Skip to main content

Posts

Blog number 1145 ಶಿವಮೊಗ್ಗ ಮುನೀರ್ ನೆನಪಿನ ಸರಣಿ - 6. ಶಿವಮೊಗ್ಗದ ಪ್ರತಿಷ್ಟಿತ ಡಿವಿಎಸ್ ಕಾಲೇಜಿನ ಹುದ್ದೆಗೆ ಅರ್ಜಿ ಸಲ್ಲಿಸಿ, ಸಂದರ್ಶನ ಎದುರಿಸಿ ಆಯ್ಕೆ ಆದ ಪಿಯೂಸಿ ಮತ್ತು ಪದವಿಯಲ್ಲಿ ರ್ಯಾಂಕ್ ಮತ್ತು ಬಂಗಾರದ ಪದಕ ಪಡೆದಿದ್ದ ರಹಮತ್ ತರಿಕೆರೆ, ಪೂರ್ಣಚಂದ್ರ ತೇಜಸ್ವಿ ಮೇಲೆ ಡಾಕ್ಟರೇಟ್ ಮಾಡಿದ ಖ್ಯಾತ ವನ್ಯ ಪ್ರಾಣಿ ಛಾಯಗ್ರಹಣದ ಹವ್ಯಾಸದ ಇವರ ಸಹೋದರ ಕಲೀಮುಲ್ಲಾ.

#ಶಿವಮೊಗ್ಗ_ಮುನೀರ್_ನೆನಪಿನ_ಸರಣಿ_6. #ಡಿವಿಎಸ್_ಕಾಲೇಜಿನಲ್ಲಿ_ರಹಮತ್_ತರೀಕೆರೆ_ಅಧ್ಯಾಪಕರಾಗಿ_ಆಯ್ಕೆ_ಆದದ್ದು. #ಡಿವಿಎಸ್_ಕಾಲೇಜಿನಲ್ಲಿ_ಸೈಯದ್_ಷಹಾಬುದ್ದೀನ್_ಉರ್ದು_ಅಧ್ಯಾಪಕರಾಗಿ #ಕನ್ನಡ_ವಿಭಾಗಕ್ಕೆ_ಶಿವಮೊಗ್ಗಮುನೀರ್_ರಹಮತ್_ತರಿಕೆರೆ #ಪಿಯೂಸಿ_ಪದವಿಯಲ್ಲಿ_ರ್ಯಾಂಕ್_ಪಡೆದು_ಚಿನ್ನದ_ಪದಕ_ಗಳಿಸಿದ್ದ_ರಹಮತ್_ತರಿಕೆರೆ    ಇವತ್ತು ರಹಮತ್ ತರೀಕೆರೆ ಹೆಸರು ಕನ್ನಡ ಸಾಹಿತ್ಯ ಲೋಕದಲ್ಲಿ ಮೇಲ್ಪದರದಲ್ಲಿದೆ, ಕನ್ನಡಕ್ಕೆ ಇವರು ಜ್ಞಾನಪೀಠ ಪ್ರಶಸ್ತಿ ಪಡೆಯುವ ಅರ್ಹತೆಯ ಕವಿಗಳ ಸಾಲಲ್ಲಿದ್ದಾರೆ ಇವರು ಶಿವಮೊಗ್ಗದ ಪ್ರತಿಷ್ಟಿತ ಡಿವಿಎಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಸಂದರ್ಶನದಲ್ಲಿ ಇವರ ಇವರ ಗಳಿಸಿದ್ದ ಬಂಗಾರದ ಪದಕ ಸಂದರ್ಶಕರ ಸಮಿತಿ ಸದಸ್ಯರ ಅಚ್ಚರಿಗೆ ಕಾರಣವಾಗಿದ್ದು ಮತ್ತು ಪಿಯೂಸಿ , ಪದವಿಯಲ್ಲಿ ರ್ಯಾಂಕ್ ಪಡೆದಿದ್ದರಿಂದ ಇವರನ್ನು ಆಯ್ಕೆ ಸಮಿತಿ ಇವರಿಗೆ ನೇಮಕಾತಿ ಆದೇಶ ನೀಡಿತ್ತು ಅಂತ ಶಿವಮೊಗ್ಗ ಮುನೀರ್ ನೆನಪಿಸಿಕೊಂಡಿದ್ದಾರೆ.   ಕೆಲ ವರ್ಷದ ನಂತರ ಹಂಪೆ ಕನ್ನಡ ವಿಶ್ವವಿದ್ಯಾಲಯದ ಹುದ್ದೆಗೆ ಆಯ್ಕೆ ಆಗಿ ಇಲ್ಲಿ ರಾಜಿನಾಮೆ ನೀಡಿ ಹೋಗುತ್ತಾರೆ ಈ ಸಂದರ್ಭದಲ್ಲೇ ರಹಮತ್ ತರಿಕೆರೆ ಸಹೋದರ ಕಲಿಮುಲ್ಲಾ ಡಿವಿಎಸ್ ಸಂಸ್ಥೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಈಗ ಉಪನ್ಯಾಸಕರಾಗಿದ್ದಾರೆ.    ನಾನು ಆನಂದಪು...

