Skip to main content

Posts

ಪ್ರಕಾಶ್ ಟ್ರಾವೆಲ್ಸ್ ಮಲೆನಾಡಿನಲ್ಲಿ ನೂರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಜನರ ಊಟದ ತಟ್ಟೆಗೆ ಆದಾರವಾಗಿದ್ದ ಸಂಸ್ಥೆ, ಈ ಸಂಸ್ಥೆ ಈ ಮಟ್ಟಕ್ಕೆ ಕಟ್ಟಿದ್ದ ಕನಸುಗಾರ ಪ್ರಕಾಶ್ ದುಡುಕಿನಿಂದ ದುರಂತಕ್ಕೆ ಹೋಗದಿರಲಿ.

#ಕೊರಾನಾ_ವೈರಸ್ನಿ೦ದ_ಸತ್ತವರು_ಲಕ್ಷಾಂತರ_ಜನ #ಕೊರಾನಾ_ಸೃಷ್ಟಿಸಿದ_ಆರ್ಥಿಕ_ಸಂಕಷ್ಟದಿಂದ_ಆಗುತ್ತಿರುವ_ಆತ್ಮಹತ್ಯೆಗಳು_ಲೆಕ್ಕವಿಲ್ಲದಷ್ಟು . #ಇಪ್ಪತ್ತೆರೆಡು_ವರ್ಷದಲ್ಲಿ_ಸಾಗರ_ಕೇಂದ್ರವಾಗಿ_ಸಾರಿಗೆ_ಕ್ಷೇತ್ರದಲ್ಲಿ_ಎತ್ತರೆತ್ತರಕ್ಕೆ_ಏರಿದ್ದ_ಪ್ರಕಾಶ್_ಟ್ರಾವೆಲ್ಸ್ #ನೂರಾರು_ಜನರಿಗೆ_ಉದ್ಯೋಗ_ನೀಡಿದ_ಉದ್ಯಮಿ #ಶುಕ್ರವಾರದಿಂದ_ನಾಪತ್ತೆ!?   2001 ರಿಂದ ಸಾಗರ ಮೂಲ ಕೇಂದ್ರವಾಗಿ ಪ್ರಾರಂಭವಾದ ಪ್ರಕಾಶ್ ಟ್ರಾವೆಲ್ಸ್ ಸಾರ್ವಜನಿಕ ಸಂಪರ್ಕ ಉದ್ಯಮದಲ್ಲಿ ಅಚ್ಚರಿಗೆ ಕಾರಣ ಆಗಿತ್ತು.   