Skip to main content

Posts

ಮಿನಿಯೇಚರ್ ಪಿನಿಕ್ಚರ್ ಜರ್ಮನ್ ತಳಿ ನಮ್ಮ ಮುದ್ದಿನ ಬ್ರೌನಿ ಅಲಿಯಾಸ್ ಕೆಂಚಪ್ಪ

#ಮಿನಿಯೇಚರ್_ಪಿನಿಶ್ಚರ್_ಕೆಂಚಪ್ಪ #ಗರಿಷ್ಟ_ಎತ್ತರ_ಹತ್ತು_ಇಂಚು. #ಗರಿಷ್ಟ_ತೂಕ_ನಾಲ್ಕುವರೆ_ಕೇಜಿ.    ಇವನಿಗೆ 14 ತಿಂಗಳು ಮಕ್ಕಳಿಟ್ಟ ಹೆಸರು ಬ್ರೌನಿ ಆದರೆ ನಾನು ಕರೆಯುವುದು ಕೆಂಚಪ್ಪ, ಇದು ಜರ್ಮನ್ ತಳಿ.   ತುಂಬಾ ಜಾಗೃತವಾಗಿರುವ ನಾಯಿ ಅಷ್ಟೇ ಕಾಮಿಡಿ ಕೂಡ, ತನ್ನ ಅಧಿಪತ್ಯದ ಜಾಗದಲ್ಲಿ ನೀವು ಏನಾದರೂ ತಂದಿಡಿ ತೊಂದರೆ ಇಲ್ಲ ಆದರೆ ಅದನ್ನು ವಾಪಾಸ್ ತೆಗೆಯಲು ಸಾಧ್ಯವಿಲ್ಲ.   ಮೊನ್ನೆ ಎಂಟು ಅಡಿ ಎತ್ತರದಿಂದ ಮಹಡಿ ಮೆಟ್ಟಿಲ ಮೇಲಿಂದ ಹಾರಿದಾಗ ನಾವೆಲ್ಲ ಗಾಭರಿ ಅವನು ಮಾತ್ರ ಚೆಂಗು ಚೆಂಗೆನ್ನುತ ಕುಪ್ಪಳಿಸುತ್ತಿದ್ದ.   ದಿನಕ್ಕೆ ಇವನ ಆಹಾರ ಹೆಚ್ಚೆಂದರ 100 ಗ್ರಾಮ್ ಮೀರುವುದಿಲ್ಲ.    ನಮ್ಮ ರಾಟ್ ವೀಲರ್ ಶಂಭುವಿಗಿಂತ ಎಂಟು ತಿಂಗಳು ವಯಸ್ಸಿನಲ್ಲಿ ದೊಡ್ಡವನು ಆದರೆ ಗಾತ್ರದಲ್ಲಿ 10 ಪಟ್ಟು ಸಣ್ಣವನು.

ಸಾಗರ ತಾಲ್ಲೂಕಿನ ಒಂದು ನೇಗಿಲ ಕಥೆ, ಸಾವಿರಾರು ಕೋಟಿ ಹಗರಣ ಬಯಲಾಗಿ 7 ಜನ ಕೃಷಿ ಅಧಿಕಾರಿಗಳನ್ನು ಆಗಿನ ಕೃಷಿ ಸಚಿವ ಬೈರೇಗೌಡರು ಜೈಲು ಸೇರಿಸಿದ ಪ್ರಕರಣ.