Blog number 1143. ಕುವೆಂಪು ಅವರ 118ನೇ ಜನ್ಮ ದಿನಾಚರಣೆಯಲ್ಲಿ ಕುವೆಂಪು ಅವರ ನೆನಪುಗಳು

#ಕುವೆಂಪು_ಕನ್ನಡದ_ಕಂಪು #ಶಿವಮೊಗ್ಗ_ಜಿಲ್ಲೆಯ_ಜನರಿಗೆ_ಹೆಮ್ಮೆ #ಇವತ್ತು_ಅವರ_ಜನ್ಮದಿನಾಚಾರಣೆ #ಅವರು_ಹುಟ್ಟಿದ_ಕುಪ್ಪಳ್ಳಿ_ಮನೆ_ಅವರ_ಸಮಾದಿ_ದರ್ಶನ #ಅವರ_ಸಾಹಿತ್ಯದ_ಓದು_ಲಭ್ಯ #ಕುವೆಂಪು_ಅವರನ್ನು_ಕುಹಕವಾಡುವ_ಕನ್ನಡಿಗರು_ಅವರ_ಸಾಹಿತ್ಯ_ಓದಿದ್ದಾರ_ಎಂಬ_ಅನುಮಾನ. #ಅವರು_ಕೆಳದಿ_ಸಂಸ್ಥಾನದ_ನಿಜ_ಕಥೆಯನ್ನು_ಶೇಕ್ಸಪಿಯರ್_ಹ್ಯಾಮ್ಲೆಟ್_ನಾಟಕದ_ಜೊತೆ_ಸಮೀಕರಿಸಿದ_ರಕ್ತಾಕ್ಷಿ_ನಾಟಕ. #ಕುವೆಂಪು_ನುಡಿ_ನಡೆ_ಕೃತಿ_ಬಿನ್ನವಾಗಿಲ್ಲದ_ನಮ್ಮ_ಹೆಮ್ಮೆಯ_ರಾಷ್ಟ್ರಕವಿ  #ಕುವೆಂಪು_ಅಂತಿಮ_ಸಂಸ್ಕಾರದಲ್ಲಿ_ಭಾಗವಹಿಸುವ_ಅವಕಾಶ_ತಪ್ಪಿದ್ದು. #ಕವಿಶೈಲ_ಲೋಕಾರ್ಪಣೆಯಲ್ಲಿ_ಭಾಗವಹಿಸಿದ್ದು. #ಮೈಸೂರು_ತಾಳಗುಪ_ಎಕ್ಸಪ್ರೆಸ್_ರೈಲಿಗೆ_ಕುವೆಂಪು_ನಾಮಕರಣಕ್ಕೆ_ಕಾರಣರಾದ_ಖ್ಯಾತ_ಪತ್ರಕರ್ತ_ಡಿ_ಪಿ_ಸತೀಶ್ #ಕವಿಶೈಲದ_ಗೈಡ್_ಮಾನಪ್ಪರ_ನೆನಪುಗಳು    ಕುವೆಂಪು ಅವರ 118ನೇ ಜನ್ಮ ದಿನಾಚಾರಣೆ ಇವತ್ತು (29- ಡಿಸೆಂಬರ್ -1904) ಇಡೀ ಕನ್ನಡಿಗರಲ್ಲಿ ಕುವೆಂಪು ಪದ್ಯ, ಹಾಡು, ನಾಟಕ, ಕಥೆ, ಕಾದಂಬರಿಯ ಮೂಲಕ ಅವರು ಜೀವಂತ ಇರುವ ಏಕೈಕ ಕನ್ನಡಿಗರ ಕಣ್ಮಣಿ ಕವಿಗಳು.    ಪ್ರಾಥಮಿಕ ಶಿಕ್ಷಣದ ಪಠ್ಯದಿಂದ ಪ್ರಾರಂಭ ಆಗಿ ಈಗಿನ 57 ವಷ೯ದ ನನ್ನ ಜೀವನದಲ್ಲಿ ಅವರ ಎಲ್ಲಾ ಸಾಹಿತ್ಯಗಳ ಸಂಗ್ರಹ ಓದು ಮತ್ತೆ ಮತ್ತೆ ಮಾಡುತ್ತಲೇ ಇರುತ್ತೇನೆ.    ಕವಿಶೈಲದ ಬೇಟಿ ಮಾಡಿದಾಗೆಲ್ಲ ಹೊಸದಾಗಿ ಅಲ್ಲಿನ ದರ್ಶನ ಮಾಡಿದ೦ತ...