ಪ್ರಾರಂಭದಲ್ಲಿ ಪ್ರಕಾಶ್ ಮತ್ತು ಗಂಗರಾಜು ಸಹೋದರರು ಹಾಸನದಿಂದ ಉದ್ಯೋಗ ಹುಡುಕಿ ಬಂದ ಉತ್ಸಾಹಿ ಯುವಕ ಸಹೋದರರ ಜೊತೆ ಅವರ ಸೋದರ ಸಂಬಂದಿ ಅವರ ವಯೋಮಾನದವರೇ ಆದ ಅಣ್ಣಪ್ಪ ಕೂಡ ಸಾಥಿ ಅಗುತ್ತಾರೆ.  ಸಾಗರ -ಸೊರಬ-ಚಿಕ್ಕೆರೂರು ಮಾರ್ಗದ ಗುರುರೇಣುಕಾ ಬಸ್ ನಿಂದ ಪ್ರಾರಂಭ ಆದ ಇವರ ಜೀವನ ಪ್ರಯಾಣ 2020 - ಮಾರ್ಚ್ -24ರ ಸಂಜೆ ಪ್ರದಾನ ಮಂತ್ರಿಗಳು ದೇಶದಾದ್ಯಂತ ಪ್ರಾರಂಬಿಸಿದ ಲಾಕ್ ಡೌನ್ ವರೆಗೆ ವಿಜೃಂಬಿಸಿತು ಅರ್ದ ಶತಕದಷ್ಟು ಬಸ್ ಗಳು ಅದರಲ್ಲಿ ನೂರಾರು ಸಿಬ್ಬಂದಿ, ಪ್ರತಿ ಊರಲ್ಲಿ ಏಜೆಂಟರರು, ಪ್ರತಿನಿತ್ಯ ಸಾವಿರಾರು ಲೀಟರ್ ಡಿಸೇಲ್ ಖರೀದಿ ಇದರ ಮಧ್ಯೆ ಸಿದ್ದಾಪುರ - ಬೆಂಗಳೂರು, ಸೊರಬ-ಬೆಂಗಳೂರು, ಸಾಗರ - ಬೆಂಗಳೂರು ಹೈಟಿಕ್ ಸ್ಲೀಪರ್ ಬಸ್ ಗಳು, ಮದುವೆ - ಪ್ರವಾಸಕ್ಕಾಗಿ ಪ್ರತ್ಯೇಕ ಬಸ್ ಗಳು ಈ ರೀತಿ #ಪ್ರ...

