Skip to main content

Posts

Blog number 868. ಪ್ರಸಕ್ತ ಅದ್ಭುತ ಹಾಡುಗಾರ ಶಿವಾರ ಉಮೇಶ್ ಬರುತ್ತಾರೆಂದರೆ ಜನಸಾಗರ, ನಾಡಿನ ಕವಿಗಳ ಕವನ ಕಾವ್ಯಕ್ಕೆ ಇವರ ಧ್ವನಿ ಮತ್ತು ಇವರೇ ಸ್ಥಳದಲ್ಲಿ ರಚಿಸಿ ಹಾಡುವ ಹಾಡಿಗೆ ಇಡೀ ಸಭೆಯೆ ಮಂತ್ರ ಮುಗ್ದವಾಗುವ ಪರಿಯೇ

#ಮಂಡ್ಯದ_ಶಿವಾರದ_ಉಮೇಶ್_ದ್ವನಿ #ಅದ್ಬುತ_ಹಾಡುಗಾರ #ಒಮ್ಮೆ_ಕೇಳಿದರೆ_ಮತ್ತೆ_ಕೇಳಬೇಕೆಂಬ_ಧ್ವನಿ.      ಶಿವಾರ ಉಮೇಶ್ ಮಂಡ್ಯ ತಾಲ್ಲೂಕಿನ ಶಿವಾರದವರು, ಇವರ ಹೊನ್ನ ಕರ್ಣಿಕ ಸಾಂಸ್ಕೃತಿಕ ಟ್ರಸ್ಟ್ ತುಂಬಾ ಪ್ರಖ್ಯಾತವಾಗಿದೆ ಇವರ ತಂಡಕ್ಕೆ ಈಗ ಬಹು ಬೇಡಿಕೆ.   ಇವರ ದ್ವನಿಯೇ ಜೀವಾಳ, ಕನ್ನಡದ ಬಾವಗೀತೆ - ಜನಪದ ಗೀತೆ - ಭಕ್ತಿ ಗೀತೆ ಅಷ್ಟೇಕೆ ನಾಡಿನ ಎಲ್ಲಾ ಕವಿಗಳ ಕಾವ್ಯ - ಕವನಗಳೂ ಇವರ ಧ್ವನಿಯಲ್ಲಿ ಇಂಪಾದ ಹಾಡಾಗುತ್ತದೆ.   ಇವರ ಕಾರ್ಯಕ್ರಮ ಇದೆ ಅಂದರೆ ಹತ್ತಾರು ಕಿಮಿ ನಿಂದ ಸಾವಿರಾರು ಜನರು ಬಂದು ಸೇರುತ್ತಾರೆ, ಇವರ ಕಾರ್ಯಕ್ರಮ ಮುಕ್ತಾಯ ಮಾಡಲು ಬಿಡುವುದಿಲ್ಲ ಇಡೀ ಸಭೆ ಮಂತ್ರಮುಗ್ಧ ಮಾಡಿಸುವ ಶಿವಾರ ಉಮೇಶರಿಗೆ ಉಮೇಶರೇ ಸಾಟಿ.   ಇವರ ಧ್ವನಿಗೆ ಸಂಗೀತ ಉಪಕರಣಗಳೂ ಇದ್ದರೂ ಇವರ ಧ್ವನಿಗೆ ಜನ ಮರಳು ಆಗುತ್ತಾರೆ, ಇವರು ಹೋಗುವ ಊರು ಅಲ್ಲಿನ ವ್ಯಕ್ತಿ ಸಭೆ ಎಲ್ಲಾ ಸೇರಿಸಿ ಸ್ಥಳದಲ್ಲೆ ಇವರೇ ಕಟ್ಟಿ ಹಾಡುವ ಹಾಡಿಗೆ ತಲೆದೂಗುವ ಜನರ ನೋಡಬೇಕು.   ಈಗಾಗಲೇ ತುಂಬಾ ಬೇಡಿಕೆಯ ಹಾಡುಗಾರರಾದ ಈ ಮಣ್ಣಿನ ದೇಶಿ ಹಾಡುಗಾರ ಮುಂದಿನ ದಿನದಲ್ಲಿ ರಾಜ್ಯದ ಇನ್ನೊಬ್ಬ ಅಶ್ವಥ್ ಆಗುವುದು ಶಥ ಸಿದ್ಧ.