Blog number 1142. ಶಿವಮೊಗ್ಗ ಮುನೀರ್ ನೆನಪಿನ ಸರಣಿ 5,ಡಿವಿಎಸ್ ಕಾಲೇಜಿನ ಕನ್ನಡ ಅಧ್ಯಾಪಕ ಹುದ್ದೆ ಕೊಡಿಸಲು ಸ್ವತಃ ಉದ್ಯಮಿ ಮತ್ತು ಕನ್ನಡ ಸಾಹಿತ್ಯ ಪೋಷಕರಾದ ಹಿರೇಹಾಳ್ ಇಬ್ರಾಹಿಂ ಸಾಹೇಬರು ಮತ್ತು ಶಿವಮೊಗ್ಗ ಗುಲಾಂ ಅಭೀದ್ ಕಾಲೇಜಿನ ಅಧ್ಯಕ್ಷರಾಗಿದ್ದ ಬದರೀನಾರಾಯಣರ ಬೇಟೆಗೆ ಆನಂದಪುರಂಗೆ ಬಂದಿದ್ದ ನೆನಪು.

#ಶಿವಮೊಗ್ಗ_ಮುನೀರ್_ನೆನಪಿನ_ಸರಣಿ_5. #ಡಿವಿಎಸ್_ಸಂಸ್ಥೆ_ಅಧ್ಯಕ್ಷರಾಗಿದ್ದ_A_R_ಬದರಿನಾರಾಯಣರು. #ಅವರ_ಬೇಟಿಗೆ_ಆನಂದಪುರಂಗೆ_ಬಂದವರು_ಹಿರೇಹಾಳ್_ಇಬ್ರಾಹಿಂ_ಸಾಹೇಬರು_ಕಾಂಗ್ರೇಸ್_ಮುಖಂಡರಾದ_ಗುಲಾಂ_ಅಬೀದ್  #ಕವಿ_ನಿಸಾರ್_ಆಹಮದರ_ಶಿಷ್ಯ_ಇಬ್ರಾಹಿಂ_ಸಾಹೇಬರ_ಆಪ್ತ_ಮುನೀರ್ #ಅವರಿಗೆ_ಡಿವಿಎಸ್_ಸಂಸ್ಥೆ_ಕನ್ನಡ_ಅಧ್ಯಾಪಕ_ಹುದ್ದೆ_ಕೊಡಿಸಲು   ಆನಂದಪುರಂ ಆರ್.ಬದರಿನಾರಾಯಣ ಅಯ್ಯ೦ಗಾರ್ ದೇಶದ ಮೊದಲ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಗೋಪಾಲಗೌಡರಿಂದ ಸೋತು ಎರಡನೆ ಚುನಾವಣೆಯಲ್ಲಿ ಗೋಪಾಲಗೌಡರನ್ನು ಸೋಲಿಸಿ ಕಾಂಗ್ರೇಸ್ ನಿಂದ ಶಾಸಕರಾಗಿ, ವಿದ್ಯಾ ಮಂತ್ರಿ, ಸಂಸದ, ವಿಧಾನ ಪರಿಷತ್ ಸದಸ್ಯರಾಗಿದ್ದು ಇತಿಹಾಸ.    