Skip to main content

Posts

ಭಾಗ - 23, ಆನಂದಪುರಂ ಅಂತ ನಮ್ಮ ಊರಿಗೆ ನಾಮಕರಣ ಮಾಡಿದವರು ಕೆಳದಿ ರಾಜ ವೆಂಕಟಪ್ಪ ನಾಯಕರು,ಅವರ ದುರಂತ ಪ್ರೇಮ ಕಥೆಯ ನಾಯಕಿ ಚಂಪಕಾಳ ಸ್ಮರಣಾಥ೯ ಈ ಹೆಸರು ಬಂತು.

#ಭಾಗ_23. #ಆನಂದಪುರಂ_ಎಂದು_ನಾಮಕರಣ_ಮಾಡಿದ್ದು_ಕೆಳದಿ_ರಾಜ_ವೆಂಕಟಪ್ಪನಾಯಕ. #ನಿತ್ಯ_ರಾಜರು_ಸಾಗುವ_ಬೀದಿಯಲ್ಲಿ_ರಂಗೋಲಿ_ಬಿಡಿಸುತ್ತಿದ್ದ_ಸುಂದರಿ_ಚಂಪಕಳಿಗಾಗಿ_ಈ_ಹೆಸರು #ಮೊದಲು_ಈ_ಊರಿನ_ಮೂಲ_ಹೆಸರು_ಯಡೇಹಳ್ಳಿಕೋಟೆ #ಬದರಿನಾರಾಯಣ್_ಅಯ್ಯ೦ಗಾರರ_ಕುಟುಂಬದಲ್ಲಿ_ಎಲ್ಲರ_ಹೆಸರಿನ_ಮೊದಲು_ಆನಂದಪುರಂ_ಎಂದೇ_ಇದೆ.   ಎ.ಆರ್. ಬದರಿನಾರಾಯಣ್ ಅಯ್ಯಂಗಾರರು ಅಂದರೆ ಪೂರ್ಣವಾದ ಹೆಸರು ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಬದರಿನಾರಾಯಣ ಅಯ್ಯಂಗಾರ್ ಅಂತ.   ಇವರ ಅಣ್ಣ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ವೆಂಕಟಾಚಲ ಅಯ್ಯಂಗಾರ್ ಅಂತ ಸಂಕ್ಷಿಪ್ತವಾಗಿ ಎ.ಆರ್.ವೆಂಕಟಚಲ ಆಯ್ಯಂಗಾರ್ ಅಂತ.   ಈ ಕುಟುಂಬದ ಅನೇಕ ನ್ಯಾಯಾಲಯಗಳ (ಇನಾಂ ಅದೇ ಶ ರದ್ದು ಇತ್ಯಾದಿ) ಆದೇಶಗಳಲ್ಲೂ ಈ ಕುಟುಂಬದವರ ಹೆಸರುಗಳೆಲ್ಲ ಪ್ರಾರ೦ಭದಲ್ಲಿ ಆನಂದಪುರಂ ಎಂದೇ ಇದೆ ಇದು ಈ ಕುಟುಂಬಕ್ಕೆ ತಮ್ಮ ಊರಾದ ಆನಂದ ಪುರ೦ ಮೇಲಿನ ಅಭಿಮಾನ ತೋರಿಸುತ್ತದೆ.     ಎ.ಎಸ್. ಬೋಜರಾಜ ಆಯ್ಯಂಗಾರ್ ಅಂದರೆ ಆನಂದಪುರಂ ಸುಂದರ್ ರಾಜ್ ಬೋಜರಾಜ್ ಅಂತ.  ಎ.ಎಸ್. ಪ್ರಾಣೇಶ್ ಆಚಾರ್ ಅಂದರೆ ಆನಂದಪುರಂ ಶೇಷಾಚಾರ್ ಪ್ರಾಣೇಶ್ ಆಚಾರ್ ಅಂತ.     ಬಹುಶಃ ಈ ಮೂರು ಕುಟುಂಬ ಹೊರತು ಪಡಿಸಿ ಆನಂದಪುರಂನ ನಿವಾಸಿಗಳಾರು ತಮ್ಮ ಹೆಸರಿನ ಮುಂದೆ ಆನಂದಪುರಂ ಎಂಬ ಇನಿಷಿಯಲ್ ನಮೂದಿಸಿದ್ದು ನಾನು ನೋಡಲಿಲ್ಲ.   ...

