Skip to main content

Posts

#MECCA PILIGRIMAGE OF HAJI GANI SAHEB SPONCERED BY ME AS HINDU ITS PERMITTED OR FORBIDDEN?NEWS CIRCULATED IN VILLAGE #

*Can a Hindu organise a Mecca pilgrimage to his Muslim friend? A news was being circulated in our village that Mecca pilgrimage of such nature is forbidden*   This was a rare scenario hence the natives had little or no knowledge about this. This was coupled with jealousy. These all caused strain to the person who was preparing for the pilgrimage. The same was happening with the hindu who was arranging the means, people said he has lost his mind as he is sending a muslim for a pilgrimage.    This is what I and my respected senior friend Sri Ghanni Saab had gone through in the year of 2007. There is a valid reason for the Mecca pilgrimage, as I had promised in Sri Varasiddhi Vinayaka Temple of our village.   In the year of 2006, A Ganapati Temple was consecrated in our village Yadehalli, (Anandapuram Hobli, Sagara Taluk, Shivamogga District). Till then there was not a single Ganapati Temple in the entire Hobli. There were two churches and a Mosque in Yadeha...

#ಮೆಕ್ಕಾ ಯಾತ್ರೆ ಪುಣ್ಯ ನನಗೆ ಸಿಕ್ಕಿತಾ? #

        ಹಿಂದೂ ದಮ೯ದವನು ಮುಸ್ಲಿ೦ ಗೆಳೆಯರಿಗೆ ಮೆಕ್ಕಾ ಯಾತ್ರೆ ಮಾಡಿಸಬಹುದೆ? ಮುಸ್ಲಿಂ ಗೆಳೆಯ ಈ ರೀತಿ ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಅಂತೆ ಅಂತ ಒಂದು ಸುದ್ದಿ ನಮ್ಮ ಊರಲ್ಲಿ ಪ್ರಾರಂಭವಾಗಿತ್ತು.       ಬಹುಶಃ ಇದು ಅಪರೂಪದ ಪ್ರಕರಣ ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ, ಜೊತೆಗೆ ಮತ್ಸರ, ಹೊಟ್ಟೆಕಿಚ್ಚು ಬೇರೆ ಸೇರಿದ್ದರಿಂದ ಮೆಕ್ಕಾ ಯಾತ್ರೆಗೆ ತಯಾರಿ ನಡೆಸಿದವರಿಗೆ ಒಂದು ರೀತಿ ಕಿರಿಕಿರಿ ಆದರೆ, ಮೆಕ್ಕಾ ಯಾತ್ರೆ ಮಾಡಿಸಲು ಹೊರಟ ಹಿಂದೂ ದಮಿ೯ಯನಿಗೆ ಹಿಂದಿನಿಂದ ಹೋಗಿ ಹೋಗಿ ಸಾಬರಿಗೆ ಮೆಕ್ಕಾ ಕಳಿಸಲು ಅವನಿಗೆ ಬುದ್ಧಿ ಇಲ್ಲ ಅಂತ ಕುಹಕ ಬೇರೆ.       ಇದು ನಾನೂ ಮತ್ತು ನನ್ನ ಹಿರಿಯ ಮಿತ್ರರಾದ ಗನ್ನಿ ಸಾಹೇಬರು 2007 ರಲ್ಲಿ ಅನುಭವಿಸಿದ ಪ್ರಕರಣವಿದು, ಇದಕ್ಕೆ ಒಂದು ಸಕಾರಣ ಇತ್ತು ಮತ್ತು ನಮ್ಮುರ ದೇವಸ್ಥಾನದಲ್ಲಿ ನಾನು ಗನ್ನಿಸಾಬರಿಗೆ ಒಂದು ಮಾತು ಕೊಟ್ಟಿದ್ದೆ.      2006ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಎಂಬ ನಮ್ಮ ಊರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿ ಪ್ರತಿಷ್ಟಾಪನೆ ನಡೆಯಿತು, ಅಲ್ಲಿವರೆಗೆ ಇಡಿ ಹೋಬಳಿಯಲ್ಲಿ ಗಣಪತಿ ದೇವಸ್ಥಾನವೇ ಇರಲಿಲ್ಲ, ಯಡೇಹಳ್ಳಿಯಲ್ಲಿ ಎರಡು ಚಚ್೯ ಮತ್ತು ಒಂದು ಮಸೀದಿ ಇತ್ತು, ಗಣಪತಿ ದೇವಸ್ಥಾನದ ದೇವರ ವಿಗ್ರಹ ಕೋಲಾರ ಜಿಲ್ಲೆಯ ಶಿವಾರಪಟ್ಟಣ...

