#ನಾನೇಕೆ_ಕಡ_ಧರಿಸುತ್ತೇನೆ? #ಕಡ_ಕೈಬಳೆ_ಎಂಬ_ಬ್ರೇಸಲೇಟ್_ವ್ಯಾಮೋಹ #ಚಲನ_ಚಿತ್ರ_ನಟ_ವಿಷ್ಣುವರ್ದನ್_ಪ್ರಭಾವ. #ಅನೇಕ_ರೀತಿಯ_ಕಡ_ಧರಿಸಿದ್ದೆ #ಅಮೃತಸರದ_ಸ್ವರ್ಣಮಂದಿರದಿಂದ_ಕೆಲವು_ಕಡ_ತಂದಿದ್ದೆ #ಕೆನಡಾದ_ಟ್ರಾನ್ಸ್_ಪೋರ್ಟ್_ಮಾಲಿಕರು_ನೀಡಿದ_ಕಡದ_ಉಡುಗೊರೆ. #ಗುರು_ಗೋವಿಂದ_ಸಿಂಗ್_ಸಿಖ್_ಧರ್ಮಿಯರಿಗೆ_ಬೋದಿಸಿದ_ಪಂಚ_ಕ_ಕಾರಗಳು. #SikhCommunity #amruthsara #goldentemple #sardarji #bracelet ಖ್ಯಾತ ಚಲನ ಚಿತ್ರ ನಟ #ವಿಷ್ಣುವರ್ದನ್ ಧರಿಸುತ್ತಿದ್ದ ಉಕ್ಕಿನ ಕೈ ಬಳೆ ನನಗೆ ಕೈ ಬಳೆ ದರಿಸಲು ಪ್ರೇರಣೆ ಆಗಿತ್ತು. 1998 ರಿಂದ ಆಗಾಗ್ಗೆ ಕೈ ಬಳೆ ಧರಿಸುತ್ತಿದ್ದೆ ನಂತರ 2007ರಲ್ಲಿ ಪಂಜಾಬಿನ ಅಮೃತಸರದ ಸ್ವರ್ಣ ದೇವಾಲಯಕ್ಕೆ ಸಾಗರದ ಹಾಲಿ ಸಿಗಂದೂರು ಪ್ಯೂಯಲ್ ಸ್ಟೇಷನ್ ಮಾಲಿಕರಾದ ನಾರಾಯಣರಾವ್ ಜೊತೆ ಹೋಗಿದ್ದಾಗ ಕೆಲ ಬಳೆಗಳನ್ನು ದೇವಾಲಯದ ಸಂಕೀರ್ಣದಲ್ಲೇ ಖರೀದಿಸಿ ತಂದಿದ್ದೆ. ಪ್ರತಿಯೊಬ್ಬ ಸಿಖ್ ದರ್ಮಿಯ ಪುರುಷರು ಈ ಬಳೆ ಕಡ್ಡಾಯವಾಗಿ ಧರಿಸುತ್ತಾರೆ ಇದು ಅವರ ದರ್ಮ ಮತ್ತು ದೇವರ ಸಂಬಂದ ದೃಡೀಕರಿಸುವ ಸಂಕೇತ. ಅವರ ಗುರು ಗೋವಿಂದ್ ಸಿಂಗ್ ರು ಹೇಳಿರುವ #ಪಂಚ #ಕ ಕಾರಗಳಾದ #ಕೇಶ - #ಕಂಗಾ-#ಕರ - #ಕಚೇರ- #ಕಿರ್ಪಾಣ ಪ್ರತಿಯೊಬ್ಬ ಸಿಖ್ ಧರ್ಮ ಅನುಯಾಯಿ ಪುರುಷರು ಪಾಲಿಸುತ್ತಾರೆ. #ಕೇಶ.. ಇದು ಸಿಖ್ ಧರ್ಮ ಅನುಯಾಯಿ ತನ್ನ ತಲೆ...