ಆನಂದಪುರಂ ಸಾಗರ ತಾಲ್ಲೂಕಿನ ದೊಡ್ಡ ಹೋಬಳಿ, ಇಲ್ಲಿ ನಿಯಂತ್ರಣಕ್ಕೆ ಬಾರದ ಕೊರಾನಾದಿ೦ದ ಇವತ್ತಿನಿ೦ದ ಒ೦ದು ವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.

#ನಮಗಾಗಿ_ನಮ್ಮ_ನಮ್ಮದೇ_ಆರೋಗ್ಯ_ಕವಚ_ನಿರ್ಮಿಸಿಕೊಳ್ಳೋಣ #ಮನೆಯ_ಒಳಗೆ_ಯಾರನ್ನೂ_ಸೇರಿಸಬೇಡಿ_ನೀವೂ_ಇನ್ನೊಬ್ಬರ_ಮನೆಗೆ_ಹೋಗಬೇಡಿ #ನಿಮ್ಮ_ಅಂದು_ಬಂದುಗಳು_ಕೊರಾನಾಕ್ಕೆ_ಹೊರತಲ್ಲ #ನಮ್ಮ_ಆನಂದಪುರಂ_ಹೋಬಳಿ_ಇವತ್ತಿಂದ_ಒಂದು_ವಾರ_ಸಂಪೂರ್ಣ_ಲಾಕ್_ಡೌನ್. #ಎಲ್ಲಾ_ಊರು_ಕೇರಿ_ಅಷ್ಟೆ_ಅಲ್ಲ_ನಮ್ಮ_ಮನೆಯಲ್ಲೂ_ಜಾರಿ_ಆಗಲಿ   ಸಕಾ೯ರ - ಮೋದಿ - ಯಡೂರಪ್ಪ ಅಂತೆಲ್ಲ ನೆಪ ನೆವಗಳನ್ನು ಹೇಳುತ್ತಾ ತಾವೂ ರೋಗ ತಡೆಯುವ ಮುಂಜಾಗೃತ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸರ್, ಲಸಿಕೆ ಮತ್ತು ಪರಸ್ಪರ ಅಂತರ ಕಾಪಾಡದೆ ತಮ್ಮ ಮನೆಗಳಿಗೆ ಕೊರಾನಾ ವೈರಸ್‌ ಹರಡಿ ಅನಾಹುತ ಆದ ನಂತರ ಪಶ್ಚಾತ್ತಾಪ ಮತ್ತು ಪಾಪ ಪ್ರಜ್ಞೆಯಿಂದ ನರಳುತ್ತಾ ಇರುವ ನಮ್ಮ ಜನ (ಇದು ಇಡೀ ದೇಶಕ್ಕೆ ಅನ್ವಯ) ಈಗ ವಾಸ್ತವವಾದಿಗಳಾಗುತ್ತಿದ್ದಾರೆ.   ಪತ್ರಕರ್ತರು, ವೈದ್ಯರು, ಮಂತ್ರಿಗಳು ಕೂಡ ಕೊರಾನಾಕ್ಕೆ ಬಲಿ ಆಗಿದ್ದಾರೆ ಈಗ ಎರಡನೆ ಅಲೆಯಲ್ಲಿ ನಮ್ಮ ಊರು ಮನೆಯಲ್ಲಿಯೇ ಸಾವಿನ ಸುದ್ದಿ ಕೇಳುತ್ತಿದ್ದೇವೆ ಆದರೂ ಬುದ್ದಿಗೇಡಿ ಜನರು ಈ ಕಾಯಿಲೆ ನಿಯಂತ್ರಣಕ್ಕೆ ಸಹಕರಿಸದೇ ದಿನೇ ದಿನೇ ಸಾವು ನೋವಿಗೆ ಕಾರಣರಾಗುತ್ತಿದ್ದಾರೆ.  ಪ್ರತಿಯೊಬ್ಬನಿಂದ, ಪ್ರತಿ ಕುಟುಂಬದಿಂದ, ಪ್ರತಿಹಳ್ಳಿಯಿಂದ ದೇಶ ಎನ್ನುವುದನ್ನು ಸ್ಮರಿಸೋಣ. ಪ್ರತಿಯೊಬ್ಬರು ತಮ್ಮ ತಮ್ಮ ಕುಟುಂಬದ ಆರೋಗ್ಯ ಕವಚ ರಚಿಸಿಕೊಳ್ಳಬೇಕು, ಕಾಯಿಲೆ ಬಂದ ನಂತರದ ತಯಾರಿಗಿಂತ ಕಾಯಿಲೆ ಬರದಂತೆ ಮುನ್ನೆಚ್ಚರಿ...