#ಹೊಸ ವಷ೯ದ ಆಚರಣೆಯ ಸಂಭ್ರಮದಲ್ಲಿ ಒಂದು ವಷ೯ದ ಆಯಸ್ಸು ಕಳೆದುಕೊಂಡದ್ದು ಮರೆಯ ಬಾರದು #

  ಪ್ರತಿ ಡಿಸೆಂಬರ್ 31ರ ರಾತ್ರಿ ನಾನು ಒಬ್ಬನೆ ಕುಳಿತು ಯೋಚಿಸುತ್ತೇನೆ , ನನ್ನ ಆಯಸ್ಸಿನಲ್ಲಿ ಒಂದು ವಷ೯ ಕಳೆದು ಹೋಯಿತಲ್ಲ ಎಂಬ ರೋದನೆ ಮತ್ತು ಒಂದು ಕ್ಯಾಲೆಂಡರ್ ವಷ೯ದಲ್ಲಿ ಸಾದನೆಯ ಗುರಿಯಲ್ಲಿ ಸಾದಿಸಿದ ಸಾದನೆ ವಿಮಷೆ೯ ಮಾಡುತ್ತೇನೆ.   55ನೇ ವಷ೯ದಲ್ಲಿ ನನ್ನ Health Card ಕೂಡ ಆದರೆ ಪಾಟಿ೯ ಸಂಭ್ರಮದಿಂದ ದೂರ, ಆಚರಿಸುವವರಿಗೆ ದಾರಿ ಬಿಟ್ಟು ಬದಿಗೆ ಸರಿದು ಬಿಡುತ್ತೇನೆ.  2020ರಲ್ಲಿ ನನ್ನ ಕನಸಾಗಿರುವ ಚಂಪಕರಾಣಿ ಕಾದಂಬರಿ, ಒಂದು ಸಣ್ಣ ಕಥಾ ಸಂಗ್ರಹ ಹೊರತರುವ ಗುರಿ ಇದೆ, ಪಿತೃಗಳ ತಪ೯ಣ ಗಯಾ, ಕಾಶಿಯಲ್ಲಿ ನೆರವೇರಿಸುವ ಆಶೆ ಇದೆ, ನಮ್ಮ ಊರ ವರಸಿದ್ಧಿವಿನಾಯಕ ರಥ ಉತ್ಸವ ಆ ದಿನದಲ್ಲಿ ನಮ್ಮ ಮನೆಯಿಂದ ನೆರವೇರಿಸುವ ಹೋಳಿಗೆ ತುಪ್ಪದ ಅನ್ನ ಸಂತಪ೯ಣೆ ಯಶಸ್ವಿಯಾಗಿ ನೆರವೇರಿಸುವುದು, ದೇವಾಲಯದ ಅಷ್ಟಬಂದನ ಮತ್ತು ಸಿದ್ಧಿವಿನಾಯಕನಿಗೆ ಬೆಳ್ಳಿ ಕವಚ ಅಪಿ೯ಸುವ ಹರಕೆ ಪೂರೈಸುವ ಕನಸಿದೆ.   ಇಲ್ಲಿ ಬರೆಯಲಾಗದ ಕೆಲ ಗುರಿಗಳನ್ನ ಸಕ್ರಿಯ ಮಾಡಬೇಕಾದ ಹoಬಲವೂ ಇದೆ.  2020 ಈ ಎಲ್ಲಾ ಕನಸು ನನಸು ಮಾಡಲಿ ಎಂದು ಪ್ರಾಥಿ೯ಸುತ್ತೇನೆ.