Blog number 867, ತೂಕ ಮಿತಿ ಮೀರಿದೆ, ಡಯಾಬಿಟಿಕ್ ಅನಿಯಂತ್ರಿತ, ಬಿಪಿ ನಿಯಂತ್ರಣ ತಪ್ಪಿದೆ ಮತ್ತು ಜೀವನೋತ್ಸವ ಕಳೆದುಕೊಂಡಿರುವವರಿಗಾಗಿ ನನ್ನ ಸ್ವಂತ ಜೀವನ ಪ್ರಯೋಗ ಒಂದು ಸ್ಪೂರ್ತಿ ಆಗಲಿ ಎಂಬ ಹಂಬಲ ನನ್ನದು.

Blog number 866.ಗೋರಕನಾಥಪುರದ ಯೋಗಿ ಆದಿತ್ಯನಾಥರ ಸುಪರ್ದಿಯ ಕುಂದಾಪುರ ಸಮೀಪದ ಸಿದ್ದಾಪುರದ ಎಡಮೊಗೆಯ ಹಲವಾರಿ ಮಠದ ಗುರುಗಳಾಗಿದ್ದ ಸೋಮನಾಥ ಪೀರ್ ಬಾವೋಜಿ ಮಧ್ಯ ಪ್ರದೇಶದ ಗ್ವಾಲಿಯರ್ ನವರು

#ಸೋಮನಾಥಪೀರ್_ಬಾವೋಜಿ_ಹಲವಾರಿ_ಮಠಾದೀಶರ_ನೆನಪು #ಗೊರಕನಾಥಪುರದ_ಯೋಗಿ_ಆದಿತ್ಯನಾಥರ_ಸುಪರ್ದಿಯ_ಕರ್ನಾಟಕದ_ನಾಥಪಂಥದ_ಮಠ #1978ರಲ್ಲಿ_ಸಾಗರಕ್ಕೆ_ಬಂದ_ಬಾರಾಪಂಥ_ಯಾತ್ರೆ_ನೋಡಿದ್ದೆ #ಆ_ಯಾತ್ರೆಯಲ್ಲಿ_ಬಂದವರೇ_ಸೋಮನಾಥ_ಪೀರ್_ಬಾವೋಜಿ.  ಸೋಮನಾಥ ಜೀ ಮೂಲ ಗ್ವಾಲಿಯರ್ (ಮಧ್ಯ ಪ್ರದೇಶ) ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥ ಮಠದಲ್ಲಿ ಮಠಾದೀಶರಾಗಿದ್ದರು.   ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ  ಉತ್ತರ ಪ್ರದೇಶದ ಗೋ ರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ.     ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕುಂಬ ಮೇಳದ ನಂತರ ಹೊರಡುವ ಬಾರಾ ಪಂಥ ಜೋ೦ಡಿ ಪಾದಯಾತ್ರೆ ಇಲ್ಲಿ ಬಂದು ತಂಗುತ್ತದೆ, ಆಗ ಮಹಾಂತರ ಸಮಿತಿ ಕಳೆದ 12 ವಷ೯ದ ಆಡಳಿತ, ಪೂಜೆ ಇತ್ಯಾದಿ ತಮ್ಮದೆ ಆದ ಮಾನದಂಡದಲ್ಲಿ ಪರಿಶೀಲನೆ ಮಾಡುತ್ತಾರೆ ಆದರಲ್ಲಿ ತೃಪ್ತಿ ಆದರೆ ಹಾಲಿ ಇರುವ ಸ್ವಾಮೀಜಿ ಮುಂದುವರಿಸುತ್ತಾರೆ. ಆಗದಿದ್ದರೆ ತಮ್ಮ ಜೊತೆ ಬಂದ ಯೋಗಿ ಒಬ್ಬರನ್ನ ಅಲ್ಲಿಗೆ ನೇಮಿಸಿ ಮೊದಲಿದ್ದವರನ್ನ ತಮ್ಮ ಜೊತೆ ಮಂಗಳೂರಿನ ಕದ್ರಿ ಮಠಕ್ಕೆ ಕರೆದೊಯ್ಯುತ್ತಾರೆ.    1978ರಲ್ಲಿ ಬಂದ ಜೋ೦ಡಿಯಾತ್ರೆಯಲ್ಲಿ ಶ್ರೀ ಸೋಮನಾಥಜಿ ಇಲ್ಲಿಗೆ ಬಂದವರು, ಆಗ ಸಾಗರದಲ್ಲಿ...