ಆಗಿನ ಸರ್ಕಾರದ ಭೂ ಸಾರ ಸಂರಕ್ಷಣ ಇಲಾಖೆಯನ್ನೇ ರದ್ದು ಮಾಡುವಂತ ಭ್ರಷ್ಟಾಚಾರ ಬಯಲು ಮಾಡಿದ ಸಾಗರದ ನೇಗಿಲಿನ ಕಥೆ. ಮೊನ್ನೆ ಮಿತ್ರರಾದ ನಾಗೇ೦ದ್ರ ಸಾಗರ್ ಈ ಹೋರಾಟ ಉಲ್ಲೇಖಿಸಿ ಆವನಿಹಳ್ಳಿ ನೇಗಿಲು ಬಗ್ಗೆ ಬರೆದಿದ್ದರು ಆಗ ನೆನಪಾಗಿ ಈ ದೀಘ೯ ಲೇಖನ ಬರೆಯಬೇಕಾಯಿತು.     ಸಕಾ೯ರದ ಕೃಷಿ ಇಲಾಖೆಯ ಸಾವಿರಾರು ಕೋಟಿ ಹಣದ ಲೂಟಿ ಬಯಲಾದ ನನ್ನ ಹೋರಾಟ.   ಹೊಸದಾಗಿ ಜಿಲ್ಲಾ ಪಂಚಾಯತ ಸದಸ್ಯನಾದ ಹುಮ್ಮಸ್ಸು, ಗ್ರಾಮ ಪಂಚಾಯತನಲ್ಲಿ ಉಪಾಧ್ಯಕ್ಷನಾಗಿದ್ದಾಗ ರಾಜ್ಯದ ಮೊದಲ ಬಗರ ಹುಕುಂ ಹಕ್ಕು ಪತ್ರ ವಿತರಣೆಗೆ ಕಾರಣ ಕತ೯ನಾಗಿ ಕಾಗೋಡು ತಿಮ್ಮಪ್ಪರಿಂದ ಸದಾ ಹೊಗಳಿಕೆಗಳಿಂದ ನನ್ನ ಕಾಲು ನೆಲದ ಮೇಲೆ ಇರಲಿಲ್ಲ.   ಇದೇ ಸಂದಭ೯ದಲ್ಲಿ ಕಾಗೋಡು ಜೊತೆ ಹಳ್ಳಿ ಬೇಟೆಗಳಲ್ಲಿ ಎಲ್ಲಿ ಹೋದರೂ ಕೃಷಿ ಇಲಾಖೆ, ಭೂ ಸಾರ ಸಂರಕ್ಷಣಾ ಇಲಾಖೆಯ ಮೇಲೆ ರೈತರ ದೂರು ಆದರೆ ಸ್ಥಳಿಯ ಪಕ್ಷದ ಮುಖಂಡರು ಮಾತ್ರ ಕಾಗೋಡು ಹತ್ತಿರ ದೂರು ನೀಡಿದವರ ಮೇಲೆಯೇ ಆಪಾದನೆ ಮಾಡಿ ಇದು ಸುಳ್ಳು ಎನ್ನುತ್ತಿದ್ದರು.   ಒಂದು ದಿನಾ ಆಚಾಪುರ ಗ್ರಾಮ ಪಂಚಾಯತ ಭೇಟಿಯಲ್ಲಿ ಪುನಃ ಇದೇ ವಿಚಾರ ಮರುಕಳಿಸಿದಾಗ ಕಾಗೋಡು ನನಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೇಗ್ ಗೆ ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಹೇಳಿದ್ದರು.   ಈ ಬಗ್ಗೆ ಕಾಯ೯ ನಿರತರಾದ ನಾವು ಇಲಾಖೆಯಿಂದ ನಿಮಿ೯ಸಲ್ಪಟ್ಟ ಪಿಕ್ ಅಪ್ ಗಳು ಎಷ್ಟು...

ಆನಂದಪುರಂ ಇತಿಹಾಸ, ಭಾಗ 63. ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ 1940 ರಲ್ಲಿ ಪ್ರಾರಂಭವಾಯಿತು.