#ಅಭಿಶೇಖ್ ಸ್ಟೀಟ್ ಹೌಸ್ ಶಿವಮೊಗ್ಗದ ಪ್ರತಿಷ್ಟಿತ ಸಿಹಿ ತಿಂಡಿ ಮಾರಾಟದ ಕೇಂದ್ರ#

#ಅಭಿಶೇಕ್ ಸ್ವೀಟ್ ಹೌಸ್ ಶಿವಮೊಗ್ಗ ಕೇಂದ್ರದ ಟಾಪ್ ಸ್ವೀಟ್ ಹೌಸ್#   ಇವತ್ತಿಗೂ ಶಿವಮೊಗ್ಗಕ್ಕೆ ಹೋದರೆ ವೆಂಕಟೇಶ್ವರ ಸ್ವೀಟ್ ಸ್ಟಾಲ್ ನಿಂದ ಸ್ಪೇಷಲ್ ಮೈಸೂರು ಪಾಕ್ ಮತ್ತು ಅಭಿಶೇಕ್ ಸ್ವೀಟ್ ಹೌಸ್ ನಿಂದ ಚ೦ಪಾಕಲಿ ತರಲೇಬೇಕು.   1980ರ ದಶಕದಲ್ಲಿ ಸಾಗರದ ಮಾರಿಕಾಂಬಾ ದೇವಾಲಯದ ಎದರು ಕಾಮತ್ ಸ್ವೀಟ್ & ಕಾಂಡಿಮೆಂಟ್ಸ್ ವಿದ್ಯಾಥಿ೯ ವಲಯದಲ್ಲಿ ಪ್ರಖ್ಯಾತ ಮೀಟಿಂಗ್ ಜಾಯಿOಟ್ ಆಗಿತ್ತು ಅಲ್ಲಿ ಬ್ರೆಡ್ ಸ್ಯಾ೦ಡ್ ವಿಚ್ ಮತ್ತು ಚಂಪಾಕಲಿ ಹೆಚ್ಚು ಖಚಾ೯ಗುತ್ತಿತ್ತು, ಬೆಳಿಗ್ಗೆ ಮತ್ತು ಸಂಜೆ 2 ಸಾರಿ ಪ್ರೆಷ್ ಚಂಪಾಕಲಿ ಶಿವಮೊಗ್ಗದಿಂದ ಬಸ್ ಲ್ಲಿ ಬರುತ್ತಿತ್ತು ಅದನ್ನ ಶಿವಮೊಗ್ಗದಲ್ಲಿ ತಯಾರಿಸಿ ಕಳಿಸುತ್ತಿದ್ದವರು - ಶಿವಮೊಗ್ಗದ ಅಭಿಷೇಕ್ ಸ್ವೀಟ್ ಹೌಸ್ ನ ಮಾಲಿಕರಾದ ಗಣೇಶ್ ಕೊಟ್ಯಾನ್!   ಇವತ್ತಿಗೂ ಶುಚಿ-ರುಚಿಗೆ ಹೆಸರು ಮಾಡಿರುವ ಈ ಸಂಸ್ಥೆ ಕೆಲವು ದಶಕಗಳಿಂದ ಶಿವಮೊಗ್ಗ ಬಸ್ ನಿಲ್ದಾಣದ ಸಮೀಪದಲ್ಲಿ ತನ್ನ ಗುಣಮಟ್ಟ ಕಾಪಾಡಿಕೊಂಡು ಬಂದಿದೆ.   ಇದರ ಮಾಲಿಕರಾದ ಕೊಟ್ಯಾನ್ ಸಹೋದರರ ಶಿಸ್ತು, ಸಂಯಮ ಮತ್ತು ಪರಿಶ್ರಮ ಈ ಬ್ರಾಂಡ್ ಮನೆಮಾತಾಗಲು ಕಾರಣವಾಗಿದೆ, ಸದಾ ಹಸನ್ಮುಖರಾಗಿ ಖರೀದಿಸಲು ಬಂದವರಿಗೆ ವಿವಿದ ಸಿಹಿ ತಿಂಡಿಯ ಪರಿಚಯಿಸುವ ಗಣೇಶ್ ಕೊಟ್ಯಾನ್ ಇವತ್ತಿಗೂ ಶಿವಮೊಗ್ಗಕ್ಕೆ ಹೊಸ ಸಿಹಿ ತಿಂಡಿಗಳನ್ನ ಅದರಲ್ಲೂ ಬೆಂಗಾಲಿ ಸಿಹಿ ತಿನಿಸು ತಂದ ಪ್ರಖ್ಯಾತರು.   ಶಿವಮೊಗ್ಗ ಪಟ್ಟ...