ಬಿಲಾಲಿ ಬಿಲ್ಲಿ ಅಭ್ಯಂಜನ ಕಥಾ ಸಂಕಲನ ಬಿಡುಗಡೆಯ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪ್ರಕಾಶ್ ಕುಗ್ವೆ ನಮ್ಮೊಡನೆ ಭಾಗವಹಿಸಿದ ನೆನಪು

#ನನ್ನ_ಕಥಾ_ಸಂಕಲನ_ಬಿಡುಗಡೆಯ_ದಿನ_ಕಿರಿಯ_ಮಿತ್ರ_ಪ್ರಕಾಶ್_ಕುಗ್ವೆಗೆ_ಆಹ್ವಾನಿಸಿದ್ದೆ. #ಪ್ರಜಾವಾಣಿ_ಸಂಸ್ಥೆಯಲ್ಲಿ_ಅನೇಕ_ಜಿಲ್ಲಾ_ವರದಿಗಾರರಾಗಿದ್ದರು. #ಮ೦ಗಳೂರಿನ_ಪ್ರಜಾವಾಣಿ_ನ್ಯೂಸ್_ಬ್ಯೂರೋ_ಚೀಪ್_ಆಗಿದ್ದರು. #ಈಗ_ಸಾಗರದಲ್ಲಿ_ಸ್ಯಾನಿಟರಿ_ಮತ್ತು_ಬಾತ್_ವೇರ್_ಶೋರೂಂ_ಮಾಡಿದ್ದಾರೆ #ಸಾಗರದ_ಕುಗ್ವೆಯ_ಪ್ರಗತಿಪರ_ರೈತರರಾದ_ಈಶ್ವರ_ನಾಯಕರ_ಪುತ್ರ.   ಪ್ರತಿಷ್ಟಿತ ಪ್ರಜಾವಾಣಿ ಸಂಸ್ಥೆಯಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಪತ್ರಿಕೆಯ ಕೆಲಸ ಮಾಡಿದ ಸಾಗರದ ಪ್ರಕಾಶ್ ಕುಗ್ವೆ ಹಮ್ಮು ಬಿಮ್ಮುಗಳಿಲ್ಲದ ಸರಳ ಸಾಚಾತನದ ಸಜ್ಜನ ಯುವಕರು.   ಸ್ವಂತ ಉದ್ಯೋಗ ಮಾಡ ಬೇಕು ಹುಟ್ಟಿದ ಊರಲ್ಲಿ ತಂದೆ ತಾಯಿಯ ವೃದ್ಧಾಪ್ಯದಲ್ಲಿ ಅವರೊಡನೆ ಇರಬೇಕೆಂಬ ಯೋಚನೆಯಿಂದ ಮಂಗಳೂರು ಪ್ರಜಾವಾಣಿ ನ್ಯೂಸ್ ಬ್ಯೂರೋ ಚೀಪ್ ಹುದ್ದೆ ನಂತರ ಅದನ್ನು ಬಿಟ್ಟು ಈಗ ಸಾಗರದ ವೀರಶೈವ ಕಲ್ಯಾಣ ಮಂಟಪದ ಎದರು #ಯಶು_ಏಜೆನ್ಸಿಸ್ ಎಂಬ ಅತ್ಯುತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆಕಷ೯ಕ ದರದಲ್ಲಿ ಸ್ಯಾನಿಟರಿ ಮತ್ತು ಬಾತ್ ವೇರ್ ಶೋ ರೂಂ ತೆರೆದಿದ್ದಾರೆ.   ಇವರ ತಂದೆ ಕುಗ್ವೆ ಈಶ್ವರ ನಾಯಕರು ವಿದ್ಯಾವಂತರು, ಸಾಗರದ ಕುಗ್ವೆಯ ಲಾಲ್ ಬಹದ್ದೂರ್ ಕಾಲೇಜ್ ಎದುರು ನಿವಾಸಿ, ಕಾಗೋಡು ತಿಮ್ಮಪ್ಪರ ಆತ್ಮೀಯ ಗೆಳೆಯರು, ಕೃಷಿ ಮತ್ತು ನಿರಂತರ ಓದು ಇವರ ಹವ್ಯಾಸ, ನಾವೆಲ್ಲ ಸಾಗರದ ಯುವ ಕಾಂಗ್ರೇಸ್ ಸಂಘಟನೆ ಸಂದರ್ಭದಲ್ಲಿ ಇವರ ಮನೆಗೆ ಹೋಗುವಾಗ ಪ್ರಕಾಶ್ ಕುಗ್ವೆ ಸ...