#ಆನಂದಪುರಂ_ಇತಿಹಾಸ #ಭಾಗ_63. #ಆನ೦ದಪುರಂಗೆ_ರೈಲು_ಮಾರ್ಗ_ಶಿವಮೊಗ್ಗ_ತಾಳಗುಪ್ಪ_ಮೀಟರ್_ಗೇಜ್ #ಶಿವಮೊಗ್ಗ_ಆನಂದಪುರಂ_ರೈಲು_ಮಾರ್ಗ_ಕಾಮಗಾರಿ_1934ಕ್ಕೆ_ಮುಗಿಯಿತು. #ಮೊದಲ_ರೈಲು_1940_ನವೆಂಬರ್_9ಕ್ಕೆ_ತಾಳಗುಪ್ಪದಿಂದ_ಬೆಳಿಗ್ಗೆ_ಪ್ರಾರಂಭ_ಆಯಿತು. #ಈ_ಮಾರ್ಗದ_ಮೊದಲ_ರೈಲಿನ_ಸಂಖ್ಯೆ_SMET_SBC_EXP(20652).   ಮುಮ್ಮುಡಿ ಚಾಮರಾಜ ಒಡೆಯರು 1881 ರಿಂದ 13 ವರ್ಷದ ತಮ್ಮ ಆಳ್ವಿಕೆಯಲ್ಲಿ 164 ಲಕ್ಷ ವೆಚ್ಚದಲ್ಲಿ ರಾಜ್ಯದಲ್ಲಿ 315 ಮೈಲು ರೈಲು ಮಾರ್ಗ ನಿರ್ಮಿಸುತ್ತಾರೆ.     ಮಹಾರಾಣಿ ವಾಣಿವಿಲಾಸರು 23 ಲಕ್ಷದಲ್ಲಿ ಬಿರೂರು ಶಿವಮೊಗ್ಗ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುತ್ತಾರೆ ಈ ರೀತಿ ಆಗಿನ ಮೈಸೂರು ಅರಸರ ಪ್ರಯತ್ನ ಮತ್ತು ಸಹಕಾರದಲ್ಲಿ ಬ್ರಿಟೀಷರು ನಿರ್ಮಿಸಿದ ರೈಲು ಮಾರ್ಗಗಳು ಆಗ ಮೈಸೂರು ಸ್ಟೇಟ್ ರೈಲ್ವೆ ಇಲಾಖೆ ಹೆಸರಲ್ಲಿ ಸದರ್ನ ರೈಲ್ವೆ ಅಂಗ ಸಂಸ್ಥೆ ಆಗಿ 1891ರಿಂದ 1951ರವರೆಗೆ ಕಾಯ೯ನಿರ್ವಹಿಸಿತ್ತು  ಈಗ ಈ ಮಾರ್ಗ ಬ್ರಾಡ್ ಗೇಜ್ ಗಳಾಗಿ ಪ್ರಯಾಣಿಕರಿಗೆ, ಸರಕು ಸಾಗಾಣಿಕೆಗೆ ಅನುಕೂಲಕರವಾಗಿದೆ.   1899 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ರಾಜರಾಗಿದ್ದಾಗ ಬೀರೂರು ಶಿವಮೊಗ್ಗ ರೈಲು ಮಾರ್ಗ ಆಗಿತ್ತಾದರೂ ಶಿವಮೊಗ್ಗದಿಂದ ಜೋಗ್ ಪಾಲ್ಸ್ ಗೆ ಸಂಪರ್ಕಿಸಲಿಕ್ಕಾಗಿ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಕಾಮಗಾರಿ ಪ್ರಾರಂಭ ಆಗುವುದು 1930ರಲ್...

ವಿಶ್ವ ವಿಖ್ಯಾತ ಸುಂದರವಾದ ಸದೃಡವಾದ ಬೇಕಲ ಕೋಟೆ ಒಂದು ಚಾರಿತ್ರಿಕ ಅಧ್ಯಯನ ಎಂಬ ಸಂಶೋದನ ಗ್ರಂಥ ಬರೆದ ಗಡಿನಾಡ ಕನ್ನಡಿಗ ಶಿವಾನಂದ ಬೇಕಲ್ ಗೆ ಸಮಸ್ತ ಕನ್ನಡಿಗರ ಕೃತಜ್ಞತೆಗಳು