ಇವರು ವಿದ್ಯಾ ಮತ್ತು ಸಂಸ್ಕೃತಿ ಮಂತ್ರಿಗಳಾಗಿದ್ದಾಗ ಇವರು ಮತ್ತು ಆಗಿನ ಮುಖ್ಯಮಂತ್ರಿ ದೇವರಾಜ ಅರಸರು ಜಂಟಿಯಾಗಿ ಕರ್ನಾಟಕ ರಾಜ್ಯ ನಾಮಕರಣ ಮಾಡಿದ್ದು ಇತಿಹಾಸದ ದಾಖಲೆ ಆಗಿದೆ.     ಬದರಿನಾರಾಯಣರ ಬೇಟಿ ಮಾಡಿ ಅವರು ಅಧ್ಯಕ್ಷರಾಗಿದ್ದ ಶಿವಮೊಗ್ಗದ ಡಿವಿಎಸ್ ಶಿಕ್ಷಣ ಸಂಸ್ಥೆಗೆ ಕರೆದಿರುವ ಕನ್ನಡ ಅಧ್ಯಾಪಕ ಹುದ್ದೆಗೆ ಅರ್ಜಿ ಹಾಕಿದ್ದ ಶಿವಮೊಗ್ಗ ಮುನೀರ್ ಅವರಿಗೆ ಶಿಪಾರಸ್ಸು ಮಾಡಲು ಖ್ಯಾತ ಉದ್ಯಮಿ, ಕನ್ನಡ ಬಾಷಾ ಸಾಹಿತ್ಯ ಪೋಷಕರಾಗಿದ್ದ ಹಿರೇಹಾಳ್ ಇಬ್ರಾಹಿಂ ಸಾಹೇಬರು ಮತ್ತು ಆಗಿನ ಜಿಲ್ಲಾ ಕಾಂಗ್ರೇಸ್ ಮುಖಂಡರಾದ ಗುಲಾಂಅಭೀದರು ಮುನೀರ್ ಅವರನ್ನು ಕ...

Blog number 1141.ತ್ರೀಡಿ ಟೆಕ್ನಾಲಜಿ ಎಂಬ ಹೊಸ ಅವಿಷ್ಕಾರದಿಂದ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವರ ಮಿನಿಯೇಚರ್ ವಿಗ್ರಹಗಳ ತಯಾರಿಯ ಪ್ರಯತ್ನ. ಈ ಸ್ಕ್ಯಾನರ್ ಬೆಲೆ 50 ಲಕ್ಷ!!