ಸುಕೇಳಿ ಬೇಕಾ ಸುಕೇಳಿ, ಬಿಸಿಲಲ್ಲಿ ಒಣಗಿಸಿದ ಬಾಳೆ ಹಣ್ಣು ಡ್ರೈ ಪ್ರೂಟ್ ಸಾಗರದ ನಾಗೇಂದ್ರ ಸಾಗರ್ ಕೃಷಿ ಪಾರಂ ನಲ್ಲಿ ತಯಾರಿಸುತ್ತಿದ್ದಾರೆ.

#ಸಾಗರದ_ನಾಗೇಂದ್ರ_ಸಾಗರ್_ತಯಾರಿಸಿದ_ಸುಕೇಳಿ_ನಂಬರ್_ಒನ್. #ಬೇಕಾದವರು_8147299353_ಸಂಪರ್ಕಿಸಿ.   #ಶುದ್ದ_ಪರಿಸರದಲ್ಲಿ_ಸೋಲಾರ್_ಡ್ರೈಯರ್ನಲ್ಲಿ_ಒಣಗಿಸಿದ_ಬಾಳೆಹಣ್ಣು  ಸುಕೇಳಿ ಮರಾಠಿ ಭಾಷೆಯಲ್ಲಿ ಹಿಂದಿಯ ಸುಕ್ಕಾ - ಕೇಲ ಸೇರಿ ಆದ ಸುಕೇಳಿ ಅನ್ನುತ್ತಾರೆ, ಮಾಗಿದ ಬಾಳೆ ಹಣ್ಣು ಚಕ್ರಾಕಾರವಾಗಿ ಕತ್ತರಿಸಿ ಹದ ಬಿಸಿಲಲ್ಲಿ ಒಣಗಿಸಿಟ್ಟರೆ ಅದು ಅನೇಕ ಪೋಷಕಾಂಶಗಳನ್ನು ಹೊಂದಿದ ಡ್ರೈ ಪ್ರೂಟ್ ಆಗುತ್ತದೆ.   ಇದು ಮಹಾರಾಷ್ಟ್ರದ ಕೊಂಕಣ್ ಭಾಗದಲ್ಲಿ, ಗೋವಾ ಮತ್ತು ಕರ್ನಾಟಕದ ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮಲ್ಲಿ ಹಪ್ಪಳ ಸಂಡಿಗೆ ಮಾಡಿ ಮಳೆಗಾಲಕ್ಕಾಗಿ ಸಂಗ್ರಹಿಸಿದಂತೆ ಆ ಭಾಗದಲ್ಲಿ ಅವರ ವಾರ್ಷಿಕ ಬಳಕೆಗೆ ಬೇಕಾಗುವಷ್ಟು ಒಣಗಿಸಿ ಶೇಖರಿಸಿಡುವ ಪದ್ದತಿ ಇದೆ.   ನಮ್ಮ ಭಾಗದಲ್ಲಿ ಇದು ಅಪರೂಪ ಅದರಲ್ಲೂ ಇದನ್ನು ಒಣಗಿಸುವುದರಲ್ಲಿ ಬೇಕಾದ ಕೌಶಲ್ಯದ ಹದ ಬಹಳ ಜನರಿಗೆ ಗೊತ್ತಿಲ್ಲ, ಬಿಸಿಲು ಜಾಸ್ತಿ ಆದರೂ ರುಚಿ ವ್ಯತ್ಯಾಸ, ಬೇಸಿಗೆಯ ದೂಳಿನ ಗಾಳಿ ಬಿಸಿಲಿಗಿಟ್ಟಾಗ ಬಾಳೆ ಹಣ್ಣಿಗೆ ಸೇರಿದರೆ ಅದು ಅನಾರೋಗ್ಯಕ್ಕೆ ಕಾರಣ, ನೇರವಾಗಿ ಮನುಷ್ಯರ ಕೈ ತಾಗಬಾರದು.    ನಾಗೇಂದ್ರ ಸಾಗರ್ ಕೃಷಿಯಲ್ಲಿ ಪ್ರಾಕ್ಟಿಕಲ್ ಮನುಷ್ಯರು, ಡೈರಿ, ಕ್ಯಾಟಲ್ ಪೀಡ್ಸ್, ಜೇನು ಸಾಗಾಣಿಕೆ, ಎರೆ ಹುಳದ ಗೊಬ್ಬರ ತಯಾರಿಸಿ ಮಾರಾಟದ ಜೊತೆ ವಿವಿದ ಕೃಷಿ ತೋಟಗಾರಿಕಾ ಮೌಲ್ಯವರ್ಧನೆಯ ಪ್ರಯೋಗ ಮಾಡುತ...