Blog number 865. ವಿಜ್ಞಾನಿಗಳಲ್ಲಿ ಮತ್ತು ಸಂಶೋದಕರಲ್ಲಿರುವ ಮಾನವೀಯತೆ ಕಳಕಳಿಯ ವೈದ್ಯ ಸಹೋದರರಾದ ಡಾಕ್ಟರ್ ಪ್ರೀತಂ ಮತ್ತು ಡಾಕ್ಟರ್ ಚೇತನ್ ರಿಗೆ ಇವರ ತಂದೆ ಜನಪ್ರಿಯ ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದ ಡಾಕ್ಟರ್ ಈಶ್ವರಪ್ಪರ ಪ್ರಭಾವ ಕಾರಣ ಆದ್ದರಿಂದ ಈಗಿನ ಪೈಪೋಟಿ ವೈದ್ಯಕೀಯ ಉದ್ಯೋಗದ ವ್ಯಾಪಾರಿ ಮನೋಭಾವಕ್ಕೆ ಹೊರತಾಗಿದ್ದಾರೆ.

#ಶಿವಮೊಗ್ಗ_ಜಿಲ್ಲೆಯ_ಡಯಾಬಿಟೀಸ್_ನವರಿಗೆ_ಶುಭಸುದ್ದಿ. #ಶಿವಮೊಗ್ಗದಲ್ಲಿ_ಡಯಾಬಿಟೀಸ್_ರಿವಸ೯ಲ್_ಅಭಿಯಾನ #ಶಿವಮೊಗ್ಗದ_ಐಲೆಟ್ಸ್_ಹಾಸ್ಪಿಟಲ್_ಡಾಕ್ಟರ್_ಪ್ರೀತಂರಿಂದ #ಸಂಪೂರ್ಣ_ಡಯಾಬಿಟೀಸ್_ನಿಂದ_ಮುಕ್ತರಾಗುವ_ಅವಕಾಶ.   ನನಗೆ 2009ರಲ್ಲಿ ಡಯಾಬಿಟೀಸ್ ನನ್ನ 44 ನೇ ವರ್ಷದಲ್ಲಿ ಪ್ರಾರಂಭ ಆಗಿತ್ತು ಆಗ ಡಾ.ನಾಗೇಂದ್ರ (ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಮಾಲಿಕರು) ಮಾಗ೯ದರ್ಶನದಲ್ಲಿ ಡಾ.ಪ್ರೀತಂ ನನಗೆ ಡಯಾಬಿಟಿಕ್ ಚಿಕಿತ್ಸೆ ಪ್ರಾರಂಬಿಸಿದರು ಅವತ್ತಿನಿಂದಲೇ ಡಾ. ಪ್ರೀತಂ ಪರಿಚಿತರು.   ಇವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮೂಲದವರು ಇವರ ತಂದೆ ಡಾ.ಬಿ.ಈಶ್ವರಪ್ಪನವರು ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಊರಲ್ಲೆಲ್ಲಾ ಜನಪ್ರಿಯ ಡಾಕ್ಟರ್ ಆದವರು, ಇವರು ಮನಸ್ಸು ಮಾಡಿದ್ದರೆ ರಾಮಕೃಷ್ಣ ಹೆಗ್ಗಡೆ ಸರ್ಕಾರದಲ್ಲಿ ಮಂತ್ರಿ ಆಗಿರುತ್ತಿದ್ದರು.   ಬಳ್ಳಾರಿ ಜಿಲ್ಲೆಯ ವಿದಾನ ಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ವರ್ದಿಸುವ ಅವಕಾಶ ಡಾ. ಈಶ್ವರಪ್ಪರು ತಿರಸ್ಕರಿಸಿದ್ದು ಇತಿಹಾಸ.ಇವರು ನಿವೃತ್ತರಾದ ಮೇಲೂ ಶಿವಮೊಗ್ಗದ ಜೈಲ್ ರಸ್ತೆಯಲ್ಲಿನ ಇವರ ಕ್ಲೀನಿಕ್ ಬಡವರಿಗೆ ಜನಸಾಮಾನ್ಯರಿಗೆ ಅತ್ಯಾಪ್ತ ಚಿಕಿತ್ಸಾಲಯ ಆಗಿತ್ತು, ಕಳೆದ ವರ್ಷ (21-5-2021) ಇಹಲೋಕ ತ್ಯಜಿಸಿದ್ದಾರೆ.   ಇವರ ಮೊದಲ ಪುತ್ರ #ಡಾ_ಚೇತನ್_ಬಿ. ಶಿವಮೊಗ್ಗದ ತಿಲಕ್‌ನಗರದ ದರ್ಗಾ ಕಾಂಪ್ಲೆಕ್ಸ್ ನ...