#ಶಿವಾನಂದ_ಬೇಕಲರ_ಬೇಕಲಕೋಟೆ_ಚಾರಿತ್ರಿಕ_ಅಧ್ಯಯನ. #ಕೆಳದಿ_ಇತಿಹಾಸ_ಸ೦ಶೋದನೆಯಲ್ಲಿ_ಇದೊಂದು_ಮೈಲಿಕಲ್ಲು #ಕೆಳದಿ_ಅರಸ_ಶಿವಪ್ಪನಾಯಕರಿಂದ_ನಿರ್ಮಾಣ #ಬಗೆಹರಿದ_ಪ್ರಸಿದ್ದ_ಬೇಕಲ_ಕೋಟೆ_ವಿವಾದ.   ಕೇರಳದ ಕಾಸರಗೋಡಿನ ಸಮೀಪದ ಬೇಕಲಕೋಟೆ ವಿಶ್ವ ಪ್ರಸಿದ್ಧವಾದದು, ಇಲ್ಲಿ ಜಗತ್ತಿನ ಎಲ್ಲಾ ಭಾಷೆಯ ಸಿನಿಮಾ ಶೂಟಿಂಗ್ ಗೆ ಬರುತ್ತಾರೆ 1999 ರ ತನಕ ಈ ಕೋಟೆ ನಿರ್ಮಿಸಿದವರ ಬಗ್ಗೆ ವಿವಾದವಿತ್ತು.   ಕೇರಳದ ಕೊಲತ್ತಿರಿ ಅರಸರು ನಿರ್ಮಿಸಿದರೆಂದು ಒಂದು ವಾದ ಇನ್ನೊಂದು ಮೈಸೂರಿನ ಹುಲಿ ಟಿಪ್ಪು ಸುಲ್ತಾನರು ನಿರ್ಮಿಸಿದ್ದೆಂಬ ವಾದ.    ಆದರೆ ಬೇಕಲ ಕೋಟೆ ಕೆಳದಿ ಅರಸರಿಂದ ನಿರ್ಮಸಲ್ಪಟ್ಟಿದ್ದಾದರೂ ಅದನ್ನು ದೃಡ ಪಡಿಸುವ ಸಂಶೋದನೆ ಮತ್ತು ಕಾಳಜಿ ಇರಲಿಲ್ಲ.   ಈ ಸಂದರ್ಭದಲ್ಲೇ ಬೇಕಲದಲ್ಲೇ ಹುಟ್ಟಿ ಬೆಳೆದು ಕೇರಳದ ಕ್ಯಾಲಿಕಟ್ ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿ, ಮೈಸೂರಿನಲ್ಲಿ ಬಿಎಡ್ ಓದಿ, ದಾರವಾಡದಲ್ಲಿ ಎಂ.ಎ. ಪದವಿ ಪಡೆದು, ಗುಲ್ಬರ್ಗದಲ್ಲಿ ಪಿಹೆಚ್ ಡಿ ಪಡೆದ ಮತ್ತು ಗುಲ್ಬರ್ಗ ದೂರದರ್ಶನ ಕೇಂದ್ರದಲ್ಲಿ ಅಸಿಸ್ಟೆಂಟ್ ಸ್ಟೇಷನ್ ಡೈರೆಕ್ಟರ್ ಆಗಿದ್ದ ಶಿವಾನಂದ ಬೇಕಲ್ ರಿಗೆ ಕಾಸರಗೋಡು ಜಿಲ್ಲಾದಿಕಾರಿ ಆದಿಯಾಗಿ ಅನೇಕರು ಬೇಕಲ್ ಕೋಟೆ ನಿರ್ಮಾಣ ಮಾಡಿದವರಾರು ಎಂಬ ಸಂಶೋದನೆಗೆ ಒತ್ತಾಯಿಸಿದ್ದೆ ಈ ಚಾರಿತ್ರಿಕ ಅಧ್ಯಯನದ ಪುಸ್ತಕ #ಬೇಕಲ_ಕೋಟೆ 1999 ರಲ್ಲಿ ಪ್ರಕಟ ಆ...