#ಹೊಸ_ತಂತ್ರಜ್ಞಾನದ_3D_ಸ್ಕ್ಯಾನಿಂಗ್_ಪ್ರಿಂಟಿಂಗ್_ಮೌಲ್ಡಿಂಗ್. #ನಮ್ಮೂರ_ವರಸಿದ್ದಿ_ವಿನಾಯಕ_ದೇವಸ್ಥಾನದಲ್ಲಿ #ದೇವರ_ವಿಗ್ರಹದ_ಯಥಾವತ್ತಾದ_ನಾಲ್ಕು_ಇಂಚಿನ_ಗಾತ್ರದ_ವಿಗ್ರಹ_ತಯಾರಿಗಾಗಿ. #ಈ_ತಂತ್ರಜ್ಞಾನದಿಂದ_ವೈದ್ಯಕೀಯ_ಕ್ಷೇತ್ರ_ಆಟೋಮೊಬೈಲ್_ಕ್ಷೇತ್ರದಲ್ಲಿ_ಹೊಸ_ಶಕೆ_ಪ್ರಾರಂಭ. #ಭಾರತದಲ್ಲಿ_ಬೆರಳೆಣಿಕೆಯಷ್ಟು_ಸಂಸ್ಥೆಗಳಿದೆ_ಅದರಲ್ಲಿ_ಈ_ಆಕೃತಿ_3D_ನಂಬರ್_ಒನ್_ಸಂಸ್ಥೆ.     ನಮಗೆ ಡಿಪ್ಲೋಮದ ಮೊದಲ ವರ್ಷ ಡ್ರಾಯಿಂಗ್ ಕ್ಲಾಸ್ ಇತ್ತು, ಅದರಲ್ಲಿ 3D ಡ್ರಾಯಿಂಗ್ ಮಾಡುವುದು ಕಷ್ಟಕರ ಅಂತ ಸಾಗರದ ಸಂಜಯ್ ಮೆಮೊರಿಯಲ್ ಪಾಲಿಟೆಕ್ನಿಕ್ ನ ಡ್ರಾಯಿಂಗ್ ಮಾಸ್ಟರ್ ಜೋಷಿ ಹೇಳುತ್ತಿದ್ದರು.   ಆದರೆ ಅದು ನನಗೆ ಮಾತ್ರ ಸುಲಭವಾಗಿತ್ತು ಆಗಿನ ವಾಷಿ೯ಕ ಪರೀಕ್ಷೆಯಲ್ಲಿ 3D ಡ್ರಾಯಿಂಗ್ ಗೆ 45 ಅಂಕ ಇಟ್ಟಿದ್ದರಿಂದ ನಾನು ಅದನ್ನೆ ಬಿಡಿಸಲು ಪ್ರಾರಂಬಿಸಿದ್ದೆ.    ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಇಡೀ ಕೊಠಡಿಯಲ್ಲಿ ನಾನೊಬ್ಬನೆ ಮಾತ್ರ ಇದನ್ನು ಬಿಡಿಸುತ್ತಿರುವುದು ನೋಡಿ ಅನುಮಾನದಿಂದ ಪ್ರಶ್ನಿಸಿದರು ಆಗ ನಾನು ಪ್ರಶ್ನೆ ಪತ್ರಿಕೆಯ ತೋರಿಸಿದೆ.    ಆದರೆ ಅವರಿಗೆ ಅನುಮಾನ ಉಂಟಾಯಿತು ಈ ವಿದ್ಯಾರ್ಥಿ ತಪ್ಪಾಗಿ ಬರೆದು ಪೇಲ್ ಆದಾನೆಂಬ ಸದುದ್ದೇಶದಿಂದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ ತಕ್ಷಣ ನಮ್ಮ ಜೋಷಿ ಮಾಸ್ಟರ್ ನ್ನೇ ಕಳಿಸಿದ್ದಾರೆ ಅವರು.    ತುಂಬಾ ಗಡಿಬಿಡಿ...

Blog number 1140. ಶಿವಮೊಗ್ಗ ಮುನೀರ್ ನೆನಪಿನ ಸರಣಿ-4. ಸಹ್ಯಾದ್ರಿ ಕಾಲೇಜಿನಲ್ಲಿ ನಿತ್ಯೋತ್ಸವ ಕವಿ ನಿಸಾರ್ ಆಹಮದ್ ಗುರುಗಳಾಗಿದ್ದು, ಬೆಂಗಳೂರಲ್ಲಿ ಬಿ.ವಿ.ಕಾರಂತರ ನಿರ್ಧೇಶನದಲ್ಲಿ ಪ್ರದರ್ಶನ ಕಂಡ ಹಯವದನ ನಾಟಕದ ಪ್ರಾಯೋಜಕತ್ವ ಶಿವಮೊಗ್ಗದ ಕನ್ನಡಾಭಿಮಾನಿ, ಸಾಹಿತ್ಯ ಪೋಷಕ, ಉದ್ಯಮಿ ಹಿರೇಹಾಳ್ ಇಬ್ರಾಹಿಂ ಸಾಹೇಬರಿಂದ ಅವತ್ತೆ ಇಬ್ರಾಹಿಂ ಸಾಹೇಬರ ಪರಿಚಯ ಮುಂದೆ 45 ವರ್ಷ ಮುಂದುವರಿದ ಕಥೆ.