ಆನಂದಪುರಂ ಇತಿಹಾಸ ಭಾಗ-70, ಆನಂದಪುರಂ ಮಸೀದಿಗೆ ಕೆಳದಿ ಅರಸರು ಭೂದಾನ ನೀಡಿದ ತಾಮ್ರ ಶಾಸನ.

#ಆನ೦ದಪುರಂ_ಇತಿಹಾಸ_70. #ಆನಂದಪುರಂ_ಖಾದರ್_ಬುಡನ್_ಸಾಬರಲ್ಲಿರುವ_ತಾಮ್ರಪತ್ರ #ಈ_ತಾಮ್ರ_ಪತ್ರದಲ್ಲಿ_ಏನಿದೆ? #ಈಗ_ಈ_ತಾಮ್ರ_ಪತ್ರ_ಎಲ್ಲಿದೆ? #ಈ_ತಾಮ್ರ_ಪತ್ರ_ಆನಂದಪುರಂ_ಮಸೀದಿಗೆ_ಕೆಳದಿ_ರಾಜಾಶ್ರಯ_ಇರುವ_ದಾಖಲೆ. #ರಾಜಾ_ವೆಂಕಟಪ್ಪನಾಯಕರ_ಮೊಮ್ಮೊಗ_ರಾಜ_ವೀರಭದ್ರನಾಯಕರು_ನೀಡಿದ_ಭೂದಾನ #ಆನಂದಪುರಂ_ಮಸೀದಿಗೆ_ಭೂದಾನ_ನೀಡಿದ_ತಾಮ್ರಪತ್ರ 2) ಎಪಿಗ್ರಾಪಿಯ ಕ್ರ.ಸಂ 108. ಕಾಲ ಮಾನ ಕ್ರಿ.ಶ. 1631 AD ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರದ ವಿವರ.   ಕೆಳದಿ ರಾಜ ವೆಂಕಟಪ್ಪ ನಾಯಕರ ಪುತ್ರ ಭದ್ರಪ್ಪ ನಾಯಕ, ಭದ್ರಪ್ಪ ನಾಯಕರ ಪುತ್ರ ವೀರಭದ್ರ ನಾಯಕರು ಕ್ರಿ.ಶ. 1631 ರಲ್ಲಿ ಆನಂದಪುರಂನ ಮಸೀದಿಗೆ ದಾನವಾಗಿ 12 ವರಹ ಜಮೀನು ದಾನವಾಗಿ ನೀಡಿದ ಭೂದಾನ ಪತ್ರ ಈ ತಾಮ್ರ ಶಾಸನ.   ವಿಶೇಷ ಅಂದರೆ ಈ ಶಾಸನದಲ್ಲಿ ಈ ಮಸೀದಿ ಕೆಳದಿ ಅರಸರಿಂದ ನಿಮಿ೯ಸಲ್ಪಟ್ಟದ್ದಾಗಿಯೂ ನಮೂದಿಸಿದ್ದಾರೆ ಮತ್ತು ಮಸೀದಿಯ ದಾರ್ಮಿಕ ಆಚರಣೆಗಾಗಿ ಆನಂದಪುರದ ಸೀಮೆಯ ಮಲವ ಗೊಪ್ಪದಲ್ಲಿ 12 ವರಹಾ ಭೂಮಿ ದಾನ ಕೊಟ್ಟಿದ್ದಾರೆ ಇದರಿಂದ ಕೆಳದಿ ಅರಸರು ಅನ್ಯ ದಮ೯ದವರಿಗೂ ಆಶ್ರಯ ನೀಡಿದವರು ಮತ್ತು ಆನಂದಪುರಂ ಮಸೀದಿಗೆ ಕೆಳದಿ ರಾಜಾಶ್ರಯ ಇತ್ತು ಎಂಬುದು ಇದರಿಂದ ತಿಳಿದು ಬರುತ್ತದೆ.   ಈ ತಾಮ್ರ ಶಾಸನ 1902ರಲ್ಲಿ ಕರ್ನಾಟಕ ಎಪಿಗ್ರಾಫಿಯಾ ದಲ್ಲಿ ದಾಖಲಾಗಿದೆ, ಆಗ ಈ ತಾಮ್ರ ಶಾಸನ ಆನಂದಪುರಂ ನ ಖಾದರ್ ಬುಡನ್ ಸಾಬರಲ್ಲಿತ್...