ನಾಗತಿಹಳ್ಳಿಯವರ ಮೊದಲ ಚಲನ ಚಿತ್ರ ಉಂಡೂ ಹೋದ ಕೊಂಡೂ ಹೋದ ಸಿನಿಮಾದಲ್ಲಿ ನನ್ನ ಬಸ್ ಚಿತ್ರಿಕರಣದಲ್ಲಿ ಉಪಯೋಗಿಸಿದ ನೆನಪಿನ ಅನಾವರಣ

#ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾಗೆ_ನನ್ನ_ಬಸ್ಸು. *#ಎಷ್ಟೋ_ವರ್ಷದ_ನಂತರ_ಈ_ಬಗ್ಗೆ_ಚಲನ_ಚಿತ್ರ_ನಟ_ದೊಡ್ಡಣ್ಣ_ಜೊತೆ* *#ಬೆಂಗಳೂರು_ಕಾನಿಷ್ಕಾ_ಹೋಟೆಲ್ನಲ್ಲಿ_ಪುನಃ_ನೆನಪಿಸಿ_ಕೊಂಡ_ಸವಿನೆನಪು* #ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾಗೆ_ನನ್ನ_ಬಸ್ಸು. *#ಎಷ್ಟೋ_ವರ್ಷದ_ನಂತರ_ಈ_ಬಗ್ಗೆ_ಚಲನ_ಚಿತ್ರ_ನಟ_ದೊಡ್ಡಣ್ಣ_ಜೊತೆ* *#ಬೆಂಗಳೂರು_ಕಾನಿಷ್ಕಾ_ಹೋಟೆಲ್ನಲ್ಲಿ_ಪುನಃ_ನೆನಪಿಸಿ_ಕೊಂಡ_ಸವಿನೆನಪು* #1992ರಲ್ಲಿ_ನಾಗತೀಹಳ್ಳಿ_ನಿದೇ೯ಶನದ_ಉOಡೂಹೋದ_ಕೊಂಡುಹೋದ___ಸಿನಿಮಾಕ್ಕೆ_ನನ್ನ_ಬಸ್ಸು_ಬಳಸಿಕೊಂಡ_ನೆನಪು.       ರಿಪ್ಪನ್ ಪೇಟೆಯ ಮೆಡಿಕಲ್ ಶಾಪ್ ಮಾಲಿಕರಾದ ಸ್ವಾಮಿಯವರು ಆ ಕಾಲದಲ್ಲಿ ನಾಗತೀಹಳ್ಳಿ ಚOದ್ರಶೇಖರ್ ನಿದೇ೯ಶನದಲ್ಲಿ ಅನಂತನಾಗ್ ತಾರಾ ಮುಂತಾದ ಖ್ಯಾತ ಚಿತ್ರ ನಟರನ್ನ ಹಾಕಿ ಕೊ೦ಡು ''ಉ೦ಡೂ ಹೋದ ಕೊಂಡೂ ಹೋದ " ಎಂಬ ಕಾಮಿಡಿ ಸಿನಿಮಾ ನಿಮಾ೯ಣ ಮಾಡಿದ್ದರು.   