#ಶಿವಮೊಗ್ಗ_ಮುನೀರ್_ನೆನಪಿನ_ಸರಳಿ_4. #ನಿತ್ಯೋತ್ಸವದ_ನಿಸಾರ್_ಆಹಮದ್_ಗುರುಗಳು #ಅವರ_ಶಿಪಾರಸ್ಸಿನಿಂದ_ಹೆಚ್_ಇಬ್ರಾಹಿಂ_ಸಾ೦ಗತ್ಯ #ನಲವತೈದು_ವರ್ಷಗಳ_ಕಾಲ_ಅವರ_ಸಾಹಿತ್ಯ_ರಾಯಭಾರಿ. #ಕುವೆಂಪು_ಬರೆದ_ರಕ್ತಾಕ್ಷಿ_ನಾಟಕ_ಶೇಕ್ಸಪೀಯರ್_ಆದಾರಿತ_ಕೆಳದಿ_ವಂಶಸ್ಥರದ್ದು. #ನಾಟಕ_ಪೂರ್ತಿ_ನೋಡಿದ_ಕುವೆಂಪು.    ಶಿವಮೊಗ್ಗ ಮುನೀರ್ ಎಲೆಯ ಮರೆಯ ಕಾಯಿಯಂತೆ ಕನ್ನಡ ಸಾಹಿತ್ಯ ಲೋಕದ ರಾಯಭಾರಿಗಳು ಆದರೆ ಅವರು ಶಿವಮೊಗ್ಗದ ಉಧ್ಯಮಿ ಹಿರೇಹಾಳ್ ಇಬ್ರಾಹಿಂ ಸಾಹೇಬರ ಸಾಹಿತ್ಯದ ರಾಯಬಾರಿ ಆಗಿ ಮಾತ್ರ ನೋಡಿದರೆ ತಪ್ಪಾಗುತ್ತದೆ.   ಸಹ್ಯಾದ್ರಿ ಕಾಲೇಜಿನಲ್ಲಿ ಕವಿ ನಿತ್ಯೋತ್ಸವದ ಖ್ಯಾತಿಯ ನಿಸಾರ್ ಆಹಮದ್ ಶಿವಮೊಗ್ಗ ಮುನೀರರ ಗುರುಗಳು.   ಇವರಿಂದಲೇ ಖ್ಯಾತ ಉದ್ಯಮಿ ಕನ್ನಡ ಸಾಹಿತ್ಯದ ಪೋಷಕರಾದ ಹಿರೇಹಾಳ್ ಇಬ್ರಾಹಿಂ ಅವರ ಪರಿಚಯ, ಇದು 1972 ರಲ್ಲಿ ಪ್ರಾರಂಭವಾಗಿ ಅವರ ಅ0ತ್ಯ ಕಾಲ 2017ರ ವರೆಗೆ ಸುಮಾರು 45 ವರ್ಷದಷ್ಟು ದೀರ್ಘಕಾಲ ಮುಂದುವರಿದಿತ್ತು.   ಬೆಂಗಳೂರಿನಲ್ಲಿ ಗಿರೀಶ್ ಕಾರ್ನಾಡ್ ರು ಬರೆದ ನಾಟಕ ಬಿ.ವಿ.ಕಾರಂತರ ನಿರ್ದೇಶನದಲ್ಲಿ ರಂಗ ಪ್ರದರ್ಶನ ಮಾಡಿದ ಹಯವದನ ನಾಟಕಕ್ಕೆ  ಹಿರೇಹಾಳ್ ಇಬ್ರಾಹಿಂ ಸಾಹೇಬರು ಪ್ರಾಯಾಜೊಕತ್ವದಲ್ಲಿ ನಡೆದಾಗ ಇವರ ಮೊದಲ ಬೇಟಿ.   ಶಿವಮೊಗ್ಗ ಮುನೀರ್ ಮೈಸೂರಲ್ಲಿ ಪಿಯುಸಿ ...