Blog number 864. ಕನಾ೯ಟಕದ ಉಡುಪಿ ಜಿಲ್ಲೆಯ ಸಮಾಜವಾದಿ ಹೋರಾಟಗಾರ ಅನಿಲ್ ಹೆಗಡೆಯವರನ್ನು ಬಿಹಾರದಿಂದ ರಾಜ್ಯಸಭೆಗೆ ಕಳಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ ಅಭಿನಂದನೆಗಳು

#ಬೆಳಿಗ್ಗೆ_ಜಾರ್ಜ್_ಪನಾ೯೦ಡೀಸರ_ಉಲ್ಲೇಖಿಸಿ_ಪೋಸ್ಟ್_ಬರದ_ಸ್ವಲ್ಪ_ಸಮಯದಲ್ಲಿ #ಬೆಂಗಳೂರಿನ_ದಿವಾಕರ_ವಕೀಲರು_ಅನಿಲ್_ಹೆಗ್ಗಡೆ_ಬಿಹಾರದಿಂದ #ರಾಜ್ಯಸಬೆಗೆ_ನಾಮ_ಪತ್ರ_ಸಲ್ಲಿಸಿದ_ಸುದ್ದಿ_ತಿಳಿಸಿದರು. #ಪ್ರಚಾರ_ಅಧಿಕಾರ_ಬಯಸದ_ಸಂತನಂತ_ಬ್ರಹ್ಮಚಾರಿ_ಅನಿಲ್_ಹೆಗ್ಗಡೆ . #ಜಾಜ್೯_ಪರ್ನಾಂಡೀಸರ_ಜೊತೆ_ಕೊನೆಯವರೆಗೆ_ಅವರ_ಮನೆಯಲ್ಲೇ_ಇದ್ದವರು. #ಉಡುಪಿ_ಜಿಲ್ಲೆಯ_ಅನಿಲ್_ಹೆಗ್ಗಡೆ_ಬಿಹಾರದಿಂದ_ರಾಜ್ಯಸಬೆಗೆ_ಆಯ್ಕೆ_ಮಾಡುತ್ತಿರುವ_ಮುಖ್ಯಮಂತ್ರಿ_ನಿತೀಶ್_ಕುಮಾರ್. #ಸಾಮಾನ್ಯವಾಗಿ_ರಾಜ್ಯಸಬೆ_ಸೀಟು_ಮಾರಾಟವಾಗುವ_ಈ_ಕಾಲದಲ್ಲಿ.     ಬೆಳಿಗ್ಗೆ ಬೆಂಗಳೂರಿನ ಪ್ರಸಿದ್ದ ವಕೀಲರಾದ ದಿವಾಕರ್ (ಈಗ ಆಮ್ ಆದ್ಮಿ ಸೇರಿದ್ದಾರೆ ಮೊದಲು ಮುಖ್ಯಮಂತ್ರಿ ಯಡೂರಪ್ಪರ ಸಲಹೆಗಾರರಾಗಿದ್ದರು) ಬಿಹಾರದಿಂದ ರಾಜ್ಯಸಭೆಯ ಮದ್ಯಂತರ ಚುನಾವಣೆಗೆ JDU ಪಾರ್ಟಿ ಅನಿಲ್ ಹೆಗ್ಗಡೆಗೆ ಅವಕಾಶ ನೀಡಿದೆ ಇವತ್ತು ನಾಮಪತ್ರ ಸಲ್ಲಿಸಲಿದ್ದಾರೆ ಪಲಿತಾಂಶ ಇದೇ ತಿಂಗಳ 30 ಅಂತ ತಿಳಿಸಿದಾಗ ನನಗೆ ತುಂಬಾ ಸಂತೋಷ ಆಯಿತು.    1999 ರಿಂದ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಮುಖಾಂತರ ದೆಹಲಿಯ ಜಾರ್ಜ್ ಪನಾ೯೦ಡಿಸರ ಮನೇನಲ್ಲಿ ಅನಿಲ್ ಹೆಗಡೆ ಪರಿಚಯ ನಂತರ ಅನೇಕ ಬಾರಿ ದೆಹಲಿಗೆ ಶಿವಮೊಗ್ಗ - ತಾಳಗುಪ್ಪ ರೈಲ್ವೆ  ಬ್ರಾಡ್ ಗೇಜ್ ಕಾಮಗಾರಿ ಒತ್ತಾಯಿಸಿ, ಸಾಗರ ರೈಲು ನಿಲ್ದಾಣ ಡಾ.ರಾಮಮನೋಹರ ಲೋಹಿಯಾ ನಾಮಕರಣ ಒತ್ತಾಯಿಸಿ...

Blog number 863.ಹಣ ಕೊಟ್ಟು ಬಾಡಿಗೆ ಕಾರ್ಯಕರ್ತರ ಸೇರಿಸಿ ನಡೆಸುವ ಬೃಹತ್ ಸಭೆ - ಸಮಾವೇಶ ಇನ್ನು ಪ್ರಸ್ತುತವೇ?