ರೈಲು ಚಾಲಕನಿಂದಲೇ ದಂಡ ವಸೂಲಿ ಮಾಡಿದ ಮಲೆನಾಡ ರೈತರು

#ರೈಲು_ಚಾಲಕನಿಂದ_ದಂಡ_ವಸೂಲಿ_ಮಾಡಿದ_ಈ_ಪ್ರಕರಣ. #ಶಿವಮೊಗ್ಗ_ಜಿಲ್ಲೆ_ಸಾಗರ_ತಾಲ್ಲೂಕಿನ_ಶಿರವಂತೆ_ರೈತರು    2014ರ ಪೆಬ್ರುವರಿ ತಿಂಗಳಲ್ಲಿ ತಾಳಗುಪ್ಪದಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದ ರೈಲಿಗೆ ಸಾಗರ ತಾಲ್ಲೂಕಿನ ಶಿರವಂತೆ ಭಾಗದ ರೈತರ ಎಮ್ಮೆಗಳು ಸಿಲುಕಿ ಸಾವನ್ನಪ್ಪಿತ್ತು, ಇದು ಎಮ್ಮೆ ಕಳೆದುಕೊಂಡ ರೈತರಿಗೆ ದೊಡ್ಡ ನಷ್ಟವೇ ಆಗಿತ್ತು ಆದರೆ ಭಾರತೀಯ ರೈಲ್ವೆ ತನ್ನ ಮಾರ್ಗದಲ್ಲಿ ಯಾವುದೇ ಅಪಘಾತ ಜೀವಹಾನಿಗೆ ಪರಿಹಾರ ಕೊಡುವುದಿಲ್ಲ (ರೈಲ್ವೆ ಪ್ರಯಾಣಿಕರನ್ನು ಹೊರತು ಪಡಿಸಿ) ರೈಲ್ವೆ ಇಲಾಖೆ ಹೇಳುವುದು ನಮ್ಮ ಸುಪರ್ದಿಯ ಮಾರ್ಗದಲ್ಲಿ ನೀವು ಅನದಿಕೃತ ಪ್ರವೇಶ ಮಾಡುವುದೇ ಅಪರಾದ ಅಂತ!.   ಇಡೀ ದೇಶದಾದ್ಯಾಂತ ಲಕ್ಷಾಂತರ ಕಿಲೋ ಮೀಟರ್ ರೈಲು ಮಾರ್ಗಕ್ಕೆ ಹೊರಗಿನಿಂದ ಯಾರೂ ಪ್ರವೇಶ ಮಾಡದಂತೆ ತಡೆಗೋಡೆ ಬೇಲಿ ಯಾವುದೂ ನಿರ್ಮಿಸಲಾಗಿಲ್ಲ ಆದರೆ ಯಾರೂ ಪ್ರವೇಶಿಸ ಬಹುದಾದ ಈ ಮಾರ್ಗ ಮಾತ್ರ ಅನದಿಕೃತ ಪ್ರವೇಶಕ್ಕೆ ಅಪರಾದ ಅಂತಲೇ ಹೇಳುತ್ತದೆ.   ಕೆಲವು ವರ್ಷಗಳೇ ಬೇಕು ನಮ್ಮ ನ್ಯಾಯಲಯಗಳು ಇದಕ್ಕೆ ಪರಿಹಾರ ಕಂಡು ಹಿಡಿಯಲು.   ಇಂತಹ ಸಂದರ್ಭದಲ್ಲೇ ಸ್ಥಳಿಯ ರೈತರು ಒಟ್ಟಾಗಿ ಎಮ್ಮೆ ಕಳೆದುಕೊಂಡ ರೈತನಿಗೆ ಪರಿಹಾರ ಕೊಡಿಸಲು ಒಂದಾಗುತ್ತಾರೆ ಆದರೆ ಅಪಘಾತ ಮಾಡಿದ ರೈಲು ಚಾಲಕ ಕೆಲ ದಿನ ಈ ಮಾರ್ಗದಲ್ಲಿ ಬರುವುದಿಲ್ಲ, ಆತ ರೈಲು ಚಾಲನೆಗೆ ಬಂದು ವಾಪಾಸು ಹೋಗುವಾಗ ರೈತರು ರೈಲು ತಡೆ ಮಾಡಿ ಪರಿಹಾರಕ್ಕೆ ಒತ್...

ಕಳೆದು ಹೋಗಿರುವ ಶಿವಮೊಗ್ಗದ ಜಿಲ್ಲಾ ಪಂಚಾಯತ್ ಲಾಂಚನ... ಮರುಬಳಕೆಗೆ ಚಾಲನೆ ಸಿಕ್ಕೀತಾ?