ಈ ಕಾಕ್ ಟೈಲ್ ಹೆಸರು "ಸ್ಕ್ರೂ ಡ್ರೈವರ್ "!! ಈ ಹೆಸರು ಬರಲು ಕಾರಣ ಕೂಡ ಸ್ವಾರಸ್ಯವಾಗಿದೆ

#ಪ್ರಸಿದ್ದ_ಆಲ್ಕೋಹಾಲ್_ಕಾಕ್_ಟೈಲ್ #ಸ್ಕ್ರೂ_ಡ್ರೈವರ್_ಕಾಕ್_ಟೈಲ್ #ಈ_ಹೆಸರು_ಬರಲು_ಕಾರಣ_ಸ್ವಾರಸ್ಯವಾಗಿದೆ.   ಎರೆಡು ಭಾಗ ಕಿತ್ತಳೆ ಹಣ್ಣಿನ ರಸದೊಂದಿಗೆ ಒಂದು ಭಾಗ  ವೊಡ್ಕಾ ಮಿಶ್ರಣ ಮಾಡುವ ಕಾಕ್ ಟೈಲ್ ಹೆಸರು ಸ್ಕ್ರೂ ಡ್ರೈವರ್ !?.   ಈ ಸ್ಕ್ರೂ ಡ್ರೈವರ್ ಕಾಕ್ ಟೈಲ್ ಹೆಸರು ಬರಲು ಕಾರಣ ಸ್ವಾರಸ್ಯವಾಗಿದೆ.   ಎರಡನೆ ವಿಶ್ವ ಯುದ್ದ ಸಂದರ್ಭದಲ್ಲಿ ಅಮೆರಿಕನ್ ಯೋದರು ಚೀನಾ ಮತ್ತು ಟರ್ಕಿಯಲ್ಲಿದ್ದಾಗ ನ್ಯೂಟ್ರಲ್ ಸ್ಪಿರಿಟನ್ನು ಆರೆಂಜ್ ಜ್ಯೂಸ್ ಗೆ ಮಿಶ್ರಣ ಮಾಡಿ ಕುಡಿಯಲು ಪ್ರಾರಂಬಿಸಿದ್ದರಿಂದ ಈ ಕಾಕ್ ಟೈಲ್ ಬಳಕೆಗೆ ಬಂತು.   ಅಮೇರಿಕನ್ ಆಯಿಲ್ ಕಂಪನಿ ಕೆಲಸಗಾರರು ಗಲ್ಪ್ ನಲ್ಲಿ ಕೆಲಸದಲ್ಲಿದ್ದಾಗ ವೋಡ್ಕಾ ಮತ್ತು ಆರೆಂಜ್ ಜ್ಯೂಸ್ ಮಿಶ್ರ ಮಾಡಲು ಚಮಚಗಳ ಕೊರತೆ ಇದ್ದಾಗ ತಾವು ಕೆಲಸಕ್ಕೆ ಬಳಸುತ್ತಿದ್ದ ಸ್ಕ್ರೂ ಡ್ರೈವರ್ ನಿಂದಲೇ ಮಿಶ್ರಣ ಮಾಡಲು ಪ್ರಾರಂಬಿಸಿದ್ದರಿಂದ ಈ ಕಾಕ್ ಟೈಲ್ ಗೆ ಸ್ಕ್ರೂ ಡ್ರೈವರ್ ಎಂಬ ಹೆಸರು ಬಂತು ಈ ಹೆಸರಿಂದಲೇ ಇದು ವಿಶ್ವ ವಿಖ್ಯಾತ ಆಲ್ಕೊಹಾಲ್ ಕಾಕ್ ಟೈಲ್ ಆಗಿದೆ.   ಇದರ ತಯಾರಿ ಸುಲಭ ಎರೆಡು ಬಾಗದಷ್ಟು ಕಿತ್ತಳೆ ರಸಕ್ಕೆ ಒಂದು ಭಾಗದಷ್ಟು ವೋಡ್ಕಾ ಸೇರಿಸಿ ಸರಿಯಾಗಿ ಮಿಶ್ರಣ (Stirring) ಮಾಡಿದರೆ ಆಯಿತು, ಇದರ ಗಾಜಿನ ಲೋಟಕ್ಕೆ ಕಿತ್ತಳೆ ಹಣ್ಣಿನ ಸ್ಲೈಸ್ ಸಿಕ್ಕಿಸಿ, ಐಸ್ ಬೆರಸಿ ಶೃಂಗಾರವೂ ಮಾಡಬಹುದು.

17- ಜನವರಿ -2021 ರಂದು ಕರ್ನಾಟಕ ಜನಪದ ಅಕಾಡಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ನನ್ನ ಕಛೇರಿಯಲ್ಲಿ ಬೇಟಿಯ ಸಂದರ್ಭದ ನೆನಪುಗಳೊಂದಿಗೆ