#ಅಶೋಕ್ ಮಾವಿನಗುಂಡಿ ಜೋಗ ಜಲಪಾತದ ಪಕ್ಕದ ನಿವಾಸಿ#

#ಪಶ್ಚಿಮ ಘಟ್ಟದ ಬಗ್ಗೆ ಮತ್ತು ಜೋಗ ಜಲಪಾತದ ಬಗ್ಗೆ ಹೆಚ್ಚು ಅದಿಕೃತವಾಗಿ ಮಾತಾಡುವ ಜಲಪಾತದ ಬಗಲಿನಲ್ಲಿನ ಮಾವಿನ ಗುಂಡಿಯಲ್ಲಿರುವ ಅಶೋಕ್ ಮಾವಿನ ಗುಂಡಿ ಇವತ್ತು ಸಂಜೆ ಬಂದಿದ್ದರು.#   ಇವರು ಸ್ಥಳಿಯವಾಗಿ ಬೆಳೆಯುವ ಅನಾನಸ್ ನಿಂದ ಐನಕೈ ಎಂಬ ಸಂಸ್ಥೆಯ ಮೂಲಕ ಅನಾನಸ್ ಜ್ಯೂಸ್, ಜಾ೦ ತಯಾರಿಸಿ ಮಾವಿನಗುಂಡಿ ವೃತ್ತದಲ್ಲಿ ಸುಮಾರು 35 ವಷ೯ ಮಾರಾಟ ಮಾಡಿ ಈಗ ನಿವೃತ್ತರಾಗಿದ್ದಾರೆ.   ಇವರು ಪೇಸ್ ಬುಕ್ ನಲ್ಲಿ ಬರೆಯುವ ಅದ್ಬುತ ಲೇಖನಗಳಿ೦ದ ನಾನು ಇವರ ಅಭಿಮಾನಿ, ಇವತ್ತು ಉಡುಪಿಯ ಲಾಡ್ಜ್ ಮಾಲಿಕರಾದ ಮತ್ತು ಮಣಿಪಾಲ್ ನ HP ಗ್ಯಾಸ್ (ಸುದೀ೦ದ್ರ ಏಜೆನ್ಸಿ) ಮಾಲಿಕರಾದ  ಕೆ.ಬಾಲಕೃಷ್ಣ ಶೆನಯ್ ಜೊತೆ ಬಂದಿದ್ದರು.   ಅವರು ಈ ಹಿಂದೆ FBಯಲ್ಲಿ ಬರೆದು ಪಶ್ಚಿಮ ಘಟ್ಟದ ಬಗ್ಗೆ ಕಸ್ತೂರಿ ರಂಗನ್ ವರದಿ ಬಗ್ಗೆ ಬರೆದ ಲೇಖನ ಒಂದನ್ನು ಇಲ್ಲಿ ರೀ ಪೋಸ್ಟ್ ಮಾಡಿದ್ದೇನೆ.               ಒಂದು Observation cum ಅಭಿಪ್ರಾಯ ಮಾತ್ರ. ಸದುದ್ದೇಶದ ಈ ಕಾನೂನು ಬರುವ ಪೂರ್ವ ದಲ್ಲಿ ಪಶ್ಚಿಮ ಘಟ್ಟದಲ್ಲಿ ಶರಾವತಿ, ಕಾಳಿ ನದಿಗಳಿಗೆ ದೊಡ್ಡ ದೊಡ್ಡ ಆಣೆಕಟ್ಟುಗಳು, ಕೊಳ್ಳದಲ್ಲೆಲ್ಲ ದೊಡ್ಡ ದೊಡ್ಡ ವಿದ್ಯುದಾಗಾರಗಳನ್ನು ನಿರ್ಮಿಸಲಾಯಿತು. ಅವುಗಳೆಲ್ಲ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಡಬಹುದಾದ ಪ್ರದೇಶಗಳೇ. ಈಗಿನಂತೆ ಮನುಕುಲ, ಭೂಮಂಡಲ ರಕ್ಷಕ ಪರಿಸರ ಪ್ರೇ...