#ಶಿವಮೊಗ್ಗ_ಜಿಲ್ಲಾ_ಪಂಚಾಯತ್_ಲಾಂಚನ. #ಇಕ್ಕೇರಿ_ಅಘೋರೇಶ್ವರ_ದೇವಾಲಯ #ಸಹಬಾಳು_ಸಮಪಾಲು_ಸವೋ೯ದಯ_ಎಂಬ_ಸಂದೇಶದೊಡನೆ_ಇತ್ತು. #ಈಗ_ಬಳಕೆಯಲ್ಲಿಲ್ಲ_ಏಕೆ? #ಪಂಚಾಯತ್_ರಾಜ್_ಅಧಿಕಾರಿಗಳ_ನಿರ್ಲಕ್ಷ್ಯ #ಜನಪರ_ಹೋರಾಟಗಾರರು_ಪತ್ರಕರ್ತರು_ಗಮನಹರಿಸಲಿ. #ಹಾಲಿ_ಪಂಚಾಯತ್_ರಾಜ್_ಸಚಿವರು_ಶಿವಮೊಗ್ಗದ_ಈಶ್ವರಪ್ಪನವರು.   ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿ ಮತ್ತು  ದೇವೇಗೌಡರು ಪ್ರಬಾವಿ ಮಂತ್ರಿಗಳಾಗಿದ್ದ ಕಾಲ ಆಗ ಶಿವಮೊಗ್ಗ ಜಿಲ್ಲೆಯಿಂದ ಜೆ.ಹೆಚ್.ಪಟೇಲರು ಮತ್ತು ಬಸವಣ್ಯಪ್ಪರು ಮಂತ್ರಿಗಳಾಗಿದ್ದ ಕಾಲ.   ಪ್ರಥಮ ಶಿವಮೊಗ್ಗ ಜಿಲ್ಲಾ ಪರಿಷತ್ ಅಸ್ತಿತ್ವಕ್ಕೆ ಬಂದಾಗ ಜನತಾ ಪರಿವಾರಕ್ಕೆ ಅಧಿಕಾರ ಚೆನ್ನಗಿರಿ ತಾಲ್ಲೂಕಿನ ಪಟೇಲರ ಆಪ್ತರಾಗಿದ್ದ ಮಹಾದೇವಪ್ಪ (ಇವರನ್ನು ಮಹಾದೇವಜ್ಜ ಅಂತ ಪ್ರೀತಿಯಿಂದ ಕರೆಯುತ್ತಿದ್ದರು) ಅಧ್ಯಕ್ಷರು, ಉಪಾದ್ಯಕ್ಷರಾಗಿ ಸೊರಬದ ಪಾಣಿ ರಾಜಪ್ಪ ಆಯ್ಕೆ ಆಗಿದ್ದರು.  ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಸಾಗರದಿಂದ ಬಿ.ಆರ್.ಜಯಂತ್, ಭದ್ರಾವತಿಯಿಂದ ಬಲ್ಕೀಶ್ ಬಾನು, ಶಿಕಾರಿಪುರದಿಂದ ಪೂರ್ಯನಾಯಕ್ ಹೀಗೆ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು.   ಈ ಸಂದರ್ಭದಲ್ಲೇ ಶಿವಮೊಗ್ಗ ಜಿಲ್ಲಾ ಪರಿಷತ್ ಗೆ ಲಾಂಚನ ಒಂದನ್ನು ಆಯ್ಕೆ ಮಾಡುತ್ತಾರೆ, ಅನೇಕರ ಸಲಹೆ ಸಹಕಾರದ ಜೊತೆಗೆ ಅಂತಿಮವಾಗಿ ಸಾಗರದ ಬಿ.ಆರ್.ಜಯಂತರು ಸೂಚಿಸಿದ ಲಾಂಚನ ಅಂತಿಮಗೊಳ...

ರಾಣಿಬೆನ್ನೂರು ಸಮೀಪದ ದೇವರಗುಡ್ಡದ ಪವಾಡದ ಗುಂಡುಕಲ್ಲುಗಳ ಭವಿಷ್ಯವಾಣಿಗೆ ಮನೋವಿಜ್ಞಾನದ ತಳುಕಿದೆ.