#ಸಾರ್ವಜನಿಕ_ಸಬೆ_ಬೃಹತ್_ಸಮಾವೇಷಗಳು_ಈಗಿನ_ಕಾಲಕ್ಕೂ_ಪ್ರಸ್ತುತವೇ? #ಇದರ_ಹಣದ_ಮೂಲ_ಯಾವುದು? #ಜನ_ಸ್ವಯಂ_ಪ್ರೇರಿತರಾಗಿ_ಸೇರುವ_ಕಾಲ_ಇದಲ್ಲ #ಕೂಲಿ_ಕಾರ್ಯಕರ್ತರ_ಎದರು_ಕೋಣನ_ಮುಂದೆ_ಕಿನ್ನರಿ_ಭಾರಿಸಿದಂತೆ_ಪರಿಣಾಮ_ಶೂನ್ಯ. ಬೇರೆ ದೇಶದಲ್ಲಿ ಟಿಕೇಟ್ ಖರೀದಿಸಿ ಭಾಷಣ ಕೇಳಲು ಸಭೆಗೆ ಹೋಗುತ್ತಾರಂತೆ !? ನಮ್ಮಲ್ಲಿ ಭಾಷಣ ಕೇಳುವವನಿಗೆ ಹಣ ನೀಡಬೇಕು!!   ಜಾರ್ಜ್ ಫರ್ನಾಂಡಿಸರು ಹೇಳಿದ್ದು ಕೇಳಿದ್ದೆ "ನಾನು ಬಿಹಾರದಲ್ಲಿ ಹಳ್ಳಿಗಳಲ್ಲಿ ಸಣ್ಣ ಸಣ್ಣ ಗುಂಪುಗಳ ಜನರ ಜೊತೆ ಚಾರ್ ಪಾಯ್ (ಅಲ್ಲಿನ ಸಂಪ್ರದಾಯಕ ಹಗ್ಗದ ಮಂಚ) ಮೇಲೆ ಕುಳಿತು ಮಾಡುತ್ತಿದ್ದ ಸಭೆ ಪರಿಣಾಮಕಾರಿ ಆಗುತ್ತಿತ್ತು, ನಾನು ಹೇಳುವ ವಿಷಯ ಅವರ ಮೆದುಳಿಗೆ ಹೋಗಿ ದಾಖಲಾಗುತ್ತಿತ್ತು, ಹತ್ತು ಜನರಲ್ಲಿ ಎಂಟು ಜನರಿಗಾದರೂ ತಲುಪಿತ್ತಿತ್ತು ಆದರೆ ಸಾವಿರಾರು ಜನ ಸೇರಿಸುವ ಸಭೆಗಳಲ್ಲಿ ವಿಚಾರ ಯಾರ ತಲೆಗೂ ತಲುಪುವುದಿಲ್ಲ" ಅಂತ. ನಾವೆಲ್ಲ ಸೇರಿ (ಐ.