಿಲ್ಲಿ .

https://youtu.be/95SYfECoWPc #ಶಂಭೂರಾಮನಿಗೆ_ಸವಾಲೊಡ್ಡುವ_ಚೋಟುದ್ದದ_ಬಿಲ್ಲಿ. #ಶಂಭೂರಾಮನ_ದಾಳಿ_ನಿಯಂತ್ರಿಸಲು_ನಿರ್ಮಿಸಿದ_ರಕ್ಷಾ_ಕವಚ_ಸುರಕ್ಷಿತ #ಹಾಗಂತ_ಬಿಲ್ಲಿ_ಬಾವಿಸಿ_ನಿರಾತಂಕವಾಗಿರುವುದೇ_ದೃಡೀಕರಣ #ಆದರೆ_ಮನುಷ್ಯರು_ಮಾತ್ರ_ನಂಬುವುದಿಲ್ಲ.  ಇವತ್ತು ಬೆಳಿಗ್ಗೆ 7 ಗಂಟೆಗೆ ವಾಕಿಂಗ್ ಮುಗಿಸಿ ನಾನು ನನ್ನ ವಾಕಿಂಗ್ ಗೆಳೆಯ ಶಂಭೂರಾಮ ಮನೆಗೆ ಬಂದಾಗ ನಮ್ಮ ಅಣ್ಣನ ಮನೆಗೆ ನಿತ್ಯ ಬರುವ ಚೋಟುದ್ದ ಬೆಕ್ಕು ರಾಟ್ ವೀಲರ್ ಶಂಭೂರಾಮನ ಹತ್ತಿರ ಚಿಟ್ ಚಾಟ್ ಮಾಡಿ ಗೇಲಿ ಮಾಡಲು ಪ್ರಾರಂಬಿಸಿತು.   ಕೊಡೈಕೆನಾಲ್ ನಲ್ಲಿ ರಾಟ್ ವೀಲರ್ ಕೆನಲ್ ಪಾರಂ ಹೊಂದಿರುವ ಅನಿವಾಸಿ ಭಾರತೀಯ ಗೆಳೆಯ ಜಗನ್ ನಮ್ಮಲ್ಲಿ ಬಂದಾಗ ರಾಟ್ ವೀಲರ್ ಸಾಕಲು ಅದರ ಸ್ವಾಭಾವಿಕ ಬುದ್ಧಿ, ಯಾವಾಗ ಯಾರ ಮೇಲಾದರೂ ದಾಳಿ ಮಾಡುವ ಸಂಭವದಿಂದ ತಪ್ಪಿಸಲು ಎರೆಡು ಸುತ್ತಿನ ರಕ್ಷಣಾ ಕವಚ ಮಾಡಿಸಿದ್ದಾರೆ ಆದರೆ ಮನುಷ್ಯರಾದ ನಮಗೆ ನಂಬಿಕೆ ಬರುವುದಿಲ್ಲ.   ಆದರೆ ಈ ಬಿಲ್ಲಿ ರಕ್ಷಣಾ ವ್ಯವಸ್ಥೆಯ ಹೊರಗೆ ನಿರಾತಂಕವಾಗಿ ಇರುವುದರ ಮೂಲಕ ಜಗನ್ ರ ರಕ್ಷಣಾ ವ್ಯವಸ್ಥೆ ಪರ್ಪೆಕ್ಟ್ ಎಂಬ ಸರ್ಟಿಪಿಕೇಟ್ ನೀಡುತ್ತಿದೆ.   ಮನುಷ್ಯ ಎಷ್ಟೇ ಬುದ್ದಿವಂತನಾದರೂ ಪ್ರಾಣಿಗಳಲ್ಲಿರುವ ಬುದ್ಧಿ ಮತ್ತೆಗಿಂತ ಎಷ್ಟೋ ಕೆಳಗಿದ್ದಾನೆ ನೋಡಿ, ಪ್ರಾಣಿ ಪಕ್ಷಿಗಳು ಪರಿಸರದಲ್ಲಿ ತಮ್ಮ ಸುರಕ್ಷಾ ವಲಯ ಗುರುತಿಸಿಕೊಳ್ಳುವ ಮೂಲಕ ತನ್ನ ಸ್ವಯಂ ರ...