#ದೇವರ_ಮಹಿಮೆಯಾ? #ಮನೋವಿಜ್ಞಾನವಾ? #ಹಾಗಾದರೆ_ದೇವಾಲಯಗಳು_ಭಕ್ತಿ_ಜ್ಞಾನ_ವಿಜ್ಞಾನಗಳ_ಸಂಗಮವೆ?. #ದೇವರ_ಗುಡ್ಡದ_ಈ_ಮ್ಯಾಜಿಕ್_ಕಲ್ಲು_ಗುಂಡುಗಳು.    ರಾಣಿಬೆನ್ನೂರು ಸಮೀಪದ ದೇವರ ಗುಡ್ಡದ ಮೈಲಾರೇಶ್ವರ ದೇವರಿಗೆ ಭಕ್ತರು ನಾಡಿನಾದ್ಯಂತ ಲಕ್ಷಾಂತರ ಜನರಿದ್ದಾರೆ ಅಲ್ಲಿನ ಕಾರಣಿಕರ ಹೇಳಿಕೆ ವರ್ಷದ ಮಳೆ-ಬೆಳೆಯ ಭವಿಷ್ಯವಾಣಿ ಅಂತಲೇ ಭಕ್ತರು ಬಾವಿಸಿದ್ದಾರೆ.   ಸುಮಾರು 16 ವರ್ಷದ ಹಿಂದೆ ಇಲ್ಲಿಗೆ ಹೋಗಿದ್ದೆ ದೇವಾಲಯದ ಒಳ ಹೋಗುವ ಮೊದಲು ಮರದ ಕಟ್ಟೆಯ ಮೇಲೆ ಸಾಲಾಗಿ ಜೋಡಿಸಿಟ್ಟಿದ್ದ ವಿವಿಧ ಗಾತ್ರದ ಕಲ್ಲು ಗುಂಡುಗಳನ್ನು ನೋಡಿದೆ ಬಹಶಃ ಪೂಜೆಗಾಗಿ ಇಟ್ಟಿರುವ ಕಲ್ಲು ಗುಂಡುಗಳಂತ ಬಾವಿಸಿಕೊಂಡಿದ್ದೆ.   ದೇವರ ಪೂಜೆ ದರ್ಶನದ ನಂತರ ಹೊರ ಬಂದಾಗ ಈ ಕಲ್ಲು ಗುಂಡುಗಳ ಸಮೀಪ ಕುಳಿತ ಮಹಿಳೆಗೆ ಕೇಳಿದೆ ಇದಾವ ದೇವರುಗಳು? ಅಂತ ಆಗ ಆಕೆ ಹೇಳಿದ್ದು   "ಇವು ದೇವರ ಪವಾಡದ ಕಲ್ಲುಗಳು, ನಿಮ್ಮ ಮನಸ್ಸಲ್ಲಿ ಯಾವುದಾದರೂ ಪ್ರಶ್ನೆ ಇದ್ದರೆ ಅದು ಈಡೇರುವುದಾದರೆ ಸುಲಭವಾಗಿ ಎದ್ದು ಬಾ ಅಂದುಕೊಳ್ಳಿ ಈ ಸಣ್ಣ ಕಲ್ಲು ಗುಂಡನ್ನು ನಮಸ್ಕರಿಸಿ ಎತ್ತಿ, ನಿಮ್ಮ ಕೆಲಸ ಈಡೇರುವುದಾದರೆ ನೀವು ಈ ಕಲ್ಲು ಎತ್ತುತ್ತೀರಿ ಅದೇ ನಿಮ್ಮ ಬಯಕೆ ಈಡೇರುವುದಿಲ್ಲವಾದರೆ ಈ ಸಣ್ಣ ಗುಂಡುಕಲ್ಲು ನಿಮಗೆ ಎತ್ತಲು ಸಾಧ್ಯವಿಲ್ಲ.ಇದೇ ರೀತಿ ಈ ದೊಡ್ಡ ಗುಂಡುಕಲ್ಲು ನೀವು ಬಯಸಿದ್ದು ಈಡೇರುವುದಾದರೆ ಹೂವು ಎತ್ತಿದ೦ಗೆ ಎದ್ದು ಬರುತ್ತೆ ಬೇಕಾದರೆ ...