ಎಂ.ಜಯರಾಂ ಶೆಟ್ಟರು, ಹರಿ ಕೋಡೆ) ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ 2004 ರಲ್ಲಿ ಸಂಯುಕ್ತ ಜನತಾದಳ ಮತ್ತು ಕೋಡೆಯವರ ಪಾರ್ಟಿ ಸೇರಿಸಿ ಸಮಾವೇಶ ನಡೆಸುವ ನಮ್ಮ ಉದ್ದೇಶಕ್ಕಾಗಿ ಅವರನ್ನು ಆಹ್ವಾನಿಸುವ ಸಂದರ್ಭದಲ್ಲಿ.   ಇವತ್ತು #ಅರವಿಂದ_ಚೊಕ್ಕಾಡಿ ಯವರ ಪೋಸ್ಟಿನಲ್ಲಿ ಸಭೆ ಸಮಾವೇಷದ ಚರ್ಚೆ ನೋಡಿ ಇದನ್ನು ಬರೆಯುವ ಮನಸ್ಸಾಯಿತು, ಮುಂದಿನ ದಿನದಲ್ಲಿ ಬದಲಾದೀತಾ ಇದು?  ...

Blog number 862, ಪಶ್ಚಿಮ ಘಟ್ಟದ ಜನವಸತಿ ಕೇಂದ್ರಗಳು ವಿಸ್ತಾರವಾದಂತೆ ಒ0ದು ಕಾಲದಲ್ಲಿ ಸಮೃದ್ಧವಾಗಿದ್ದ ಕವಳಿಕಾಯಿ ಪೂದೆಗಳು ಕಣ್ಮರೆ ಆಗಲು ಕಾರಣವೇನು? ನೈಸಗಿ೯ಕವಾಗಿ ದೊರೆಯುವ ಕವಳಿಕಾಯಿ ಮತ್ತು ರಸವತ್ತಾದ ಕಪ್ಪು ದ್ರಾಕ್ಷಿಯಂತ ಕವಳಿ ಹಣ್ಣಿನ ಮೌಲ್ಯವರ್ಧನೆ ಆಗಬೇಕಾಗಿದೆ.