ಇದು ಸಣ್ಣ ಸಾಹಸವಲ್ಲ! ಚಿತ್ರಕಥೆ ನಾಗತಿ ಅವರದ್ದೇ ಮು೦ದೆ ಈ ಸಿನಿಮಾ ಪ್ರಸಿದ್ಧ ಚಿತ್ರ ಆಗಿ ನಾಗತಿಹಳ್ಳಿಯವರಿಗೆ ಉತ್ತಮ ಅಡಿಪಾಯ ಆಯಿತು.    ಈ ಸಿನೆಮಾ ಚಿತ್ರಿಕರಣ ಸ್ವಾಮಿಯವರು  ತಮ್ಮ ಊರು ರಿಪ್ಪನ್ ಪೇಟೆ ಸುತ್ತಾ ಮುತ್ತಾ ಮಾಡಿದ್ದರು ಆಗ ನನ್ನ ಪ್ರಶಾ೦ತ್ ಹೆಸರಿನ ಗ್ರಾಮಾಂತರ ಸಾರಿಗೆ ಬಸ್ಸು ರಿಪ್ಪನ್ ಪೇಟೆ ಸಮೀಪದ ಬೆಳ್ಳೂರಿನಿಂದ ಸಾಗರಕ್ಕೆ ಓಡುತ್ತಿತ್ತು, ಈ ಗ್ರಾಮ...

ಭಾಗ - 22, ವಿದ್ಯಾ ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯ೦ಗಾರರು ಶಿಕ್ಷಣ ಪಡೆದ ಆನಂದಪುರಂನ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ(125 ವರ್ಷದ ಹಿಂದೆ ನಿರ್ಮಾಣ ಆಗಿದ್ದ ಪ್ರಾಥಮಿಕ ಶಾಲೆ) ಶಿವಭಕ್ತ ಟೀಕಪ್ಪ ಮಾಸ್ತರ್ ಮತ್ತು ಈ ಶಾಲೆಗೆ ಸ್ಥಳ ದಾನ ನೀಡಿದ ಸ್ಕೂಲ್ ರಾಮಣ್ಣ ಕುಟುಂಬದ ನೆನಪು