Blog number 1139. ಆನಂದಪುರಂ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದ ರಥೋತ್ಸವ 25 -ಜನವರಿ -2023 ಬುಧವಾರ ನಡೆಯಲಿದೆ, ಈ ಬಾರಿಯ ವಿಶೇಷ ವಿಶ್ವವ್ಯಾಪಿ ಗಣಪತಿ ಪ್ರದರ್ಶನದ ಖ್ಯಾತ ಕಲಾವಿದ ಗೋವರ್ದನ ಅಂಕೋಲೆಕರ್ ಅವರಿಂದ ದೃಷ್ಟಿ ಗಣಪತಿ ರಂಗೋಲೆ ಪ್ರದರ್ಶನ.

https://youtu.be/_pM0rJxk-qw #ದೃಷ್ಟಿ_ಗಣಪತಿ_ರಂಗೋಲೆ #ನಮ್ಮೂರ_ಶ್ರೀವರಸಿದ್ಧಿ_ವಿನಾಯಕ_ಸ್ವಾಮಿ_ದೇವಾಲಯದ_ರಥೋತ್ಸವದಲ್ಲಿ #ವಿಶ್ವವ್ಯಾಪಿ_ಗಣಪತಿ_ಪ್ರಸಿದ್ದಿಯ_ಗೋವರ್ದನ_ಅಂಕೋಲೆಕರ್_ಅವರಿಂದ. #ದೃಷ್ಟಿ_ಗಣಪತಿ_ಆರಾದನೆಯ_ಒಳಿತುಗಳು . #ದಿನಾಂಕ_25_ಜನವರಿ_2023_ಬುದವಾರ_ರಥೋತ್ಸವ.     ನಮ್ಮ ಊರಿನ ಶ್ರೀವರ ಸಿದ್ಧಿವಿನಾಯಕ ಸ್ವಾಮಿ ದೇವಾಲಯದ 17ನೇ ವಷ೯ದ ಬ್ರಹ್ಮ ರಥೋತ್ಸವ ಮುಂದಿನ ತಿಂಗಳು ಅಂದರೆ ದಿನಾಂಕ 25- ಜನವರಿ -2023ರ ಬುಧವಾರ ನಡೆಯಲಿದೆ.    ಈ ಸಾರಿಯ ವಿಶೇಷ ಅಂದರೆ ವಿಶ್ವವ್ಯಾಪಿ ಗಣೇಶ ಪ್ರದರ್ಶನದ ಪ್ರಖ್ಯಾತಿ ಪಡೆದ ಗೋವರ್ದನ ಅಂಕೋಲೆಕರ್ ಅವರಿಂದ ದೇವಾಲಯದಲ್ಲಿ #ದೃಷ್ಟಿ_ಗಣಪತಿ_ರಂಗೋಲಿ_ಪ್ರದರ್ಶನ ಏರ್ಪಡಿಸಲಾಗಿದೆ.    ದೃಷ್ಟಿಗಣಪತಿಯ ವಿಶೇಷ ಏನು? ಈ ಬಗ್ಗೆ ಸ್ವತಃ ಗೋವರ್ದನ ಅಂಕೋಲೆಕರ್ ವಿವರಿಸಿದ್ದಾರೆ, ದೃಷ್ಟಿ ಗಣಪತಿ ರಂಗೋಲಿಯನ್ನು ದರ್ಶನ ಮಾಡಿ ಪ್ರದಕ್ಷಿಣೆ ಮಾಡಿ ನಮಿಸಿದರೆ ದೃಷ್ಟಿ ದೋಷ, ಗೃಹ ದೋಷ ಮತ್ತು ವಾಸ್ತು ದೋಷ ಪರಿಹಾರ ಆಗುತ್ತದೆ೦ದು ಆಸ್ತಿಕ ವರ್ಗದಲ್ಲಿ ಇರುವ ನಂಬಿಕೆ.   ದೃಷ್ಟಿಗಣಪತಿಯ ರಂಗೋಲಿ ಹಾಕಲು ಸ್ಥಳಿಯ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ ಗೋವರ್ದನ ಅಂಕೋಲೆಕರ್.