#ಕನಾ೯ಟಕ_ಜನಪದ_ಅಕಾಡೆಮಿ_ಅಧ್ಯಕ್ಷೆ #ಮಂಜಮ್ಮ_ಜೋಗತಿ_ಇವತ್ತು_ನಮ್ಮ_ಅತಿಥಿ(17- ಜನವರಿ-2021)  ಬಳ್ಳಾರಿ ಜಿಲ್ಲೆಯ ಮರಿಯಮ್ಮನ ಹಳ್ಳಿಯ ಮಂಜಮ್ಮ ಜೋಗತಿ ಆತ್ಮಕಥೆ #ನಡುವೆ_ಸುಳಿವ_ಹೆಣ್ಣು (ಆರುಣ್ ಜೋಳದ ಕೂಡ್ಲಿಗೆ ನಿರೂಪಣೆ ) ಓದಿದರೆ ಗೊತ್ತಾಗುತ್ತದೆ ಇವರು ಸಾಗಿ ಬಂದ ಜೀವನದ ಹಾದಿ ಎಷ್ಟು ಕಲ್ಲು ಮುಳ್ಳಿನ ದೆಂದು.   ಕುಮಾರ ಬಿ. ಮಂಜುನಾಥ ಶೆಟ್ಟಿ ಮಂಜಮ್ಮ ಜೋಗತಿ ಆಗುವುದು ಇದಕ್ಕಾಗಿ ಹೊಸಪೇಟೆಯ ಹುಲಗಿಯ ಹುಲಿಗಮ್ಮ ದೇವಾಲಯದಲ್ಲಿ ಮುತ್ತು ಕಟ್ಟಿಸಿಕೊಂಡು ದೀಕ್ಷೆ ಪಡೆಯುವುದು, ಇದರಿಂದ ಕುಟುಂಬದಿಂದ ದೂರವಾಗುವುದು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುವುದು, ನಂತರ ಜೀವನಕ್ಕಾಗಿ ಬಿಕ್ಷಾಟನೆ, ಅತ್ಯಾಚಾರಕ್ಕೆ ಒಳಗಾಗುವುದು, ಅವಮಾನ ನೋವುಗಳ ಸರಮಾಲೆ ಮದ್ಯದಲ್ಲಿ ಜೋಗತಿ ನೃತ್ಯ ಕಲಿತು ಅದರ ಪ್ರದಶ೯ನ ಪ್ರಾರಂಬಿಸಿ ನಂತರ ಇವರ ಕಲಾಸೇವೆಗಾಗಿ ಕನಾ೯ಟಕ ಜನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಸಂದೇಶ ಪ್ರಶಸ್ತಿ, ತಾಯಮ್ಮ ಮಲ್ಲಯ್ಯ ದತ್ತಿನಿದಿ ಪ್ರಶಸ್ತಿ ಮತ್ತು ಸಮಾಜ ಸಖಿ ಪ್ರಶಸ್ತಿಗಳು ಇವರನ್ನ ಅರಸಿಕೊಂಡು ಬಂದಿತು.    ಯಡ್ಯೂರಪ್ಪರ ರಾಜ್ಯ ಸಕಾ೯ರ ಇವರನ್ನ ಕನಾ೯ಟಕ ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದೆ, ಇವತ್ತು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅವರ ಉತ್ತರ "ನನ್ನನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅಂತ ಟೀವಿಲಿ ಬರುತ್ತಿದೆ ಅಂದಾಗ ನಾನು ನಂಬಲೇ ಇಲ್...

ಆನಂದಪುರಂ ಇತಿಹಾಸ ಭಾಗ-69, ಆನಂದಪುರಂ ರಂಗನಾಥ ಸ್ವಾಮಿ ದೇವಾಲಯದ ಗುರುಡಗಂಭಕ್ಕೆ 515 ವರ್ಷ, ಇದು ಹೊಸಗುಂದ ಸೀಮೆಯಾಳುತ್ತಿದ್ದ ನಾಯಕರು ದೇವರ ಹರಿವಾಣ ಸೇವೆಗಾಗಿ ಎರೆಡು ಊರು ದಾನ ನೀಡಿದ ಶಿಲಾ ಶಾಸನ.