#ಭಾಗ_22. #ವಿದ್ಯಾಮಂತ್ರಿ_ಬದರಿನಾರಾಯಣ_ಅಯ್ಯಂಗಾರ್_ವ್ಯಾಸಂಗ_ಮಾಡಿದ_ಆನಂದಪುರಂ_ಪ್ರಾಥಮಿಕ_ಶಾಲೆ. #ಇಲ್ಲಿ_ವ್ಯಾಸಂಗ_ಮಾಡಿದ_ಮಹನೀಯರಂತೆ_ಶಿಕ್ಷಕರೂ_ವಿಶೇಷ_ಉನ್ನತಿ_ಪಡೆದವರು. #ಸಾತ್ವಿಕರೂ_ದೈವಭಕ್ತರು_ಆಗಿದ್ದ_ಟೀಕಪ್ಪ_ಮಾಸ್ತರು. #ಈ_ಶಾಲೆಗೆ_ಜಾಗ_ದಾನ_ಮಾಡಿದ್ದ_ಸ್ಕೂಲ್‌ರಾಮಣ್ಣ_ಇವರ_ಪತ್ನಿ_ತಂದೆ.    ಟೀಕಪ್ಪ ಮಾಸ್ತರ್ ಅಂದರೆ ಆ ಕಾಲದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಆರಾಧ್ಯ ಗುರುಗಳಾಗಿದ್ದರು, ಯಾರಿಗೂ ಬಿರು ನುಡಿಯದ, ಹೊಡೆಯದ,ಬೇರಾವ ಶಿಕ್ಷೆ ನೀಡದೆ ತಮ್ಮ ಶಿಷ್ಯರನ್ನು ಪಳಗಿಸಿ ವಿದ್ಯೆ ಕಲಿಸುವ ಅಪರೂಪದ ಕಲೆ ಮತ್ತು ತಾಳ್ಮೆ ಇದ್ದಿದ್ದರಿಂದ ಇವರಿಂದ ಶಿಕ್ಷಣ ಕಲಿತವರಿಗೆಲ್ಲ ಇವರ ಮೇಲೆ ವಿಶೇಷ ಪ್ರೀತಿ ಮತ್ತು ಗೌರವ.    ಹೊಸನಗರ ತಾಲ್ಲೂಕಿನ ಬರುವೆ ಮೂಲದ ಇವರು ಶಿಕ್ಷಕರಾಗಿ ಹೊರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿ ನಂತರ ಆನಂದಪುರಂ ನಲ್ಲಿನ ವಿದ್ಯಾಮಂತ್ರಿಗಳು ಓದಿದ ಈ ಪ್ರಾಥಮಿಕ ಶಾಲೆ ಮತ್ತು ದಾಸಕೊಪ್ಪದ ಪ್ರಾಥಮಿಕ ಶಾಲೆಯಲ್ಲೂ ಕಾರ್ಯನಿರ್ವಹಿಸಿದ್ದರು.   ಇವರ ವೇಷ ಭೂಷಣ ಕೂಡ ವಿಶೇಷವೇ ಶ್ವೇತಾ ಕಚ್ಚೆ ಪಂಜೆ ಮತ್ತು ಜುಬ್ಬಾ ಶಲ್ಯ ಮತ್ತು ಹಣೆಯ ಮೇಲೆ ವಿಭೂತಿ ಪಟ್ಟೆ, ಕುಂಕುಮ ಧರಿಸಿ ಶಿವಪೂಜೆ ನಂತರವೆ ಶಾಲೆ ಕಡೆಗೆ ಹೊರಡುತ್ತಿದ್ದರು.   ಬೆಸ್ತರ ಕುಟುಂಬದಲ್ಲಿ ಜನಿಸಿ, ನಂತರ ಶಿವದೀಕ್ಷೆ ಪಡೆದ ಇವರು ಶುದ್ಧ ಸಸ್ಯಹಾರಿಗಳು, ದೈವಭಕ್ತರು ಆಗಿದ್ದರ...

ಭಾಗ_21, ಇಬ್ಬರು ಮುಖ್ಯಮಂತ್ರಿಗಳಾದ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗ್ಗಡೆಯವರ ಆಪ್ತ ಮತ್ತು ವಿಶೇಷಾದಿಕಾರಿ ಆಗಿದ್ದ ತಾಳಗುಪ್ಪ ಕೆ.ರಾಮಪ್ಪ ವಿದ್ಯಾ ಮಂತ್ರಿ ಬದರಿನಾರಾಯಣ ಅಯ್ಯಂಗಾರ್ ಓದಿದ ಆನಂದಪುರಂ ಪ್ರಾಥಮಿಕ ಶಾಲೆಯಲ್ಲೇ ಓದಿದವರು.