Blog number 1138. ನಿನಾಸಮ್ ಸಹಯೋಗದಲ್ಲಿ ಸಾಗರ ತಾಲ್ಲೂಕ್ ಪೋಟೋಗ್ರಾಪಿಕ್ ಸೊಸೈಟಿ ಹಮ್ಮಿಕೊಂಡಿದ್ದ ಕಲಾತ್ಮಕ ಛಾಯಾಗ್ರಹಣ ಕಮ್ಮಟದಲ್ಲಿ ಆನಂದಪುರಂ ಚಂಪಕ ಸರಸ್ಸುವಿನಲ್ಲಿ ಕತ್ತಲ ರಾತ್ರಿಯಲ್ಲಿ ಲೈಟ್ ಪೋಟೋಗ್ರಾಪಿ ಪ್ರಾತ್ಯಕ್ಷಿತೆ.

#ಚಂಪಕ_ಸರಸ್ಸುವಿನಲ್ಲಿ_ನೀನಾಸಮ್_ಸಹಯೋಗದಲ್ಲಿ #ಸಾಗರ_ಪೋಟೋಗ್ರಾಪಿಕ್_ಸೊಸೈಟಿಯಿಂದ_40_ಶಿಭಿರಾರ್ಥಿಗಳಿಂದ #ಲೈಟ್_ಪೋಟೋಗ್ರಾಪಿ_ಪ್ರಾತ್ಯಕ್ಷಿತೆ. #ದೇವರ_ಕಣ್ಣು_ಸಿನಿಮಾ_1975ರಲ್ಲಿ_ಚಂಪಕ_ಸರಸ್ಸುವಿನಲ್ಲಿ_ರಾತ್ರಿ_ಲೈಟಿನಲ್ಲಿ_ಶೂಟಿಂಗ್_ನಂತರ #ಇದು_ಮೊದಲ_ರಾತ್ರಿ_ಲೈಟಿನ_ಪ್ರೋಟೋಗ್ರಪಿ,     ಆನಂದಪುರಂನಲ್ಲಿರುವ ತಾಜ್ ಮಹಲಿಗಿಂತ ಮೊದಲೇ ನಿರ್ಮಾಣವಾಗಿರುವ ಪ್ರೇಮ ಸೌಧ ಚಂಪಕ ಸರಸ್ಸು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರ೦ತ ಪ್ರೇಮದ ಸ್ಮಾರಕ.     1975ರಲ್ಲಿ ಖ್ಯಾತ ನಿರ್ದೇಶಕ ವೈ.ಆರ್ ಸ್ಟಾಮಿ ಅವರು ಲೋಕೇಶ್, ಅನಂತನಾಗ್, ಆರತಿ ಮತ್ತಿತರ ಸಿನಿಮಾ ತಾರಾಗಣದಲ್ಲಿ #ದೇವರ_ಕಣ್ಣು ಎಂಬ ಚಲನ ಚಿತ್ರ ಆನಂದಪುರಂನಲ್ಲಿ ಚಿತ್ರಿಕರಿಸಿದ್ದರು.   ಈ ಚಿತ್ರದಲ್ಲಿನ ಓ ... ಇನಿಯಾ ... ನೀ... ಎಲ್ಲಿರುವೆ ಎಂಬ ಹಾಡು ಕೆಲವು ದಿನ ರಾತ್ರಿ ಈ ಚಂಪಕ ಸರಸ್ಸುವಿನಲ್ಲಿ ಚಿತ್ರಿಕರಿಸಿದ್ದರು.    ನಂತರ ಅಂದರೆ ನಿನ್ನೆ 23-ಡಿಸೆಂಬರ್ -2022ರ ರಾತ್ರಿ ಇಲ್ಲಿ ಸಾಗರ ಪೋಟೋಗ್ರಾಪಿಕ್ ಸೊಸೈಟಿ ಹೆಗ್ಗೋಡಿನ ನೀನಾಸಂ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕಲಾತ್ಮಕ ಛಾಯಾಗ್ರಹಣ ಕಮ್ಮಟದ ಅಂಗವಾಗಿ ಭಾಗವಹಿಸಿರುವ 40 ಶಿಭಿರಾರ್ಥಿಗಳಿಗಾಗಿ ಲೈಟ್ ಪೋಟೋಗ್ರಾಪಿ ಪ್ರಾತ್ಯಕ್ಷಿತೆಯನ್ನು ಆನ೦ದಪುರಂನ ಚಂಪಕ ಸರಸ್ಸುವ...