#ಆನಂದಪುರಂ_ಇತಿಹಾಸ_69. #ಶಿಲಾಶಾಸನದಲ್ಲಿ_ದಾಖಲಾಗಿರುವ_ವಿವರ #ಆನಂದಪುರಂ_ರಂಗನಾಥದೇವಾಲಯದ_ಗರುಡಗಂಭದಲ್ಲಿ_ಉಲ್ಲೇಖ_ಆಗಿರುವುದು. #ಈ_ಶಿಲಾಶಾಸನದ_ಪಕ್ಕದಲ್ಲಿ_ಕಾಲಮಾನ_ಮಹತ್ವ_ಮತ್ತು_ಅದರಲ್ಲಿನ_ಉಲ್ಲೇಖ_ಕನ್ನಡದಲ್ಲಿ_ಮಾಹಿತಿ_ಪಲಕ_ಇಡಬೇಕು. #ಈ_ಶಿಲಾಶಾಸನದ_ಸಂರಕ್ಷಣೆಗೆ_ಹೆಚ್ಚಿನ_ಒತ್ತು_ನೀಡಬೇಕು 1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ.   ಈ ಗರುಡಗಂಭ 3.5 ಅಡಿ ಎತ್ತರ ಮತ್ತು 2 ಅಡಿ ಅಗಲ ಇದೆ, 18 ಸಾಲಿನಲ್ಲಿ ಅಕ್ಷರಗಳಿದೆ.       ಒಂದು ಕಾಲದಲ್ಲಿ ಶ್ರೀ ರಂಗನಾಥ ದೇವಾಲಯದ ಒಳ ಆವರಣದಲ್ಲಿ ದೇವಾಲಯದ ದ್ವಜ ಸ್ಥಂಭದ ಕೆಳಬಾಗದಲ್ಲಿದ್ದ  ಗರುಡಗಂಭದಲ್ಲಿ ಗರುಡನ ಶಿಲ್ಪವು ಆಕರ್ಷವಾಗಿದ್ದು ಒಂದು ಕೈಯಲ್ಲಿ ಸರ್ಪವಿದೆ.    ಕಾಲ ಕಾಲಕ್ಕೆ ದೇವಾಲಯದ ನವೀಕರಣ ಕಾಲದಲ್ಲಿ ಸ್ಥಳ ಬದಲಾಗಿ ಈಗ ದೇವಸ್ಥಾನದ ಮು೦ಬಾಗದ ಗೋಡೆಯ ಎಡಭಾಗದಲ್ಲಿ ಸುರಕ್ಷಿತವಾಗಿ ರಕ್ಷಿಸಿಡಲಾಗಿದೆ.    ಕ್ರಿ.ಶ.1507 AD ಕಾಲ ಮಾನದ ಈ ಗರುಡ ಸ್ಥಂಭಕ್ಕೆ ಈಗ 515 ವರ್ಷಗಳಾಗಿದೆ.   515 ವರ್ಷಗಳ ಹಿಂದಿನ ಅಂದರೆ 5 ಶತಮಾನದ ಈ ಶಿಲಾ ಶಾಸನ ತುಂಬಾ ಮಹತ್ವದ್ದಾಗಿದೆ ಮತ್ತು ಮುಂದಿನ ದಿನದಲ್ಲಿ ಈ ಶಿಲಾ ಶಾಸನ ಅತ್ಯಂತ ಜಾಗೃತಿಯಿಂದ ಮುಂದಿನ ತಲೆಮಾರಿಗಾಗಿ ಸಂರಕ್ಷಿಸ...

ಸಾಗರ ತಾಲ್ಲುಕಿನ ಯಡೇಹಳ್ಳಿಯ ಶ್ರೀ ವರಸಿದ್ದಿ ವಿನಾಯಕ ದೇವರ 16 ನೇ ವಾರ್ಷಿಕೋತ್ಸವ - ರಥೋತ್ಸವ -ರಂಗಪೂಜೆ ದಿನಾಂಕ 4- ಪೆಬ್ರವರಿ -2022ರ ಶುಕ್ರವಾರ ಕುಂದ ಚಥುರ್ತಿಯಂದು