#ಜೆ.ಹೆಚ್ ಪಟೇಲರ ಕುಡಿಯೋರ ಮಯಾ೯ದೆ ಕುಡುಕರಿಂದ ಹೋಗ್ತಾ ಇದೆ ಎಂಬ ತಕ೯ ನಿಜ ಕೂಡ#

        ಶಿವಮೊಗ್ಗದಲ್ಲಿ ಮಿತ್ರರೊವ೯ರ ಹೋಟೆಲ್ ಉದ್ಫಾಟನೆ ಇತ್ತು ಅಲ್ಲಿ ಜೆ.ಹೆಚ್.ಪಟೇಲರ ಒಡನಾಡಿ ಸಂಯುಕ್ತ ಜನತಾದಳದ ಲೋಕಪಾಲ ಜೈನರ ಭಾಷಣ ಅವತ್ತಿನ ಸಭೆಯ ಹೈಲೆಟ್ ಆಗಿತ್ತು.  ಸಭೆಯಲ್ಲಿ ಅನೇಕ ಗೌರವಾನ್ವಿತ ದಂಪತಿಗಳು ಉಪಸ್ಥಿತರಿದ್ದರು.  ಅವರು ತಮ್ಮ ಬಾಷಣದ ಪ್ರಾರಂಭದಲ್ಲಿ ಕುಡಿಯೋರೆ ಬೇರೆ ಕುಡುಕರೇ ಬೇರೆ ಆದರೆ ನೀವು ಹೆಣ್ಣು ಮಕ್ಕಳು ಕುಡಿಯೋರನ್ನೆಲ್ಲ ಕುಡುಕರ ಸಾಲಿಗೆ ಸೇರಿಸಿ ಬಿಡುತ್ತೀರಿ ಇದನ್ನ ಪಟೇಲರು ಒಂದು ಘಟನೆಯಲ್ಲಿ ಹೇಳಿದ್ದು ನೆನಪಾಯಿತು ಕೇಳಿ ಅಂತ ಶುರುಮಾಡಿದರು.  ಆಗ ಶಾಸಕರ ಭವನದಿಂದ ಮೆಜೆಸ್ಟಿಕ್ ತನಕ ಜನ ಸಂಚಾರ ವಿರಳ ಸಂಜೆ 8 ಆಗುತ್ತಿದ್ದಂತೆ ಪಟೇಲರು ಕೋಡೇಸ್ xxx ರಂ ತರಲು ಹುಡುಗರಾದ ನಮ್ಮ ಹತ್ತಿರ ಹಣ ಕೊಟ್ಟು ಕಳಿಸಿದ್ದರು ನಾವು ತೆಗೆದುಕೊಂಡು ಬರುವಾಗ ಶಾಸಕರ ಭವನದ ಎದರು ಇಬ್ಬರು ಹೊಟ್ಟೆ ತುಂಬಾ ಕುಡಿದು ಕೊಂಡು ಜಗಳವಾಡುತ್ತಿದ್ದರಂತೆ ಅದನ್ನ ಇವರೆಲ್ಲ ನೋಡುತ್ತಾ ನಿಂತವರಿಗೆ ಸಮಯ ಹೋದದ್ದೇ ಗೊತ್ತಾಗಿಲ್ಲವಂತೆ, ಆಗ ಮೊಬೈಲ್ ಇಲ್ಲ ಪಟೇಲರಿಗೆ ಕುಡಿಯುವ ಸಮಯ ಮೀರಿದ್ದರಿಂದ ಚಟಪಟಿಕೆ ಕೋಪ ಬಂದಿತ್ತು, ಅಂತೂ ಇವರು ಅವರ ರಂ ಜೊತೆ ಅವರ ಕೋಣೆಗೆ ತಲುಪಿದಾಗ ಪಟೇಲರು ಯಾಕಯ್ಯ ಲೇಟ್ ಮಾಡಿದ ರಿ? ಅಂದಾಗ ಇವರು ಕೆಳಗೆ ಇಬ್ಬರು ಪುಲ್ ಟೈಟ್ ಆಗಿ ಜಗಳ ಹೊಡೆದಾಟ ಆಗ್ತಾ ಇತ್ತು ಹಾಗಾಗಿ ಲೇಟ್ ಆಯಿತು ಅಂದರಂತೆ ಆಗ ಸ್ವಲ್ಪ ಹೊತ್ತು ಸುಮ್ಮನಾದ ಪಟೇಲರು ತಮ್ಮ ಗಂಟಲ...