#ಭಾಗ_21. #ತಾಳಗುಪ್ಪ_ರಾಮಪ್ಪ #ಆನಂದಪುರಂನಲ್ಲಿ_ಪ್ರಾಥಮಿಕ_ಮತ್ತು_ಮಾಧ್ಯಮಿಕ_ಶಿಕ್ಷಣ. #ಮುಖ್ಯಮಂತ್ರಿ_ಗುಂಡೂರಾವ್_ಮತ್ತು_ರಾಮಕೃಷ್ಣಹೆಗಡೆಗೆ_ಆಪ್ತ_ಮತ್ತು_ವಿಶೇಷ_ಕರ್ತವ್ಯಾದಿಕಾರಿ.   ಬದರಿನಾರಾರಾಯಣ್ ಆಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ಆಪ್ತರಾಗಿದ್ದ ಆನಂದಪುರಂ ಆರ್ಟಿಸನ್ ಟ್ರೈನಿಂಗ್ ಸೆಂಟರ್ ನಲ್ಲಿ (ATI ಆಗ ಚಾಪೆ ತರಬೇತಿ) ತರಬೇತುದಾರರಾಗಿದ್ದ ಪುಟ್ಟಪ್ಪ ತಾಳಗುಪ್ಪ ಮೂಲದವರು.   ಆಗ ಈ ತರಬೇತಿ ಕೇಂದ್ರ ಬೆಲ್ಲದ ಶೇಷಪ್ಪನವರ ಕಟ್ಟಡದಲ್ಲಿ ಇತ್ತು (ನಂತರ ಯಾಹ್ಯಾ ಸಾಹೇಬರು ಈ ಜಾಗ ಖರೀದಿಸಿ ದಿನಸಿ ಅಂಗಡಿ ಮಾಡುತ್ತಾರೆ) ತರಬೇತಿದಾರರಾದ ಪುಟ್ಟಪ್ಪ ಮತ್ತು ಚೌಡಮ್ಮ ದಂಪತಿಗಳಿಗೆ ಹಾಲಪ್ಪ, ಗಣಪತಿ, ರಾಮಪ್ಪ ಮತ್ತು ಮಂಜಪ್ಪ ಎಂಬ ನಾಲ್ಕು ಪುತ್ರರು.    ದೊಡ್ಡ ಮಗ ಹಾಲಪ್ಪ ಶಿಕ್ಷಕರು, ಗಣಪತಿ ಜೋಗದಲ್ಲಿ ದಿನಸಿ ವ್ಯಾಪಾರ, ರಾಮಪ್ಪನವರು ವಿಧಾನ ಸೌದದ ಸಚಿವಾಲಯದಲ್ಲಿ ಮತ್ತು ಮಂಜಪ್ಪ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.   ಕೆ.ರಾಮಪ್ಪರ ಮನೆತನದ ಹೆಸರು ಕರಡಿ ಮನೆತನ, ಇವರು ತಂದೆ ಆನಂದಪುರಂನಲ್ಲಿ ಉದ್ಯೋಗದಲ್ಲಿ ಇದ್ದಿದ್ದರಿಂದ ರಾಮಪ್ಪನವರ ಪ್ರಾಥಮಿಕ ಶಿಕ್ಷಣ ಮತ್ತು ಮಾಧ್ಯಮಿಕ ಶಿಕ್ಷಣ ಆನಂದಪುರಂ ನಲ್ಲೇ ನಡೆಯುತ್ತದೆ, ರಂಗನಾಥ ಭಟ್ಟರು ಇವರ ಶಾಲಾ ಸಹಪಾಠಿಗಳು.   ಇವರು ವ್ಯಾಸಂಗ ಮಾಡಿದ ಶಾಲೆ ವಿದ್ಯಾ ಮಂತ್ರಿ ಬದರಿನಾರಾಯಣ್ ಆಯ್ಯಂಗಾರರು ಪ್ರಾಥಮ...