#ನಮ್ಮೂರ_ಶ್ರೀವರಸಿದ್ಧಿವಿನಾಯಕ_ದೇವರ_ರಥೋತ್ಸವ_ಜಾತ್ರೆ. #ದಿನಾಂಕ_4_ಪೆಬ್ರುವರಿ_2022ರ_ಶುಕ್ರವಾರ_ಕುಂದಚತುರ್ಥಿಯ_ಶುಭ_ಸಂದಭ೯ದಲ್ಲಿ. #ಇದು_ಹದಿನಾರನೇ_ವಾರ್ಷಿಕೋತ್ಸವ #ಕೋವಿಡ್_ನಿಯಮಾವಳಿಗೆ_ಒಳಪಟ್ಟು.   ಹದಿನಾರು ವರ್ಷದ ಹಿಂದೆ ಕುಂದ ಚತುರ್ಥಿಯಂದು ಪ್ರತಿಷ್ಟಾಪನೆಗೊಂಡು ಪ್ರತಿ ವರ್ಷ ಅದೇ ದಿನ ರಥೋತ್ಸವ - ಜಾತ್ರೆ - ರಂಗಪೂಜೆಯೊಂದಿಗೆ  ಆಚರಣೆಯಲ್ಲಿದೆ.   ಕಳೆದ ಎರೆಡು ವಾಷಿ೯ಕೊತ್ಸವ ಕೊರಾನ #ನಮ್ಮೂರ_ಶ್ರೀವರಸಿದ್ಧಿವಿನಾಯಕ_ದೇವರ_ರಥೋತ್ಸವ_ಜಾತ್ರೆ. #ದಿನಾಂಕ_4_ಪೆಬ್ರುವರಿ_2022ರ_ಶುಕ್ರವಾರ_ಕುಂದಚತುರ್ಥಿಯ_ಶುಭ_ಸಂದಭ೯ದಲ್ಲಿ. #ಇದು_ಹದಿನಾರನೇ_ವಾರ್ಷಿಕೋತ್ಸವ #ಕೋವಿಡ್_ನಿಯಮಾವಳಿಗೆ_ಒಳಪಟ್ಟು.   ಹದಿನಾರು ವರ್ಷದ ಹಿಂದೆ ಕುಂದ ಚತುರ್ಥಿಯಂದು ಪ್ರತಿಷ್ಟಾಪನೆಗೊಂಡು ಪ್ರತಿ ವರ್ಷ ಅದೇ ದಿನ ರಥೋತ್ಸವ - ಜಾತ್ರೆ - ರಂಗಪೂಜೆಯೊಂದಿಗೆ  ಆಚರಣೆಯಲ್ಲಿದೆ.   ಕಳೆದ ಎರೆಡು ವಾಷಿ೯ಕೊತ್ಸವ ಕೊರಾನ ನೆರಳಿನ ಭಯದಿಂದ ನಡೆಯಿತು, ಈ ವರ್ಷ ಕೊರಾನ ಮದ್ಯದಲ್ಲೇ ಕುಂದ ಚತುರ್ಥಿ ಬಂದಿದೆ.   ಕೊರಾನಾ ನಿಯಮಾವಳಿಯ ಕಟ್ಟುನಿಟ್ಟಿನ ಆಚರಣೆಯೊಂದಿಗೆ ಧಾರ್ಮಿಕ ವಿದಿ ವಿದಾನಗಳು ನಡೆಸುವ ಸಂಕಲ್ಪದೊಂದಿಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಜಾತ್ರಾ ಸಮಿತಿ ತೀರ್ಮಾನಿಸಿ ಆಹ್ವಾನ ಪತ್ರಿಕೆ ನೀಡಿದೆ. ಭಯದಿಂದ ನಡೆಯಿತು, ಈ ವರ್ಷ ಕೊರಾನ ಮದ್ಯದಲ್ಲೇ ಕುಂದ ಚತುರ್ಥಿ ಬಂದಿದೆ. ...