ಫ್ಲಾಸೆ ಬೋ?...ನೋಸೆಬೋ

ಏನಿದು ಪ್ಲಾಸೆಬೋ?!........... ಏನಿದು ನೋಸೆಬೋ?!    ____ ನಾನು ತಾಳಗುಪ್ಪದಲ್ಲಿ ಪಶುವೈದ್ಯನಾಗಿದ್ದಾಗ ಒಬ್ಬರ ಮನೆಯಲ್ಲಿದ್ದೆ. ಅವರ ಮನೆಯಲ್ಲಿ ಹಿರಿಯ ವಯೋವೃದ್ಧರಾದ ಅಜ್ಜಿ ಒಬ್ಬರಿದ್ದರು. ಅವರಿಗೆ ಆಗಾಗ ಕೆಮ್ಮು ಬರುತ್ತಿತ್ತು. ಆಗ ಸಾಗರದಲ್ಲಿ ಐತಾಳರೆಂಬ ವೈದ್ಯರೊಬ್ಬರಿದ್ದರು. ಅವರು ಚಿಕಿತ್ಸೆ ನೀಡಿದರೆ ಮಾತ್ರ ಅಜ್ಜಿಯ ಕೆಮ್ಮು ಗುಣವಾಗುತ್ತಿತ್ತು. ಅವರು ಒಂದು ಬಾಟಲಿಯ ಲೇಬಲ್ಲು ತೆಗೆದು ಅದಕ್ಕೆ ಜಿûಗ್ ಜಾಗ್ ತರಹದ ಸ್ಟಿಕರ್ ಅಂಟಿಸಿ ಅದರಲ್ಲಿ ಔಷಧ ತುಂಬಿಸಿ, ದಿನಕ್ಕೆ ಮೂರು ಅಥವಾ ನಾಲ್ಕು ಕಟ್ಟಿನ ಮಟ್ಟದ ಔಷಧ ಸೇವಿಸಲು ಹೇಳುತ್ತಿದ್ದರು. ಆ ಔಷಧಿ ಕುಡಿದರೆ ಮಾತ್ರ ಅಜ್ಜಿಯ ಕೆಮ್ಮು ಗುಣವಾಗುತ್ತಿತ್ತು. ಕೆಲವೊಮ್ಮೆ ಸಾಗರಕ್ಕೆ ಹೋದಾಗ ಅವರಿಗಾಗಿ ಕಾದು ಔಷಧಿ ತರುತ್ತಿದ್ದೆ. ಅವರ ಅಂಗಡಿಯಲ್ಲಿ ಬಹಳ ರಶ್ ಇರುವುದರಿಂದ ಬೇರೆ ಒಳ್ಳೆಯ ಔಷಧಿ ತಂದ್ರೂ ಅವರಿಗೆ ಕಡಿಮೆ ಆಗಲೇ ಇಲ್ಲ. ನಂತರ ಒಂದು ಬಾಟ್ಳಿ ಖಾಲಿ ಮಾಡಿ ಅದಕ್ಕೆ ಕೆಮ್ಮಿನ ಔಷಧಿ ತುಂಬಿಸಿ ಅದಕ್ಕೆ ಪಟ್ಟಿ ಪಟ್ಟಿ ಲೇಬಲ್ ಅಂಟಿಸಿ ಕೊಟ್ಟಾಗಲೇ ಅವರಿಗೆ ಕೆಮ್ಮು ಕಡಿಮೆ ಆಗಿದ್ದು !!. ನನ್ನ ಸ್ನೆÃಹಿತನೊಬ್ಬ ಬಹಳ ದಿನಗಳ ನಂತರ ನಮ್ಮ ಮನೆಗೆ ಬಂದಿದ್ದ. ಅವನಿಗೆ ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದಿದ್ದಕ್ಕೆ ಮೈ ಕೈ ನೋವು ಪ್ರಾರಂಭವಾಗಿತ್ತು. “ನೈಸ್” ಮಾತ್ರೆ ಇದ್ಯೆನೋ.. ಒಂದು ಕೊಡು ಅಂದ. ಇಲ್ಲಪ್ಪಾ. ಅದಕ್ಕಿಂತ ಜಾಸ್ತಿ ನೋವು ನಿವಾರಕವಾದ ಮತ್ತೊಂದು ಮಾತ್ರೆ ಕೊಟ್...