#ಕವಳಿ_ಗಿಡಗಳು_ಈಗ_ಅಪರೂಪ_ಏಕೆ? #ಪರಿಸರ_ಮಾಲಿನ್ಯ_ಇದಕ್ಕೆ_ಕಾರಣವಾ? #ಒಂದು_ಕಾಲದಲ್ಲಿ_ಹಳ್ಳಿಯ_ಸುತ್ತಲು_ಗುಡ್ಡಗಾಡಿನಲ್ಲಿ_ಯಥೇಚ್ಚವಾಗಿದ್ದ_ಕವಳಿ_ಗಿಡ_ಈಗಿಲ್ಲ. #ಕವಳಿಕಾಯಿ_ಖಾದ್ಯ_ದ್ರಾಕ್ಷಿಹಣ್ಣಿನಂತ_ಕವಳಿಕಾಯಿ_ಈಗ_ನೆನಪು_ಮಾತ್ರ. #ಕವಳಿ_ಕಾಯಿ_ಮತ್ತು_ಹಣ್ಣಿನ_ಮೌಲ್ಯವರ್ಧನೆ_ಆಗಬೇಕಾಗಿದೆ.     80-90ರ ದಶಕದಲ್ಲಿ ಉತ್ತರ ಕನ್ನಡದ ಕರಾವಳಿಯ ಸಂತೆಗಳಲ್ಲಿ ಕವಳಿಕಾಯಿ - ಹಣ್ಣು ಮಾರಾಟ ಮಾಡುತ್ತಿದ್ದ ಹಾಲಕ್ಕಿ ಮಹಿಳೆಯರು, ಗೋವಾದಲ್ಲಿ ಇದನ್ನು ಮಾರುವ ಕುಣುಬಿ ಮಹಿಳೆಯರು ಮತ್ತು ಬಯಲು ಸೀಮೆಯಲ್ಲಿ ಲಂಬಾಣಿ ಮಹಿಳೆಯರ ನೋಡಿದಾಗ ನಮಗೆಲ್ಲ ಸೋಜಿಗ ಯಾಕೆಂದರೆ ಆಗಿನ ದಿನದಲ್ಲಿ ನಮ್ಮ ಊರ ಕೊನೆಯ ಮನೆ ದಾಟಿದರೆ ಕವಳಿಕಾಯಿಯ ಸಾವಿರಾರು ಪೊದೆಗಳು ಇದ್ದವು, ಯಾರೂ ಮಾರಾಟ ಮಾಡುತ್ತಿರಲಿಲ್ಲ ಮತ್ತು ಖರೀದಿಸುವವರು ಇರಲಿಲ್ಲ.   ನಾವೆಲ್ಲ ಉಪ್ಪಿನ ಪೊಟ್ಟಣದ ಜೊತೆ ತರಹೇವಾರಿ ಕವಳಿಕಾಯಿ ಜಗಿದು ಚುಳ್ಳನಿಸುವ ದವಡೆ ದಂತದಿಂದ ಸಂಜೆ ಊರಿಗೆ ಬರುತ್ತಿದ್ದೆವು.   ಕವಳಿ ಹಣ್ಣಿನ ಕಾಲದಲ್ಲಿ ಕೇಜಿಗಟ್ಟಲೆ ಕಪ್ಪು ದ್ರಾಕ್ಷಿಯ ತಿನ್ನುತ್ತಾ ಬೇಸಿಗೆ ರಜೆ ಕಳೆಯುತ್ತಿದ್ದೆವು.   ಆದರೆ ಈಗ ಕವಳಿ ಗಿಡ ಯಾಕೆ ನಶಿಸಿದೆ? ಯಾರಿಗೂ ಗೊತ್ತಿಲ್ಲ! ಇದನ್ನು ಬೇರಾವುದೇ ಉದ್ದೇಶಕ್ಕೆ ಬಳಕೆ ಇದ್ದರೆ ಈ ಸಸ್ಯ ನಶಿಸುತ್ತಿದೆ ಅಂತ ಭಾವಿಸಬಹುದಿತ್ತು ಅಂತದ್ದು ಯಾವುದೂ ಇಲ್ಲ ಆದರೆ ಈಗ ಕ...